ಅಹಮದಾಬಾದ್: ಶನಿವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 2026ರ ಐಪಿಎಲ್ನ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ಯುವ ವೇಗಿ ಅಶೋಕ್ ಶರ್ಮಾ ದಾಖಲೆಯೊಂದನ್ನು ಬರೆದಿದ್ದಾರೆ.

ಗುಜರಾತ್ ವಿರುದ್ಧದ ಪಂದ್ಯವನ್ನು ರಾಜಸ್ಥಾನ ರಾಯಲ್ಸ್ ತಂಡವು ಕೊನೆಯ ಓವರ್ನಲ್ಲಿ ರೋಚಕವಾಗಿ ಗೆಲುವು ಸಾಧಿಸಿತು. ಆ ಮೂಲಕ ಆಡಿದ ಎರಡೂ ಪಂದ್ಯಗಳಲ್ಲಿ ಗೆದ್ದು, ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿತು.

ಇದೇ ಪಂದ್ಯದಲ್ಲಿ ಗುಜರಾತ್ ತಂಡದ ಉದಯೋನ್ಮುಖ ವೇಗದ ಬೌಲರ್ ಅಶೋಕ್ ಶರ್ಮಾ ಅವರು ಈ ಆವೃತಿಯಲ್ಲಿ ಇದುವರೆಗೆ ಯಾವುದೇ ಬೌಲರ್ ಮಾಡದ ದಾಖಲೆ ಮಾಡಿದ್ದಾರೆ. ರಾಜಸ್ಥಾನ ತಂಡದ ಬ್ಯಾಟರ್ ಧ್ರುವ್ ಜುರೇಲ್ ಅವರಿಗೆ ಈ ಸೀಸನ್ನ ವೇಗದ ಬಾಲ್ ಅನ್ನು ಎಸೆದಿದ್ದಾರೆ.

22 ವರ್ಷದ ಅಶೋಕ್ ಶರ್ಮಾ ಅವರನ್ನು ಗುಜರಾತ್ ಟೈಟಾನ್ಸ್ ತಂಡವು ₹90 ಲಕ್ಷಕ್ಕೆ ಖರೀದಿ ಮಾಡಿತ್ತು. ಕೆಲ ಪಂದ್ಯಗಳಲ್ಲಿ ಬ್ಯಾಕ್ ಆಫ್ ಆಟಗಾರನಾಗಿದ್ದ ಅಶೋಕ್ ನಿನ್ನೆಯ ಪಂದ್ಯದಲ್ಲಿ ಮೈದಾನಕ್ಕಿಳಿದಿದ್ದರು.

ಈ ಪಂದ್ಯದ 16ನೇ ಓವರ್ನಲ್ಲಿ ಬೌಲಿಂಗ್ಗೆ ಬಂದ ಅಶೋಕ್ ಶರ್ಮಾ ಓವರ್ನ ಕೊನೆಯ ಎಸೆತವನ್ನು 154.2 ಕಿ.ಮೀ ವೇಗದಲ್ಲಿ ಎಸೆದಿದ್ದಾರೆ. ಆ ಮೂಲಕ 2026ನೇ ಆವೃತಿಯಲ್ಲಿ ವೇಗದ ಬೌಲಿಂಗ್ ಮಾಡಿದ್ದ ನೋಕಿಯಾ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ್ದಾರೆ.

ಐಪಿಎಲ್ನಲ್ಲಿ ಈವರೆಗೆ ವೇಗದ ಬೌಲಿಂಗ ಮಾಡಿದ ಭಾರತೀಯರು

ಉಮ್ರಾನ್ ಮಲಿಕ್ (157 kmph)

ಮಯಾಂಕ್ ಯಾದವ್ (156.7 kmph)

ಅಶೋಕ್ ಶರ್ಮಾ (154.2 kmph)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.