ವಿಶ್ವಕಪ್‌ಗೆ ಐಪಿಎಲ್ ರಹದಾರಿ: ಡೆನ್ಲಿ

ಮಂಗಳವಾರ, ಏಪ್ರಿಲ್ 23, 2019
31 °C

ವಿಶ್ವಕಪ್‌ಗೆ ಐಪಿಎಲ್ ರಹದಾರಿ: ಡೆನ್ಲಿ

Published:
Updated:
Prajavani

ಕೋಲ್ಕತ್ತ: ಐಪಿಎಲ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಿ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿಯ ಗಮನ ಸೆಳೆಯಲು ಪ್ರಯತ್ನಿಸುವೆ ಎಂದು ಇಂಗ್ಲೆಂಡ್‌ ತಂಡದ ಆಲ್‌ರೌಂಡರ್ ಜೋ ಡೆನ್ಲಿ ತಿಳಿಸಿದರು.

‘ವಿಶ್ವಕಪ್ ಟೂರ್ನಿಗೆ ತಂಡವನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಐಪಿಎಲ್‌ ಸಾಧನೆಯನ್ನು ಆಯ್ಕೆ ಸಮಿತಿ ಪರಿಗಣಿಸುವ ಸಾಧ್ಯತೆ ಇದೆ’ ಎಂದು ಕೋಲ್ಕತ್ತ ನೈಟ್ ರೈಡರ್ಸ್ ತಂಡದಲ್ಲಿ ಸ್ಥಾನ ಗಳಿಸಿರುವ ಜೋ ಹೇಳಿದರು.

ಕೆಂಟ್ ತಂಡದ ಪರವಾಗಿ ಆಡುತ್ತಿದ್ದ ಜೋ ಅವರು ರಾಯಲ್ ಲಂಡನ್‌ ಏಕದಿನ ಟೂರ್ನಿಯಲ್ಲಿ 70.28 ಸರಾಸರಿಯಲ್ಲಿ ರನ್ ಗಳಿಸಿದ್ದರು. ಲೆಗ್ ಸ್ಪಿನ್ನರ್ ಕೂಡ ಆಗಿರುವ ಅವರು 20 ವಿಕೆಟ್‌ಗಳನ್ನೂ ಕಬಳಿಸಿದ್ದರು. ವೆಸ್ಟ್ ಇಂಡೀಸ್‌ ಎದುರಿನ ಟ್ವೆಂಟಿ–20 ಸರಣಿಯಲ್ಲೂ ಅವರು ಆಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !