ಹೈದರಾಬಾದ್: ಅಭಿಷೇಕ್ ಶರ್ಮಾ ಮತ್ತು ಹೆನ್ರಿಚ್ ಕ್ಲಾಸೆನ್ ಅವರ ಅರ್ಧಶತಕಗಳ ಬಳಿಕ ವೇಗಿ ಇಶಾನ್ ಮಾಲಿಂಗ ಪರಿಣಾಮಕಾರಿ ಬೌಲಿಂಗ್ ದಾಳಿ ನಡೆಸಿದರು. ಇದರಿಂದಾಗಿ ಸನ್ರೈಸರ್ಸ್ ಹೈದರಾಬಾದ್ ತಂಡವು ಶನಿವಾರ ಐಪಿಎಲ್ನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 10 ರನ್ಗಳ ರೋಚಕ ಜಯ ಸಾಧಿಸಿತು.

ಉಪ್ಪಳದ ರಾಜೀವಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಚೆನ್ನೈ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಭಿಷೇಕ್ (59;22ಎ, 4X6, 6X4) ಮತ್ತು ಕ್ಲಾಸೆನ್ (59;39ಎ, 4X6, 6X2) ಅವರ ಬ್ಯಾಟಿಂಗ್ ಬಲದಿಂದ ಹೈದರಾಬಾದ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ಗಳಿಗೆ 194 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಚೆನ್ನೈ ತಂಡಕ್ಕೆ ಇಶಾನ್ (29ಕ್ಕೆ 3) ಮತ್ತು ನಿತೀಶ್ ಕುಮಾರ್ ರೆಡ್ಡಿ (31ಕ್ಕೆ 2) ಕಡಿವಾಣ ಹಾಕಿದರು. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಚೆನ್ನೈ ತಂಡ 8 ವಿಕೆಟ್ಗೆ 184 ರನ್ ಗಳಿಸಿ ಹೋರಾಟ ಮುಗಿಸಿತು. ಇಶಾನ್ ಕಿಶನ್ ಪಡೆಗೆ ಇದು ಸತತ ಎರಡನೇ ಗೆಲುವು.

ಚೆನ್ನೈ ತಂಡದ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ (7) ನಿರಾಸೆ ಮೂಡಿಸಿದರು. ಅವರು ಎರಡನೇ ಓವರ್ನಲ್ಲೇ ಪೆವಿಲಿಯನ್ ಸೇರಿಕೊಂಡರು. ನಾಯಕ ಋತುರಾಜ್ ಗಾಯಕವಾಡ್ (19) ಮತ್ತು ಆಯುಷ್ ಮ್ಹಾತ್ರೆ (30) ಎರಡನೇ ವಿಕೆಟ್ಗೆ 51 ರನ್ ಸೇರಿಸಿದರು. ನಂತರ ಮ್ಯಾಥ್ಯೂ ಶಾರ್ಟ್ (34) ಮತ್ತು ಸರ್ಫರಾಜ್ ಖಾನ್ (25) ಕೊಂಚ ಹೋರಾಟ ನಡೆಸಿದರು.

ರಾಜಸ್ಥಾನ ರಾಯಲ್ಸ್ ವಿರುದ್ಧದ ಮಿಂಚಿದ್ದ ಮಧ್ಯಮ ವೇಗಿ ಪ್ರಫುಲ್ ಹಿಂಗೆ (60ಕ್ಕೆ 1) ಈ ಪಂದ್ಯದಲ್ಲಿ ದುಬಾರಿಯಾದರು. ಆದರೆ, ಕೊನೆಯ ಓವರ್ನಲ್ಲಿ ಚೆನ್ನೈ ತಂಡ ಗೆಲುವಿಗೆ 18 ರನ್ ಬೇಕಿದ್ದಾಗ ಉತ್ತಮವಾಗಿ ಬೌಲಿಂಗ್ ಸಂಘಟಿಸಿ, ಕೇವಲ 7 ರನ್ ಬಿಟ್ಟುಕೊಟ್ಟರು. ಇದರೊಂದಿಗೆ ಜೆಮಿ ಒವರ್ಟನ್ ವಿಕೆಟ್ ಪಡೆದು
ಸಂಭ್ರಮಿಸಿದರು.

ಇದಕ್ಕೂ ಮೊದಲು ಅಭಿಷೇಕ್ ತಮ್ಮ ನೈಜ ಆಕ್ರಮಣಶೀಲ ಆಟ ಪ್ರದರ್ಶಿಸಿದರು. 15 ಎಸೆತಗಳಲ್ಲಿ ಅರ್ಧಶತಕದ ಗಡಿ ದಾಟಿದರು. ಟ್ರಾವಿಸ್ ಹೆಡ್ 20 ಎಸೆತಗಳಲ್ಲಿ 23 ರನ್ ಗಳಿಸಿದರು. ಮೊದಲ ವಿಕೆಟ್ಗೆ ಅವರು 75 ರನ್ ಸೇರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಕ್ಲಾಸನ್ ಕೂಡಾ ಬೀಸಾಟವಾಡಿದರು. ಆದರೆ ಉಳಿದ ಬ್ಯಾಟರ್ಗಳು ಹೆಚ್ಚು ರನ್ ಗಳಿಸದಂತೆ ಅನ್ಷುಲ್ ಕಂಬೋಜ್ (22ಕ್ಕೆ3) ಮತ್ತು ಒವರ್ಟನ್ (37ಕ್ಕೆ3) ನೋಡಿಕೊಂಡರು.

ಸಂಕ್ಷಿಪ್ತ ಸ್ಕೋರು: ಸನ್ರೈಸರ್ಸ್ ಹೈದರಾಬಾದ್: 20 ಓವರ್ಗಳಲ್ಲಿ 9 ವಿಕೆಟ್ಗಳಿಗೆ 194 (ಅಭಿಷೇಕ್ ಶರ್ಮಾ 59, ಟ್ರಾವಿಸ್ ಹೆಡ್ 23, ಹೆನ್ರಿಚ್ ಕ್ಲಾಸೆನ್ 59, ಸಲೀಲ್ ಅರೋರಾ 13, ನಿತೀಶ್ ಕುಮಾರ್ ರೆಡ್ಡಿ 12, ಶಿವಾಂಗ್ ಕುಮಾರ್ 12, ಮುಕೇಶ್ ಚೌಧರಿ 21ಕ್ಕೆ2, ಅನ್ಷುಲ್ ಕಂಬೋಜ್ 22ಕ್ಕೆ3, ಜೆಮಿ ಒವರ್ಟನ್ 37ಕ್ಕೆ3). ಚೆನ್ನೈ ಸೂಪರ್ ಕಿಂಗ್ಸ್: 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 184 (ಋತುರಾಜ್ ಗಾಯಕವಾಡ್ 19, ಆಯುಷ್ ಮ್ಹಾತ್ರೆ 30, ಮ್ಯಾಥ್ಯೂ ಶಾರ್ಟ್ 34, ಸರ್ಫರಾಜ್ ಖಾನ್ 25, ಶಿವಂ ದುಬೆ 21; ಇಶಾನ್ ಮಾಲಿಂಗ 29ಕ್ಕೆ3, ನಿತೀಶ್ಕುಮಾರ್ ರೆಡ್ಡಿ 31ಕ್ಕೆ2, ಶಿವಾಂಗ್ ಕುಮಾರ್ 18ಕ್ಕೆ1).

ಪಂದ್ಯದ ಆಟಗಾರ: ಇಶಾನ್ ಮಾಲಿಂಗ

ಎಸ್ಆರ್ಎಚ್ಗೆ ಜೆರಾಲ್ಡ್ ಕೊಟ್ಜಿಯ

ಹೈದರಾಬಾದ್ (ಪಿಟಿಐ): ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಜೆರಾಲ್ಡ್ ಕೊಟ್ಜಿಯ ಅವರು ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಪಾದದ ನೋವಿನಿಂದಾಗಿ ಐಪಿಎಲ್ನಿಂದ ಹೊರಬಿದ್ದಿರುವ ಡೇವಿಡ್ ಪೇನ್ ಬದಲಿಗೆ ಕೊಟ್ಜಿಯ ಸ್ಥಾನ ಪಡೆದಿದ್ದಾರೆ.

₹2 ಕೋಟಿ ಮೊತ್ತಕ್ಕೆ ಅವರು ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಶನಿವಾರ ಐಪಿಎಲ್ ಪ್ರಕಟಣೆ ತಿಳಿಸಿದೆ. ನಾಲ್ಕು ಟೆಸ್ಟ್, 14 ಏಕದಿನ ಮತ್ತು 18 ಟಿ20 ಪಂದ್ಯಗಳನ್ನು ಆಡಿರುವ ಅವರು ಒಟ್ಟು 67 ವಿಕೆಟ್ಗಳನ್ನು ಪಡೆದಿದ್ದಾರೆ.

ಈ ಹಿಂದೆ ಈ ವೇಗದ ಬೌಲರ್ ಗುಜರಾತ್ ಟೈಟನ್ಸ್ (2025) ಮತ್ತು ಮುಂಬೈ ಇಂಡಿಯನ್ಸ್ (2024) ಪರ 14 ಪಂದ್ಯಗಳನ್ನು ಆಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.