ಚೆನ್ನೈ: ಐದು ಸಲದ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಒಂದು ಬಾರಿಯ ಪ್ರಶಸ್ತಿ ವಿಜೇತ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಸೋಮವಾರ ಮುಖಾಮುಖಿಯಾಗಲಿವೆ.

‘ದಕ್ಷಿಣ ಡರ್ಬಿ’ ಎಂದೇ ಬಿಂಬಿತವಾಗಿರುವ ಈ ಪಂದ್ಯವು ತೀವ್ರ ಕುತೂಹಲ ಕೆರಳಿಸಿದೆ. ಚೆಪಾಕ್ ಕ್ರೀಡಾಂ ಗಣದಲ್ಲಿ ನಡೆಯಲಿರುವ ಹಣಾಹಣಿಯು ಉಭಯ ತಂಡಗಳಿಗೂ ಮಹತ್ವದ್ದಾಗಿದೆ.ಆತಿಥೇಯ ತಂಡಕ್ಕಂತೂ ಪ್ಲೇ ಆಫ್ ಪ್ರವೇಶದ ಅವಕಾಶ ಜೀವಂತವಾಗಿ ಇಟ್ಟುಕೊಳ್ಳಲು ‘ಮಾಡು ಇಲ್ಲವೇ ಮಡಿ’ ಪಂದ್ಯವಾಗಿದೆ. ಇನ್ನು ಸನ್ರೈಸರ್ಸ್ ಬಳಗಕ್ಕೆ ಅಗ್ರ ನಾಲ್ಕರಲ್ಲಿ ಸ್ಥಾನ ಗಟ್ಟಿಯಾಗಿಸಿಕೊಳ್ಳಲು ಗೆಲುವು ಮುಖ್ಯವಾಗಿದೆ.

ಚೆನ್ನೈ 12 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ. ಹೈದರಾಬಧ್ 14 ಅಂಕ ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಚೆನ್ನೈಗೆ ತನ್ನ ಪಾಲಿಗೆ ಉಳಿದಿರುವ ಎರಡೂ ಪಂದ್ಯಗಳಲ್ಲಿ ಗೆದ್ದರೆ ಪ್ಲೇಆಫ್ ಅವಕಾಶ ಸಿಗುವ ಸಾಧ್ಯತೆ ಇದೆ.

ಚೆನ್ನೈ ತಂಡವು ಕಳೆದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಸತತ ಜಯ ಸಾಧಿಸಿತ್ತು. ಆದರೆ, ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಸೋತಿರುವುದು ಈಗ ಒತ್ತಡಕ್ಕೆ ಕಾರಣವಾಗಿದೆ. ಇದೀಗ ಋತುರಾಜ್ ಗಾಯಕವಾಡ್ ಬಳಗವು ಸನ್ರೈಸರ್ಸ್ ಮತ್ತು ಗುಜರಾತ್ ಟೈಟನ್ಸ್ ಸವಾಲುಗಳನ್ನುಮೀರಿ ನಿಲ್ಲಲೇಬೇಕಿದೆ.

ಲಖನೌ ಎದುರಿನ ಪಂದ್ಯದಲ್ಲಿ ಕಾರ್ತಿಕ್ ಶರ್ಮಾ ಅರ್ಧಶತಕ, ಶಿವಂ ದುಬೆ ಹಾಗೂ ಡೆವಾಲ್ಡ್ ಬ್ರೆವಿಸ್ ಅವರ ಉಪಯುಕ್ತ ಕಾಣಿಕೆಯ ಬಲದಿಂದ ತಂಡವು ಹೋರಾಟದ ಮೊತ್ತ ಪೇರಿಸಿತ್ತು. ಆದರೆ ‘ದ್ವಿಶತಕ’ದ ಗಡಿ ದಾಟಿರಲಿಲ್ಲ. ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಮತ್ತು ನಾಯಕ ಋತುರಾಜ್ ಅವರು ಲಯಕ್ಕೆ ಮರಳಿದರೆ ದೊಡ್ಡ ಮೊತ್ತ ಗಳಿಕೆ ಸುಲಭವಾಗಲಿದೆ.

ಚೆನ್ನೈ ಬೌಲರ್ಗಳು ಲಖನೌ ನ ಮಿಚೆಲ್ ಮಾರ್ಷ್ ಅವರಿಂದ ದಂಡನೆಗೆ ಒಳಗಾದರು. ಮುಕೇಶ್ ಚೌಧರಿ, ಸ್ಪೆನ್ಸರ್ ಜಾನ್ಸನ್ ಮತ್ತು ಅನ್ಷುಲ್ ಕಂಬೋಜ್ ಅವರು ದುಬಾರಿಯಾದರು. ಅನ್ಷುಲ್ ಅವರಂತೂ 2.4 ಓವರ್ಗಳಲ್ಲಿ 63 ರನ್ ಬಿಟ್ಟುಕೊಟ್ಟರು. ಅವರ ಒಂದೇ ಓವರ್ನಲ್ಲಿ ನಿಕೊಲಸ್ ಪೂರನ್ ಸತತ ನಾಲ್ಕು ಸಿಕ್ಸರ್ ಹೊಡೆದಿದ್ದರು.

ಸನ್ರೈಸರ್ಸ್ ಕೂಡ ಈಚೆಗೆ ಗುಜರಾತ್ ಟೈಟನ್ಸ್ ವಿರುದ್ಧ ಸೋತಿತ್ತು. ಬ್ಯಾಟರ್ಗಳ ವೈಫಲ್ಯವೇ ಸೋಲಿಗೆ ಪ್ರಮುಖ ಕಾರಣವಾಗಿತ್ತು. ತಂಡವು ಕೇವಲ 86 ರನ್ಗಳಿಗೆ ಆಲೌಟ್ ಆಗಿತ್ತು.

ಆದರೆ ತಂಡದಲ್ಲಿರುವ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಹೆನ್ರಿಚ್ ಕ್ಲಾಸೆನ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ಅವರು ತಮ್ಮ ಲಯಕ್ಕೆ ಮರಳಿದರೆ ಚೆನ್ನೈ ಬೌಲರ್ಗಳಿಗೆ ಕಠಿಣ ಸವಾಲು ಎದುರಾಗುವುದು ಖಚಿತ. ಕನ್ನಡಿಗ ಆರ್.ಸ್ಮರಣ್ ಅವರಿಗೆ ಕಳೆದ ಪಂದ್ಯದಲ್ಲಿ ಅವಕಾಶ ಲಭಿಸಿತ್ತು. ಅವರು 15 ಎಸೆತಗಳಲ್ಲಿ 9 ರನ್ ಗಳಿಸಿದ್ದರು.

ಹೈದರಾಬಾದ್ ತಂಡದ ಬೌಲಿಂಗ್ ವಿಭಾಗದಲ್ಲಿ ಪ್ಯಾಟ್ ಕಮಿನ್ಸ್ ಅವರೊಬ್ಬರೇ ಹೆಚ್ಚು ಅನುಭವಿ. ನಿತೀಶ್ ಕುಮಾರ್ ರೆಡ್ಡಿ, ಪ್ರಫುಲ್ ಹಿಂಗೆ, ಸಕೀಬ್ ಹುಸೇನ್ ಅವರು ವಿಕೆಟ್ ಗಳಿಸು ತ್ತಿದ್ದಾರೆ. ಆದರೆ ರನ್ಗಳಿಗೆ ನಿಯಂತ್ರಣವನ್ನೂ ಹಾಕಬೇಕಾದ ಅವಶ್ಯಕತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.