2026 ಇಂಡಿಯನ್ ಪ್ರೀಮಿಯರ್ ಲೀಗ್ ಅಂತಿಮ ಘಟ್ಟ ತಲುಪಿದೆ. 4 ಬಲಿಷ್ಠ ತಂಡಗಳು ಪ್ಲೇ ಆಫ್ಗೆ ಕಾಲಿಟ್ಟಿದ್ದು, ಪ್ರಶಸ್ತಿ ಗೆಲುವಿಗಾಗಿ ಪೈಪೋಟಿ ನಡೆಸುತ್ತಿವೆ. ಈ ನಡುವೆ ಇದುವರೆಗೂ ನಡೆದಿರುವ 19 ಸೀಸನ್ಗಳಲ್ಲಿ ಯಾವ ನಾಯಕರು ತಮ್ಮ ತಂಡವನ್ನು ಅತೀ ಹೆಚ್ಚು ಬಾರಿ ಪ್ಲೇ ಆಫ್ಗೆ ಕರೆದುಕೊಂಡು ಹೋಗಿದ್ದಾರೆ ಎಂಬುದನ್ನು ಇಲ್ಲಿ ನೋಡೋಣ.

ಚೆನ್ನೈ ಸೂಪರ್ ಕಿಂಗ್ಸ್ ತಂಡವು 17 ಐಪಿಎಲ್ ಆವೃತ್ತಿಗಳನ್ನು ಆಡಿದ್ದು, ಆ ಪೈಕಿ ಅನೇಕ ಸೀಸನ್ಗಳಲ್ಲಿ ಪ್ಲೇ ಆಫ್ ಪ್ರವೇಶಿಸಿದೆ. ಅದರಲ್ಲಿ ಎಂ.ಎಸ್. ಧೋನಿ ಅವರ ನಾಯಕತ್ವದಲ್ಲಿ ಬರೋಬ್ಬರಿ 12 ಬಾರಿ ಪ್ಲೇ ಆಫ್ ಪ್ರವೇಶಿಸಿದೆ. ಇದು ನಾಯಕನಾಗಿ ತಂಡವನ್ನು ಅತಿ ಹೆಚ್ಚು ಬಾರಿ ಪ್ಲೇ ಆಫ್ಗೆ ಕರೆದುಕೊಂಡ ಹೋಗಿರುವ ನಾಯಕ ಎಂಬ ದಾಖಲೆಯಿದೆ.

ಎರಡನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಇದ್ದು, ಅವರು ಮುಂಬೈ ತಂಡವನ್ನು ನಾಯಕರಾಗಿ 7 ಬಾರಿ ಪ್ಲೇ ಆಫ್ಗೆ ತಲುಪಿಸಿದ್ದಾರೆ.

ಮೂರನೇ ಸ್ಥಾನದಲ್ಲಿ ಗೌತಮ್ ಗಂಭೀರ್ ಅವರಿದ್ದು, ಅವರು ಕೋಲ್ಕತ್ತ ನೈಟ್ರೈಡರ್ಸ್ ತಂಡವನ್ನು 5 ಬಾರಿ ಪ್ಲೇ ಆಫ್ಗೆ ಕರೆದುಕೊಂಡು ಹೋಗಿದ್ದಾರೆ.

ನಾಲ್ಕನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಐಯ್ಯರ್ ಇದ್ದಾರೆ. ವಿರಾಟ್ ಕೊಹ್ಲಿ ಅವರ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 4 ಬಾರಿ ಹಾಗೂ ಶ್ರೇಯಸ್ ಐಯ್ಯರ್ ನಾಯಕತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 2 ಬಾರಿ, ಕೋಲ್ಕತ್ತ ನೈಟ್ ರೈಡರ್ಸ್ 1 ಬಾರಿ ಮತ್ತು ಪಂಜಾಬ್ ಕಿಂಗ್ಸ್ 1 ಬಾರಿ ಪ್ಲೇ ಆಫ್ ಪ್ರವೇಶ ಪಡೆದುಕೊಂಡಿದ್ದವು.

ಐದನೇ ಸ್ಥಾನದಲ್ಲಿ ವಿರೇಂದ್ರ ಸೇಹ್ವಾಗ್, ಹಾರ್ದಿಕ್ ಪಾಂಡ್ಯ ಹಾಗೂ ಡೇವಿಡ್ ವಾರ್ನರ್ ಇದ್ದಾರೆ. ವಿರೇಂದ್ರ ಸೇಹ್ವಾಗ್ ನಾಯಕತ್ವದಲ್ಲಿ 3 ಬಾರಿ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಪ್ಲೇ ಆಫ್ಗೆ ತೆಗೆದುಕೊಂಡು ಹೋಗಿದ್ದಾರೆ. ವಾರ್ನರ್ ಅವರು ತಮ್ಮ ನಾಯಕತ್ವದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು 3 ಬಾರಿ ಪ್ಲೇ ಆಫ್ಗೆ ಕೊಂಡೊಯ್ದಿದ್ದರು. ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟನ್ಸ್ ಅನ್ನು 2 ಬಾರಿ ಹಾಗೂ ಮುಂಬೈ ಇಂಡಿಯನ್ಸ್ ತಂಡವನ್ನು 1 ಬಾರಿ ಪ್ಲೇ ಆಫ್ಗೆ ತಲುಪಿಸಿದ್ದಾರೆ.

ಆರನೇ ಸ್ಥಾನದಲ್ಲಿ ಅನಿಲ್ ಕುಂಬ್ಳೆ, ಆ್ಯಡಂ ಗಿಲ್ಕ್ರಿಸ್ಟ್, ಸಚಿನ್ ತೆಂಡೂಲ್ಕರ್, ಸ್ಟೀವ್ ಸ್ಮಿತ್, ಕೇನ್ ವಿಲಿಯಮ್ಸನ್, ಸಂಜು ಸ್ಯಾಮ್ಸನ್, ಫಾಪ್ ಡುಪ್ಲೆಸಿಸ್, ರಜತ್ ಪಾಟಿದಾರ್, ಪ್ಯಾಟ್ ಕಮಿನ್ಸ್ ಹಾಗೂ ಶುಭಮನ್ ಗಿಲ್ ತಲಾ ಎರಡೆರಡು ಬಾರಿ ನಾಯಕರಾಗಿ ತಮ್ಮ ತಂಡವನ್ನು ಪ್ಲೇ ಆಫ್ಗೆ ಕೊಂಡೊಯ್ದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.