ಸೋಮವಾರ, ಜನವರಿ 27, 2020
20 °C
ಐಪಿಎಲ್ 2020

ಹರಾಜು ಪ್ರಕ್ರಿಯೆಗೆ 1 ಗಂಟೆ ಬ್ರೇಕ್: ಯಾವ ಪ್ರಾಂಚೈಸ್‌ ಬಳಿ ಎಷ್ಟು ಹಣ ಉಳಿದಿದೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಐಪಿಲ್‌ 13ನೇ ಆವೃತ್ತಿಯ ಹರಾಜು ಪ್ರಕ್ರಿಯೆಯ ಮೊದಲ ಅವಧಿ ಮುಗಿದಿದೆ. ಒಂದು ಗಂಟೆ ವಿರಾಮದ ಬಳಿಕ ಎರಡನೇ ಅವಧಿ ಆರಂಭವಾಗಲಿದೆ. ಇದುವರೆಗೆ 17 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 33 ಆಟಗಾರರು ಬಿಕರಿಯಾಗಿದ್ದಾರೆ. ಇಷ್ಟು ಆಟಗಾರರನ್ನು ಖರೀದಿಸಲು ‍ಪ್ರಾಂಚೈಸ್‌ಗಳು ಒಟ್ಟು ₹ 117.55 ಕೋಟಿ ಖರ್ಚು ಮಾಡಿದ್ದಾರೆ.

ಮೊದಲ ಅವಧಿ ಆರಂಭಕ್ಕೂ ಮುನ್ನ ₹ 42.70 ಕೋಟಿ ಹೊಂದಿದ್ದ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದ ಬಳಿ ಇನ್ನು ₹ 20.25 ಕೋಟಿ ಹಣ ಉಳಿದಿದೆ. ಉಳಿದಂತೆ ಹೆಚ್ಚು ಹಣ ಉಳಿಸಿಕೊಂಡಿರುವ ಪ್ರಾಂಚೈಸ್‌ ರಾಜಸ್ಥಾನ ರಾಯಲ್ಸ್‌. ರಾಯಲ್ಸ್‌ ಬಳಿ ಒಟ್ಟು ₹ 17.45 ಕೋಟಿ ಇದೆ.

ಡೆಲ್ಲಿ ಕ್ಯಾಪಿಟಲ್ಸ್‌ ₹ 14.70 ಕೋಟಿ, ಆರ್‌ಸಿಬಿ ₹ 13.50 ಕೋಟಿ, ಸನ್‌ರೈಸರ್ಸ್‌ ಹೈದರಾಬಾದ್‌ ₹ 11.20 ಕೋಟಿ, ಕೆಕೆಆರ್‌ ₹ 10.10 ಕೋಟಿ, ಮುಂಬೈ ಇಂಡಿಯನ್ಸ್‌ ₹ 2.55 ಕೋಟಿ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ₹ 35 ಲಕ್ಷ ಉಳಿಸಿಕೊಂಡಿದೆ.

ಹರಾಜು ಪ್ರಕ್ರಿಯೆ ಆರಂಭಕ್ಕೂ ಮುನ್ನ ಯಾರ ಬಳಿ ಎಷ್ಟು ಹಣ ಇತ್ತು?
ಕಿಂಗ್ಸ್‌ ಇಲೆವನ್‌ ಪಂಜಾಬ್‌: ₹ 42.70 ಕೋಟಿ
ಕೋಲ್ಕತ್ತ ನೈಟ್ ರೈಡರ್ಸ್‌: ₹ 35.65 ಕೋಟಿ
ರಾಜಸ್ಥಾನ ರಾಯಲ್ಸ್‌: ₹ 28.90 ಕೋಟಿ
ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: ₹ 27.90 ಕೋಟಿ
ಡೆಲ್ಲಿ ಕ್ಯಾಪಿಟಲ್ಸ್‌: ₹ 27.85 ಕೋಟಿ
ಸನ್‌ರೈಸರ್ಸ್‌ ಹೈದರಾಬಾದ್‌: ₹ 17 ಕೋಟಿ
ಚೆನ್ನೈ ಸೂಪರ್‌ ಕಿಂಗ್ಸ್‌: ₹ 14.60 ಕೋಟಿ
ಮುಂಬೈ ಇಂಡಿಯನ್ಸ್‌:  ₹ 13.05 ಕೋಟಿ

ನಿಯಮದಂತೆ ಒಂದು ತಂಡವು ಗರಿಷ್ಠ ಎಂಟು ವಿದೇಶಿ ಆಟಗಾರರು ಸೇರಿದಂತೆ ಒಟ್ಟು 25 ಆಟಗಾರರನ್ನು ಹೊಂದಬಹುದು. ಅದರಂತೆ ಚೆನ್ನೈ ಬಳಿ ಈಗ 8 ವಿದೇಶಿಯರು ಸೇರಿ 23 ಆಟಗಾರರಿದ್ದಾರೆ.

ಕಿಂಗ್ಸ್‌ ಇಲೆವನ್‌ ಪಂಜಾಬ್‌ ಬಳಿ 7 ವಿದೇಶಿ ಆಟಗಾರರು ಸೇರಿ 22 ಆಟಗಾರರಿದ್ದಾರೆ.

ಮುಂಬೈ ಇಂಡಿಯನ್ಸ್‌ ತಂಡದಲ್ಲಿ 8 ವಿದೇಶಿ ಆಟಗಾರರು ಸೇರಿ 21 ಆಟಗಾರರಿದ್ದಾರೆ.

ಸನ್‌ರೈಸರ್ಸ್‌ ಹೈದರಾಬಾದ್‌ ಬಳಿ 7 ವಿದೇಶಿ ಆಟಗಾರರು ಸೇರಿ 21 ಆಟಗಾರರಿದ್ದಾರೆ.

ರಾಜಸ್ಥಾನ ರಾಯಲ್ಸ್‌ ಬಳಿ 5 ವಿದೇಶಿ ಆಟಗಾರರು ಸೇರಿ 21 ಆಟಗಾರರಿದ್ದಾರೆ.

ಕೋಲ್ಕತ್ತ ನೈಟ್‌ ರೈಡರ್ಸ್‌ ಬಳಿ 6 ವಿದೇಶಿ ಆಟಗಾರರು ಸೇರಿ 19 ಆಟಗಾರರಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌ ಬಳಿ 7 ವಿದೇಶಿ ಆಟಗಾರರು ಸೇರಿ 18 ಆಟಗಾರರಿದ್ದಾರೆ.

ಆರ್‌ಸಿಬಿ ಬಳಿ 4 ವಿದೇಶಿ ಆಟಗಾರರು ಸೇರಿ 15 ಆಟಗಾರರಿದ್ದಾರೆ.

ಇದುವರೆಗೆ ಹೆಚ್ಚು ಮೊತ್ತಕ್ಕೆ ಬಿಕರಿಯಾದ ಆಟಗಾರರು

ಆಟಗಾರ ದೇಶ ತಂಡ ಬೆಲೆ
ಪ್ಯಾಟ್‌ ಕಮಿನ್ಸ್‌ ಆಸ್ಟ್ರೇಲಿಯಾ ಕೆಕೆಆರ್‌ ₹ 15.5 ಕೋಟಿ
ಗ್ಲೇನ್‌ ಮ್ಯಾಕ್ಸ್‌ವೆಲ್‌ ಆಸ್ಟ್ರೇಲಿಯಾ ಕಿಂಗ್ಸ್‌ ಇಲವೆನ್ ಪಂಜಾಬ್ ₹ 10.75 ಕೋಟಿ
ಕ್ರಿಸ್‌ ಮೋರಿಸ್‌ ದ.ಆಫ್ರಿಕಾ ಆರ್‌ಸಿಬಿ ₹ 10 ಕೋಟಿ
ಶೆಲ್ಡನ್‌ ಕಾಟ್ರೇಲ್‌ ವೆಸ್ಟ್‌ ಇಂಡೀಸ್‌ ಕಿಂಗ್ಸ್‌ ಇಲವೆನ್ ಪಂಜಾಬ್  ₹ 8.50 ಕೋಟಿ
ನಾಥನ್ ಕರ್ಟರ್‌ನೇಲ್‌ ಆಸ್ಟ್ರೇಲಿಯಾ ಮುಂಬೈ ಇಂಡಿಯನ್ಸ್‌  ₹ 8 ಕೋಟಿ
ಪಿಯೂಷ್‌ ಚಾವ್ಲಾ ಭಾರತ ಸಿಎಸ್‌ಕೆ ₹ 6.75 ಕೋಟಿ
ಸ್ಯಾಮ್‌ ಕರನ್‌ ಇಂಗ್ಲೆಂಡ್‌ ಸಿಎಸ್‌ಕೆ  ₹ 5.5 ಕೋಟಿ
ಇಯಾನ್‌ ಮಾರ್ಗನ್‌ ಇಂಗ್ಲೆಂಡ್‌ ಕೆಕೆಆರ್‌ ₹ 5.25 ಕೋಟಿ
    ಪ್ರತಿಕ್ರಿಯಿಸಿ (+)

    ಈ ವಿಭಾಗದಿಂದ ಇನ್ನಷ್ಟು