ಬುಧವಾರ, ಅಕ್ಟೋಬರ್ 21, 2020
24 °C

IPL-2020 | ಸಂಘಟಿತ ಪ್ರದರ್ಶನ ತೋರಿದ ಡೆಲ್ಲಿ; ಧೋನಿ ಪಡೆಗೆ 44 ರನ್ ಸೋಲು

Published:
Updated:
ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಸೆಣಸಾಟ ನಡೆಸಲಿವೆ. ಚೆನ್ನೈ ತಂಡವು ಟೂರ್ನಿಯ ಮೊದಲ ಪಂದ್ಯದಲ್ಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ವಿರುದ್ಧ ಜಯಿಸಿತ್ತು. ಎರಡನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್‌ ವಿರುದ್ಧ ಸೋತಿತ್ತು. ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಕಿಂಗ್ಸ್‌ ಇಲೆವನ್ ಪಂಜಾಬ್ ವಿರುದ್ಧ ಸೂಪರ್ ಓವರ್‌ನಲ್ಲಿ ಗೆದ್ದಿತ್ತು. ಇದೀಗ ಚೆನ್ನೈಗೆ ಸೋಲುಣಿಸಿ ಜಯದ ಓಟ ಮುಂದುವರಿಸುವ ತವಕದಲ್ಲಿದೆ.
 • 11:03 pm

  ಸಂಘಟಿತ ಪ್ರದರ್ಶನ ತೋರಿದ ಡೆಲ್ಲಿ; ಚೆನ್ನೈಗೆ 44 ರನ್ ಸೋಲು

  ಡೆಲ್ಲಿ ಕ್ಯಾಪಿಟಲ್ಸ್‌ ನೀಡಿದ್ದ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 131 ರನ್‌ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ಡೆಲ್ಲಿ ಪಡೆ 44 ರನ್‌ ಅಂತರದ ಗೆಲುವು ಸಾಧಿಸಿತು.

 • 10:47 pm

  ಪ್ಲೆಸಿ ವಿಕೆಟ್ ಪತನ

  43 ರನ್‌ ಗಳಸಿದ್ದ ಪ್ಲೆಸಿ ರಬಾಡ ಬೌಲಿಂಗ್‌ನಲ್ಲಿ ವಿಕೆಟ್‌ ಕೀಪರ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದ್ದಾರೆ.

  ಸದ್ಯ ಸಿಎಸ್‌ಕೆ 18 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 121 ರನ್‌ ಗಳಿಸಿದೆ.

 • 10:43 pm

  ಮೂರು ಓವರ್‌ಗೆ ಬೇಕು 65 ರನ್‌

  17 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್‌ 4 ವಿಕೆಟ್‌ ಕಳೆದುಕೊಂಡು 111 ರನ್‌ ಗಳಿಸಿದೆ.

  ಉಳಿದಿರುವ 3 ಓವರ್‌ಗಳಲ್ಲಿ 65  ರನ್‌ ಗಳಿಸಬೇಕಿದೆ. ಧೋನಿ (12) ಮತ್ತು ಪ್ಲೆಸಿ (41) ಕ್ರೀಸ್‌ನಲ್ಲಿದ್ದಾರೆ.

 • 10:36 pm

  ಜೊತೆಯಾಟ ಮುರಿದ ನೊರ್ಟ್ಜೆ

  ನಾಲ್ಕನೇ ವಿಕೆಟ್‌ಗೆ 54 ರನ್‌ ಸೇರಿಸಿದ್ದ ಪ್ಲೆಸಿ ಹಾಗೂ ಕೇದಾರ್‌ ಜಾಧವ್‌ ಅವರ ಜೊತೆಯಾಟವನ್ನು ಎನ್ರಿಟ್ಜ್‌ ನೊರ್ಟ್ಜೆ ಮುರಿದರು.

  26 ರನ್‌ ಗಳಿಸಿದ್ದ ಕೇದಾರ್‌ ಜಾಧವ್‌ ‍ವಿಕೆಟ್ ಒಪ್ಪಿಸಿದ್ದಾರೆ.

 • 10:31 pm

  15 ಓವರ್‌ಗಳ ಆಟ ಮುಕ್ತಾಯ: 3 ವಿಕೆಟ್‌ ನಷ್ಟಕ್ಕೆ 95 ರನ್‌

  15 ಓವರ್‌ಗಳ ಆಟ ಮುಕ್ತಾಯವಾಗಿದ್ದು ಚೆನ್ನೈ 3 ವಿಕೆಟ್‌ ನಷ್ಟಕ್ಕೆ 95 ರನ್‌ ಗಳಿಸಿದೆ. ಉಳಿದಿರುವ 30 ಎಸೆತಗಳಲ್ಲಿ 81 ರನ್‌ ಗಳಿಸಬೇಕಿದೆ.

 • 10:15 pm

  ಪ್ಲೆಸಿಗೆ ಜೀವದಾನ ನೀಡಿದ ಹೆಟ್ಮೆಯರ್‌

  22 ರನ್‌ ಗಳಿಸಿದ್ದ ವೇಳೆ ಫಾಫ್‌ ಡು ಪ್ಲೆಸಿ ನೀಡಿದ ಕ್ಯಾಚ್‌ ಅನ್ನು ಶಿಮ್ರೋನ್‌ ಹೆಟ್ಮೆಯರ್ ಕೈ ಚೆಲ್ಲಿದರು.

  ಸದ್ಯ ಸಿಎಸ್‌ಕೆ 13 ಓವರ್‌ ಅಂತ್ಯಕ್ಕೆ 3 ವಿಕೆಟ್‌ ಕಳೆದುಕೊಂಡು 71 ರನ್‌ ಗಳಿಸಿದೆ.

 • 10:10 pm

  ಪ್ಲೆಸಿಗೆ 2000 ರನ್‌

  ಅನುಭವಿ ಬ್ಯಾಟ್ಸ್‌ಮನ್‌ ಫಾಫ್‌ ಡು ಪ್ಲೆಸಿ ಐಪಿಎಲ್‌ನಲ್ಲಿ 2 ಸಾವಿರ ರನ್‌ ಪೂರೈಸಿದರು.

  ಇದು ಅವರ 74ನೇ ಪಂದ್ಯವಾಗಿದ್ದು 67ನೇ ಇನಿಂಗ್ಸ್‌ ಆಗಿದೆ.

 • 10:06 pm

  10 ಓವರ್‌ಗಳ ಆಟ ಮುಕ್ತಾಯ

  10 ಓವರ್‌ಗಳ ಆಟ ಮುಕ್ತಾಯವಾಗಿದ್ದು ಸಿಎಸ್‌ಕೆ ಮೂರು ವಿಕೆಟ್‌ ಕಳೆದುಕೊಂಡು 47 ರನ್‌ ಗಳಿಸಿದೆ.

  ಉಳಿದಿರುವ 60 ಎಸೆತಗಳಲ್ಲಿ 129 ರನ್‌ ಗಳಿಸಬೇಕಿದೆ.

 • 10:03 pm

  ಮೂರನೇ ವಿಕೆಟ್ ಪತನ

  ರುತುರಾಜ್‌ ಗಾಯಕ್‌ವಾಡ್ (5) ರನೌಟ್‌ ಆಗುವುದರೊಂದಿಗೆ ಸಿಎಸ್‌ಕೆಯ ಮೂರನೇ ವಿಕೆಟ್‌ ಪತನವಾಗಿದೆ.

 • 09:59 pm

  9 ಓವರ್‌ ಮುಕ್ತಾಯ: 2 ವಿಕೆಟ್‌ಗೆ 44 ರನ್‌

  9 ಓವರ್‌ಗಳ ಆಟ ಮುಕ್ತಾಯವಾಗಿದ್ದು 2 ವಿಕೆಟ್ ನಷ್ಟಕ್ಕೆ ಸಿಎಸ್‌ಕೆ 44 ರನ್ ಗಳಿಸಿದೆ.

  ಪ್ಲೆಸಿ (14) ಮತ್ತು ರುತುರಾಜ್‌ ಗಾಯಕ್ವಾಡ್‌ (5) ಕ್ರೀಸ್‌ನಲ್ಲಿದ್ದಾರೆ.

 • 09:49 pm

  ಪೆವಿಲಿಯನ್ ಸೇರಿಕೊಂಡ ಆರಂಭಿಕ ಜೋಡಿ

  ಗುರಿ ಬೆನ್ನತ್ತಿರುವ ಸಿಎಸ್‌ಕೆ ತಂಡದ ಆರಂಭಿಕರಿಬ್ಬರೂ ಅಲ್ಪ ಮೊತ್ತಕ್ಕೆ ಪೆವಿಲಿಯನ್‌ ಸೇರಿಕೊಂಡಿದ್ದಾರೆ.

  ಮುರುಳಿ ವಿಜಯ್‌ (10) ಮತ್ತು ಶೇನ್‌ ವಾಟ್ಸನ್ ‌ (14) ರನ್‌ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ.

  ಸದ್ಯ 7 ಓವರ್‌ ಮುಕ್ತಾಯವಾಗಿದ್ದು ಸಿಎಸ್‌ಕೆ ಎರಡು ವಿಕೆಟ್‌ ನಷ್ಟಕ್ಕೆ 37 ರನ್ ಗಳಿಸಿದೆ.

 • 09:38 pm

  ಬ್ಯಾಟಿಂಗ್ ಆರಂಭಿಸಿದ ಚೆನ್ನೈ: ಸಿಎಸ್‌ಕೆ ಮೊದಲ ವಿಕೆಟ್ ಪತನ

  ಚೆನ್ನೈ ಸೂಪರ್‌ಕಿಂಗ್ಸ್ ತಂಡ ಬ್ಯಾಟಿಂಗ್ ಆರಂಭಿಸಿದ್ದು, 5 ಓವರ್ ಮುಕ್ತಾಯಕ್ಕೆ ಒಂದು ವಿಕೆಟ್‌ ಕಳೆದುಕೊಂಡು 26 ರನ್ ಗಳಿಸಿದೆ.

  ಶೇನ್‌ ವ್ಯಾಟ್ಸನ್ (14) ರನ್‌ ಗಳಿಸಿ ಔಟಾಗಿದ್ದಾರೆ. ಮುರುಳಿ ವಿಜಯ್ (10) ಮತ್ತು ಫಾಫ್‌ ಡು ಪ್ಲೆಸಿ (2) ‌ಕ್ರೀಸ್‌ನಲ್ಲಿದ್ದಾರೆ.

 • 09:06 pm

  ಪೃಥ್ವಿ ಶಾ ಅರ್ಧಶತಕ; ಚೆನ್ನೈ ಗೆಲುವಿಗೆ 176 ರನ್ ಗುರಿ

  ಟಾಸ್ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಡೆಲ್ಲಿ ಕ್ಯಾಪಿಟಲ್ಸ್‌ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 175 ರನ್‌ ಗಳಿಸಿದೆ.

 • 08:53 pm

  18 ಓವರ್‌ಗಳ ಆಟ ಮುಕ್ತಾಯ: 150 ರನ್ ಪೂರೈಸಿದ ಡೆಲ್ಲಿ

  18 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಡೆಲ್ಲಿ ತಂಡ ಎರಡು ವಿಕೆಟ್‌ ಕಳೆದುಕೊಂಡು 157 ರನ್‌ ಕಲೆಹಾಕಿದೆ.

  ಅಯ್ಯರ್‌ () ಮತ್ತು ಪಂತ್‌ () ಕ್ರೀಸ್‌ನಲ್ಲಿದ್ದಾರೆ.

 • 08:40 pm

  15 ಓವರ್‌ಗಳ ಆಟ ಮುಕ್ತಾಯ: 2 ವಿಕೆಟ್‌ ನಷ್ಟಕ್ಕೆ 124 ರನ್‌

  15 ಓವರ್‌ಗಳ ಆಟ ಮುಕ್ತಾಯವಾಗಿದ್ದು ಡೆಲ್ಲಿ ಎರಡು ವಿಕೆಟ್‌ ನಷ್ಟಕ್ಕೆ 124 ರನ್‌ ಗಳಿಸಿದೆ.

  ಆರಂಭಿಕರಾದ ಶಿಖರ್‌ ಧವನ್‌ (35) ಹಾಗೂ ಪೃಥ್ವಿ ಶಾ (64) ಪಿಯೂಷ್‌ ಚಾವ್ಲಾ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದ್ದಾರೆ.

  ನಾಯಕ ಶ್ರೇಯಸ್‌ ಅಯ್ಯರ್ (7) ಮತ್ತು ರಿಷಭ್‌ ಪಂತ್ (15)‌ ಕ್ರೀಸ್‌ನಲ್ಲಿದ್ದಾರೆ.

 • 08:25 pm

  ಡೆಲ್ಲಿ ಎರಡು ವಿಕೆಟ್ ಪತನ

  ಡೆಲ್ಲಿಗೆ ಮೊದಲ ವಿಕೆಟ್‌ ಜೊತೆಯಾಟದಲ್ಲಿ 94 ರನ್‌ ಸೇರಿಸಿದ್ದ ಶಿಖರ್‌ ಧವನ್‌ (35) ಹಾಗೂ ಪೃಥ್ವಿ ಶಾ (64) ಪಿಯೂಷ್‌ ಚಾವ್ಲಾ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದ್ದಾರೆ.

  ಸದ್ಯ ಡೆಲ್ಲಿ 13 ಓವರ್‌ ಮುಕ್ತಾಯಕ್ಕೆ 2 ವಿಕೆಟ್‌ ಕಳೆದುಕೊಂಡು 105 ರನ್‌ ಗಳಿಸಿದೆ.

  ನಾಯಕ ಶ್ರೇಯಸ್‌ ಅಯ್ಯರ್ ಮತ್ತು ರಿಷಭ್‌ ಪಂತ್ ‌ ಕ್ರೀಸ್‌ನಲ್ಲಿದ್ದಾರೆ.

 • 08:17 pm

  10 ಓವರ್‌ಗಳ ಆಟ ಮುಕ್ತಾಯ | ಶಾ ಅರ್ಧಶತಕ; ವಿಕೆಟ್ ನಷ್ಟವಿಲ್ಲದೆ 88 ರನ್ ಗಳಿಸಿದ ಡೆಲ್ಲಿ

  10 ಓವರ್‌ಗಳ ಆಟ ಮುಕ್ತಾಯವಾಗಿದ್ದು ಡೆಲ್ಲಿ ಕ್ಯಾಪಿಟಲ್ಸ್‌ ವಿಕೆಟ್ ನಷ್ಟವಿಲ್ಲದೆ 88 ರನ್ ಗಳಿಸಿದೆ.

  ಧವನ್‌ 30 ಮತ್ತು ಶಾ 56 ರನ್‌ ಗಳಿಸಿ ಆಡುತ್ತಿದ್ದಾರೆ.

 • 08:03 pm

  ಅರ್ಧಶತಕ ಪೂರೈಸಿದ ಡೆಲ್ಲಿ

  8 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಡೆಲ್ಲಿ ವಿಕೆಟ್‌ ನಷ್ಟವಿಲ್ಲದೆ 62 ರನ್‌ ಗಳಿಸಿದೆ.

  ಧವನ್‌ (21) ಮತ್ತು ಶಾ (39) ಕ್ರೀಸ್‌ನಲ್ಲಿದ್ದಾರೆ.

 • 07:58 pm

  ಆರು ಓವರ್‌ಗಳ ಆಟ ಮುಕ್ತಾಯ

  ಡೆಲ್ಲಿ ತಂಡ ಆರು ಓವರ್‌ಗಳ ಮುಕ್ತಾಯಕ್ಕೆ ವಿಕೆಟ್‌ ನಷ್ಟವಿಲ್ಲದೆ 36 ರನ್ ಗಳಿಸಿದೆ.

  ಧವನ್‌ (7) ಮತ್ತು ಶಾ (27) ಕ್ರೀಸ್‌ನಲ್ಲಿದ್ದಾರೆ.

 • 07:40 pm

  ಎಸ್‌ಪಿಬಿಗೆ ಡೆಲ್ಲಿ ನಮನ

  ಇಂದು ನಿಧನರಾದ ಗಾಯಕ ಎಸ್‌.ಪಿ.ಬಾಲಸುಬ್ರಮಣ್ಯಂ ಅವರಿಗೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಟ್ವಿಟರ್‌ ಮೂಲಕ ನಮನ ಸಲ್ಲಿಸಿದೆ.

 • 07:38 pm

  ಇನಿಂಗ್ಸ್ ಆರಂಭಿಸಿದ ಡೆಲ್ಲಿ

  ಡೆಲ್ಲಿ ಪರ ಪೃಥ್ವಿ ಶಾ ಮತ್ತು ಶಿಖರ್‌ ಧವನ್‌ ಇನಿಂಗ್ಸ್‌ ಆರಂಭಿಸಿದ್ದಾರೆ. 2 ಓವರ್ ಮುಕ್ತಾಯವಾಗಿದ್ದು ಡೆಲ್ಲಿ ವಿಕೆಟ್‌ ನಷ್ಟವಿಲ್ಲದೆ 11 ರನ್‌ ಗಳಿಸಿದೆ.

 • 07:02 pm

  ಟಾಸ್‌ ಗೆದ್ದು ಬೌಲಿಂಗ್ ಆರಿಸಿಕೊಂಡ ಚೆನ್ನೈ ಸೂಪರ್ ಕಿಂಗ್ಸ್‌

  ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕ ಎಂ.ಎಸ್‌. ಧೋನಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

 • 06:04 pm

  4 ದಿನಗಳ ಬಿಡುವಿನಿಂದ ತಂಡಕ್ಕೆ ಅನುಕೂಲವಾಯಿತು: ಕೈಫ್‌

  ಶ್ರೇಯಸ್‌ ಅಯ್ಯರ್‌ ನೇತೃತ್ವದ ‌ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಸೂಪರ್ ಓವರ್‌ನಲ್ಲಿ ಅಂತ್ಯ ಕಂಡ ಕಿಂಗ್ಸ್‌ ಇಲವೆನ್‌ ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಈ ಬಾರಿಯ ಐಪಿಎಲ್‌ನಲ್ಲಿ ಶುಭಾರಂಭ ಮಾಡಿದೆ. ಪಂಜಾಬ್‌ ವಿರುದ್ಧದ ಪಂದ್ಯ ಸೆಪ್ಟೆಂಬರ್‌ 20ರಂದು ನಡೆದಿತ್ತು. ಅದಾದ ನಾಲ್ಕು ದಿನಗಳ ನಂತರ ಇದೀಗ ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯಲು ಡೆಲ್ಲಿ ತಂಡ ಸಜ್ಜಾಗಿದೆ. ಈ ಬಿಡುವು ತಮ್ಮ ತಂಡಕ್ಕೆ ವರದಾನಾಗಿದೆ ಎಂದು ಆ ತಂಡದ ಸಹಾಯಕ ಕೋಚ್‌ ಮೊಹಮ್ಮದ್‌ ಕೈಫ್‌ ಹೇಳಿದ್ದಾರೆ.

 • 03:28 pm

  ನಿಮ್ಮ ಪ್ರಕಾರ ಗೆಲುವು ಯಾರಿಗೆ? ವೋಟ್‌ ಮಾಡಿ

 • 03:23 pm

  ಕುತೂಹಲ ಕೆರಳಿಸಿರುವ ಧೋನಿ ಬ್ಯಾಟಿಂಗ್ ಕ್ರಮಾಂಕ