ಮುಲ್ಲನಪುರ: ದಿಗ್ಗಜ ಸಚಿನ್ ತೆಂಡೂಲ್ಕರ್ ಅವರೂ ರಾಜಸ್ಥಾನ ರಾಯಲ್ಸ್ ತಂಡದ ವೈಭವ್ ಸೂರ್ಯವಂಶಿಯ ಬ್ಯಾಟಿಂಗ್ಗೆ ಮನಸೋತಿದ್ದಾರೆ.

‘ವೈಭವ್ ಬ್ಯಾಟ್ ಬೀಸುವಿಕೆಯ ಶೈಲಿ ಅಮೋಘವಾಗಿದೆ. ಎಲ್ಲಕ್ಕಿಂತ ಚೆಂದ ಎಂದರೆ ಅವರ ಪದಚಲನೆ. ತಮ್ಮ ಕಾಲನ್ನು ಗುರಿಯಾಗಿಸಿಕೊಂಡು ಹಾಕುವ ಎಸೆತಗಳಿಗೆ ಮುಂದಡಿಯನ್ನು ನಿಖರವಾಗಿ ಇಟ್ಟು ಬ್ಯಾಟ್ ಬೀಸಲು ಸ್ಥಳಾವಕಾಶ ಮಾಡಿಕೊಳ್ಳುವ ಪರಿ ಸುಂದರವಾಗಿದೆ. ಅದರಿಂದಾಗಿ ಅವರು ಬ್ಯಾಟ್ ಬೀಸಲು ಮುಕ್ತ ಅವಕಾಸ ಮಾಡಿಕೊಳ್ಳುತ್ತಾರೆ’ ಎಂದು ತೆಂಡೂಲ್ಕರ್ ಅವರು ‘ಎಕ್ಸ್’ನಲ್ಲಿ ಸಂದೇಶ ಹಾಕಿದ್ದಾರೆ.

ಬುಧವಾರ ವೈಭವ್ ಅವರು ಸನ್ರೈಸರ್ಸ್ ಹೈದರಾಬಾದ್ ಎದುರು 29 ಎಸೆತಗಳಲ್ಲಿ 97 ರನ್ ಗಳಿಸಿದ್ದರು. ಈ ಇನಿಂಗ್ಸ್ ‘ಅತ್ಯದ್ಭುತ’ ಎಂದೂ ಸಚಿನ್ ಬಣ್ಣಿಸಿದ್ದಾರೆ.

‘ಬಾಸ್ ಬೇಬಿ (ವೈಭವ್) ಮುಂಬರುವ ದಿನಗಳಲ್ಲಿ ವಿಶ್ವದ ದೊಡ್ಡ ಬಾಸ್ಗಳ ದಾಖಲೆಗಳನ್ನು ಮುರಿಯಲಿದ್ದಾನೆ’ ಎಂದು ಕ್ರಿಕೆಟ್ ದಂತಕತೆ ಯುವರಾಜ್ ಸಿಂಗ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಾಜಿ ಕ್ರಿಕೆಟಿಗರಾದ ಸುರೇಶ್ ರೈನಾ, ಮೊಹಮ್ಮದ್ ಕೈಫ್, ವೆಸ್ಟ್ ಇಂಡೀಸ್ನ ಇಯಾನ್ ಬಿಷಪ್, ಇಂಗ್ಲೆಂಡ್ನ ಮೈಕೆಲ್ ವಾನ್, ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಅವರು ವೈಭವ್ ಆಟವನ್ನು ಕೊಂಡಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.