ಮುಲ್ಲನಪುರ (ನ್ಯೂ ಚಂಡೀಗಡ): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮಂಗಳವಾರ ಗುಜರಾತ್ ಟೈಟನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮೂರು ವಿಕೆಟ್ ಅಂತರದ ಜಯ ದಾಖಲಿಸಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಶುಭಮನ್ ಗಿಲ್ ನಾಯಕತ್ವದ ಗುಜರಾತ್ ಟೈಟನ್ಸ್, ಆರು ವಿಕೆಟ್ ನಷ್ಟಕ್ಕೆ 162 ರನ್ಗಳ ಸಾಧಾರಣ ಮೊತ್ತ ಪೇರಿಸಿತ್ತು. ನಾಯಕ ಗಿಲ್ 39, ಜೋಸ್ ಬಟ್ಲರ್ 38, ಸಾಯಿ ಸುದರ್ಶನ್ 13 ಹಾಗೂ ಗ್ಲೆನ್ ಫಿಲಿಪ್ಸ್ 25 ರನ್ ಗಳಿಸಿದರು.

ಈ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್, ಕೂಪರ್ ಕನೊಲಿ ಆಕರ್ಷಕ ಅರ್ಧಶತಕದ (ಅಜೇಯ 72) ನೆರವಿನಿಂದ 19.1 ಓವರ್ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಪ್ರಭಸಿಮ್ರನ್ ಸಿಂಗ್ (37) ಸಹ ಉಪಯುಕ್ತ ಇನಿಂಗ್ಸ್ ಕಟ್ಟಿದರು.
.IPL 2026 | ಲಖನೌ–ಡೆಲ್ಲಿ ಹಣಾಹಣಿ: ಪಂತ್, ರಾಹುಲ್ ಆಟದತ್ತ ಎಲ್ಲರ ಚಿತ್ತ.ಕನೊಲಿ ಏಕಾಂಗಿ ಹೋರಾಟ: GT ವಿರುದ್ಧ ರೋಚಕ ಗೆಲುವು ದಾಖಲಿಸಿದ ಪಂಜಾಬ್ ಕಿಂಗ್ಸ್.
ಪದಾರ್ಪಣಾ ಪಂದ್ಯದಲ್ಲೇ ಕನೊಲಿ ಮಿಂಚು...

ಆಸ್ಟ್ರೇಲಿಯಾ ಮೂಲದ 22ರ ಹರೆಯದ ಯುವ ಎಡಗೈ ಬ್ಯಾಟರ್ ಕನೊಲಿ ತಮ್ಮ ಪದಾರ್ಪಣಾ ಪಂದ್ಯದಲ್ಲೇ ಅರ್ಧಶತಕದ ಸಾಧನೆ ಮಾಡಿದರು. ಈ ಮೂಲಕ ಐಪಿಎಲ್ನಲ್ಲಿ ಉಜ್ವಲ ಭವಿಷ್ಯವನ್ನು ಸಾರಿದ್ದಾರೆ.

ಅಲ್ಲದೆ ಐಪಿಎಲ್ ಪದಾರ್ಪಣೆ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಗೌರವಕ್ಕೂ ಭಾಜನರಾಗಿದ್ದಾರೆ.

ಮೂರನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದ ಕನೊಲಿ 44 ಎಸೆತಗಳಲ್ಲಿ ತಲಾ ಐದು ಬೌಂಡರಿ ಹಾಗೂ ಸಿಕ್ಸರ್ಗಳ ನೆರವಿನಿಂದ 72 ರನ್ ಗಳಿಸಿ ಔಟಾಗದೆ ಉಳಿದರು.

ನ್ಯೂಜಿಲೆಂಡ್ನ ಮಾಜಿ ಆಟಗಾರ ಬ್ರೆಂಡನ್ ಮೆಕಲಮ್, 2008ರ ಚೊಚ್ಚಲ ಐಪಿಎಲ್ನಲ್ಲಿ ಆರ್ಸಿಬಿ ವಿರುದ್ಧ ಕೆಕೆಆರ್ ಪರ ಅಜೇಯ 158 ರನ್ ಗಳಿಸಿರುವುದು, ಐಪಿಎಲ್ ಪದಾರ್ಪಣೆ ಪಂದ್ಯದಲ್ಲಿನ ವೈಯಕ್ತಿಕ ಗರಿಷ್ಠ ಮೊತ್ತದ ದಾಖಲೆಯಾಗಿದೆ. ಅದೇ ಸಾಲಿನಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಶಾನ್ ಮಾರ್ಷ್ ಅಜೇಯ 84 ರನ್ ಗಳಿಸಿದ್ದರು.

ಐಪಿಎಲ್ ಪದಾರ್ಪಣೆ ಪಂದ್ಯದಲ್ಲಿ ಗರಿಷ್ಠ ರನ್ ಸಾಧಕರು:

ಬ್ರೆಂಡನ್ ಮೆಕಲಮ್: 158* (2008)

ಮೈಕಲ್ ಹಸ್ಸಿ: 116* (2008)

ಶಾನ್ ಮಾರ್ಷ್: 84* (2008)

ಕೈಲ್ ಮೇಯರ್ಸ್: 73 (2023)

ಕೂಪರ್ ಕನೊಲಿ: 72* (2026)

ದುಬಾರಿಯಾದ ಅರ್ಷದೀಪ್ ಸಿಂಗ್...

ಮೊದಲ ಇನಿಂಗ್ಸ್ನ ಕೊನೆಯ ಓವರ್ನಲ್ಲಿ ಪಂಜಾಬ್ ಕಿಂಗ್ಸ್ ವೇಗಿ ಅರ್ಷದೀಪ್ ಸಿಂಗ್ ಒಟ್ಟು 11 ಎಸೆತಗಳನ್ನು ಹಾಕಿದರು. ಅದರಲ್ಲಿ ನಾಲ್ಕು ವೈಡ್ ಹಾಗೂ ಒಂದು ನೋಬಾಲ್ ಸೇರಿತ್ತು. ಈ ಓವರ್ನಲ್ಲಿ ರಾಹುಲ್ ತೆವಾಟಿಯಾ ಒಂದು ಬೌಂಡರಿ ಗಳಿಸಿದರು. ಇದರಿಂದಾಗಿ 12 ರನ್ಗಳನ್ನು ಬಿಟ್ಟುಕೊಟ್ಟರು. ಅಲ್ಲದೆ ನಾಲ್ಕು ಓವರ್ಗಳಲ್ಲಿ 42 ರನ್ ನೀಡಿ ದುಬಾರಿಯೆನಿಸಿದರು.

ಐಪಿಎಲ್ನಲ್ಲಿ ದೀರ್ಘ ಓವರ್ (ಎಸೆತ)

11 ಎಸೆತ: ಮೊಹಮ್ಮದ್ ಸಿರಾಜ್ (2023), ತುಷಾರ್ ದೇಶಪಾಂಡೆ (2023), ಶಾರ್ದೂಲ್ ಠಾಕೂರ್ (2025), ಸಂದೀಪ್ ಶರ್ಮಾ (2025), ಹಾರ್ದಿಕ್ ಪಾಂಡ್ಯ (2025), ಅರ್ಷದೀಪ್ ಸಿಂಗ್ (2026)

ಕನ್ನಡಿಗರ ನಿಖರ ದಾಳಿ...

ಕನ್ನಡಿಗ ವೈಶಾಖ ವಿಜಯಕುಮಾರ್ 34 ರನ್ ತೆತ್ತು ಮೂರು ವಿಕೆಟ್ ಕಿತ್ತು ಪಂಜಾಬ್ ಕಿಂಗ್ಸ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಮತ್ತೊಂದೆಡೆ ಗುಜರಾತ್ ಟೈಟನ್ಸ್ ಪರ ಪ್ರಸಿದ್ಧ ಕೃಷ್ಣ 29 ರನ್ನಿಗೆ ಮೂರು ವಿಕೆಟ್ ಗಳಿಸಿ ಮಿಂಚಿದರು.

ಶ್ರೇಯಸ್ ಅಯ್ಯರ್ ಸಾಧನೆ...

ಐಪಿಎಲ್ನಲ್ಲಿ ಅತ್ಯಧಿಕ ಗೆಲುವಿನ ಸರಾಸರಿ ಕಾಯ್ದುಕೊಂಡಿರುವ ನಾಯಕರ ಸಾಲಿನಲ್ಲಿ (ಕನಿಷ್ಠ 50 ಪಂದ್ಯ) ಶ್ರೇಯಸ್ ಅಯ್ಯರ್ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ. 86 ಪಂದ್ಯಗಳಲ್ಲಿ ಅಯ್ಯರ್ 59.30ರ ಗೆಲುವಿನ ಸರಾಸರಿ ಕಾಯ್ದುಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯ (59.01) ಎರಡನೇ ಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.