ಬುಧವಾರ, ನವೆಂಬರ್ 20, 2019
22 °C

ಐಪಿಎಲ್‌ ಪಂದ್ಯಗಳ ಮೊದಲು ರಾಷ್ಟ್ರಗೀತೆ: ನೆಸ್‌ ವಾಡಿಯಾ ಪತ್ರ

Published:
Updated:

ನವದೆಹಲಿ: ಐಪಿಎಲ್‌ನ ಮುಂದಿನ ಆವೃತ್ತಿಯ ಪ್ರತಿ ಪಂದ್ಯಗಳ ಆರಂಭಕ್ಕೆ ಮೊದಲು ರಾಷ್ಟ್ರಗೀತೆ ನುಡಿ ಸಬೇಕು ಎಂದು ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದ ಸಹ ಮಾಲೀಕ ನೆಸ್‌ ವಾಡಿಯಾ ಬಿಸಿಸಿಐಗೆ ಪತ್ರ ಬರೆದಿದ್ದಾರೆ.

‘ಪ್ರತಿ ಅಂತರರಾಷ್ಟ್ರೀಯ ಪಂದ್ಯಗಳಿಗೆ ಮೊದಲು ರಾಷ್ಟ್ರಗೀತೆ ನುಡಿಸಲಾಗುತ್ತದೆ. ಆದರೆ ವಿಶ್ವದ ಅಗ್ರಮಾನ್ಯ ಲೀಗ್‌ ಎನಿಸಿದ ಐಪಿಎಲ್‌ನಲ್ಲೂ ಇಂಥ ಸಂಪ್ರದಾಯ ಇರಬೇಕು’ ಎಂದು ಅಭಿಪ್ರಾಯಪಟ್ಟಿರುವ ನೆಸ್‌, ಪ್ರತಿ ಆವೃತ್ತಿಯ ಮೊದಲ ದಿನ ಏರ್ಪಡಿಸುತ್ತಿದ್ದ ಅದ್ಧೂರಿ ಉದ್ಘಾ ಟನಾ ಸಮಾರಂಭ ಕೈಬಿಡುವ ಬಿಸಿಸಿಐ ಕ್ರಮವನ್ನು ಸ್ವಾಗತಿಸಿದರು.

ಪ್ರತಿಕ್ರಿಯಿಸಿ (+)