ಚೆನ್ನೈ: ಒಂದು ಕಾಲದ ಪ್ರಬಲ ತಂಡ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಮೊದಲ ಜಯಕ್ಕೆ ಕಾಯುತ್ತಿದೆ. ಈ ತಂಡವು ಶನಿವಾರ ನಡೆಯುವ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದ್ದು, ಅನುಭವಿಗಳಾದ ಸಂಜು ಸ್ಯಾಮ್ಸನ್ ಮತ್ತು ಋತುರಾಜ್ ಗಾಯಕವಾಡ್ ಅವರ ಮೇಲೆ ತೀವ್ರ ಒತ್ತಡವಿದೆ.

ಮೂರು ತಾಣಗಳಲ್ಲಿ ಮೂರು ಸೋಲುಗಳನ್ನು ಉಂಡಿರುವ ಚೆನ್ನೈ ತಂಡ ಕಳಾಹೀನವಾಗಿ ಅಭಿಯಾನ ಆರಂಭಿಸಿದೆ. ಎದುರಾಳಿ ತಂಡಗಳಿಗೆ ಪೈಪೋಟಿ ನೀಡಬೇಕಾದರೆ, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಹತ್ವದ ಸುಧಾರಣೆ ಕಾಣಬೇಕಾಗಿದೆ.

ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ ಅವರು ಗಾಯಾ ಳಾಗಿದ್ದು, ತಂಡದ ಸಮ ತೋಲನದ ಮೇಲೆ ಪರಿಣಾಮ ಬೀರಿದೆ. ಅವರು ಚೇತರಿಸಿಕೊಂಡಿದ್ದು, ಡೆಲ್ಲಿ ವಿರುದ್ಧ ಪಂದ್ಯ ದಲ್ಲಿ ಕಣ ಕ್ಕಿಳಿಯುವ ನಿರೀಕ್ಷೆಯಿದೆ. ಆದರೆ ದಿಗ್ಗಜ ಆಟಗಾರ ಎಂ.ಎಸ್.ಧೋನಿ ಕಣಕ್ಕಿಳಿಯುವ ಬಗ್ಗೆ ಸ್ಪಷ್ಟತೆ ದೊರೆತಿಲ್ಲ.

ಸ್ಯಾಮ್ಸನ್ ಮತ್ತು ಗಾಯಕವಾಡ್ ಅವರು ಅದಷ್ಟು ಬೇಗ ಲಯಕ್ಕೆ ಮರಳಬೇಕಿದೆ. ಕಾರ್ತಿಕ್ ಶರ್ಮಾ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಬೇಕಾಗಿದೆ. ಪ್ರಶಾಂತ್ ವೀರ್ ಕೆಳಕ್ರಮಾಂಕದಲ್ಲಿ ಉತ್ತಮವಾಗಿ ಆಡಿದ್ದಾರೆ. ಸರ್ಫರಾಜ್ ಖಾನ್ ಅವರು ಸ್ಥಿರ ಪ್ರದರ್ಶನ ನೀಡಿದ ಏಕೈಕ ಆಟಗಾರ.

ಆರ್ಸಿಬಿ ಎದುರು ಚೆನ್ನೈ ಬೌಲರ್ಗಳು 250 ರನ್ ತೆತ್ತು ದುಬಾರಿ ಯಾಗಿದ್ದರು. ಚೆನ್ನೈನ ಎರಡನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 210 ರನ್ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತ್ತು. ಖಲೀಲ್ ಅಹ್ಮದ್ ಅವರನ್ನುಳಿದು ಇತರೆಲ್ಲಾ ಬೌಲರ್ಗಳು ಓವರಿಗೆ 12ಕ್ಕೂ ಹೆಚ್ಚು ರನ್ ಕೊಟ್ಟಿದ್ದರು.

ಡೆಲ್ಲಿ ಕ್ಯಾಪಿಟಲ್ಸ್ ತವರಿನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಕೇವಲ ಒಂದು ರನ್ನಿಂದ ಗುಜರಾತ್ ಟೈಟನ್ಸ್ಗೆ ಸೋತಿತ್ತು. ಅಕ್ಷರ್ ಪಟೇಲ್ ಸಾರಥ್ಯದ ತಂಡವು ಪ್ರಬಲವಾಗಿದ್ದು, ಆಲ್ರೌಂಡ್ ಸಾಮರ್ಥ್ಯದಿಂದ ಚೆನ್ನೈ ತಂಡದ ಬೇಗುದಿ ಹೆಚ್ಚಿಸಲಬಲ್ಲದು.

ಡೇವಿಡ್ ಮಿಲ್ಲರ್ ಅವರು ಟೈಟನ್ಸ್ ವಿರುದ್ಧ ಐದನೇ ಎಸೆತದಲ್ಲಿ ಒಂದು ರನ್ ಓಡಲು ಹಿಂಜರಿದಿದ್ದು ಚರ್ಚೆಯಾಗಿದೆ. ಆದರೆ ಅವರು ಲಯಕ್ಕೆ ಮರಳಿರುವುದು ಡೆಲ್ಲಿ ಬಲ ಹೆಚ್ಚಿಸಿದೆ. ವೇಗಿ ಮುಕೇಶ್ ಕುಮಾರ್ ಪವರ್ಪ್ಲೇ ಅವಧಿಯಲ್ಲಿ ಬಿಗುದಾಳಿ ನಡೆಸುವ ಕಡೆ ಗಮನಹರಿಸಬೇಕಾಗಿದೆ.

ಮಿಚೆಲ್ ಸ್ಟಾರ್ಕ್ ಅವರ ಕೊರತೆಯನ್ನು ಲುಂಗಿ ಎನ್ಗಿಡಿ ನಿಭಾಯಿಸಿ ದ್ದಾರೆ. ಕೆ.ಎಲ್.ರಾಹುಲ್ ಮೂರನೇ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-51-427308257

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.