ಚೆನ್ನೈ (ಪಿಟಿಐ): ಕರ್ನಾಟಕದ ಆಲ್ರೌಂಡರ್ ಮೆಕ್ನೀಲ್ ನರೋನಾ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಐಪಿಎಲ್ನಲ್ಲಿ ಆಡುವ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಗಾಯಾಳಾಗಿರುವ ಆಲ್ರೌಂಡರ್ ರಾಮಕೃಷ್ಣ ಘೋಷ್ ಸ್ಥಾನದಲ್ಲಿ ಮೆಕ್ನಿಲ್ ಸೇರ್ಪಡೆಯಾಗಿದ್ದಾರೆ.

ಮೇ 3ರಂದು ಮುಂಬೈ ಇಂಡಿಯನ್ಸ್ ಎದುರಿನ ಪಂದ್ಯದ ವೇಳೆ ಘೋಷ್ ಅವರು ಪಾದದ ನೋವಿಗೆ ಒಳಗಾಗಿದ್ದರು. ಅವರ ಸ್ಥಾನಕ್ಕೆ ಮೆಕ್ನೀಲ್ ಅವರು ₹30 ಲಕ್ಷ ಮೊತ್ತಕ್ಕೆ ಚೆನ್ನೈ ಸೂಪರ್ ಕಿಂಗ್ಸ್ಗೆ ಸೇರ್ಪಡೆಯಾಗಿದ್ದಾರೆ ಎಂದು ಐಪಿಎಲ್ ಮಾಧ್ಯಮ ಪ್ರಕಟಣೆ ಬುಧವಾರ ತಿಳಿಸಿದೆ.

ಸಿ.ಕೆ.ನಾಯ್ಡು ಟ್ರೋಫಿಯಲ್ಲಿ ಅತ್ಯಧಿಕ ರನ್ ಗಳಿಕೆಗಾಗಿ ಮೆಕ್ನಿಲ್ ಅವರಿಗೆ ಬಿಸಿಸಿಐನ ನಮನ್ ಪ್ರಶಸ್ತಿ ಸಮಾರಂಭದಲ್ಲಿ ಎಂ.ಎ.ಚಿದಂರಬಮ್ ಟ್ರೋಫಿ ಪ್ರದಾನ ಮಾಡಲಾಗಿತ್ತು.

ಕಳೆದ ಋತುವಿನಲ್ಲಿ ಉತ್ತಮ ಸಾಧನೆಗಾಗಿ, 24 ವರ್ಷ ವಯಸ್ಸಿನ ಆಲ್ರೌಂಡರ್, ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡುವ ತಂಡಕ್ಕೂ ಆಯ್ಕೆಯಾಗಿದ್ದರು. ಅಲ್ಲಿ ಮೂರು ಪಂದ್ಯಗಳನ್ನು ಆಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-51-675546491

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.