ಮುಂಬೈ (ಪಿಟಿಐ): ಇಂಪ್ಯಾಕ್ಟ್ ಪ್ಲೇಯರ್ ನಿಯಮ ಹಾಗೂ ನೀತಿಸಂಹಿತೆಯ ಬಗ್ಗೆ ಚರ್ಚಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡುವ ಎಲ್ಲ 10 ತಂಡಗಳ ನಾಯಕರ ಸಭೆಯನ್ನು ಬುಧವಾರ ಕರೆದಿದೆ.

19ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಇದೇ 28ರಂದು ಆರಂಭಗೊಳ್ಳಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಈ ಸಭೆ ನಡೆಯಲಿದೆ. ಭಾರತದ ಮ್ಯಾಚ್ ರೆಫರಿ ಪ್ಯಾನೆಲ್ ಮುಖ್ಯಸ್ಥ ಜಾವಗಲ್ ಶ್ರೀನಾಥ್ ಹಾಗೂ ಅಂಪೈರ್ಸ್ ಪ್ಯಾನೆಲ್ ಮುಖ್ಯಸ್ಥ ನಿತಿನ್ ಮೆನನ್ ಅವರು ಸಭೆಯಲ್ಲಿ ಮಾರ್ಗದರ್ಶನ ನೀಡಲಿದ್ದಾರೆ.

‘ಈ ಬಾರಿಯ ಐಪಿಎಲ್ನಲ್ಲಿ ಹೊಸ ನಿಯಮಗಳೇನೂ ಜಾರಿಯಾಗುತ್ತಿಲ್ಲ. ಆದರೆ, ಕೆಲ ತಂಡಗಳ ನಾಯಕರು ಹಾಗೂ ಕೋಚ್ಗಳು ಮೊದಲ ಬಾರಿ ಜವಾಬ್ದಾರಿ ಹೊತ್ತಿದ್ದಾರೆ. ಹೀಗಾಗಿ, ಟೂರ್ನಿಯ ನಿಯಮಗಳ ಬಗ್ಗೆ ಅವರಿಗೆ ತಿಳಿಸುವುದು ನಮ್ಮ ಜವಾಬ್ದಾರಿಯಾಗಿದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.