ಶುಕ್ರವಾರ, ಅಕ್ಟೋಬರ್ 30, 2020
26 °C

IPL-2020 | CSK vs SRH: ಹೈದರಾಬಾದ್‌ಗೆ 7 ರನ್ ಜಯ; ಚೆನ್ನೈಗೆ ಮೂರನೇ ಸೋಲು

Published:
Updated:
ಎರಡು ದಿನಗಳ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಜಯಗಳಿಸಿರುವ ಡೇವಿಡ್ ವಾರ್ನರ್ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಇಂದು ಸವಾಲೊಡ್ಡಲಿದೆ.
Secondary Categories: 
 • 11:31 pm

  ಚೆನ್ನೈಗೆ ಹ್ಯಾಟ್ರಿಕ್‌ ಸೋಲು

  ಸನ್‌ರೈಸರ್ಸ್‌ ಹೈದರಾಬಾದ್‌ ನೀಡಿದ್ದ 165 ರನ್‌ಗಳ ಗುರಿ ಎದುರು ಬ್ಯಾಟಿಂಗ್‌ ಮಾಡಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 7 ರನ್‌ಗಳ ಅಲ್ಪ‌ ಅಂತರದ ಸೋಲೊಪ್ಪಿಕೊಂಡಿತು.

  ಉದ್ಘಾಟನಾ ಪಂದ್ಯದಲ್ಲಿ ಜಯ ಗಳಿಸಿದ್ದ ಚೆನ್ನೈ ನಂತರದ ಮೂರೂ ಪಂದ್ಯಗಳಲ್ಲಿ ಸೋಲುಕಂಡಿದೆ. ಹೀಗಾಗಿ ಈ ತಂಡ ಪಾಯಿಂಟ್‌ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಉಳಿದಿದೆ.

  ಈ ಜಯದೊಂದಿಗೆ ಹೈದರಾಬಾದ್‌ ನಾಲ್ಕನೇ ಸ್ಥಾನಕ್ಕೆ ಏರಿದೆ. ಈ ತಂಡ 4 ಪಂದ್ಯಗಳಲ್ಲಿ ತಲಾ ಎರಡು ಜಯ ಮತ್ತು ಸೋಲುಗಳನ್ನು ಕಂಡಿದೆ.

 • 11:20 pm

  ಕೊನೆಯ ಓವರ್‌ನಲ್ಲಿ ಬೇಕು 28 ರನ್‌

  19 ಓವರ್‌ಗಳ ಆಟ ಮುಕ್ತಾಯವಾಗಿದ್ದು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 5 ವಿಕೆಟ್‌ ಕಳೆದುಕೊಂಡು 137 ರನ್‌ ಗಳಿಸಿದೆ.

  ಉಳಿದಿರುವ ಒಂದು ಓವರ್‌ನಲ್ಲಿ 28 ರನ್‌ ಗಳಿಸಬೇಕಿದೆ.

  39 ರನ್‌ ಗಳಿಸಿರುವ ಧೋನಿ ಮತ್ತು ಸ್ಯಾಮ್‌ ಕರನ್ (8)‌ ಕ್ರೀಸ್‌ನಲ್ಲಿದ್ದಾರೆ.

 • 11:04 pm

  ಅರ್ಧಶತಕ ಸಿಡಿಸಿ, ವಿಕೆಟ್‌ ಒಪ್ಪಿಸಿದ ಜಡೇಜಾ

  ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿದ ರವೀಂದ್ರ ಜಡೇಜಾ ಕೇವಲ 35 ಎಸೆತಗಳಲ್ಲಿ 50 ರನ್ ಗಳಿಸಿ ಔಟಾದರು. ಇದು ಐಪಿಎಲ್‌ನಲ್ಲಿ ಜಡೇಜಾ ಬಾರಿಸಿದ ಮೊದಲ ಅರ್ಧಶತಕ.

  ಸದ್ಯ ಚೆನ್ನೈ 17.4 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 114 ರನ್‌ ಗಳಿಸಿದೆ.

 • 10:59 pm

  ಶತಕ ಪೂರೈಸಿದ ಚೆನ್ನೈ

  17 ಓವರ್‌ಗಳ ಆಟ ಮುಕ್ತಾಯವಾಗಿದ್ದು ಚೆನ್ನೈ 4 ವಿಕೆಟ್‌ ಕಳೆದುಕೊಂಡು 102 ರನ್‌ ಗಳಿಸಿದೆ.

  ಧೋನಿ ಮತ್ತು ಜಡೇಜಾ 5ನೇ ವಿಕೆಟ್‌ಗೆ 52 ಎಸೆತಗಳಲ್ಲಿ 60 ರನ್ ಸೇರಿಸಿದ್ದಾರೆ. ಗೆಲ್ಲಲು18 ಎಸೆತಗಳಲ್ಲಿ 63 ರನ್‌ ಬೇಕಿದೆ.

 • 10:54 pm

  4,500 ರನ್‌ ಪೂರೈಸಿದ

  94ನೇ ಪಂದ್ಯ ಆಡುತ್ತಿರುವ ಎಂಎಸ್ ಧೋನಿ 4,500 ರನ್‌ಗಳ ಸಾಧನೆ ಮಾಡಿದರು.

  ಸದ್ಯ ಚೆನ್ನೈ ತಂಡ 16 ಓವರ್‌ ಮುಕ್ತಾಯಕ್ಕೆ 4 ವಿಕೆಟ್‌ ಕಳೆದುಕೊಂಡು 87 ರನ್‌ ಗಳಿಸಿದೆ. ಧೋನಿ 24 ರನ್‌ ಮತ್ತು ಜಡೇಜಾ 23 ರನ್‌ ಗಳಿಸಿ ಆಡುತ್ತಿದ್ದಾರೆ.

  24 ಎಸೆತಗಳಲ್ಲಿ 78 ರನ್‌ ಬೇಕಿದೆ.

 • 10:49 pm

  15 ಓವರ್‌ ಮುಕ್ತಾಯ: 79ಕ್ಕೆ 4 ವಿಕೆಟ್‌

  ಕೊನೆಯ ಐದು ಓವರ್‌ಗಳ ಆಟ ಬಾಕಿ ಉಳಿದಿದ್ದು, ಚೆನ್ನೈ 86 ರನ್‌ ಗಳಿಸಬೇಕಿದೆ. ಧೋನಿ ಮತ್ತು ಜಡೇಜಾ ಕ್ರೀಸ್‌ನಲ್ಲಿದ್ದಾರೆ.

 • 10:36 pm

  13ನೇ ಓವರ ಮುಕ್ತಾಯ: 4 ವಿಕೆಟ್‌ಗೆ 61ರನ್

  ಧೋನಿ (15) ಮತ್ತು ಜಡೇಜಾ (8) ಕ್ರೀಸ್‌ನಲ್ಲಿದ್ದಾರೆ. ಉಳಿದ 7 ಓವರ್‌ಗಳಲ್ಲಿ 104 ರನ್ ಕಲೆಹಾಕಬೇಕಿದ್ದು, 14.86ರ ಸರಾಸರಿಯಲ್ಲಿ ರನ್‌‌ ಗಳಿಸಬೇಕಿದೆ.

  ಈ ಹಂತದಲ್ಲಿ ಚೆನ್ನೈ 4 ವಿಕೆಟ್‌ ನಷ್ಟಕ್ಕೆ 74 ರನ್‌ ಗಳಿಸಿತ್ತು.

 • 10:30 pm

  12ನೇ ಓವರ್‌ ಮುಕ್ತಾಯ: ಚನ್ನೈ ರನ್‌ ರೇಟ್‌ 4.83

  12 ಓವರ್‌ಗಳ ಅಂತ್ಯಕ್ಕೆ ಚೆನ್ನೈ 4.83 ಸರಾಸರಿಯಲ್ಲಿ 54 ರನ್‌ ಕಲೆಹಾಕಿದೆ.

  ಗೆಲ್ಲಲು ಉಳಿದಿರುವ 48 ಎಸೆತಗಳಲ್ಲಿ 107 ರನ್‌ ಗಳಿಸಬೇಕಿದೆ. ಧೋನಿ ಮತ್ತು ಜಡೇಜಾ ಕ್ರೀಸ್‌ನಲ್ಲಿದ್ದಾರೆ.

 • 10:25 pm

  11ನೇ ಓವರ್‌ನಲ್ಲಿ ಅರ್ಧಶತಕ ಪೂರೈಸಿದ ಚೆನ್ನೈ

  ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಬೇಗನೆ ವಿಕಟ್ ಒಪ್ಪಿಸಿರುವುದರಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ಸಂಕಷ್ಟಕ್ಕೆ ಸಿಲುಕಿದೆ.

  ಸದ್ಯ 11 ಓವರ್‌ ಮುಕ್ತಾಯವಾಗಿದ್ದು 55 ರನ್‌ ಗಳಿಸಿದೆ. ಉಳಿದಿರುವ 9 ಓವರ್‌ಗಳಲ್ಲಿ ಈ ತಂಡ 110 ರನ್‌ ಗಳಿಸಬೇಕಿದೆ.

  ಹತ್ತು ಓವರ್‌ ಮುಗಿದಾಗ ಚೆನ್ನೈ ಕಲೆ ಹಾಕಿದ್ದು ಕೇವಲ 44 ರನ್‌. ಇದು ಈ ಟೂರ್ನಿಯಲ್ಲಿ ತಂಡವೊಂದು 10 ಓವರ್‌ಗಳಲ್ಲಿ ಕಲೆ ಹಾಕಿದ ಕನಿಷ್ಠ ಮೊತ್ತವಾಗಿದೆ.

 • 10:15 pm

  ಜಾಧವ್ ವಿಕೆಟ್ ಪತನ

  ಐಪಿಎಲ್‌ನಲ್ಲಿ 2ನೇ ಪಂದ್ಯ ಆಡುತ್ತಿರುವ ಜಮ್ಮು ಕಾಶ್ಮೀರ ಆಟಗಾರ ಅಬ್ದುಲ್ ಸಮದ್‌ ಅವರು ಅನುಭವಿ ಆಟಗಾರ ಕೇದಾರ್ ಜಾಧವ್‌ ಅವರಿಗೆ ಪಿವಿಲಿಯನ್‌ ದಾರಿ ತೋರಿದರು.

  ಸದ್ಯ 8.2 ಓವರ್ ಮುಕ್ತಾಯಕ್ಕೆ ಚೆನ್ನೈ 4 ವಿಕೆಟ್‌ ಕಳೆದುಕೊಂಡು 42 ರನ್‌ ಗಳಿಸಿದೆ. 

 • 10:11 pm

  5ನೇ ಕ್ರಮಾಂಕದಲ್ಲಿ ಬಂದ ಧೋನಿ

  ಮೊದಲೆರಡು ಪಂದ್ಯಗಳಲ್ಲಿ 7 ಮತ್ತು ಮೂರನೇ ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಆಡಿದ್ದ ಧೋನಿ ಈ ಬಾರಿ 5ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದಿದ್ದಾರೆ.

  8 ಓವರ್‌ಗಳ ಆಟ ಮುಕ್ತಾಯವಾಗಿದ್ದು ಚೆನ್ನೈ 3 ವಿಕೆಟ್‌ 41 ರನ್‌ ಗಳಿಸಿದೆ.

  ಧೋನಿ ಮತ್ತು ಕೇದಾರ್‌ ಜಾಧವ್ ಕ್ರೀಸ್‌ನಲ್ಲಿದ್ದಾರೆ.

 • 10:04 pm

  ಪ್ಲೆಸಿ ರನೌಟ್‌

  ಮೊದಲ ಮೂರು ಪಂದ್ಯಗಳಲ್ಲಿ ಎರಡು ಅರ್ಧಶತಕ ಸಿಡಿಸಿ ಚೆನ್ನೈ ಪಡೆಯ ಬ್ಯಾಟಿಂಗ್ ಬಲ ಎನಿಸಿದ್ದ ಫಾಫ್‌ ಡು ಪ್ಲೆಸಿ, ಪವರ್‌ ಪ್ಲೇನ ಕೊನೆಯ ಎಸೆತದಲ್ಲಿ ರನೌಟ್‌ ಅದರು.

  ಪ್ಲೆಸಿ ಮೊದಲ ಪಂದ್ಯದಲ್ಲಿ 58, ಎರಡನೇ ಪಂದ್ಯದಲ್ಲಿ 72 ಮತ್ತು ಮೂರನೇ ಪಂದ್ಯದಲ್ಲಿ ಪಂದ್ಯದಲ್ಲಿ 43 ರನ್‌ ಗಳಿಸಿದ್ದರು.

  ಸದ್ಯ 6 ಓವರ್‌ ಮುಕ್ತಾಯವಾಗಿದ್ದು ಚೆನ್ನೈ 3 ವಿಕೆಟ್‌ ಕಳೆದುಕೊಂಡು 36 ರನ್‌ ಗಳಿಸಿದೆ.

 • 09:57 pm

  ಎರಡನೇ ವಿಕೆಟ್‌ ಪತನ

  ಪವರ್‌ ಪ್ಲೇನ ಕೊನೆಯ ಓವರ್‌ನಲ್ಲಿ ಬೌಲಿಂಗ್‌ ಮಾಡಿದ ಟಿ.ನಟರಾಜನ್‌ ಅವರು ಮೊದಲ ಎಸೆತದಲ್ಲಿಯೇ ಅಂಬಟಿ ರಾಯುಡು ಅವರನ್ನು ಔಟ್‌ ಮಾಡಿದರು.

  ಮೊದಲ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ರಾಯುಡು, ಅದೇ ಪಂದ್ಯದ ವೇಳೆ ಗಾಯಗೊಂಡಿದ್ದರು. ಹೀಗಾಗಿ 2 ಮತ್ತು 3ನೇ ಪಂದ್ಯದಿಂದ ಹೊರಗುಳಿದಿದ್ದರು.

  ಸದ್ಯ ಚೆನ್ನೈ ತಂಡ 5.2 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 27 ರನ್‌ ಗಳಿಸಿದೆ.

 • 09:52 pm

  ಗರ್ಗ್–ಶರ್ಮಾ ಆಟಕ್ಕೆ ಪೀಟರ್ಸನ್, ವಿನಯ್‌‌ ಮೆಚ್ಚುಗೆ

  69 ರನ್‌ ಆಗುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ರೈಸರ್ಸ್‌ ತಂಡಕ್ಕೆ ಪ್ರಿಯಂ ಗರ್ಗ್ (51) ಮತ್ತು ಅಭಿಷೇಕ್‌ ಶರ್ಮಾ (31) ಆಸರೆಯಾಗಿದ್ದರು.

  ಇಂಗ್ಲೆಂಡ್‌ ತಂಡದ ಮಾಜಿ ಕ್ರಿಕೆಟಿಗ ಕೆವಿನ್‌ ಪೀಟರ್ಸನ್‌ ಅವರು ಯುವಕರ ಆಟಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

 • 09:49 pm

  24ನೇ ಎಸೆತದಲ್ಲಿ ಮೊದಲ ಬೌಂಡರಿ

  ಸನ್‌ರೈಸರ್ಸ್ ತಂಡದ ಬೌಲರ್‌ಗಳು ಶಿಸ್ತಿನ ದಾಳಿ ನಡೆಸುತ್ತಿದ್ದಾರೆ. ಇದರ ಪರಿಣಾಮವಾಗಿ ಚೆನ್ನೈ ತನ್ನ ಇನಿಂಗ್ಸ್‌ 24ನೇ ಎಸೆತದಲ್ಲಿ ಮೊದಲ ಬೌಂಡರಿ ಗಳಿಸಿದೆ.

  ಸದ್ಯ 4 ಓವರ್‌ಗಳ ಆಟ ಮುಕ್ತಾಯವಾಗಿದ್ದು ಧೋನಿ ಪಡೆ 1 ವಿಕೆಟ್ ಕಳೆದುಕೊಂಡು 13 ರನ್‌ ಗಳಿಸಿದೆ.

 • 09:41 pm

  ಚೆನ್ನೈಗೆ ಆರಂಭಿಕ ಆಘಾತ

  165 ರನ್‌ಗಳ ಸವಾಲಿನ ಗುರಿ ಎದುರು ಬ್ಯಾಟಿಂಗ್‌ ಆರಂಭಿಸಿರುವ ಚೆನ್ನೈಗೆ, ರೈಸರ್ಸ್‌ ವೇಗಿ ಭುವನೇಶ್ವರ್‌ ಕುಮಾರ್‌ ಆರಂಭಿಕ ಆಘಾತ ನೀಡಿದ್ದಾರೆ.

  ಫಾಫ್‌ ಡು ಪ್ಲೆಸಿ ಜೊತೆಗೆ ಇನಿಂಗ್ಸ್‌ ಆರಂಭಿಸಿದ ಶೇನ್‌ ವಾಟ್ಸನ್‌ (1), ಮೂರನೇ ಓವರ್‌ನಲ್ಲಿ ಔಟಾಗಿದ್ದಾರೆ.

  ಸದ್ಯ ತಂಡದ ಮೊತ್ತ 3 ಓವರ್‌ಗಳಲ್ಲಿ 1 ವಿಕೆಟ್‌ಗೆ 7ರನ್‌ ಆಗಿದೆ.

 • 09:15 pm

  ಚೆನ್ನೈಗೆ 165 ರನ್‌ ಗುರಿ

  ಟಾಸ್‌ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್‌ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 164 ರನ್‌ ಗಳಿಸಿದೆ.

 • 09:09 pm

  ಅರ್ಧಶತಕ ಪೂರೈಸಿದ ಪ್ರಿಯಂ ಗರ್ಗ್‌

  ಸಂಕಷ್ಟದ ಸಮಯದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿದ ಪ್ರಿಯಂ ಗರ್ಗ್ 23ನೇ ಎಸೆತದಲ್ಲಿ‌ ಅರ್ಧಶತಕ ಸಿಡಿಸಿದರು.

  ಸದ್ಯ 19 ಓವರ್‌ ಮುಗಿದಿದ್ದು, ರೈಸರ್ಸ್‌ 5 ವಿಕೆಟ್‌ಗೆ 157 ರನ್‌ ಗಳಿಸಿದೆ.

 • 08:59 pm

  18 ಓವರ್ ಮುಕ್ತಾಯ: 5 ವಿಕೆಟ್‌ಗೆ 146

  ಪ್ರಿಯಂ ಗರ್ಗ್‌ ಜೊತೆಗೂಡಿ ಉತ್ತಮವಾಗಿ ರನ್‌ ಗಳಿಸುತ್ತಿದ್ದ ಯುವ ಆಟಗಾರ ಅಭಿಷೇಕ್‌ ಶರ್ಮಾ (31) 18ನೇ ಓವರ್‌ನ ಕೊನೆಯ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.

 • 08:55 pm

  17ನೇ ಓವರ್ ಮುಕ್ತಾಯ: 4 ವಿಕೆಟ್‌ಗೆ 133 ರನ್‌

  ಸಂಕಷ್ಟಕ್ಕೆ ಸಿಲುಕಿದ್ದ ರೈಸರ್ಸ್‌ಗೆ ಅಭಿಷೇಕ್‌ ಶರ್ಮಾ ಮತ್ತು ಪ್ರಿಯಂ ಗರ್ಗ್‌ ಆಸರೆಯಾಗಿದ್ದಾರೆ. ಈ ಇಬ್ಬರು ಯುವ ಆಟಗಾರರು 5ನೇ ವಿಕೆಟ್‌ಗೆ 64 ರನ್‌ಗಳ ಜೊತೆಯಾಟವಾಡಿದ್ದಾರೆ.

  ಗರ್ಗ್‌ 35 ರನ್‌ ಮತ್ತು ಶರ್ಮಾ 26 ರನ್‌ ಗಳಿಸಿದ್ದಾರೆ.

 • 08:45 pm

  15 ಓವರ್‌ ಮುಕ್ತಾಯ: ಶತಕ ಪೂರೈಸಿದ ರೈಸರ್ಸ್‌

  ಸನ್‌ರೈಸರ್ಸ್‌ ಹೈದರಾಬಾದ್‌ ತಂಡ 15ನೇ ಓವರ್‌ ಮುಕ್ತಾಯಕ್ಕೆ 100 ರನ್‌ ಗಳಿಸಿದೆ.

  ಯುವ ಆಟಗಾರರಾದ ಅಭಿಷೇಕ್‌ ಶರ್ಮಾ ಮತ್ತು ಪ್ರಿಯಂ ಗರ್ಗ್‌ ಕ್ರೀಸ್‌ನಲ್ಲಿದ್ದಾರೆ.

 • 08:38 pm

  14ನೇ ಓವರ್ ಮುಕ್ತಾಯ: 4 ವಿಕೆಟ್‌ಗೆ 91 ರನ್‌

  ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ 14 ಓವರ್‌ಗಳ ಅಂತ್ಯಕ್ಕೆ 91 ರನ್‌ ಗಳಿಸಿದೆ.

 • 08:36 pm

  13ನೇ ಓವರ ಮುಕ್ತಾಯ: 4 ವಿಕೆಟ್‌ಗೆ 77 ರನ್

  ಅಭಿಷೇಕ್‌ ಶರ್ಮಾ (6) ಮತ್ತು ಪ್ರಿಯಂ ಗರ್ಗ್‌ (2) ಕ್ರೀಸ್‌ನಲ್ಲಿದ್ದಾರೆ.

 • 08:27 pm

  ನಾಯಕ ವಾರ್ನರ್, ವಿಲಿಯಮ್ಸನ್‌ ಔಟ್

  ಪಿಯೂಷ್‌ ಚಾವ್ಲಾ ಎಸೆದ ಹನ್ನೊಂದನೇ ಓವರ್‌ನಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿದ ನಾಯಕ ಡೇವಿಡ್‌ ವಾರ್ನರ್‌ ಬೌಂಡರಿ ಗೆರೆಯಲ್ಲಿ ಡು ಪ್ಲೆಸಿಗೆ ಕ್ಯಾಚ್‌ ನೀಡಿ ನಿರ್ಗಮಿಸಿದ್ದಾರೆ. ನಂತರದ ಎಸೆತದಲ್ಲಿ ಕೇನ್‌ ವಿಲಿಯಮ್ಸನ್‌ ರನೌಟ್‌ ಆದರು.

  ಹೀಗಾಗಿ ರೈಸರ್ಸ್ ತಂಡ 11 ಓವರ್‌ಗಳ ಮುಕ್ತಾಯಕ್ಕೆ 4 ವಿಕೆಟ್‌ ಕಳೆದುಕೊಂಡು 69 ರನ್ ಗಳಿಸಿದೆ.

 • 08:25 pm

  10 ಓವರ್ ಮುಕ್ತಾಯ: 2 ವಿಕೆಟ್‌ಗೆ 61ರನ್‌

  ನಾಯಕ ವಾರ್ನರ್ (23)‌ ಮತ್ತು ವಿಲಿಯಮ್ಸನ್‌ (8) ಕ್ರೀಸ್‌ನಲ್ಲಿದ್ದಾರೆ.

 • 08:15 pm

  9ನೇ ಓವರ್‌ ಮುಕ್ತಾಯ: 2 ವಿಕೆಟ್‌ಗೆ 60 ರನ್

  9 ಓವರ್‌ ಮುಕ್ತಾಯವಾಗಿದ್ದು ರೈಸರ್ಸ್‌ ತಂಡ 2 ವಿಕೆಟ್‌ ಕಳೆದುಕೊಂಡು 60 ರನ್‌ ಗಳಿಸಿದೆ. ಜಾನಿ ಬೈರ್ಸ್ಟ್ರೋವ್‌ (0) ಮತ್ತು ಕನ್ನಡಿಗ ಮನಿಷ್‌ ಪಾಂಡೆ (29) ಔಟಾಗಿದ್ದಾರೆ.

  ನಾಯಕ ವಾರ್ನರ್ (21)‌ ಮತ್ತು ಭರವಸೆಯ ಬ್ಯಾಟ್ಸ್‌ಮನ್‌ ಕೇನ್‌ ವಿಲಿಯಮ್ಸನ್‌ (7) ಕ್ರೀಸ್‌ನಲ್ಲಿದ್ದಾರೆ.

  ಚೆನ್ನೈ ಪರ ದೀಪಕ್‌ ಚಾಹರ್ ಮತ್ತು ಶಾರ್ದೂಲ್‌ ಠಾಕೂರ್‌ ತಲಾ ಒಂದೊಂದು ವಿಕೆಟ್‌ ಪಡೆದಿದ್ದಾರೆ.

 • 08:07 pm

  ಎರಡನೇ ವಿಕೆಟ್‌ ಕಳೆದುಕೊಂಡ ರೈಸರ್ಸ್‌

  ನಾಯಕ ವಾರ್ನರ್‌ ಜೊತೆ ಸೇರಿ ಎರಡನೇ ವಿಕೆಟ್ ಜೊತೆಯಾಟದಲ್ಲಿ 46 ರನ್‌ ಕಲೆಹಾಕಿದ್ದ ಮನೀಷ್‌ ಪಾಂಡೆ ವಿಕೆಟ್‌ ಒಪ್ಪಿಸಿದ್ದಾರೆ.

  21 ಎಸೆತಗಳಲ್ಲಿ 5 ಬೌಂಡರಿ ಸಹಿತ 29 ರನ್‌ಗಳಿಸಿ ಶಾರ್ದೂಲ್‌ ಠಾಕೂರ್‌ ಬೌಲಿಂಗ್‌ನಲ್ಲಿ ಔಟಗಗ ಆಗಿದ್ದಾರೆ.

  ಸದ್ಯ ತಂಡದ ಮೊತ್ತ 7.2 ಓವರ್‌ಗಳಲ್ಲಿ 2 ವಿಕೆಟ್‌ಗೆ 47 ರನ್‌ ಆಗಿದೆ.

 • 03:59 pm

  ಗೆಲುವು ಯಾರಿಗೆ? ವೋಟ್‌ ಮಾಡಿ

 • 08:00 pm

  ಪವರ್‌ ಪ್ಲೇ ಮುಕ್ತಾಯ: ರೈಸರ್ಸ್‌ 42ಕ್ಕೆ 1

  6 ಓವರ್‌ಗಳ ಆಟ ಮುಗಿದಿದ್ದು, ರೈಸರ್ಸ್ 1 ವಿಕೆಟ್‌ ನಷ್ಟಕ್ಕೆ 42 ರನ್‌ ಗಳಿಸಿದೆ. ಕನ್ನಡಿಗ ಮನಿಷ್‌ ಪಾಂಡೆ (27) ಮತ್ತು ನಾಯಕ ಡೇವಿಡ್‌ ವಾರ್ನರ್‌ (13) ಕ್ರೀಸ್‌ನಲ್ಲಿದ್ದಾರೆ.

 • 07:55 pm

  5ನೇ ಓವರ್‌ ಮುಕ್ತಾಯ

  5 ಓವರ್‌ಗಳ ಆಟ ಮುಕ್ತಾಯವಾಗಿದ್ದು ರೈಸರ್ಸ್‌ 1 ವಿಕೆಟ್‌ಗೆ 33 ರನ್‌ ಗಳಿಸಿದೆ.

  ಪಾಂಡೆ (25) ಮತ್ತು ವಾರ್ನರ್‌ (6) ಕ್ರೀಸ್‌ನಲ್ಲಿದ್ದಾರೆ.

 • 07:53 pm

  4ನೇ ಓವರ್‌ ಮುಕ್ತಾಯ: 1 ವಿಕೆಟ್‌ಗೆ 27 ರನ್‌

  ವಾರ್ನರ್ (5)‌ ಮತ್ತು ಪಾಂಡೆ (20) ಕ್ರೀಸ್‌ನಲ್ಲಿದ್ದಾರೆ.

 • 07:50 pm

  3ನೇ ಓವರ್‌ ಮುಕ್ತಾಯ: 1 ವಿಕೆಟ್‌ಗೆ 18 ರನ್‌

  ಕೇವಲ 1 ರನ್‌ಗೆ ಮೊದಲ ವಿಕೆಟ್‌ ಕಳೆದುಕೊಂಡಿದ್ದು, ಸನ್‌ರೈಸರ್ಸ್ ನಾಯಕ ವಾರ್ನರ್‌ ಎಚ್ಚರಿಕೆಯ ಆಟವಾಡುತ್ತಿದ್ದಾರೆ. ಇನ್ನೊಂದು ತುದಿಯಲ್ಲಿ ಕನ್ನಡಿಗ ಪಾಂಡೆ ತಮ್ಮ ಎಂದಿನ ಶೈಲಿಯಲ್ಲಿ ಬ್ಯಾಟ್‌ ಬೀಸುತ್ತಿದ್ದಾರೆ.

  ತಂಡದ ಮೊತ್ತ 18 ಆಗಿದೆ.

 • 07:42 pm

  2ನೇ ಓವರ್‌ ಮುಕ್ತಾಯ: 1 ವಿಕೆಟ್‌ ನಷ್ಟಕ್ಕೆ 12 ರನ್‌

  ಮನೀಷ್‌ ಪಾಂಡೆ (9) ಮತ್ತು ಡೇವಿಡ್‌ ವಾರ್ನರ್‌ (2) ಕ್ರೀಸ್‌ನಲ್ಲಿದ್ದಾರೆ.

 • 07:36 pm

  ಜಾನಿ ಬೈರ್ಸ್ಟ್ರೋವ್‌ ವಿಕೆಟ್‌ ಪತನ

  ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಮೊದಲ ಓವರ್‌ ಬೌಲಿಂಗ್‌ ಮಾಡಿದ ದೀಪಕ್‌ ಚಾಹರ್‌, ಜಾನಿ ಬೈರ್ಸ್ಟ್ರೋವ್‌ ವಿಕೆಟ್‌ ಪಡೆದು ತಮ್ಮ ತಂಡಕ್ಕೆ ಮೇಲುಗೈ ತಂದುಕೊಟ್ಟಿದ್ದಾರೆ.

  ರೈಸರ್ಸ್‌ ಒಂದು ಓವರ್‌ ಮುಕ್ತಾಯಕ್ಕೆ 1 ವಿಕೆಟ್ ಕಳೆದುಕೊಂಡು 6 ರನ್‌ ಗಳಿಸಿದೆ.

  ಕನ್ನಡಿಗ ಮನಿಷ್‌ ಪಾಂಡೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದಾರೆ.

 • 07:33 pm

  ಇನಿಂಗ್ಸ್ ಆರಂಭಿಸಿದ ರೈಸರ್ಸ್‌

  ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಪರ ನಾಯಕ ಡೇವಿಡ್ ವಾರ್ನರ್‌ ಮತ್ತು ಜಾನಿ ಬೈರ್ಸ್ಟ್ರೋವ್‌‌ ಇನಿಂಗ್ಸ್ ಆರಂಭಿಸಿದ್ದಾರೆ.

   

 • 07:16 pm

  ಧೋನಿಗೆ 194ನೇ ಪಂದ್ಯ

  ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಎಂಎಸ್‌ ಧೋನಿ ಅವರು ಇಂದು ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಐಪಿಎಲ್‌ನಲ್ಲಿ ಅತಿಹೆಚ್ಚು ಪಂದ್ಯಗಳಲ್ಲಿ ಆಡಿದ ಸಾಧನೆ ಮಾಡಿದರು.

  ಧೋನಿ ಅವರಿಗೆ ಇದು 194ನೇ ಪಂದ್ಯ. ಸಹ ಆಟಗಾರ ಸುರೇಶ್‌ ರೈನಾ ಅವರು ಐಪಿಎಲ್‌ನಲ್ಲಿ 193 ಪಂದ್ಯಗಳಲ್ಲಿ ಆಡಿದ್ದಾರೆ.

  ಧೋನಿ ಇದುವರೆಗೆ ಒಟ್ಟು 163 ಪಂದ್ಯಗಳಲ್ಲಿ ಚೆನ್ನೈ ತಂಡವನ್ನು ಮುನ್ನಡೆಸಿದ್ದು, 100ರಲ್ಲಿ ಗೆಲುವು ಸಾಧಿಸಿದೆ. ಇದುವರೆಗೆ ಒಟ್ಟು 4,476 ರನ್‌ ರನ್ ಗಳಿಸಿದ್ದಾರೆ. 212 ಸಿಕ್ಸರ್‌ಗಳನ್ನು ಸಿಡಿಸಿದ್ದು, ಹೆಚ್ಚು ಸಿಕ್ಸರ್‌ ಸಿಡಿಸಿದ ಭಾರತೀಯದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಜೊತೆಗೆ 39 ಸ್ಟಂಪಿಂಗ್‌ ಮತ್ತು 102 ಕ್ಯಾಚ್‌ ಪಡೆದಿದ್ದಾರೆ.

 • 07:12 pm

  ಬ್ರಾವೊ ಇನ್; ಮುರುಳಿ ಔಟ್

  ಚೆನ್ನೈ ಸೂಪರ್‌ಕಿಂಗ್ಸ್‌ ತಂಡದಲ್ಲಿ ಮೂರು ಬದಲಾವಣೆಗಳನ್ನು ಮಾಡಲಾಗಿದೆ. ಹಿಂದಿನ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ಮುರುಳಿ ವಿಜಯ್‌, ರಿತುರಾಜ್‌ ಗಾಯಕವಾಡ್‌, ಜೋಶ್‌ ಹ್ಯಾಜೆಲ್‌ವುಡ್‌ ಅವರ ಬದಲು, ಅಂಬಟಿ ರಾಯುಡು, ಶಾರ್ದುಲ್‌ ಠಾಕೂರ್‌ ಮತ್ತು ಡ್ವೇನ್‌ ಬ್ರಾವೊ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಲಾಗಿದೆ.

  ರೈಸರ್ಸ್‌ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ತಂಡ ರಾಜಸ್ಥಾನ ರಾಯಲ್ಸ್‌ ವಿರುದ್ಧ ಆಡಿದ್ದ ತಂಡವನ್ನೇ ಮುಂದುವರಿಸಿದೆ.

 • 07:03 pm

  ಹನ್ನೊಂದರ ಬಳಗ

  ಚೆನ್ನೈ ಸೂಪರ್‌ಕಿಂಗ್ಸ್‌: ಶೇನ್‌ ವಾಟ್ಸನ್‌, ಅಂಬಟಿ ರಾಯುಡು, ಫಾಫ್‌ ಡು ಪ್ಲೆಸಿ, ಕೇದಾರ್‌ ಜಾಧವ್‌, ಎಂಎಸ್‌ ಧೋನಿ (ನಾಯಕ/ವಿಕೆಟ್ ಕೀಪರ್‌), ಡ್ವೇನ್‌ ಬ್ರಾವೊ, ರವಿಂದ್ರ ಜಡೇಜಾ, ಸ್ಯಾಮ್‌ ಕರನ್, ಶಾರ್ದೂಲ್‌ ಠಾಕರೂರ್‌, ಪಿಯೂಷ್‌ ಚಾವ್ಲಾ, ದೀಪಕ್‌ ಚಹಾರ್‌

  ಸನ್‌ರೈಸರ್ಸ್‌: ಡೇವಿಡ್‌ ವಾರ್ನರ್‌ (ನಾಯಕ), ಜಾನಿ ಬೈರ್ಸ್ಟ್ರೋವ್‌ (ವಿಕೆಟ್ ಕೀಪರ್‌), ಮನೀಷ್‌ ಪಾಂಡೆ, ಕೇನ್‌ ವಿಲಿಯಮ್ಸನ್‌, ಅಬ್ದುಲ್‌ ಸಮದ್‌, ಅಭಿಶೇಕ್‌ ಶರ್ಮಾ, ಪ್ರಿಯಂ ಗರ್ಗ್‌, ರಶೀದ್‌ ಖಾನ್‌, ಭುವನೇಶ್ವರ್ ಕುಮಾರ್‌, ಖಲೀಲ್‌ ಅಹಮದ್‌, ಟಿ.ನಟರಾಜನ್‌

 • 07:01 pm

  ರೈಸರ್ಸ್‌ ಬ್ಯಾಟಿಂಗ್ ಆಯ್ಕೆ

  ಐಪಿಎಲ್‌–2020 ಟೂರ್ನಿಯ 14ನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ಮತ್ತು ಚೆನ್ನೈ ಸೂಪರ್‌ಕಿಂಗ್ಸ್‌ ತಂಡಗಳು ಸೆಣಸಾಟ ನಡೆಸುತ್ತಿವೆ. ಟಾಸ್‌ ಗೆದ್ದಿರುವ ಸನ್‌ರೈಸರ್ಸ್‌‌ ತಂಡದ ನಾಯಕ ಡೇವಿಡ್‌ ವಾರ್ನರ್ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ.

 • 06:58 pm

  ಅಭ್ಯಾಸದ ವೇಳೆ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದ ಕೇನ್ ವಿಲಿಯಮ್ಸನ್