ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL-2020 | MI vs CSK: ಮುಂಬೈ ಇಂಡಿಯನ್ಸ್‌ಗೆ 10 ವಿಕೆಟ್‌ಗಳ ಜಯ
LIVE

ಶಾರ್ಜಾ: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ತನಗೆ ಸೋಲುಣಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ ತಂಡ 10 ವಿಕೆಟ್‌ ಅಂತರದಿಂದ ಗೆದ್ದು ಬೀಗಿತು. ಐಪಿಎಲ್‌ ಇತಿಹಾಸದಲ್ಲಿ ಚೆನ್ನೈ ತಂಡ ಇದೇ ಮೊದಲ ಸಲ 10 ವಿಕೆಟ್‌ಗಳ ಸೋಲು ಅನುಭವಿಸಿತು. ಮಾತ್ರವಲ್ಲದೆ, ಈ ಟೂರ್ನಿಯಲ್ಲಿ 11 ಪಂದ್ಯಗಳನ್ನು ಆಡಿರುವ ಈ ತಂಡಕ್ಕೆ ಇದು 8ನೇ ಸೋಲು. ಇನ್ನೊಂದೆಡೆ 10 ಪಂದ್ಯಗಳನ್ನು ಆಡಿ 7ನೇ ಗೆಲುವು ಸಾಧಿಸಿದ ಮುಂಬೈ, ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಈ ಪಂದ್ಯದಲ್ಲಿ ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ಕೀರನ್‌ ಪೊಲಾರ್ಡ್‌ ಮುಂಬೈ ತಂಡವನ್ನು ಮುನ್ನಡೆಸಿದರು. ಪಾಯಿಂಟ್ಸ್‌ ಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ 2ನೇ ಸ್ಥಾನದಲ್ಲಿದ್ದು, ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಮೂರನೇ ಸ್ಥಾನದಲ್ಲಿದೆ.
Last Updated 23 ಅಕ್ಟೋಬರ್ 2020, 17:24 IST
ಅಕ್ಷರ ಗಾತ್ರ
17:0223 Oct 2020

ಮುಂಬೈಗೆ 10 ವಿಕೆಟ್‌ ಜಯ

ಸಾಧಾರಣ ಗುರಿ ಎದುರು ಲೀಲಾಜಾಲವಾಗಿ ಬ್ಯಾಟ್‌ ಬೀಸಿದ ಕ್ವಿಂಟನ್‌ ಡಿ ಕಾಕ್‌ ಮತ್ತು ಇಶಾನ್‌ ಕಿಶನ್ ಜೋಡಿ ಮುಂಬೈ ಇಂಡಿಯನ್ಸ್‌ಗೆ 10 ವಿಕೆಟ್‌ ಅಂತರದ ಗೆಲುವು ತಂದುಕೊಟ್ಟಿತು. ಇದುವರೆಗೆ ಐಪಿಎಲ್‌ನಲ್ಲಿ ಚೆನ್ನೈ ವಿರುದ್ಧ 10 ವಿಕೆಟ್‌ ಗೆಲುವು ಸಾಧಿಸಲು ಯಾವುದೇ ತಂಡಕ್ಕೆ ಸಾಧ್ಯವಾಗಿರಲಿಲ್ಲ.

ತಲಾ 37 ಎಸೆತಗಳನ್ನು ಎದುರಿಸಿದ ಡಿ ಕಾಕ್‌ ಮತ್ತು ಇಶಾನ್‌ ಕಿಶನ್‌ ಕ್ರಮವಾಗಿ 46 ರನ್‌ ಮತ್ತು 68 ರನ್‌ ಗಳಿಸಿದರು.

ಈ ಜಯದೊಂದಿಗೆ ಮುಂಬೈ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇತ್ತ ಮುಂಬೈ ಇಂಡಿಯನ್ಸ್ ತಂಡ ಪ್ಲೇ ಆಫ್‌ ಸ್ಪರ್ಧೆಯಿಂದ ಹೊರಬಿದ್ದಿತು.

16:5323 Oct 2020

12ನೇ ಓವರ್ ಮುಕ್ತಾಯ

ಮುಂಬೈ ತಂಡ ವಿಕೆಟ್‌ ನಷ್ಟವಿಲ್ಲದೆ 112 ರನ್‌ ಗಳಿಸಿದೆ. ಇನ್ನೂ 8 ಓವರ್‌ಗಳು ಬಾಕಿ ಇದ್ದು, ಕೇವಲ 3 ರನ್‌ ಬೇಕಾಗಿದೆ.

ಬೌಲರ್‌: ದೀಪಕ್‌ ಚಾಹರ್‌ (1 1 1 0 0 1)

16:4823 Oct 2020

11ನೇ ಓವರ್ ಮುಕ್ತಾಯ; ಶತಕ ಪೂರೈಸಿದ ಮುಂಬೈ

11 ನೇ ಓವರ್‌ ಮುಕ್ತಾಯವಾಗಿದ್ದು, ಮುಂಬೈ 108 ರನ್‌ ಗಳಿಸಿದೆ.

ಬೌಲರ್‌: ಶಾರ್ದೂಲ್ ಠಾಕೂರ್‌ (1 1 6 1 1 0)

16:4323 Oct 2020

10ನೇ ಓವರ್ ಮುಕ್ತಾಯ

10 ಓವರ್‌ಗಳ ಆಟ ಮುಗಿದಿದ್ದು, ಮುಂಬೈ ವಿಕೆಟ್‌ ನಷ್ಟವಿಲ್ಲದೆ 98 ರನ್‌ ಗಳಿಸಿದೆ. ಕಿಶನ್‌ (64) ಮತ್ತು ಕ್ವಿಂಟನ್‌ (32) ಕ್ರೀಸ್‌ನಲ್ಲಿದ್ದಾರೆ.
ಬೌಲರ್‌: ಇಮ್ರಾನ್‌ ತಾಹಿರ್‌ (0 1 1 0 1 6)

16:4023 Oct 2020

ಅರ್ಧಶತಕ ಬಾರಿಸಿದ ಕಿಶನ್

ಬಿರುಸಾಗಿ ಬ್ಯಾಟ್‌ ಬೀಸುತ್ತಿರುವ ಇಶಾನ್ ಕಿಶನ್‌ ಕೇವಲ 31 ಎಸೆತಗಳಲ್ಲಿ 57 ರನ್‌ ಗಳಿಸಿ ಆಡುತ್ತಿದ್ದಾರೆ. ಸದ್ಯ 9 ಓವರ್‌ ಮುಗಿದಿದ್ದು, ಚೆನ್ನೈ ತಂಡ ವಿಕೆಟ್‌ ನಷ್ಟವಿಲ್ಲದೆ 89 ರನ್ ಗಳಿಸಿದೆ.

ಇನ್ನೊಂದು ತುದಿಯಲ್ಲಿ ಡಿ ಕಾಕ್‌ (30) ಕ್ರೀಸ್‌ನಲ್ಲಿದ್ದಾರೆ.
ಬೌಲರ್‌: ರವಿಂದ್ರ ಜಡೇಜಾ (1 0 6 6 1 1)

16:3823 Oct 2020

8ನೇ ಓವರ್ ಮುಕ್ತಾಯ

ಮುಂಬೈ ತಂಡದ ಮೊತ್ತ ವಿಕೆಟ್‌ ನಷ್ಟವಿಲ್ಲದೆ 75 ರನ್‌ ಆಗಿದೆ.

ಬೌಲರ್: ಇಮ್ರಾನ್ ತಾಹಿರ್ (4 1 1 6 0 0)

16:3123 Oct 2020

7ನೇ ಓವರ್‌ ಮುಕ್ತಾಯ

7 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಮುಂಬೈ ತಂಡದ ಮೊತ್ತ ವಿಕೆಟ್‌ ನಷ್ಟವಿಲ್ಲದೆ 64 ರನ್‌ ಆಗಿದೆ.
ಬೌಲರ್: ಶಾರ್ದೂಲ್‌ ಠಾಕೂರ್‌ (4 1 1 6 0 0)

16:2723 Oct 2020

6ನೇ ಓವರ್ ಮುಕ್ತಾಯ

ಮುಂಬೈ ತಂಡದ ಮೊತ್ತ 52 ರನ್‌ ಆಗಿದೆ. ಡಿ ಕಾಕ್‌ 16 ರನ್‌ ಗಳಿಸಿದ್ದು, ಕಿಶನ್‌ 36 ರನ್‌ ಗಳಿಸಿ ಆಡುತ್ತಿದ್ದಾರೆ.

ಈ ಹಂತದಲ್ಲಿ ಚೆನ್ನೈ 5 ವಿಕೆಟ್‌ ಕಳೆದುಕೊಂಡು 24 ರನ್ ಗಳಿಸಿತ್ತು.

ಬೌಲರ್: ಇಮ್ರಾನ್‌ ತಾಹಿರ್‌ ( 1 2 0 4 4 6)

16:2323 Oct 2020

5ನೇ ಓವರ್ ಮುಕ್ತಾಯ

5 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಮುಂಬೈ ಇಂಡಿಯನ್ಸ್‌ ವಿಕೆಟ್‌ ನಷ್ಟವಿಲ್ಲದೆ 47 ರನ್‌ ಗಳಿಸಿದೆ.

13 ರನ್‌ ಗಳಿಸಿರುವ ಡಿ ಕಾಕ್‌ ಮತ್ತು 34 ರನ್‌ ಗಳಿಸಿರುವ ಕಿಶನ್‌ ಕ್ರೀಸ್‌ನಲ್ಲಿದ್ದಾರೆ.

ಬೌಲರ್: ದೀಪಕ್‌ ಚಾಹರ್‌ (1 2 0 4 4 6)

16:1723 Oct 2020

ಬ್ಯಾಟಿಂಗ್ ಆರಂಭಿಸಿದ ಮುಂಬೈ

ಚೆನ್ನೈ ನೀಡಿರುವ ಸಾಧಾರಣ ಗುರಿ ಎದುರು ಬ್ಯಾಟಿಂಗ್ ಆರಂಭಿಸಿರುವ ಮುಂಬೈ ಇಂಡಿಯನ್ಸ್‌ ತಂಡ 4 ಓವರ್‌ಗಳ ಅಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 30 ರನ್ ಗಳಿಸಿದೆ.

ಇಶಾನ್‌ ಕಿಶನ್ ಮತ್ತು ಕ್ವಿಂಟನ್‌ ಡಿ ಕಾಕ್‌ ಕ್ರೀಸ್‌ನಲ್ಲಿದ್ದಾರೆ.