ಸೋಮವಾರ, ಏಪ್ರಿಲ್ 26, 2021
32 °C

ಐಪಿಎಲ್-2021: 6 ವಿಕೆಟ್‌ ಅಂತರದ ಜಯ; ಪಾಯಿಂಟ್ಸ್‌ ಪಟ್ಟಿಯಲ್ಲಿ ಮೇಲೇರಿದ ಡೆಲ್ಲಿ

Published:
Updated:
ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ನೀಡಿದ 138 ರನ್‌ಗಳ ಸಾಧಾರಣ ಗುರಿಯನ್ನು ಡೆಲ್ಲಿ ಕ್ಯಾಪಿಟಲ್ಸ್‌ 4 ವಿಕೆಟ್‌ಗಳನ್ನು ಕಳೆದುಕೊಂಡು ಇನ್ನೂ 5 ಎಸೆತಗಳು ಬಾಕಿ ಇರುವಂತೆಯೇ ತಲುಪಿತು. ಆ ಮೂಲಕ ಕಳೆದ ಆವೃತ್ತಿಯ ಫೈನಲ್‌ ಪಂದ್ಯದಲ್ಲಿ ಅನುಭವಿಸಿದ್ದ ಸೋಲಿಗೆ ಮುಯ್ಯಿ ತೀರಿಸಿಕೊಂಡಿತು.
  • 11:57 pm
  • 11:26 pm

    ಪಾಯಿಂಟ್ಸ್‌ ಪಟ್ಟಿಯಲ್ಲಿ ಮೇಲೇರಿದ ಡೆಲ್ಲಿ

    ಡೆಲ್ಲಿ ತಂಡ ಗೆಲ್ಲು ಕೊನೆಯ ಓವರ್‌ನಲ್ಲಿ 5 ರನ್‌ ಬೇಕಿತ್ತು. ಸ್ಟ್ರೈಕ್‌ನಲ್ಲಿದ್ದ ಶಿಮ್ರೋನ್‌ ಹೆಟ್ಮೆಯರ್‌, ಕೀರನ್‌ ಪೊಲಾರ್ಡ್‌ ಹಾಕಿದ ಮೊದಲ ಎಸೆತವನ್ನು ಬೌಂಡರಿಗಟ್ಟಿದರು. ಆದರೆ, ಈ ಎಸೆತ ನೋಬಾಲ್‌ ಆಗಿದ್ದರಿಂದ ಡೆಲ್ಲಿ ಒಂದು ಎಕ್ಸ್ಟ್ರಾ ರನ್‌ ಗಳಿಸಿ ಜಯವನ್ನು ಖಚಿತಪಡಿಸಿಕೊಂಡಿತು.

    ಇದರೊಂದಿಗೆ ಆಡಿರುವ ನಾಲ್ಕರಲ್ಲಿ ಮೂರನೇ ಗೆಲುವು ಸಾಧಿಸಿದ ಡೆಲ್ಲಿ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು. ಈ ಪಂದ್ಯಕ್ಕೂ ಮುನ್ನ ಡೆಲ್ಲಿ ಮೂರನೇ ಸ್ಥಾನದಲ್ಲಿತ್ತು. ಇಷ್ಟೇ ಪಂದ್ಯ ಆಡಿರುವ ಮುಂಬೈ ಎರಡನೇ ಸೋಲು ಕಂಡು ನಾಲ್ಕನೇ ಸ್ಥಾನದಲ್ಲೇ ಉಳಿಯಿತು. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮೊದಲ ಸ್ಥಾನದಲ್ಲಿದೆ.

  • 11:20 pm

    19ನೇ ಓವರ್‌ನಲ್ಲಿ ಎರಡು ನೋಬಾಲ್‌ ಹಾಕಿದ ಬೂಮ್ರಾ

    12 ಎಸೆತಗಳಲ್ಲಿ 15 ರನ್‌ ಬೇಕಿದ್ದಾಗ 19ನೇ ಓವರ್‌ ಬೌಲಿಂಗ್‌ ಮಾಡಿದ ಬೂಮ್ರಾ 2 ನೋಬಾಲ್‌ಗಳನ್ನು ಹಾಕಿದರು. ಫ್ರೀ ಹಿಟ್‌ ಎಸೆತಗಳಲ್ಲಿ ಸಿಕ್ಸರ್‌ ಅಥವಾ ಬೌಂಡರಿ ಬಾರಿಸಲು ಸಾಧ್ಯವಾಗಿಲ್ಲವಾದರೂ, ಒಂದೊಂದು ರನ್‌ ಗಳಿಸಿಕೊಂಡರು. ಈ ಓವರ್‌ನಲ್ಲಿ ಹತ್ತು ರನ್‌ ಬಂದಿದ್ದು, ಕೊನೆಯ ಓವರ್‌ನಲ್ಲಿ ಗೆಲ್ಲಲು ಕೇವಲ 5 ರನ್‌ ಬೇಕಿದೆ.

    ಲಲಿತ್‌ (22) ಮತ್ತು ಹೆಟ್ಮೆಯರ್ (10)‌ ಕ್ರೀಸ್‌ನಲ್ಲಿದ್ದಾರೆ.

  • 11:16 pm

    ನಾಯಕ ರಿಷಭ್‌ ಔಟ್

    ನಾಯಕ ರಿಷಭ್‌ ಪಂತ್‌ ಕೇವಲ 7 ರನ್‌ ಗಳಿಸಿ ಔಟಾದರು. ತಂಡದ ಮೊತ್ತ 17 ಓವರ್‌ಗಳಲ್ಲಿ 4 ವಿಕೆಟ್‌ಗೆ 116 ರನ್‌ ಆಗಿದೆ. ಗೆಲುವಿಗೆ 18 ಎಸೆತಗಳಲ್ಲಿ ಇನ್ನೂ 22 ರನ್‌ ಬೇಕಿದ್ದು, ಪಂದ್ಯ ಕುತೂಹಲ ಕೆರಳಿಸಿದೆ.

  • 10:55 pm

    ಧವನ್‌ ವಿಕೆಟ್‌ ಪತನ

    ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಶಿಖರ್‌ ಧವನ್‌ (45) ಅರ್ಧಶತಕದ ಹೊಸ್ತಿಲಲ್ಲಿ ವಿಕೆಟ್‌ ಒಪ್ಪಿಸಿದರು. ಸದ್ಯ 15 ಓವರ್‌ಗಳ ಆಟ ಮುಕ್ತಾಯವಾಗಿದ್ದು ಡೆಲ್ಲಿ ತಂಡದ ಮೊತ್ತ 3 ವಿಕೆಟ್‌ಗೆ 101ರನ್‌ ಆಗಿದೆ.

    ನಾಯಕ ರಿಷಭ್‌ ಪಂತ್, ಲಲಿತ್‌ ಯಾದವ್‌ಗೆ (10) ‌ಜೊತೆಯಾಗಿದ್ದಾರೆ.

    ಗೆಲ್ಲಲು ಇನ್ನು 30 ಎಸೆತಗಳಲ್ಲಿ 37 ರನ್‌ ಬೇಕಿದೆ.

  • 10:24 pm

    ಪೆವಿಲಿಯನ್‌ ಸೇರಿಕೊಂಡ ಸ್ಮಿತ್

    29‌ ಎಸೆತಗಳಲ್ಲಿ 33 ರನ್‌ ಗಳಿಸಿ ಆಡುತ್ತಿದ್ದ ಸ್ಟೀವ್‌ ಸ್ಮಿತ್‌ 10ನೇ ಓವರ್‌ನಲ್ಲಿ ಕೀರನ್‌ ಪೊಲಾರ್ಡ್‌ಗೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಸೇರಿಕೊಂಡರು.

    ಸದ್ಯ ಲಲಿತ್‌ ಯಾದವ್‌ ಕ್ರೀಸ್‌ಗೆ ಬಂದಿದ್ದು, ತಂಡದ ಮೊತ್ತ 10 ಓವರ್‌ಗಳಲ್ಲಿ 68 ರನ್‌ ಆಗಿದೆ. ಇನ್ನೊಂದು ತುದಿಯಲ್ಲಿ ಧವನ್‌ (21) ಇದ್ದಾರೆ.

  • 10:09 pm

    ಅರ್ಧಶತಕ ಪೂರೈಸಿದ ಡೆಲ್ಲಿ

    ಕೇವಲ 11 ರನ್‌ ಆಗುವಷ್ಟರಲ್ಲಿಯೇ ಮೊದಲ ವಿಕೆಟ್‌ ಕಳೆದುಕೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್‌ಗೆ ಧವನ್‌ (19) ಮತ್ತು ಸ್ಮಿತ್ (22)‌ ಚೇತರಿಕೆ ನೀಡಿದ್ದಾರೆ.

    ಈ ಜೋಡಿ ಎರಡನೇ ವಿಕೆಟ್‌ಗೆ 41 ರನ್‌ ಸೇರಿಸಿದೆ. ಇದರೊಂದಿಗೆ ಡೆಲ್ಲಿ ಪಡೆ 8 ಓವರ್‌ಗಳ ಮುಕ್ತಾಯಕ್ಕೆ 52 ರನ್‌ ಕಲೆಹಾಕಿದೆ.

  • 09:39 pm

    ನಿರಾಸೆ ಮೂಡಿಸಿದ ಪೃಥ್ವಿ

    ಸಾಧಾರಣ ಗುರಿ ಬೆನ್ನತ್ತಿರುವ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸ್ಪಿನ್ನರ್‌ ಜಯಂತ್‌ ಯಾದವ್‌ ಆರಂಭಿಕ ಆಘಾತ ನೀಡಿದ್ದಾರೆ. ಇನಿಂಗ್ಸ್‌ನ ಎರಡನೇ ಓವರ್‌ನಲ್ಲೇ ಪೃಥ್ವಿ ಶಾ (7) ವಿಕೆಟ್‌ ಪಡೆದು ತಮ್ಮ ತಂಡಕ್ಕೆ ಮುನ್ನಡೆ ತಂದುಕೊಟ್ಟಿದ್ದಾರೆ.

    ಸದ್ಯ ಸ್ಟೀವ್‌ ಸ್ಮಿತ್‌ ಕ್ರೀಸ್‌ಗೆ ಬಂದಿದ್ದು, ಇನ್ನೊಂದು ತುದಿಯಲ್ಲಿ ಅನುಭವಿ ಶಿಖರ್‌ ಧವನ್‌ (8)ಆಡುತ್ತಿದ್ದಾರೆ. ತಂಡದ ಮೊತ್ತ ಎರಡು ಓವರ್‌ಗಳಲ್ಲಿ 1 ವಿಕೆಟ್‌ಗೆ 16 ರನ್‌ ಆಗಿದೆ.

  • 09:15 pm

    ಡೆಲ್ಲಿ ಗೆಲುವಿಗೆ 138 ರನ್‌ ಗುರಿ

    ನಾಯಕ ರೋಹಿತ್‌ ಶರ್ಮಾ (30 ಎಸೆತಗಳಲ್ಲಿ 44ರನ್‌) ಬಿರುಸಿನ ಬ್ಯಾಟಿಂಗ್‌ ಹೊರತಾಗಿಯೂ ಮುಂಬೈ ತಂಡ ನಿಗದಿತ 20  ಓವರ್‌ಗಳಲ್ಲಿ 9 ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 137 ರನ್‌ ಗಳಿಸಲಷ್ಟೇ ಶಕ್ತವಾಯಿತು.

    ಶರ್ಮಾ ಹೊರತುಪಡಿಸಿ ಸೂರ್ಯಕುಮಾರ್‌ ಯಾದವ್‌ (24), ಇಶಾನ್‌ ಕಿಶನ್‌ (26), ಜಯಂತ್‌ ಯಾದವ್‌ (23) ಮಾತ್ರವೇ ಎರಡಂಕಿ ಮೊತ್ತ ಗಳಿಸಿದರು.

    ಡೆಲ್ಲಿ ಪರ ಅಮಿತ್‌ ಮಿಶ್ರಾ ನಾಲ್ಕು ಓವರ್‌ಗಳಲ್ಲಿ 24 ರನ್‌ ನೀಡಿ 4 ವಿಕೆಟ್‌ ಕಬಳಿಸಿದರೆ, ಆವೇಶ್‌ ಖಾನ್‌ ಎರಡು ವಿಕೆಟ್‌ ಉರುಳಿಸಿದರು. ಉಳಿದಂತೆ ಮಾರ್ಕಸ್‌ ಸ್ಟೋಯಿನಸ್‌, ಕಗಿಸೊ ರಬಾಡ ಮತ್ತು ಲಲಿತ್‌ ಯಾದವ್‌ ತಲಾ ಒಂದೊಂದು ವಿಕೆಟ್‌ ಹಂಚಿಕೊಂಡರು.

  • 09:09 pm

    ಕಿಶನ್, ಜಯಂತ್‌ ಔಟ್:‌ ಮುಂಬೈ 130ಕ್ಕೆ 8 ವಿಕೆಟ್

    ಮುಂಬೈ ತಂಡಕ್ಕೆ ಅಲ್ಪ ಚೇತರಿಕೆ ನೀಡಿದ್ದ ಇಶಾನ್‌ ಕಿಶನ್ (26)‌ ಮತ್ತು ಜಯಂತ್‌ ಯಾದವ್‌ (23) ಪೆವಿಲಿಯನ್‌ ಸೇರಿಕೊಂಡಿದ್ದಾರೆ.

    ಸದ್ಯ 19 ಓವರ್‌ಗಳ ಆಟ ಮುಕ್ತಾಯವಾಗಿದ್ದು, ತಂಡದ ಮೊತ್ತ 8 ವಿಕೆಟ್‌ಗೆ 130 ರನ್‌ ಗಳಿಸಿದೆ.

  • 08:59 pm

    ಬಲ ತುಂಬಿದ ಕಿಶನ್-ಜಯಂತ್

    ಕೇವಲ 84 ರನ್‌ ಆಗುವಷ್ಟರಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಆತಂಕದಲ್ಲಿದ್ದ ಮುಂಬೈ ಇನಿಂಗ್ಸ್‌ಗೆ ಇಶಾನ್‌ ಕಿಶನ್‌ ಮತ್ತು ಜಯಂತ್‌ ಯಾದವ್‌ ಬಲ ತುಂಬಿದರು. ಈ ಇಬ್ಬರು 7ನೇ ವಿಕೆಟ್‌ ಜೊತೆಯಾಟದಲ್ಲಿ ಅಜೇಯ 36 ರನ್‌ ಕೂಡಿಸಿ ಆಡುತ್ತಿದ್ದಾರೆ.

    27 ಎಸೆತಗಳನ್ನು ಎದುರಿಸಿರುವ ಇಶಾನ್‌ 26 ರನ್‌ ಗಳಿಸಿದ್ದು, ಅವರಿಗೆ ಉತ್ತಮ ಬೆಂಬಲ ನೀಡಿದ ಯಾದವ್‌ 15 ಎಸೆತಗಳಲ್ಲಿ 16  ರನ್‌ ಕಲೆಹಾಕಿದ್ದಾರೆ.

    ತಂಡದ ಮೊತ್ತ 6 ವಿಕೆಟ್‌ಗೆ 120 ರನ್‌ ಆಗಿದೆ.

  • 08:38 pm

    ದಿಢೀರ್‌ ಕುಸಿತ ಕಂಡ ಮುಂಬೈ

    ಸ್ಫೋಟಕ ಬ್ಯಾಟ್ಸ್‌ಮನ್‌ಗಳಾದ ಕೃಣಾಲ್‌ ಪಾಂಡ್ಯ ಮತ್ತು ಕೀರನ್‌ ಪೊಲಾರ್ಡ್‌ ಡೆಲ್ಲಿ ಸ್ಪಿನ್ನರ್‌ಗಳೆದುರು ನಿರುತ್ತರರಾದರು. ಈ ಇಬ್ಬರೂ ಕ್ರಮವಾಗಿ ಒಂದು ಮತ್ತು ಎರಡು ರನ್‌ ಗಳಿಸಿ ಪೆವಿಲಿಯನ್‌ ಸೇರಿಕೊಂಡರು.

    ಸದ್ಯ 13 ಓವರ್‌ ಮುಕ್ತಾಯವಾಗಿದ್ದು ಮುಂಬೈ ತಂಡ 6 ವಿಕೆಟ್‌ಗಳನ್ನು ಕಳೆದುಕೊಂಡು 89ರನ್‌ ಗಳಿಸಿದೆ.

  • 08:17 pm

    ಸೂರ್ಯನ ಹಿಂಬಾಲಿಸಿದ ರೋಹಿತ್, ಹಾರ್ದಿಕ್; ಆಘಾತ ನೀಡಿದ ಅಮಿತ್ ಮಿಶ್ರಾ

    ಬಿರುಸಾಗಿ ಬ್ಯಾಟಿಂಗ್‌ ನಡೆಸುತ್ತಿದ್ದ ಮುಂಬೈ ನಾಯಕ ರೋಹಿತ್‌ ಶರ್ಮಾ, ಅಮಿತ್‌ ಮಿಶ್ರಾ ಹಾಕಿದ 8ನೇ ಓವರ್‌ನಲ್ಲಿ ಔಟಾದರು.

    ಕೇವಲ‌ 30 ಎಸೆತಗಳನ್ನು ಎದುರಿಸಿದ ಶರ್ಮಾ ತಲಾ ಮೂರು ಬೌಂಡರಿ ಮತ್ತು ಸಿಕ್ಸರ್‌ ಸಹಿತ 44 ರನ್‌ ಗಳಿಸಿದ್ದರು. ಬಳಿಕ ಬಂದ ಹಾರ್ದಿಕ್‌ ಪಾಂಡ್ಯ ಮೊದಲ ಎಸೆತದಲ್ಲೇ ಸ್ಟೀವ್‌ ಸ್ಮಿತ್‌ಗೆ ಕ್ಯಾಚ್‌ ನೀಡಿ ಸೊನ್ನೆ ಸುತ್ತಿದರು.

    ಮುಂಬೈ 7 ಓವರ್‌ ಮುಕ್ತಾಯವಾದಾಗ 2 ವಿಕೆಟ್‌ಗೆ 67 ರನ್‌ ಗಳಿಸಿತ್ತು.

  • 08:10 pm

    ಪೆವಿಲಿಯನ್‌ ಸೇರಿಕೊಂಡ ಸೂರ್ಯ

    ನಾಯಕ ರೋಹಿತ್‌ ಜೊತೆಗೂಡಿ ಎರಡನೇ ವಿಕೆಟ್‌ಗೆ 58 ರನ್‌ಗಳ ಕೂಡಿಸಿದ್ದ ಸೂರ್ಯಕುಮಾರ್‌ ಯಾದವ್‌ (24), ಆವೇಶ್‌ ಖಾನ್‌ ಹಾಕಿದ ಏಳನೇ ಓವರ್‌ನ ಕೊನೆಯ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದ್ದಾರೆ.

    ಇದೀಗ ಇಶಾನ್‌ ಕಿಶನ್‌ ಕ್ರೀಸ್‌ಗೆ ಬಂದಿದ್ದು, ತಂಡದ ಮೊತ್ತ 2 ವಿಕೆಟ್‌ಗೆ 67 ರನ್‌ ಆಗಿದೆ.

  • 07:57 pm

    ಪವರ್‌ ಪ್ಲೇ ಮುಕ್ತಾಯ: ಮುಂಬೈ 1 ವಿಕೆಟ್‌ಗೆ 55 ರನ್

    ಆರು ಓವರ್‌ಗಳ ಆಟ ಮುಕ್ತಾಯವಾಗಿದ್ದು, ಮುಂಬೈ ಕೇವಲ 1 ವಿಕೆಟ್‌ ಕಳೆದುಕೊಂಡು 55 ರನ್‌ ಗಳಿಸಿದೆ. ನಾಯಕ ರೋಹಿತ್‌ (29) ಮತ್ತು ಸೂರ್ಯಕುಮಾರ್‌ (23) ಕ್ರೀಸ್‌ನಲ್ಲಿದ್ದಾರೆ.

  • 07:43 pm

    ಮುಂಬೈಗೆ ಆರಂಭಿಕ ಆಘಾತ

    ನಾಯಕ ರೋಹಿತ್‌ ಶರ್ಮಾ ಜೊತೆಗೆ ಇನಿಂಗ್ಸ್‌ ಆರಂಭಿಸಿ ಕ್ವಿಂಟನ್‌ ಡಿ ಕಾಕ್‌ ಕೇವಲ 1 ರನ್‌ ಗಳಿಸಿ ಔಟಾಗಿದ್ದಾರೆ.

    ಮಾರ್ಕಸ್‌ ಸ್ಟೋಯಿನಸ್‌ ಹಾಕಿದ ಮೂರನೇ ಓವರ್‌ನ ಮೊದಲ ಎಸೆತದಲ್ಲೇ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ಗೆ ಕ್ಯಾಚ್‌ ನೀಡಿ ಪೆವಿಲಿಯನ್‌ ಸೇರಿಕೊಂಡಿದ್ದಾರೆ.

    ಸದ್ಯ ಸೂರ್ಯ ಕುಮಾರ್‌ ಯಾದವ್‌ ಕ್ರೀಸ್‌ಗೆ ಬಂದಿದ್ದು, ತಂಡದ ಮೊತ್ತ ಮೂರು ಓವರ್‌ ಮುಕ್ತಾಯಕ್ಕೆ 1 ವಿಕೆಟ್‌ಗೆ 16 ರನ್‌ ಆಗಿದೆ. ಇನ್ನೊಂದು ತುದಿಯಲ್ಲಿ ನಾಯಕ ರೋಹಿತ್‌ ಶರ್ಮಾ (11) ಆಡುತ್ತಿದ್ದಾರೆ.

  • 07:35 pm

    ಎರಡೂ ತಂಡಗಳಲ್ಲಿ ಬದಲಾವಣೆ

    ಹಾಲಿ ಚಾಂಪಿಯನ್‌ ಮುಂಬೈ ಒಂದು ಮತ್ತು ಕಳೆದ ಆವೃತ್ತಿಯ ಫೈನಲ್‌ನಲ್ಲಿ ಸೋತಿದ್ದ ಡೆಲ್ಲಿ ಪಡೆ ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿದಿವೆ.

    ಮುಂಬೈ ಪರ ಆಡಂ ಮಿಲ್ನೆ ಬದಲು ಜಯಂತ್‌ ಯಾದವ್‌ ಸ್ಥಾನ ಪಡೆದಿದ್ದಾರೆ. ಡೆಲ್ಲಿ ಪಡೆಯಲ್ಲಿ ಲುಕ್ಮನ್‌ ಮೆರಿವಾಲ ಮತ್ತು ಕ್ರಿಸ್‌ ವೋಕ್ಸ್‌ ಬದಲು ಶಿಮ್ರೋನ್‌ ಹೆಟ್ಮೆಯರ್‌ ಹಾಗೂ ಅಮಿತ್‌ ಮಿಶ್ರಾ ಆಡಲಿದ್ದಾರೆ.

  • 07:00 pm

    ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಮುಂಬೈ