ಸೋಮವಾರ, ಅಕ್ಟೋಬರ್ 19, 2020
24 °C

IPL-2020 | DC vs KKR: ಡೆಲ್ಲಿ ಕ್ಯಾಪಿಟಲ್ಸ್‌ಗೆ 18 ರನ್‌ ಜಯ

Published:
Updated:
ಪಾಯಿಂಟ್ಸ್‌ ಪಟ್ಟಿಯಲ್ಲಿ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಕೋಲ್ಕತ್ತ ನೈಟ್‌ರೈಡರ್ಸ್‌ ತಂಡಗಳು ಇಂದು ರಾತ್ರಿ ನಡೆಯಲಿರುವ ಪಂದ್ಯದಲ್ಲಿ ಸೆಣಸಾಟ ನಡೆಸುತ್ತಿವೆ
 • 11:34 pm

  ಡೆಲ್ಲಿಗೆ ಗೆಲುವು

  ಡೆಲ್ಲಿ ಕ್ಯಾಪಿಟಲ್ಸ್‌ ನೀಡಿದ್ದ 229 ರನ್‌ಗಳ ಬೃಹತ್‌ ಗುರಿ ಎದುರು ಕೊನೆಯವರೆಗೂ ಹೋರಾಟ ನಡೆಸಿದ ಕೋಲ್ಕತ್ತ ನೈಟ್‌ರೈಡರ್ಸ್‌ 210 ರನ್‌ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ಈ ತಂಡ 18 ರನ್ ಅಂತರದ ಸೋಲು ಅನುಭವಿಸಿತು.

 • 11:19 pm

  17ನೇ ಓವರ್‌ನಲ್ಲಿ 24 ರನ್

  ಮಾರ್ಕಸ್‌ ಸ್ಟೋಯಿನಸ್‌ ಎಸೆದ 17ನೇ ಓವರ್‌ನಲ್ಲಿ ಮಾರ್ಗನ್‌ ಮತ್ತು ರಾಹುಲ್‌ ತ್ರಿಪಾಠಿ ಜೋಡಿ 24 ರನ್‌ ಕಬಳಿಸಿತು.

  ರಾಹುಲ್‌ ತ್ರಿಪಾಠಿ 3 ಸಿಕ್ಸರ್ ಮತ್ತು 1 ಬೌಂಡರಿ ಗಳಿಸಿದರು.

  18 ಎಸೆತಗಳಲ್ಲಿ 54 ರನ್‌ ಬೇಕಾಗಿದೆ.

 • 11:04 pm

  16ನೇ ಓವರ್‌ ಮುಕ್ತಾಯ: 6 ವಿಕೆಟ್‌ಗೆ 151 ರನ್

  16 ಓವರ್‌ಗಳ ಆಟ ಮುಕ್ತಾಯವಾಗಿದ್ದು ಕೆಕೆಆರ್‌ 6 ವಿಕೆಟ್ ಕಳೆದುಕೊಂಡು 151 ರನ್‌ ಗಳಿಸಿದೆ.

  24 ಎಸೆತಗಳಲ್ಲಿ 78 ರನ್‌ ಬೇಕಾಗಿದ್ದು, ಇಯಾನ್‌ ಮಾರ್ಗನ್‌ ಮತ್ತು ರಾಹುಲ್‌ ತ್ರಿಪಾಠಿ ಕ್ರೀಸ್‌ನಲ್ಲಿದ್ದಾರೆ.

 • 10:51 pm

  ವಿಕೆಟ್ ಒಪ್ಪಿಸಿದ ರಾಣಾ, ಕಾರ್ತಿಕ್‌

  58 ರನ್‌ ಗಳಿಸಿ ಆಡುತ್ತಿದ್ದ ನಿತೀಶ್‌ ರಾಣಾ ಹಾಗೂ ನಾಯಕ ದಿನೇಶ್‌ ಕಾರ್ತಿಕ್‌ ಅವರು ಕ್ರಮವಾಗಿ 13ನೇ ಓವರ್‌ನ 4 ಮತ್ತು 5ನೇ ಎಸೆತಗಳಲ್ಲಿ ಔಟಾಗಿದ್ದಾರೆ.

  ಸದ್ಯ 13 ಓವರ್‌ ಮುಗಿದಿದ್ದು, ಕೆಕೆಆರ್‌ 5 ವಿಕೆಟ್‌ ಕಳೆದುಕೊಂಡು 118 ರನ್‌ ಗಳಿಸಿದೆ.

 • 10:46 pm

  ರಾಣಾ ಅರ್ಧಶತಕ

  ಐಪಿಎಲ್‌ನಲ್ಲಿ 50ನೇ ಪಂದ್ಯ ಆಡುತ್ತಿರುವ ನಿತೀಶ್ ರಾಣಾ ಅರ್ಧಶತಕ ಬಾರಿಸಿದರು. 32ನೇ ಎಸೆತದಲ್ಲಿ ಅವರು 50 ರನ್ ಗಳಿಸಿದ್ದಾರೆ.

  ಸದ್ಯ 12 ಓವರ್‌ಗಳ ಆಟ ಮುಗಿದಿದ್ದು ಕೆಕೆಆರ್‌ 3 ವಿಕೆಟ್‌ ನಷ್ಟಕ್ಕೆ 108 ರನ್ ಗಳಿಸಿದೆ. ಗೆಲ್ಲಲು 48 ಎಸೆತಗಳಲ್ಲಿ 121 ರನ್‌ ಗಳಿಸಬೇಕಿದೆ.

 • 10:40 pm

  100 ರನ್‌ ಪೂರೈಸಿದ ಕೆಕೆಆರ್

  11 ಓವರ್‌ಗಳ ಆಟ ಮುಕ್ತಾಯವಾಗಿದ್ದು ಕೆಕೆಆರ್‌ 3 ವಿಕೆಟ್‌ ನಷ್ಟಕ್ಕೆ 100 ರನ್‌ ಕಲೆ ಹಾಕಿದೆ.

  ಉಳಿದಿರುವ 54 ಎಸೆತಗಳಲ್ಲಿ 129 ರನ್ ಬೇಕಾಗಿದೆ. ನಾಯಕ ಕಾರ್ತಿಕ್‌ ಮತ್ತು ನಿತೀಶ್‌ ರಾಣಾ ಕ್ರೀಸ್‌ನಲ್ಲಿದ್ದಾರೆ.

 • 10:33 pm

  ರಸೆಲ್‌ ವಿಕೆಟ್‌ ಪತನ

  ಅಪಾಯಕಾರಿ ಬ್ಯಾಟ್ಸ್‌ಮನ್‌ ಆ್ಯಂಡ್ರೆ ರಸೆಲ್‌ (13) ಅವರು ರಬಾಡ ಎಸೆದ ಹತ್ತನೇ ಓವರ್‌ನ 5ನೇ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದ್ದಾರೆ.

  ಇದರೊಂದಿಗೆ 3ನೇ ವಿಕೆಟ್‌ ಕಳೆದುಕೊಂಡಿರುವ ಕೆಕೆಆರ್‌ 10 ಓವರ್‌ಗಳ ಅಂತ್ಯಕ್ಕೆ 94 ರನ್‌ ಗಳಿಸಿದೆ.

 • 10:25 pm

  9ನೇ ಓವರ್‌ ಮುಕ್ತಾಯ: 2 ವಿಕೆಟ್‌ಗೆ 84 ರನ್

  9 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಕೆಕೆಆರ್‌ 2 ವಿಕೆಟ್‌ ಕಳೆದುಕೊಂಡು 84 ರನ್‌ ಗಳಿಸಿದೆ.

  ಆಂಡ್ರೆ ರಸೆಲ್‌ (3) ಮತ್ತು ನಿತೀಶ್‌ ರಾಣಾ (42) ಕ್ರೀಸ್‌ನಲ್ಲಿದ್ದಾರೆ.

  ಈ ಹಂತದಲ್ಲಿ ಡೆಲ್ಲಿ 1 ವಿಕೆಟ್ ಕಳೆದುಕೊಂಡು 78 ರನ್‌ ಗಳಿಸಿತ್ತು.

 • 10:19 pm

  ಗಿಲ್ ವಿಕೆಟ್ ಪತನ

  ಐಪಿಎಲ್‌ನಲ್ಲಿ 150ನೇ ಪಂದ್ಯ ಆಡುತ್ತಿರುವ ಅಮಿತ್‌ ಮಿಶ್ರಾ ಬೌಲಿಂಗ್‌ನಲ್ಲಿ ಶುಭಮನ್‌ ಗಿಲ್ ವಿಕೆಟ್‌ ಒಪ್ಪಿಸಿದ್ದಾರೆ.

  ಸದ್ಯ 8.1 ಓವರ್‌ಗಳ‌ ಆಟ ಮುಗಿದಿದ್ದು, ಕೆಕೆಆರ್ 2 ವಿಕೆಟ್‌ಗೆ 72 ರನ್‌ ಗಳಿಸಿದೆ.

 • 10:03 pm

  ಅರ್ಧಶತಕ ಪೂರೈಸಿದ ಕೆಕೆಆರ್‌

  ಪವರ್‌ ಪ್ಲೇ ಮುಕ್ತಾಯವಾಗಿದ್ದು ಕೆಕೆಆರ್‌ 1 ವಿಕೆಟ್ ಕಳೆದುಕೊಂಡು 59 ರನ್‌ ಗಳಿಸಿದೆ.

  ಈ ಹಂತದಲ್ಲಿ ಡೆಲ್ಲಿ 1 ವಿಕೆಟ್‌ ನಷ್ಟಕ್ಕೆ 57 ರನ್‌ ಗಳಿಸಿತ್ತು.

 • 09:52 pm

  ಮೊದಲ ವಿಕೆಟ್ ಪತನ

  ಬೃಹತ್ ಗುರಿ ಎದುರು ಬ್ಯಾಟಿಂಗ್‌ ಆರಂಭಿಸಿರುವ ಕೆಕೆಆರ್‌ ಆರಂಭಿಕ ಆಘಾತ ಅನುಭವಿಸಿದೆ.

  ಸುನೀಲ್‌ ನರೇನ್‌ ಕೇವಲ 3 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದಾರೆ.

  ಸದ್ಯ 4 ಓವರ್‌ಗಳ ಆಟ ಮುಕ್ತಾಯವಾಗಿದ್ದು ಕೆಕೆಆರ್‌ 1 ವಿಕೆಟ್‌ ನಷ್ಟಕ್ಕೆ 39 ರನ್‌ ಗಳಿಸಿದೆ.

  ಶುಭಮನ್‌ ಗಿಲ್‌ (15) ಮತ್ತು ನಿತೀಶ್‌ ರಾಣಾ (16) ಕ್ರೀಸ್‌ನಲ್ಲಿದ್ದಾರೆ.

 • 09:22 pm

  ಕೆಕೆಆರ್‌ಗೆ ಬೃಹತ್ ಗುರಿ ನೀಡಿದ ಡೆಲ್ಲಿ

  ಕೊನೆಯವರೆಗೂ ಸ್ಫೋಟಕ ಬ್ಯಾಟಿಂಗ್‌ ಮುಂದುವರಿಸಿದ ಅಯ್ಯರ್‌ ಕೇವಲ 38 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 7 ಬೌಂಡರಿ ಸಹಿತ 88 ರನ್‌ ಗಳಿಸಿದರು. ಕೊನೆಯ ಓವರ್‌ನಲ್ಲಿ ಒಂದೂ ಎಸೆತ ಆಡಲು ಅವಕಾಶ ಸಿಗದ ಕಾರಣ ಶತಕ ಗಳಿಸುವ ಅವಕಾಶ ತಪ್ಪಿತು. ಆದಾಗ್ಯೂ ಡೆಲ್ಲಿ ತಂಡದ ಮೊತ್ತ 220ರ ಗಡಿ ದಾಟಿತು.

 • 09:09 pm

  ಪಂತ್‌ ಔಟ್

  17 ಎಸೆತಗಳಲ್ಲಿ 38 ರನ್‌ ಗಳಿಸಿ ಅಬ್ಬರದ ಬ್ಯಾಟಿಂಗ್ ನಡೆಸುತ್ತಿದ್ದ ರಿಷಭ್‌ ಪಂತ್‌ 18ನೇ ಓವರ್‌ನ 5ನೇ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದ್ದಾರೆ. 18 ಓವರ್ ಮುಕ್ತಾಯವಾಗಿದ್ದು, ತಂಡದ ಮೊತ್ತ 3 ವಿಕೆಟ್‌ಗೆ 201 ರನ್‌ ಆಗಿದೆ.
 • 09:04 pm

  17ನೇ ಓವರ್ ಮುಕ್ತಾಯ: 2 ವಿಕೆಟ್‌ಗೆ 186 ರನ್‌

  ಅಯ್ಯರ್ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿದ್ದಾರೆ. ಡೆಲ್ಲಿ ತಂಡ 17 ಓವರ್ ಮುಕ್ತಾಯಕ್ಕೆ 186 ರನ್‌ ಗಳಿಸಿದೆ.
 • 08:57 pm

  ಅರ್ಧಶತಕ ಪೂರೈಸಿದ ಅಯ್ಯರ್

  ಬಿರುಸಿನ ಬ್ಯಾಟಿಂಗ್‌ ನಡೆಸುತ್ತಿರುವ ಡೆಲ್ಲಿ ನಾಯಕ ಶ್ರೇಯಸ್‌ ಅಯ್ಯರ್‌ 26ನೇ ಎಸೆತದಲ್ಲಿ ಅರ್ಧಶತಕ ಪೂರೈಸಿದ್ದಾರೆ. ಸದ್ಯ 16 ಓವರ್‌ಗಳ ಆಟ ಮುಗಿದಿದ್ದು ಡೆಲ್ಲಿ 2 ವಿಕೆಟ್ ನಷ್ಟಕ್ಕೆ 169 ರನ್‌ ಗಳಿಸಿದೆ. ಇನ್ನೊಂದು ತುದಿಯಲ್ಲಿ ರಿಷಭ್‌ ಪಂತ್‌ ಆಡುತ್ತಿದ್ದಾರೆ.
 • 08:52 pm

  15 ಓವರ್‌ ಮುಕ್ತಾಯ: 2 ವಿಕೆಟ್‌ಗೆ 151 ರನ್‌

  15 ಓವರ್‌ಗಳ ಆಟ ಮುಕ್ತಾಯವಾಗಿದ್ದು ಡೆಲ್ಲಿ 10.07ರ ಸರಾಸರಿಯಲ್ಲಿ 151 ರನ್‌ ಕಲೆ ಹಾಕಿದೆ.
 • 08:46 pm

  13ನೇ ಓವರ ಮುಕ್ತಾಯ: 2 ವಿಕೆಟ್‌ಗೆ 142ರನ್

  ಭರ್ಜರಿ ಬ್ಯಾಟಿಂಗ್‌ ನಡೆಸುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 14 ಓವರ್‌ಗಳ ಅಂತ್ಯಕ್ಕೆ 2 ವಿಕೆಟ್‌ ಕಳೆದುಕೊಂಡು 142 ರನ್‌ ಗಳಿಸಿದೆ. ನಾಯಕ ಶ್ರೇಯಸ್‌ (43) ಮತ್ತು ರಿಷಭ್‌ ಪಂತ್‌ ಕ್ರೀಸ್‌ನಲ್ಲಿದ್ದಾರೆ.
 • 08:34 pm

  ಶಾ ವಿಕೆಟ್ ಪತನ

  41 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್‌ ಸಹಿತ 66 ರನ್‌ ಗಳಿಸಿದ್ದ ಪೃಥ್ವಿ ಶಾ, 13ನೇ ಓವರ್‌ನಲ್ಲಿ ಔಟಾಗಿದ್ದಾರೆ. ನಾಗರಕೋಟಿ ಬೌಲಿಂಗ್‌ನಲ್ಲಿ ಬಲವಾಗಿ ಹೊಡೆಯುವ ಯತ್ನದಲ್ಲಿ ಅವರು ಶುಭಮನ್‌ ಗಿಲ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದ್ದಾರೆ. 13 ಓವರ್‌ಗಳ ಆಟ ಮುಕ್ತಾಯವಾಗಿದ್ದು ಡೆಲ್ಲಿ 2 ವಿಕೆಟ್‌ ಕಳೆದುಕೊಂಡು 131ರನ್ ಗಳಿಸಿದೆ.
 • 08:25 pm

  ಶಾ ಅರ್ಧಶತಕ

  ಬಿರುಸಿನ ಬ್ಯಾಟಿಂಗ್‌ ನಡೆಸುತ್ತಿರುವ ಪೃಥ್ವಿ ಶಾ 35ನೇ ಎಸೆತದಲ್ಲಿ ಅರ್ಧಶತಕ ಪೂರೈಸಿದ್ದಾರೆ. ಸದ್ಯ 11 ಓವರ್‌ಗಳ ಆಟ ಮುಕ್ತಾಯವಾಗಿದ್ದು ಡೆಲ್ಲಿ 1 ವಿಕೆಟ್‌ಗೆ 105 ರನ್‌ ಗಳಿಸಿದೆ.
 • 08:18 pm

  10 ಓವರ್ ಮುಕ್ತಾಯ: 1 ವಿಕೆಟ್‌ಗೆ 89ರನ್‌

  ಹತ್ತು ಓವರ್‌ಗಳ ಆಟ ಮುಕ್ತಾಯವಾಗಿದ್ದು, ಅಯ್ಯರ್‌ ಪಡೆ 1 ವಿಕೆಟ್‌ಗೆ 89 ರನ್‌ ಗಳಿಸಿದೆ. ಅಯ್ಯರ್‌ ಮತ್ತು ಶಾ ಕ್ರೀಸ್‌ನಲ್ಲಿದ್ದಾರೆ.
 • 08:11 pm

  8 ಓವರ್ ಮುಕ್ತಾಯ: 1 ವಿಕೆಟ್‌ಗೆ 75 ರನ್

  8 ಓವರ್‌ಗಳ ಆಟ ಮುಕ್ತಾಯವಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್‌ 1 ವಿಕೆಟ್‌ ಕಳೆದುಕೊಂಡು 75 ರನ್‌ ಗಳಿಸಿದೆ.

  ನಾಯಕ ಶ್ರೇಯಸ್‌ ಅಯ್ಯರ್‌ (8) ಮತ್ತು ಪೃಥ್ವಿ ಶಾ (41) ಕ್ರೀಸ್‌ನಲ್ಲಿದ್ದಾರೆ.

  ಅನುಭವಿ ಶಿಖರ್‌ ಧವನ್ 26 ರನ್‌ ಗಳಿಸಿ ಔಟಾಗಿದ್ದಾರೆ.

 • 07:58 pm

  ಮೊದಲ ವಿಕೆಟ್ ಪತನ

  26 ರನ್‌ ಗಳಿಸಿದ್ದ ಶಿಖರ್‌ ಧವನ್, ವರುಣ್‌ ಚಕ್ರವರ್ತಿ ಬೌಲಿಂಗ್‌ನಲ್ಲಿ‌ ವಿಕೆಟ್‌ ಒಪ್ಪಿಸಿದ್ದಾರೆ.

  ಡೆಲ್ಲಿ 6 ಓವರ್‌ ಮುಕ್ತಾಯಕ್ಕೆ 1 ವಿಕೆಟ್‌ ಕಳೆದುಕೊಂಡು 57 ರನ್‌ ಗಳಿಸಿದೆ.

 • 07:51 pm

  50ರನ್‌ ಗಳಿಸಿದ ಕೆಕೆಆರ್

  ಡೆಲ್ಲಿ ಕ್ಯಾಪಿಟಲ್ಸ್‌ ತಂಡ 4.4 ಓವರ್‌ಗಳಲ್ಲಿ ಅರ್ಧಶತಕ ಪೂರೈಸಿದೆ.

  ಸದ್ಯ 5 ಓವರ್‌ ಮುಕ್ತಾಯವಾಗಿದ್ದು ಡೆಲ್ಲಿ ವಿಕೆಟ್‌ ನಷ್ಟವಿಲ್ಲದೆ 51 ರನ್ ಗಳಿಸಿದೆ. ಧವನ್‌ (26) ಮತ್ತು ಶಾ (25) ಕ್ರೀಸ್‌ನಲ್ಲಿದ್ದಾರೆ.

 • 07:45 pm

  ಇನಿಂಗ್ಸ್ ಆರಂಭಿಸಿದ ಕೆಕೆಆರ್‌

  ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಇನಿಂಗ್ಸ್‌ ಆರಂಭಿಸಿದ್ದು ನಾಲ್ಕು ಓವರ್‌ಗಳ ಅಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 29 ರನ್‌ ಗಳಿಸಿದೆ. ಪೃಥ್ವು ಶಾ (21) ಮತ್ತು ಶಿಖರ್‌ ಧವನ್‌ (8) ಕ್ರೀಸ್‌ನಲ್ಲಿದ್ದಾರೆ.

 • 07:43 pm

  ಹನ್ನೊಂದರ ಬಳಗ