ಬುಧವಾರ, ಜನವರಿ 29, 2020
27 °C

ಐಪಿಎಲ್: ಕಮಿನ್ಸ್‌ಗೆ ₹15.5 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ಮೊದಲೇ ನಿರೀಕ್ಷಿಸಿದಂತೆ ಆಸ್ಟ್ರೇಲಿಯಾ ಮತ್ತು ವೆಸ್ಟ್‌ ಇಂಡೀಸ್‌ನ ಆಟಗಾರರು ಗುರುವಾರ ಇಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಹರಾಜು ಪ್ರಕ್ರಿಯೆಯಲ್ಲಿ ಸಿಂಹಪಾಲು ಗಳಿಸಿದರು.

ಆಸ್ಟ್ರೇಲಿಯಾದ ಆಲ್‌ರೌಂಡರ್ ಪ್ಯಾಟ್‌ ಕಮಿನ್ಸ್‌ ₹ 15.50 ಕೋಟಿ ಮೌಲ್ಯ ಗಳಿಸಿದರು. ಐಪಿಎಲ್‌ ಇತಿಹಾಸ
ದಲ್ಲಿಯೇ ಗರಿಷ್ಠ ಮೌಲ್ಯ ಪಡೆದ ವಿದೇಶಿ ಆಟಗಾರನೆಂಬ ಹೆಗ್ಗಳಿಕೆಯೂ ಅವರ ದ್ದಾಯಿತು. ಬಾಲಿವುಡ್ ತಾರೆ ಶಾರೂಖ್‌ ಖಾನ್ ಮಾಲೀಕತ್ವದ ಕೋಲ್ಕತ್ತ ನೈಟ್ ರೈಡರ್ಸ್‌ ಫ್ರ್ಯಾಂಚೈಸ್‌ ಕಮಿನ್ಸ್‌ ಅವರನ್ನು ಪಡೆದುಕೊಂಡಿತು.

ಅವರದೇ ದೇಶದ ಗ್ಲೆನ್ ಮ್ಯಾಕ್ಸ್‌ ವೆಲ್  (₹10.75 ಕೋಟಿ) ಅವರು ಈ ಬಾರಿ ಅತಿ ಹೆಚ್ಚು ಮೌಲ್ಯ ಪಡೆದ ಎರ
ಡನೇ ಆಟಗಾರ. ಅವರು ಕಿಂಗ್ಸ್ ಇಲೆವೆನ್ ಪಂಜಾಬ್ ಪಾಲಾದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ದಕ್ಷಿಣ ಆಫ್ರಿಕಾದ ಕ್ರಿಸ್ ಮಾರಿಸ್ (₹10 ಕೋಟಿ) ಅವರನ್ನು ಖರೀದಿಸಿತು. ವಿಂಡೀಸ್‌ನ ವೇಗಿ ಶೆಲ್ಡನ್ ಕಾಟ್ರೆಲ್ (₹8.50 ಕೋಟಿ) ಮತ್ತು ಬ್ಯಾಟ್ಸ್‌ಮನ್ ಶಿಮ್ರೊನ್ ಹೆಟ್ಮೆಯರ್ (₹ 7.75 ಕೋಟಿ) ಕ್ರಮವಾಗಿ ಕಿಂಗ್ಸ್ ಇಲೆವನ್ ಪಂಜಾಬ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳಲ್ಲಿ ಸ್ಥಾನ ಪಡೆದರು. ಭಾರತದ ಆಟಗಾರರಲ್ಲಿ ಸ್ಪಿನ್ನರ್ ಪಿಯೂಷ್ ಚಾವ್ಲಾ (₹ 6.75 ಕೋಟಿ) ಅತಿ ಹೆಚ್ಚು ಮೌಲ್ಯ ಪಡೆದ ಆಟಗಾರನಾದರು. ಅವರನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ಖರೀದಿಸಿತು.

ಕನ್ನಡಿಗ ರಾಬಿನ್ ಉತ್ತಪ್ಪ (₹3 ಕೋಟಿ) ಈ ಸಲ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿಯಲಿದ್ದಾರೆ. ಬೌಲರ್ ಜೈದೇವ್ ಉನದ್ಕತ್ ಕೂಡ ಅಷ್ಟೇ ಮೌಲ್ಯ ಪಡೆದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು