ಶನಿವಾರ, ಅಕ್ಟೋಬರ್ 31, 2020
20 °C

IPL-2020 | RCB vs CSK: ಚೆನ್ನೈಗೆ 37 ರನ್ ಸೋಲು; ಪಾಯಿಂಟ್ ಪಟ್ಟಿಯಲ್ಲಿ ಮೇಲೇರಿದ ಆರ್‌ಸಿಬಿ

Published:
Updated:
ಸ್ಥಿರ ಪ್ರದರ್ಶನ ನೀಡಲು ವಿಫಲವಾಗುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ವಿರುದ್ಧ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 37 ರನ್‌ ಅಂತರದ ಗೆಲುವು ಸಾಧಿಸಿದೆ.
 • 11:25 pm

  ಆರ್‌ಸಿಬಿಗೆ 37 ರನ್ ಗೆಲುವು

  ಇಸುರು ಉದಾನ ಹಾಕಿದ ಕೊನೆಯ ಓವರ್‌ನಲ್ಲಿ ಚೆನ್ನೈ ತಂಡ ಕೇವಲ 6 ರನ್‌ ಗಳಿಸಿತು. ಇದರೊಂದಿಗೆ ಈ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 132 ರನ್ ಗಳಿಸಲಷ್ಟೇ ಶಕ್ತವಾಯಿತು.

  ಹೀಗಾಗಿ ಕೊಹ್ಲಿ ಪಡೆ 37 ರನ್‌ ಅಂತರದ ಗೆಲುವು ಸಾಧಿಸಿದೆ.

  ಈ ಜಯದೊಂದಿಗೆ ಟೂರ್ನಿಯಲ್ಲಿ ನಾಲ್ಕನೇ ಗೆಲುವು ಸಾಧಿಸಿದ ಆರ್‌ಸಿಬಿ 8 ಅಂಕಗಳೊಂದಿಗೆ ಪಾಯಿಂಟ್ಸ್‌ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಚೆನ್ನೈ ತಂಡ ತನ್ನ 7ನೇ ಪಂದ್ಯದಲ್ಲಿ 5ನೇ ಸೋಲು ಅನುಭವಿಸಿದೆ.

 • 10:59 pm

  5 ಓವರ್‌ಗಳಲ್ಲಿ 6 ವಿಕೆಟ್‌

  ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 15 ರಿಂದ 20 ಓವರ್‌ಗಳಲ್ಲಿ 43 ರನ್‌ ಗಳಿಸಿ ಒಟ್ಟು 6 ವಿಕೆಟ್‌ಗಳನ್ನು ಕಳೆದುಕೊಂಡಿತು.

  ಸೈನಿ ಎಸೆದ 15ನೇ ಓವರ್‌ನಲ್ಲಿ ಜಗದೀಶನ್‌ ರನೌಟ್‌ ಅದರೆ, ಚಾಹಲ್‌ ಹಾಕಿದ 16 ಧೊನಿ ಔಟಾದರು. ಕ್ರಿಸ್‌ ಮೋರಿಸ್‌ ಹಾಕಿದ 17ನೇ ಓವರ್‌ನಲ್ಲಿ ಸ್ಯಾಮ್ ಕರನ್‌ ಮತ್ತು ಇಸುರು ಉದಾನ ಎಸೆದ 18ನೇ ಓವರ್‌ ಅಂಬಟಿ ರಾಯುಡು ವಿಕೆಟ್‌ ಒಪ್ಪಿಸಿದರು.

  ಕ್ರಿಸ್‌ ಮೋರಿಸ್‌ ಬೌಲ್‌ ಮಾಡಿದ 19ನೇ ಓವರ್‌ನಲ್ಲಿ ರವೀಂದ್ರ ಜಡೇಜಾ ಮತ್ತು ಡ್ವೇನ್‌ ಬ್ರಾವೋ ಔಟಾದರು.

  19 ಓವರ್ ಮುಕ್ತಾಯಕ್ಕೆ ಚೆನ್ನೈ ತಂಡ 8 ವಿಕೆಟ್‌ ಕಳೆದುಕೊಂಡು 126 ರನ್‌ ಗಳಿಸಿದೆ. ಗೆಲ್ಲಲು 43 ರನ್‌ ಬೇಕಾಗಿದೆ.

 • 10:57 pm

  17ನೇ ಓವರ್ ಮುಕ್ತಾಯ: ವಿಕೆಟ್ ಒಪ್ಪಿಸಿದ ಸ್ಯಾಮ್

  ಕ್ರಿಸ್‌ ಮೋರಿಸ್ ಎಸೆದ 17ನೇ ಓವರ್‌ನ ಎರಡನೇ ಎಸೆತದಲ್ಲಿ ಬೌಲಿಂಗ್‌ ಆಲ್ರೌಂಡರ್‌ ಸ್ಯಾಮ್‌ ಕರನ್‌ ವಿಕೆಟ್‌ ಒಪ್ಪಿಸಿದ್ದಾರೆ.

  17ನೇ ಓವರ್‌ ಮುಕ್ತಾಯಕ್ಕೆ ಚೆನ್ನೈ ತಂಡದ ಮೊತ್ತ 5 ವಿಕೆಟ್‌ ನಷ್ಟಕ್ಕೆ 109 ರನ್‌ ಆಗಿದೆ.

  (1 W 0 1 0 1)

 • 10:48 pm

  16ನೇ ಓವರ್ ಮುಕ್ತಾಯ: ಧೋನಿ ಔಟ್

  ಟಿ20 ಕ್ರಿಕೆಟ್‌ನಲ್ಲಿ 300ನೇ ಸಿಕ್ಸರ್‌ ಸಿಡಿಸಿದ ಸಾಧನೆ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ನಾಯಕ ಕೇವಲ 10 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ.

  ಸದ್ಯ 16 ಓವರ್‌ಗಳ ಆಟ ಮುಗಿದಿದ್ದು, ಚೆನ್ನೈ 4 ವಿಕೆಟ್‌ ನಷ್ಟಕ್ಕೆ 106 ರನ್‌ ಗಳಿಸಿದೆ.

  ಬೌಲರ್‌: ಯಜುವೇಂದ್ರ ಚಾಹಲ್‌ (1 1 6 2 0 W)

 • 10:40 pm

  15ನೇ ಓವರ್ ಮುಕ್ತಾಯ: ಜಗದೀಶನ್ ವಿಕೆಟ್ ಪತನ

  33 ರನ್‌ ಗಳಿಸಿ ಆಡುತ್ತಿದ್ದ ಎನ್‌. ಜಗದೀಶನ್‌ ಅವರು 15ನೇ ಓವರ್‌ನ 2ನೇ ಎಸೆತದಲ್ಲಿ ರನೌಟ್‌ ಆಗಿದ್ದಾರೆ. 5ನೇ ಕ್ರಮಾಂಕದಲ್ಲಿ ನಾಯಕ ಎಂಎಸ್‌ ಧೋನಿ ಕ್ರೀಸ್‌ಗೆ ಇಳಿದಿದ್ದಾರೆ.

  15 ಓವರ್ ಮುಕ್ತಾಯವಾಗಿದ್ದು, ಚೆನ್ನೈ 3 ವಿಕೆಟ್‌ ಕಳೆದುಕೊಂಡು 96 ರನ್‌ ಗಳಿಸಿದೆ.

  ಬೌಲರ್: ನವದೀಪ್‌ ಸೈನಿ (0 W 4 Wd 0 1 1)

 • 10:35 pm

  14ನೇ ಓವರ್ ಮುಕ್ತಾಯ

  ಬಿರುಸಿನ ಬ್ಯಾಟಿಂಗ್‌ ಆರಂಭಿಸಿರುವ ಅಂಬಟಿ ರಾಯುಡು ಮತ್ತು ಜಗದೀಶನ್ ಜೋಡಿ ಶಿವಂ ದುಬೆ ಎಸೆದ 14ನೇ ಓವರ್‌ನಲ್ಲಿ 14 ರನ್‌ ಬಾರಿಸಿತು.

  ಸದ್ಯ ತಂಡದ ಮೊತ್ತ 2 ವಿಕೆಟ್‌ ನಷ್ಟಕ್ಕೆ 89 ರನ್‌ ಆಗಿದೆ.

  (4 1 4 1 2 Wd 1)

 • 10:31 pm

  13ನೇ ಓವರ್ ಮುಕ್ತಾಯ

  ಎನ್‌. ಜಗದೀಶನ್‌ ಮತ್ತು ಅಂಬಟಿ ರಾಯುಡು ಜೋಡಿ ಮೂರನೇ ವಿಕೆಟ್‌ ಜೊತೆಯಾಟದಲ್ಲಿ 50 ರನ್‌ ಕಲೆಹಾಕಿದೆ. ಇದರೊಂದಿಗೆ ಸಿಎಸ್‌ಕೆ ತಂಡದ ಮೊತ್ತ 13 ಓವರ್‌ಗಳ ಅಂತ್ಯಕ್ಕೆ 75ಕ್ಕೆ ಏರಿಕೆಯಾಗಿದೆ.

  ಬೌಲರ್‌: ಯಜುವೇಂದ್ರ ಚಾಹಲ್‌ (4 1 0 1 4 Wd 1)

 • 10:25 pm

  12ನೇ ಓವರ್ ಮುಕ್ತಾಯ

  ಚೆನ್ನೈ 63 ರನ್‌ ಗಳಿಸಿ 2 ವಿಕೆಟ್‌ ಕಳೆದುಕೊಂಡಿದೆ.

  ಬೌಲರ್‌: ನವದೀಪ್ ಸೈನಿ (4 0 Wd 0 0 1 1)

 • 10:21 pm

  11ನೇ ಓವರ್ ಮುಕ್ತಾಯ; ಅರ್ಧಶತಕ ಪೂರೈಸಿದ ಚೆನ್ನೈ

  ಚೆನ್ನೈ ತಂಡ 11ನೇ ಓವರನಲ್ಲಿ 50ರ ಗಡಿ ದಾಟಿದೆ. ಸದ್ಯ ಸಿಎಸ್‌ಕೆ 2 ವಿಕೆಟ್‌ ನಷ್ಟಕ್ಕೆ 56 ರನ್‌ ಗಳಿಸಿದೆ.

  ಬೌಲರ್‌: ಯಜುವೇಂದ್ರ ಚಾಹಲ್‌ (1 4 1 1 0 2)

 • 10:18 pm

  10ನೇ ಓವರ್ ಮುಕ್ತಾಯ

  10 ಓವರ್‌ಗಳ ಅಂತ್ಯಕ್ಕೆ ಸಿಎಸ್‌ಕೆ 47 ರನ್‌ ಗಳಿಸಿ ಕೊಂಡಿದೆ. ಈ ಹಂತದಲ್ಲಿ ಆರ್‌ಸಿಬಿ 1 ವಿಕೆಟ್‌ ನಷ್ಟಕ್ಕೆ 65 ರನ್ ಗಳಿಸಿತು.

  ಬೌಲರ್‌: ಕ್ರಿಸ್‌ ಮೋರಿಸ್ (0 0 2 1 0 0)

 • 10:11 pm

  9ನೇ ಓವರ್ ಮುಕ್ತಾಯ

  ಚೆನ್ನೈ ತಂಡ 2 ವಿಕೆಟ್‌ ಕಳೆದುಕೊಂಡು 44 ರನ್‌ ಗಳಿಸಿದೆ.

  ಬೌಲರ್‌: ಇಸುರು ಉದಾನ (1 1 4 1 1 1)

  ಈ ಹಂತದಲ್ಲಿ ಆರ್‌ಸಿಬಿ 1 ವಿಕೆಟ್‌ಗೆ 55 ರನ್‌ ಗಳಿಸಿತ್ತು.

 • 10:08 pm

  8ನೇ ಓವರ್ ಮುಕ್ತಾಯ

  ಚೆನ್ನೈ ತಂಡ 2 ವಿಕೆಟ್‌ಗೆ 35 ರನ್‌ ಕಲೆಹಾಕಿದೆ.

  ಬೌಲರ್‌: ವಾಷಿಂಗ್ಟನ್‌ ಸುಂದರ್‌ (1 1 1 0 1 1)

 • 10:03 pm

  7ನೇ ಓವರ್ ಮುಕ್ತಾಯ

  7 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಸಿಎಸ್‌ಕೆ 2 ವಿಕೆಟ್‌ ನಷ್ಟಕ್ಕೆ 30 ರನ್ ಗಳಿಸಿದೆ.

  ಬೌಲರ್‌: ಯಜುವೇಂದ್ರ ಚಾಹಲ್‌ (0 1 1 1 1 0)

 • 09:57 pm

  6ನೇ ಓವರ್ ಮುಕ್ತಾಯ: ವಾಟ್ಸನ್ ವಿಕೆಟ್‌ ಪತನ

  ಪವರ್‌ ಪ್ಲೇ ಕೊನೆಯ ಓವರ್‌ ಮಾಡಿದ ವಾಷಿಂಗ್ಟನ್‌ ಸುಂದರ್‌, ಅಪಾಯಕಾರಿ ಬ್ಯಾಟ್ಸ್‌ಮನ್‌ ಶೇನ್‌ ವಾಟ್ಸನ್ (14)‌ ಅವರಿಗೆ ಪೆವಿಲಿಯನ್ ದಾರಿ ತೋರಿದ್ದಾರೆ.

  ಸದ್ಯ ಆರನೇ ಓವರ್‌ ಮುಕ್ತಾಯವಾಗಿದ್ದು ಸಿಎಸ್‌ಕೆ 2 ವಿಕೆಟ್‌ ಕಳೆದುಕೊಂಡು 26 ರನ್‌ ಗಳಿಸಿದೆ.

  ( 0 0 4 W 0 1)

  ಆರ್‌ಸಿಬಿ ಈ ಹಂತದಲ್ಲಿ 1 ವಿಕೆಟ್‌ ಕಳೆದುಕೊಂಡು 36 ರನ್ ಗಳಿಸಿತ್ತು.

 • 09:55 pm

  5ನೇ ಓವರ್ ಮುಕ್ತಾಯ

  5 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಚೆನ್ನೈ ತಂಡ ಒಂದು ವಿಕೆಟ್‌ ನಷ್ಟಕ್ಕೆ 21 ರನ್‌ ಗಳಿಸಿದೆ.

  ಬೌಲರ್‌: ನವದೀಪ್ ಸೈನಿ (0 2 0 0 0 0 )

 • 09:50 pm

  4ನೇ ಓವರ್ ಮುಕ್ತಾಯ: ಪ್ಲೆಸಿ ಔಟ್

  4 ಓವರ್‌ಗಳ ಆಟ ಮುಕ್ತಾಯವಾಗಿದ್ದು ಸಿಎಸ್‌ಕೆ 1 ವಿಕೆಟ್‌ ನಷ್ಟಕ್ಕೆ 19 ರನ್‌ ಗಳಿಸಿದೆ. ವಾಷಿಂಗ್ಟನ್‌ ಸುಂದರ್‌ ಎಸೆದ ಈ ಓವರ್‌ನ ಕೊನೆಯ ಎಸೆತದಲ್ಲಿ ಪ್ಲೆಸಿ (8) ಔಟಾಗಿದ್ದಾರೆ.

  ಮೂರನೇ ಕ್ರಮಾಂಕದಲ್ಲಿ ಅಂಬಟಿ ರಾಯುಡು ಕ್ರೀಸ್‌ಗೆ ಬಂದಿದ್ದಾರೆ.

  (1 0 1 2 2 W)

 • 09:45 pm

  3ನೇ ಓವರ್ ಮುಕ್ತಾಯ

  ಮೂರು ಓವರ್‌ ಮುಕ್ತಾಯಕ್ಕೆ ಸಿಎಸ್‌ಕೆ ವಿಕೆಟ್‌ ನಷ್ಟವಿಲ್ಲದೆ 13 ರನ್ ಗಳಿಸಿಕೊಂಡಿದೆ. ವಾಟ್ಸನ್‌ ಮತ್ತು ಪ್ಲೆಸಿ ಕ್ರೀಸ್‌ನಲ್ಲಿದ್ದಾರೆ.

  ಬೌಲರ್‌: ಇಸುರು ಉದಾನ (1 0 0 1 1 4)

 • 09:41 pm

  2ನೇ ಓವರ್ ಮುಕ್ತಾಯ

  2ನೇ ಓವರ್‌ ಮುಕ್ತಾಯಕ್ಕೆ ಚೆನ್ನೈ 6 ರನ್‌ ಗಳಿಸಿದೆ.

  ಬೌಲರ್‌: ನವದೀಪ್‌ ಸೈನಿ (0 0 0 Wd 1 0 0)

 • 09:34 pm

  ಇನಿಂಗ್ಸ್‌ ಆರಂಭಿಸಿದ ಸಿಎಸ್‌ಕೆ

  ಸಿಎಸ್‌ಕೆ ಪರ ಶೇನ್ ವಾಟ್ಸನ್‌ ಮತ್ತು ಫಾಫ್‌ ಡು ಪ್ಲೆಸಿ ಇನಿಂಗ್ಸ್‌ ಆರಂಭಿಸಿದ್ದಾರೆ. ಮೊದಲ ಓವರ್‌ ಮುಕ್ತಾಯಕ್ಕೆ ಈ ಜೋಡಿ 4 ರನ್‌ ಗಳಿಸಿದೆ.

  ಬೌಲರ್‌: ಕ್ರಿಸ್‌ ಮೋರಿಸ್ (0 0 4 0 0 0)

 • 09:12 pm

  ಚೆನ್ನೈಗೆ 170 ರನ್‌ ಗುರಿ

  ಡ್ವೇನ್‌ ಬ್ರಾವೋ ಎಸೆದ ಕೊನೆಯ ಓವರ್‌ನಲ್ಲಿ 14 ರನ್ ಬಾರಿಸಿದ ವಿರಾಟ್‌ ಕೊಹ್ಲಿ ಆರ್‌ಸಿಬಿ ಮೊತ್ತವನ್ನು 169 ಏರಿಸಿದರು.

  ಕೊಹ್ಲಿ 90 ರನ್ ಮತ್ತು ದುಬೆ 22‌ ಗಳಿಸಿ ಅಜೇಯವಾಗಿ ಉಳಿದರು.

  (4 2 2 2 2 Wd 1)

 • 09:09 pm

  19ನೇ ಓವರ್ ಮುಕ್ತಾಯ

  ಈ ಹಂತದಲ್ಲಿ ಆರ್‌ಸಿಬಿ 155 ರನ್‌ ಗಳಿಸಿದೆ. ಕೊಹ್ಲಿ (77) ಮತ್ತು ಶಿವಂ ದುಬೆ (22) ಕ್ರೀಸ್‌ನಲ್ಲಿದ್ದಾರೆ.

  ಬೌಲರ್‌: ಶಾರ್ದೂಲ್ ಠಾಕೂರ್‌ (6 N2 1 2 2 0 0)

 • 09:01 pm

  18ನೇ ಓವರ್ ಮುಕ್ತಾಯ

  ವಿರಾಟ್ ಕೊಹ್ಲಿ ಬಿರುಸಿನ ಬ್ಯಾಟಿಂಗ್ ಶುರು ಮಾಡಿದ್ದು, ಆರ್‌ಸಿಬಿ 18 ಓವರ್‌ ಅಂತ್ಯಕ್ಕೆ 4 ವಿಕೆಟ್‌ ನಷ್ಟಕ್ಕೆ 141 ರನ್‌ ಗಳಿಸಿದೆ. ಸ್ಯಾಮ್‌ ಕರನ್‌ ಎಸೆದ ಈ ಓವರ್‌ನಲ್ಲಿ ಕೊಹ್ಲಿ ಮತ್ತು ದುಬೆ ಮೂರು ಸಿಕ್ಸರ್‌ ಸಹಿತ 24 ರನ್ ಗಳಿಸಿಕೊಂಡರು.

  (6 1 Wd 6 2 Wd 6 1)

 • 08:53 pm

  17ನೇ ಓವರ್ ಮುಕ್ತಾಯ

  17 ಓವರ್‌ಗಳ ಆಟ ಮುಕ್ತಾಯವಾಗಿದ್ದು ಆರ್‌ಸಿಬಿ 4 ವಿಕೆಟ್‌ ನಷ್ಟಕ್ಕೆ 117 ರನ್ ಗಳಿಸಿದೆ. ನಾಯಕನ ಆಟವಾಡುತ್ತಿರುವ ವಿರಾಟ್‌ ಕೊಹ್ಲಿ 53 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಇನ್ನೊಂದು ತುದಿಯಲ್ಲಿ ಶಿವಂ ದುಬೆ (11) ಇದ್ದಾರೆ.

  ಬೌಲರ್: ಶಾರ್ದೂಲ್ ಠಾಕೂರ್‌ (2 2 1 4 1 4)

 • 08:47 pm

  16ನೇ ಓವರ್ ಮುಕ್ತಾಯ: ಶತಕ ಪೂರೈಸಿದ ಆರ್‌ಸಿಬಿ

  16 ಓವರ್‌ಗಳ ಆಟ ಮುಗಿದಿದ್ದು ಆರ್‌ಸಿಬಿ 4 ವಿಕೆಟ್‌ ನಷ್ಟಕ್ಕೆ 103 ರನ್‌ ಗಳಿಸಿದೆ.

  ಸಂಕಷ್ಟದ ಸಮಯದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸುತ್ತಿರುವ ವಿರಾಟ್‌ ಕೊಹ್ಲಿ (44) ಮತ್ತು ಶಿವಂ ದುಬೆ (6) ಕ್ರೀಸ್‌ನಲ್ಲಿದ್ದಾರೆ.

 • 08:42 pm

  15ನೇ ಓವರ್ ಮುಕ್ತಾಯ

  ನಾಯಕ ಕೊಹ್ಲಿಗೆ ಉತ್ತಮ ಬೆಂಬಲ ನೀಡುವ ಭರವಸೆ ಮೂಡಿಸಿದ್ದ ವಾಷಿಂಗ್ಟನ್‌ ನಿರಾಸೆ ಮೂಡಿಸಿದ್ದರು. ಸ್ಯಾಮ್‌ ಕರನ್‌ ಎಸೆದ 15ನೇ ಓವರ್‌ನ ಮೂರನೇ ಎಸೆತದಲ್ಲಿ ಅವರು ಔಟಾದರು.

  ಸದ್ಯ ಶಿವಂ ದುಬೆ ಕ್ರೀಸ್‌ಗೆ ಬಂದಿದ್ದಾರೆ.

  15 ಓವರ್‌ ಮುಕ್ತಾಯಕ್ಕೆ ತಂಡದ ಮೊತ್ತ 4 ವಿಕೆಟ್‌ಗೆ 95 ರನ್‌ ಆಗಿದೆ.

  ಬೌಲರ್‌: ಸ್ಯಾಮ್‌ ಕರನ್‌ (6 1 W 1 1 0)

 • 08:40 pm

  14ನೇ ಓವರ್ ಮುಕ್ತಾಯ

  14 ಓವರ್‌ ಮುಕ್ತಾಯವಾಗಿದ್ದು, ಆರ್‌ಸಿಬಿ 3 ವಿಕೆಟ್‌ ನಷ್ಟಕ್ಕೆ 86 ರನ್ ಗಳಿಸಿದೆ.

  ಬೌಲರ್‌: ರವೀಂದ್ರ ಜಡೇಜಾ (0 1 0 1 2 1)

 • 08:34 pm

  13ನೇ ಓವರ್ ಮುಕ್ತಾಯ

  13ನೇ ಓವರ್‌ ಅಂತ್ಯಕ್ಕೆ ಆರ್‌ಸಿಬಿ 3 ವಿಕೆಟ್‌ ಕಳೆದುಕೊಂಡು 81 ರನ್‌ ಗಳಿಸಿದೆ.

  ಕೊಹ್ಲಿ ಮತ್ತು ವಾಷಿಂಗ್ಟನ್‌ ಸುಂದರ್‌ ಕ್ರೀಸ್‌ನಲ್ಲಿದ್ದಾರೆ.

  ಬೌಲರ್‌: ಕರಣ್‌ ಶರ್ಮಾ (1 2 1 6 1 1)

 • 08:31 pm

  12ನೇ ಓವರ್ ಮುಕ್ತಾಯ

  12 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಆರ್‌ಸಿಬಿಯ ರನ್‌ ಗಳಿಕೆ ವೇಗಕ್ಕೆ ಚೆನ್ನೈ ಕಡಿವಾಣ ಹಾಕಿದೆ.

  ಬೌಲರ್‌: ರವೀಂದ್ರ ಜಡೇಜಾ (1 0 0 1 0 0)

  ಕಳೆದ ಓವರ್‌ನಲ್ಲಿ ಎರಡು ವಿಕೆಟ್‌ ಕಳೆದುಕೊಂಡದ್ದು, ನಾಯಕ ಕೊಹ್ಲಿಗೆ ಒತ್ತಡ ಹೆಚ್ಚಿಸಿದೆ.

 • 08:26 pm

  11ನೇ ಓವರ್ ಮುಕ್ತಾಯ: ಪಡಿಕ್ಕಲ್–ಆರ್‌ಸಿಬಿ ವಿಕೆಟ್ ಪತನ

  33 ರನ್‌ ಗಳಿಸಿ ಆಡುತ್ತಿದ್ದ ದೇವದತ್ತ ಪಡಿಕ್ಕಲ್ ಹಾಗೂ ಎಬಿ ಡಿ ವಿಲಿಯರ್ಸ್‌ (0)‌ ಅವರು ಕ್ರಮವಾಗಿ 11ನೇ ಓವರ್‌ನ 2 ಮತ್ತು 5ನೇ ಎಸೆತಗಳಲ್ಲಿ ವಿಕೆಟ್ ಒಪ್ಪಿಸಿದ್ದಾರೆ.

  ಸದ್ಯ 11 ಓವರ್‌ ಮುಕ್ತಾಯವಾಗಿದ್ದು, ಆರ್‌ಸಿಬಿ ಪ್ರಮುಖ 3 ವಿಕೆಟ್‌ ಕಳದೆದುಕೊಂಡು –– ರನ್‌ ಗಳಿಸಿದೆ.

  ಬೌಲರ್‌: ಶಾರ್ದೂಲ್ ಠಾಕೂರ್‌ (1 W 1 0 W 0)

 • 08:25 pm

  10ನೇ ಓವರ್ ಮುಕ್ತಾಯ

  10 ಓವರ್‌ಗಳ ಆಟ ಮುಗಿದಿದ್ದು ಕೊಹ್ಲಿ ಪಡೆ 1 ವಿಕೆಟ್‌ ನಷ್ಟಕ್ಕೆ 65 ರನ್‌ ಗಳಿಸಿದೆ.

  ಬೌಲರ್‌: ಕರಣ್‌ ಶರ್ಮಾ (1 1 0 6 1 1)

 • 08:17 pm

  9ನೇ ಓವರ್ ಮುಕ್ತಾಯ

  9 ಓವರ್‌ಗಳ ಆಟ ಮುಕ್ತಾಯವಾಗಿದ್ದು 1 ವಿಕೆಟ್‌ ನಷ್ಟಕ್ಕೆ 55 ರನ್‌ ಗಳಿಸಿದೆ.

  ಬೌಲರ್‌: ಡ್ವೇನ್‌ ಬ್ರಾವೋ (0 1 1 1 1 1)

 • 08:16 pm

  8ನೇ ಓವರ್ ಮುಕ್ತಾಯ: ಅರ್ಧಶತಕ ಗಳಿಸಿದ ಆರ್‌ಸಿಬಿ

  8 ಓವರ್‌ಗಳ ಆಟ ಮುಕ್ತಾಯವಾಗಿದ್ದು ಅರ್‌ಸಿಬಿ 1 ವಿಕೆಟ್‌ ಕಳೆದುಕೊಂಡು 50 ರನ್ ಗಳಿಸಿದೆ.

  ಬೌಲರ್‌: ಕರಣ್‌ ಶರ್ಮಾ (1 1 1 0 0 1)

 • 08:07 pm

  7ನೇ ಓವರ್ ಮುಕ್ತಾಯ

  7 ಓವರ್‌ಗಳ ಆಟ ಮುಕ್ತಾಯವಾಗಿದ್ದು ಆರ್‌ಸಿಬಿ 1 ವಿಕೆಟ್ ಕಳೆದುಕೊಂಡು 46 ರನ್‌ ಗಳಿಸಿದೆ.

  ವಿರಾಟ್‌ (17) ಮತ್ತು ಪಡಿಕ್ಕಲ್‌ (20) ಕ್ರೀಸ್‌ನಲ್ಲಿದ್ದಾರೆ.

  ಬೌಲರ್‌: ಡ್ವೇನ್ ಬ್ರಾವೋ (1 1 Wd 4 1 2 0)

 • 08:00 pm

  6ನೇ ಓವರ್ ಮುಕ್ತಾಯ

  ಪವರ್‌ ಪ್ಲೇ ಮುಕ್ತಾಯವಾಗಿದ್ದು ಆರ್‌ಸಿಬಿ 1 ವಿಕೆಟ್‌ಗೆ 36 ರನ್‌ ಗಳಿಸಿದೆ.

  ಕೊಹ್ಲಿ ಮತ್ತು ಪಡಿಕ್ಕಲ್‌ ಕ್ರೀಸ್‌ನಲ್ಲಿದ್ದಾರೆ.

  ಬೌಲರ್‌: ಶಾರ್ದೂಲ್ ಠಾಕೂರ್‌ (4 0 L1 4 1 Wd 0)

 • 07:56 pm

  5ನೇ ಓವರ್ ಮುಕ್ತಾಯ

  ಆರ್‌ಸಿಬಿ 25 ರನ್‌ ಗಳಿಸಿ 1 ವಿಕೆಟ್ ಕಳೆದುಕೊಂಡಿದೆ. ನಾಯಕ ಕೊಹ್ಲಿ (6), ಪಡಿಕ್ಕಲ್‌ (13) ಕ್ರೀಸ್‌ನಲ್ಲಿದ್ದಾರೆ.

  ಕೊಹ್ಲಿ ಸಿಎಸ್‌ಕೆ ವಿರುದ್ಧ ಆಡಿದ ಕಳೆದ ನಾಲ್ಕು ಪಂದ್ಯಗಳಲ್ಲಿ ಕ್ರಮವಾಗಿ 18(15), 8(11), 6(12), 9(8) ರನ್‌ ಗಳಿಸಿದ್ದಾರೆ.

  ಬೌಲರ್‌: ದೀಪಕ್‌ ಚಹಾರ್‌ (1 1 0 0 1 1)

 • 07:54 pm

  4ನೇ ಓವರ್ ಮುಕ್ತಾಯ

  4 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಕೊಹ್ಲಿ ಪಡೆ 21 ರನ್‌ ಗಳಿಸಿದೆ.

  ಬೌಲರ್‌: ಸ್ಯಾಮ್ ಕರನ್‌ (Wd 1 1 0 0 1 Wd 1)

 • 07:51 pm

  3ನೇ ಓವರ್ ಮುಕ್ತಾಯ: ಫಿಂಚ್ ಔಟ್‌

  3 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಆರ್‌ಸಿಬಿ 1 ವಿಕೆಟ್‌ ನಷ್ಟಕ್ಕೆ 15 ರನ್‌ ಗಳಿಸಿದೆ. ಇದೀಗ ನಾಯಕ ವಿರಾಟ್‌ ಕೊಹ್ಲಿ ಕ್ರೀಸ್‌ಗೆ ಬಂದಿದ್ದಾರೆ.

  ದೀಪಕ್‌ ಚಹಾರ್‌ ಎಸೆದ ಈ ಓವರ್‌ನಲ್ಲಿ ಫಿಂಚ್‌ ಕ್ಲೀನ್‌ ಬೌಲ್ಡ್‌ ಆಗಿದ್ದಾರೆ.

  (1 1 0 0 W 2)

 • 07:43 pm

  2ನೇ ಓವರ್ ಮುಕ್ತಾಯ

  ಎರಡು ಓವರ್‌ಗಳಲ್ಲಿ ಆರ್‌ಸಿಬಿ ವಿಕೆಟ್‌ ನಷ್ಟವಿಲ್ಲದೆ 11 ರನ್‌ ಗಳಿಸಿದೆ.

  ಬೌಲರ್‌: ಸ್ಯಾಮ್‌ ಕರನ್‌ (0 2 1 1 0 Wd 4)

 • 07:36 pm

  ಇನಿಂಗ್ಸ್‌ ಆರಂಭಿಸಿದ ಆರ್‌ಸಿಬಿ

  ಆರ್‌ಸಿಬಿ ಪರ ಆ್ಯರನ್‌ ಫಿಂಚ್‌ ಮತ್ತು ದೇವದತ್ತ ಪಡಿಕ್ಕಲ್‌ ಇನಿಂಗ್ಸ್‌ ಆರಂಭಿಸಿದ್ದಾರೆ.

  ಬೌಲರ್‌: ದೀಪಕ್ ಚಾಹರ್ (0 Wd 1 0 0 0 0)

 • 07:09 pm

  ಹನ್ನೊಂದರ ಬಳಗದಲ್ಲಿ ಒಂದೊಂದು ಬದಲಾವಣೆ

  ಆರ್‌ಸಿಬಿ ತಂಡದಲ್ಲಿ ಮೊಹಮ್ಮದ್‌ ಸಿರಾಜ್‌ ಬದಲು ಗುರುಕೀರತ್‌ ಸಿಂಗ್‌ ಮತ್ತು ಮೋಯಿನ್‌ ಅಲಿ ಬದಲು ಕ್ರಿಸ್‌ ಮೋರಿಸ್‌ಗೆ ಸ್ಥಾನ ನೀಡಲಾಗಿದೆ. ಚೆನ್ನೈ ತಂಡದಲ್ಲೂ ಒಂದು ಬದಲಾವಣೆ ಮಾಡಲಾಗಿದ್ದು, ಕೇದಾರ್‌ ಜಾಧವ್ ಬದಲುನ ಜಗದೀಶನ್‌ ಕಣಕ್ಕಿಳಿಯಲಿದ್ದಾರೆ.

  ಆರ್‌ಸಿಬಿ: ದೇವದತ್ತ ಪಡಿಕ್ಕಲ್‌, ಆ್ಯರನ್‌ ಫಿಂಚ್, ವಿರಾಟ್‌ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್‌ (ವಿಕೆಟ್‌ ಕೀಪರ್‌) ಗುರ್‌ಕೀರತ್‌ ಸಿಂಗ್‌ಮ ಶಿವಂ ದುಬೆ, ಕ್ರಿಸ್‌ ಮೋರಿಸ್‌, ವಾಷಿಂಗ್ಟನ್ ಸುಂದರ್‌, ಇಸುರುವು ಉದಾನ, ನವದೀಪ್‌ ಸೈನಿ, ಯಜುವೇಂದ್ರ ಚಾಹಲ್

  ಸಿಎಸ್‌ಕೆ: ಶೇನ್‌ ವಾಟ್ಸನ್‌, ಫಾಫ್‌ ಡು ಪ್ಲೆಸಿ, ಅಂಬಟಿ ರಾಯುಡು, ಎಂಎಸ್‌ ಧೋನಿ (ನಾಯಕ/ವಿಕೆಟ್‌ ಕೀಪರ್‌) ಎನ್.ಜಗದೀಶನ್‌, ಸ್ಯಾಮ್‌ ಕರನ್‌, ರವಿಂದ್ರ ಜಡೇಜಾ, ಡ್ವೇನ್ ‌ಬ್ರಾವೋ,  ಶಾರ್ದೂಲ್‌ ಠಾಕೂರ್‌, ದೀಪಕ್‌ ಚಾಹರ್‌, ಕರನ್ ಶರ್ಮಾ