ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟೂರ್ನಿಗಿಂತ ಮೊದಲು ಮುಷ್ತಾಕ್ ಅಲಿ ಟ್ರೋಫಿ: ಬಿಸಿಸಿಐ ಚಿಂತನೆ

ಐಪಿಎಲ್‌ ಮೇಗಾ ಹರಾಜು ಪ್ರಕ್ರಿಯೆಗೆ ಪ್ರತಿಭಾ ಶೋಧದ ಉದ್ದೇಶ
Last Updated 15 ನವೆಂಬರ್ 2020, 16:29 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮುಂದಿನ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಗಾಗಿ ಹರಾಜು ಪ್ರಕ್ರಿಯೆಯನ್ನು ನಡೆಸಲು ಬಿಸಿಸಿಐ ಉದ್ದೇಶಿಸಿದೆ.

ಆದ್ದರಿಂದಲೇ ರಣಜಿ ಟ್ರೋಫಿ ಟೂರ್ನಿಗಿಂತ ಮುನ್ನ ಸೈಯದ್ ಮುಷ್ತಾಕ್ ಅಲಿ ಟ್ರೋಫೀ ಟಿ20 ಕ್ರಿಕೆಟ್ ಟೂರ್ನಿಯನ್ನು ಆಯೋಜಿಸುವ ಕುರಿತು ಚಿಂತನೆ ನಡೆಸುತ್ತಿದೆ.

2021ರ ಜನವರಿಯಲ್ಲಿ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯನ್ನು ನಡೆಸಲು ಉದ್ದೇಶಿಸಿದೆ. ಒಂದೇ ನಗರದಲ್ಲಿ ಅಥವಾ ರಾಜ್ಯ ಕ್ರಿಕೆಟ್ ಸಂಸ್ಥೆಗಳಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಕ್ರೀಡಾಂಗಣಗಳಿವೆ. ಜೊತೆಗೆ ಆಯಾ ನಗರದಲ್ಲಿ ವಸತಿ ಸೌಲಭ್ಯಕ್ಕಾಗಿ ಪಂಚತಾರಾ ಹೋಟೆಲ್‌ಗಳಿರುವುದನ್ನು ನೋಡಿಕೊಂಡು ಟೂರ್ನಿಯನ್ನು ಆಯೋಜಿಸುವ ಉದ್ದೇಶ ಮಂಡಳಿಗೆ ಇದೆ. ಇದರಿಂದಾಗಿ ತಂಡಗಳ ಪ್ರಯಾಣವನ್ನು ತಪ್ಪಿಸಬಹುದು. ಕೋವಿಡ್ ತಡೆಗೆ ಜೀವ ಸುರಕ್ಷಾ ವಲಯ ನಿಯಮವನ್ನು ಜಾರಿಗೊಳಿಸಲೂ ಇದು ಅನುಕೂಲವಾಗಲಿದೆ ಎಂದು ಮೂಲಗಳು ತಿಳಿಸಿವೆ

’ಈಗಾಗಲೇ ಹತ್ತು ರಾಜ್ಯ ಸಂಸ್ಥೆಗಳನ್ನು ಸಂಪರ್ಕಿಸಲಾಗಿದೆ. ಜೀವ ಸುರಕ್ಷಾ ವಲಯವನ್ನು ನಿರ್ವಹಿಸಿಕೊಂಡು, ಎರಡು ವಾರಗಳ ಅವಧಿಯಲ್ಲಿ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯನ್ನು ಆಯೋಜಿಸಲು ಸಾಧ್ಯವೇ ಎಂದು ಪರಿಶೀಲಿಸಲಾಗುತ್ತಿದೆ. ಅದು ಮುಗಿದ ಕೂಡಲೇ ರಣಜಿ ಟ್ರೋಫಿ ಟೂರ್ನಿಗೆ ಚಾಲನೆ ನೀಡಬಹುದಾಗಿದೆ. ಹತ್ತರಲ್ಲಿ ಆರು ಸಂಸ್ಥೆಗಳಾದರೂ ಸಕಾರಾತ್ಮಕ ಪ್ರತಿಕ್ರಿಯೆ ನೀಡುವ ನಿರೀಕ್ಷೆಯಿದೆ‘ ಎಂದು ರಾಜ್ಯ ಕ್ರಿಕೆಟ್ ಸಂಸ್ಥೆಯೊಂದರ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತವರೂರು ಕೋಲ್ಕತ್ತದಲ್ಲಿ ಮೂರು ಕ್ರೀಡಾಂಗಣಗಳು (ಈಡನ್ ಗಾರ್ಡನ್ಸ್‌, ಸಾಲ್ಟ್‌ಲೇಕ್ ಜೆಯು ಮತ್ತು ಕಲ್ಯಾಣಿ) ಇವೆ. ಬಂಗಾಳ ಕ್ರಿಕೆಟ್ ಸಂಸ್ಥೆಯು ಈಗಾಗಲೇ

ನಗರದಲ್ಲಿ ಬಹಳಷ್ಟು ದೊಡ್ಡ ತಾರಾ ಹೋಟೆಲ್‌ಗಳೂ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT