ಹೈದರಾಬಾದ್: ಉಪ್ಪಳದ ರಾಜೀವಗಾಂಧಿ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ಎಡಗೈ ಬ್ಯಾಟರ್ ಅಭಿಷೇಕ್ ಶರ್ಮಾ ಅವರದ್ದೇ ಪಾರುಪತ್ಯ. ಅವರ ಬ್ಯಾಟಿಂಗ್ ಅಬ್ಬರದ ಮುಂದೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲರ್ಗಳು ಸುಸ್ತಾದರು.

ಅಭಿಷೇಕ್ (ಅಜೇಯ 135; 68 ಎಸೆತ) ಅವರ ಬೀಸಾಟದ ಬಲದಿಂದ ಸನ್ರೈಸರ್ಸ್ ಹೈದರಾಬಾದ್ ತಂಡವು 47 ರನ್ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿತು. ಅದರೊಂದಿಗೆ, ಹಾಲಿ ಲೀಗ್ನಲ್ಲಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿತು.

ಸನ್ರೈಸರ್ಸ್ ನೀಡಿದ್ದ 243 ರನ್ಗಳ ದೊಡ್ಡ ಗುರಿ ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ಶ್ರೀಲಂಕಾದ ವೇಗಿ ಇಶಾನ್ ಮಾಲಿಂಗ (32ಕ್ಕೆ4) ಪರಿಣಾಮಕಾರಿ ಬೌಲಿಂಗ್ ಮೂಲಕ ಕಡಿವಾಣ ಹಾಕಿದರು. ಆಲ್ರೌಂಡರ್ ನಿತೀಶ್ ರಾಣಾ (57; 30ಎ, 4x7, 6x3) ಅರ್ಧಶತಕ ಗಳಿಸಿದ್ದು ಬಿಟ್ಟರೆ, ಉಳಿದ ಬ್ಯಾಟರ್ಗಳು ದೀರ್ಘ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಅಕ್ಷರ್ ಪಟೇಲ್ ಪಡೆ 9 ವಿಕೆಟ್ಗಳಿಗೆ 195 ರನ್ ಗಳಿಸಿ, ಓವರ್ ಪೂರೈಸಿತು.

ಕಳೆದ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಅರ್ಧಶತಕ ಗಳಿಸಿದ್ದ ಕೆ.ಎಲ್.ರಾಹುಲ್ 23 ಎಸೆತಗಳಲ್ಲಿ 37 ರನ್ ಗಳಿಸಿದರು. ಆ ಪಂದ್ಯದಲ್ಲಿ ಡೆಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದ್ದ ಟ್ರಿಸ್ಟನ್ ಸ್ಟಬ್ಸ್ (27; 16ಎ) ಹಾಗೂ ಡೇವಿಡ್ ಮಿಲ್ಲರ್ (0;1ಎ) ಇಲ್ಲಿ ನಿರಾಶೆ ಅನುಭವಿಸಿದರು. ‘ಇಂಪ್ಯಾಕ್ಟ್ ಸಬ್ಸ್ಟಿಟ್ಯೂಟ್’ ಸಮೀರ್ ರಿಜ್ವಿ (41; 28ಎ) ಕೊಂಚ ಹೊತ್ತು ಹೋರಾಟ ತೋರಿದರು.

ಇದಕ್ಕೆ ಮೊದಲು, ಡೆಲ್ಲಿ ತಂಡದ ನಾಯಕ ಅಕ್ಷರ್ ಪಟೇಲ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಸನ್ರೈಸರ್ಸ್ ಬ್ಯಾಟರ್ಗಳ ಎದುರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲರ್ಗಳ ಆಟ ನಡೆಯಲಿಲ್ಲ. ಆರಂಭಿಕ ಜೋಡಿ ಅಭಿಷೇಕ್ ಹಾಗೂ ಟ್ರಾವಿಸ್ ಹೆಡ್ (37; 26ಎ) ಅವರು 8.5 ಓವರ್ಗಳಲ್ಲಿ 97 ರನ್ ಸೂರೆ ಮಾಡಿ, ಭದ್ರ ಅಡಿಪಾಯ ಹಾಕಿಕೊಟ್ಟರು.

ಟ್ರಾವಿಸ್ ನಿರ್ಗಮಿಸಿದ ನಂತರ ನಾಯಕ ಇಶಾನ್ ಕಿಶನ್ 13 ಎಸೆತಗಳಲ್ಲಿ 25 ರನ್ ಗಳಿಸಿದರು. ಅಭಿಷೇಕ್ ಮತ್ತು ಇಶಾನ್ ಎರಡನೇ ವಿಕೆಟ್ ಜತೆಯಾಟದಲ್ಲಿ 79 ರನ್ ಸೇರಿಸಿದರು.

ಕೊನೆಯ ಹಂತದ ಓವರ್ಗಳಲ್ಲಿ ಅಭಿಷೇಕ್ ತುಸು ಸುಸ್ತಾದಂತೆ ಕಂಡರು. ಆಗ ಕ್ಲಾಸೆನ್ (ಔಟಾಗದೇ 37; 13ಎಸೆತ) ತಂಡದ ಮೊತ್ತ ಹೆಚ್ಚಿಸುವ ಹೊಣೆ ನಿಭಾಯಿಸಿದರು. ಅಭಿಷೇಕ್ ಬ್ಯಾಟಿಂಗ್ನಲ್ಲಿ 10 ಬೌಂಡರಿ ಮತ್ತು ಅಷ್ಟೇ ಸಂಖ್ಯೆಯ ಸಿಕ್ಸರ್ಗಳಿದ್ದವು. ಡೆಲ್ಲಿ ತಂಡದ ನಿತೀಶ್ ರಾಣಾ (4 ಓವರ್ಗಳಲ್ಲಿ 55 ರನ್) ಅವರ ಆಫ್ಬ್ರೇಕ್ ಎಸೆತಗಳು, ಲುಂಗಿ ಎನ್ಗಿಡಿಯ (4 ಓವರ್ 41 ರನ್) ನಿಧಾನಗತಿಯ ಸ್ವಿಂಗ್ ಎಸೆತಗಳು ಕೂಡ ಅಭಿಷೇಕ್ ಆಟಕ್ಕೆ ಅಡ್ಡಿಯಾಗಲಿಲ್ಲ.

ಅಭಿಷೇಕ್ ಅವರು ಸ್ವಿಂಗ್ ಮತ್ತು ಸ್ಪಿನ್ ಎಸೆತಗಳಿಗೆ ತಕ್ಕಂತೆ ತಮ್ಮ ಪಾದಚಲನೆಯನ್ನು ಹೊಂದಿಸಿಕೊಳ್ಳುವ ಚುರುಕುತನ ಮೆರೆದರು. ಅವರ ಈ ಹಿಂದಿನ ಸ್ಟ್ರೈಕ್ರೇಟ್ಗಳಿಗೆ ಹೋಲಿಕೆ ಮಾಡಿದರೆ ಈ ಶತಕವು ತುಸು ನಿಧಾನವೆನಿಸ ಬಹುದು. ಅವರು ಇಲ್ಲಿ 47 ಎಸೆತಗಳಲ್ಲಿ ಮೂರಂಕಿ ದಾಟಿದರು. ಐಪಿಎಲ್ನಲ್ಲಿ ಇದು ಅವರ ಮೂರನೇ ಶತಕ. ಟಿ20 ಮಾದರಿಯಲ್ಲಿ ಅವರು ಒಟ್ಟಾರೆ 9ನೇ ಶತಕ ಹೊಡೆದು ವಿರಾಟ್ ಕೊಹ್ಲಿ, ಕ್ವಿಂಟನ್ ಡಿಕಾಕ್ ಅವರ ದಾಖಲೆಯನ್ನು ಸಮ ಮಾಡಿದರು.

ಸಂಕ್ಷಿಪ್ತ ಸ್ಕೋರು:

ಸನ್ರೈಸರ್ಸ್ ಹೈದರಾಬಾದ್: 20 ಓವರ್ಗಳಲ್ಲಿ 2 ವಿಕೆಟ್ಗಳಿಗೆ 242 (ಅಭಿಷೇಕ್ ಶರ್ಮಾ ಔಟಾಗದೇ 135, ಟ್ರಾವಿಸ್ ಹೆಡ್ 37, ಇಶಾನ್ ಕಿಶನ್ 25, ಹೆನ್ರಿಚ್ ಕ್ಲಾಸನ್ ಔಟಾಗದೇ 37; ಅಕ್ಷರ್ ಪಟೇಲ್ 23ಕ್ಕೆ1).

ಡೆಲ್ಲಿ ಕ್ಯಾಪಿಟಲ್ಸ್: 20 ಓವರ್ಗಳಲ್ಲಿ 9 ವಿಕೆಟ್ಗಳಿಗೆ 195 (ಕೆ.ಎಲ್.ರಾಹುಲ್ 37, ನಿತೀಶ್ ರಾಣಾ 57, ಸಮೀರ್ ರಿಜ್ವಿ 41, ಟ್ರಿಸ್ಟನ್ ಸ್ಟಬ್ಸ್ 27, ಇಶಾನ್ ಮಾಲಿಂಗ 32ಕ್ಕೆ4, ಹರ್ಷ್ ದುಬೆ 12ಕ್ಕೆ3).

ಪಂದ್ಯದ ಆಟಗಾರ: ಅಭಿಷೇಕ್ ಶರ್ಮಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.