ಗುರುವಾರ , ಅಕ್ಟೋಬರ್ 22, 2020
21 °C

IPL-2020 | KXIP vs CSK: ಪಂದ್ಯ ಗೆದ್ದು ಪಾಯಿಂಟ್ಸ್ ಪಟ್ಟಿಯಲ್ಲಿ ಮೇಲೇರಿದ ಚೆನ್ನೈ ಕಿಂಗ್ಸ್

Published:
Updated:
ಕೆಎಲ್‌ ರಾಹುಲ್‌ ಮುನ್ನಡೆಸುತ್ತಿರುವ ಕಿಂಗ್ಸ್‌ ಇಲವೆನ್‌ ಪಂಜಾಬ್ ತಂಡದ ವಿರುದ್ಧ ಎಂಎಸ್‌ ಧೋನಿ ನಾಯಕತ್ವದ‌ ಚೆನ್ನೈ ಸೂಪರ್‌ ಕಿಂಗ್ಸ್‌ 10 ವಿಕೆಟ್‌ ಅಂತರದ ಗೆಲುವು ಸಾಧಿಸಿದೆ. ಜೊತೆಯಲ್ಲಿ ಪಾಯಿಂಟ್ಸ್‌ ಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಏರಿದೆ.
 • 11:05 pm

  ಹತ್ತು ವಿಕೆಟ್‌ ಜಯ

  ಕಿಂಗ್ಸ್‌ ಇಲವೆನ್‌ ಪಂಜಾಬ್ ನೀಡಿದ 179 ರನ್‌ ಗುರಿ ಎದುರು ನಿರಾಯಾಸವಾಗಿ ಬ್ಯಾಟ್‌ ಬೀಸಿದ ಶೇನ್‌ ವಾಟ್ಸನ್‌ ಹಾಗೂ ಫಾಫ್‌ ಡು ಪ್ಲೆಸಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ 10 ವಿಕೆಟ್‌ಗಳ ಗೆಲುವು ತಂದುಕೊಟ್ಟರು.

  ಲೀಲಾಜಾಲವಾಗಿ ಬ್ಯಾಟ್‌ ಬೀಸಿದ ವಾಟ್ಸನ್‌ ಮತ್ತು ಪ್ಲೆಸಿಗೆ ಪಂಜಾಬ್‌ ನೀಡಿದ ಗುರಿ ಸವಾಲೇ ಎನಿಸಲಿಲ್ಲ.

  53 ಎಸೆತಗಳನ್ನು ಎದುರಿಸಿದ ವಾಟ್ಸನ್‌ 3 ಸಿಕ್ಸರ್ ಮತ್ತು 11 ಬೌಂಡರಿ ಸಹಿತ 83 ರನ್ ಗಳಿಸಿದರೆ, ಇನ್ನೊಂದು ತುದಿಯಲ್ಲಿ ಪ್ಲೆಸಿ ಇಷ್ಟೇ ಎಸೆತಗಳಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್‌ ಸಹಿತ 87 ರನ್‌ ಚಚ್ಚಿದರು. ಹೀಗಾಗಿ ಚೆನ್ನೈ ಇನ್ನೂ 14 ಎಸೆತಗಳು ಬಾಕಿ ಇರುವಂತೆಯೇ 181 ರನ್‌ ಗಳಿಸಿ ಗೆಲುವಿನ ನಗೆ ಬೀರಿತು.

  ಈ ಜಯದೊಂದಿಗೆ ಚೆನ್ನೈ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದೆ. ಪಂದ್ಯಕ್ಕೂ ಮೊದಲು ಧೋನಿ ಪಡೆ ಕೊನೆಯ ಸ್ಥಾನದಲ್ಲಿತ್ತು. ಪಂಜಾಬ್‌ 7ನೇ ಸ್ಥಾನದಿಂದ 8ಕ್ಕೆ ಕುಸಿದಿದೆ.

 • 11:01 pm

  17ನೇ ಓವರ್ ಮುಕ್ತಾಯ: ವಿಕೆಟ್‌ನಷ್ಟವಿಲ್ಲದೆ 168 ರನ್‌

  ಚೆನ್ನೈ ತಂಡಕ್ಕೆ ಗೆಲ್ಲಲು 18 ಎಸೆತಗಳಲ್ಲಿ 11 ರನ್‌ ಬೇಕಾಗಿದೆ. ಪ್ಲೆಸಿ (75) ಮತ್ತು ವಾಟ್ಸನ್‌ (82) ಅಬ್ಬರದ ಬ್ಯಾಟಿಂಗ್‌ ಮುಂದುವರಿಸಿದ್ದಾರೆ.

  ಸದ್ಯ ಚೆನ್ನೈ 17 ಓವರ್‌ ಮುಕ್ತಾಯಕ್ಕೆ 168 ರನ್‌ ಗಳಿಸಿದೆ.

 • 10:51 pm

  150 ರನ್‌ ಗಳಿಸಿದ ಚೆನ್ನೈ

  15ನೇ ಓವರ್‌ ಮುಕ್ತಾಯವಾಗಿದ್ದು, ಚೆನ್ನೈ 150 ರನ್‌ ಗಳಿಸಿದೆ. ಪ್ಲೆಸಿ (63) ಮತ್ತು ವಾಟ್ಸನ್‌ (76) ಬ್ಯಾಟಿಂಗ್‌ ಮುಂದುವರಿಸಿದ್ದಾರೆ.

 • 10:40 pm

  14ನೇ ಓವರ್ ಮುಕ್ತಾಯ: ವಿಕೆಟ್ ನಷ್ಟವಿಲ್ಲದೆ 135 ರನ್

  ಫಾಫ್‌ ಹಾಗೂ ವಾಟ್ಸನ್‌ ಬಿರುಸಿನ ಬ್ಯಾಟಿಂಗ್ ಮುಂದುವರಿಸಿದ್ದು ಚೆನ್ನೈ 14 ಓವರ್‌ ಮುಕ್ತಾಯಕ್ಕೆ ವಿಕೆಟ್‌ ನಷ್ಟವಿಲ್ಲದೆ 135 ರನ್‌ ಗಳಿಸಿದೆ.

 • 10:25 pm

  ವಾಟ್ಸನ್–ಫಾಫ್ ಅರ್ಧಶತಕ

  ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ ಚೆನ್ನೈ‌ಗೆ ಮೊದಲ ಸಲ ಶತಕದ ಜೊತೆಯಾಟ ನೀಡಿದ ಶೇನ್‌ ವಾಟ್ಸನ್ ಮತ್ತು ಫಾಫ್‌ ಡು ಪ್ಲೆಸಿ ಇಬ್ಬರೂ ಅರ್ಧಶತಕ ಪೂರೈಸಿದ್ದಾರೆ. ವಾಟ್ಸನ್‌ 33 ಎಸೆತಗಳಲ್ಲಿ 55 ರನ್‌ ಗಳಿಸಿ ಆಡುತ್ತಿದ್ದು, ಫಾಫ್‌ 33 ಎಸೆತಗಳಲ್ಲಿ 50 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ವಾಟ್ಸನ್‌ಗೆ ಇದು 20ನೇ ಮತ್ತು ಫಾಫ್‌ಗೆ 15ನೇ ಅರ್ಧಶತಕವಾಗಿದೆ. ತಂಡದ ಮೊತ್ತ 11 ಓವರ್‌ ಅಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 112 ಆಗಿದೆ.
 • 10:19 pm

  ಶತಕ ಪೂರೈಸಿದ ಚೆನ್ನೈ

  ಸವಾಲಿನ ಗುರಿ ಬೆನ್ನತ್ತಿರು ಚೆನ್ನೈ ತಂಡ 10ನೇ ಓವರ್‌ನಲ್ಲಿ ವಿಕೆಟ್‌ ನಷ್ಟವಿಲ್ಲದೆ ನೂರರ ಗಡಿ ದಾಟಿದೆ.

  ಫಾಫ್‌ (49) ಹಾಗೂ ವಾಟ್ಸನ್ (45)‌ ಬ್ಯಾಟಿಂಗ್ ಮಾಡುತ್ತಿದ್ದಾರೆ.

 • 10:14 pm

  9ನೇ ಓವರ್‌ ಮುಕ್ತಾಯ; ವಿಕೆಟ್‌ ನಷ್ಟವಿಲ್ಲದೆ 95 ರನ್‌

  9 ಓವರ್‌ಗಳ ಆಟ ಮುಕ್ತಾಯವಾಗಿದ್ದು ಚೆನ್ನೈ ತಂಡ ವಿಕೆಟ್‌ ನಷ್ಟವಿಲ್ಲದೆ 95 ರನ್‌ ಗಳಿಸಿದೆ.

  ಪ್ಲೆಸಿ (45) ಮತ್ತು ವಾಟ್ಸನ್‌ (43) ಕ್ರೀಸ್‌ನಲ್ಲಿದ್ದಾರೆ.

 • 10:07 pm

  8 ಓವರ್ ಮುಕ್ತಾಯ: ವಿಕೆಟ್ ನಷ್ಟವಿಲ್ಲದೆ 81 ರನ್

  ಚೆನ್ನೈ ತಂಡ 8 ಓವರ್‌ಗಳ ಮುಕ್ತಾಯಕ್ಕೆ ವಿಕೆಟ್‌ ನಷ್ಟವಿಲ್ಲದೆ 81 ರನ್ ಗಳಿಸಿದೆ.

  44 ರನ್‌ ಗಳಿಸಿರುವ ಫಾಫ್ ಮತ್ತು 32 ಬಾರಿಸಿರುವ ವಾಟ್ಸನ್‌ ಕ್ರೀಸ್‌ನಲ್ಲಿದ್ದಾರೆ.

  ಗೆಲ್ಲಲು ಇನ್ನು 72 ಎಸೆತಗಳಲ್ಲಿ 98 ರನ್‌ ಬೇಕಾಗಿದೆ.

 • 09:59 pm

  ಪವರ್‌ ಪ್ಲೇ ಮುಕ್ತಾಯ: ವಿಕೆಟ್‌ ನಷ್ಟವಿಲ್ಲದೆ 60 ರನ್‌

  ಪವರ್‌ ಪ್ಲೇ (ಆರ್ ಓವರ್‌) ಮುಕ್ತಾಯವಾಗಿದ್ದು ಚೆನ್ನೈ ಸೂಪರ್‌ ಕಿಂಗ್ಸ್ ತಂಡ ವಿಕೆಟ್‌ ನಷ್ಟವಿಲ್ಲದೆ 60 ರನ್ ಗಳಿಸಿದೆ. ಪ್ಲೆಸಿ ಮತ್ತು ವಾಟ್ಸನ್‌ ಕ್ರೀಸ್‌ನಲ್ಲಿದ್ದಾರೆ.

  ವಿಕೆಟ್‌ ನಷ್ಟವಿಲ್ಲದೆ 46 ರನ್‌ ಗಳಿಸಿತ್ತು.

 • 09:48 pm

  4ನೇ ಓವರ್‌ ಮುಕ್ತಾಯ: ವಿಕೆಟ್‌ನಷ್ಟವಿಲ್ಲದೆ 32 ರನ್

  ಪಂಜಾಬ್‌ ನೀಡಿರುವ ಸವಾಲಿನ ಗುರಿ ಎದುರು ಚೆನ್ನೈ ತಂಡ ಬ್ಯಾಟಿಂಗ್ ಆರಂಭಿಸಿದೆ.

  4 ಓವರ್‌ಗಳ ಆಟ ಮುಕ್ತಾಯವಾಗಿದ್ದು ಚೆನ್ನೈ ಸೂಪರ್‌ ಕಿಂಗ್ಸ್‌ ವಿಕೆಟ್‌ ನಷ್ಟವಿಲ್ಲದೆ 32 ರನ್ ಗಳಿಸಿದೆ.

  ಶೇನ್‌ ವಾಟ್ಸನ್‌ (20) ಮತ್ತು ಫಾಫ್‌ ಡು ಪ್ಲೆಸಿ (11) ಕ್ರೀಸ್‌ನಲ್ಲಿದ್ದಾರೆ.

 • 09:13 pm

  ಚೆನ್ನೈಗೆ 179 ರನ್‌ ಗುರಿ

  ಚೆನ್ನೈ ಸೂಪರ್‌ಕಿಂಗ್ಸ್‌ ವಿರುದ್ಧ ಟಾಸ್‌ ಗೆದ್ದು ಬ್ಯಾಟಿಂಗ್‌ ಮಾಡಿದ ಕಿಂಗ್ಸ್‌ ಇಲವೆನ್‌ ಪಂಜಾಬ್‌ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 178 ರನ್‌ ಕಲೆಹಾಕಿದೆ.

 • 09:07 pm

  19 ಓವರ್ ಮುಕ್ತಾಯ: 4 ವಿಕೆಟ್‌ಗೆ 164 ರನ್‌

  19 ಓವರ್‌ಗಳ ಆಟ ಮುಕ್ತಾಯವಾಗಿದ್ದು ಪಂಜಾಬ್‌ ತಂಡ 4 ವಿಕೆಟ್‌ ಕಳೆದುಕೊಂಡು 164 ರನ್‌ ಗಳಿಸಿದೆ.

  ಕೊನೆ ಓವರ್‌ ಆಟ ಬಾಕಿ ಇದ್ದು, ಗ್ಲೇನ್ ಮ್ಯಾಕ್ಸ್‌ವೆಲ್‌ ಮತ್ತು ಸರ್ಫರಾಜ್ ಖಾನ್‌ ಕ್ರೀಸ್‌ನಲ್ಲಿದ್ದಾರೆ.

 • 09:01 pm

  18ನೇ ಓವರ್‌ನಲ್ಲಿ ಕೇವಲ 3 ರನ್‌

  ಪೂರನ್‌ ಮತ್ತು ರಾಹುಲ್‌ ವಿಕೆಟ್‌ ಪಡೆದ ಶಾರ್ದೂಲ್ ಠಾಕೂರ್‌ ಮಹತ್ವದ ಹಂತದಲ್ಲ ಕೇವಲ 3 ರನ್‌ ನೀಡಿ 18ನೇ ಓವರ್‌ ಮುಗಿಸಿದರು.

  ಇದರೊಂದಿಗೆ ಪಂಜಾಬ್‌ 18 ಓವರ್‌ ಮುಕ್ತಾಯಕ್ಕೆ 4 ವಿಕೆಟ್‌ ಕಳೆದುಕೊಂಡು 155 ರನ್‌ ಗಳಿಸಿದೆ.

 • 09:54 pm

  ಧೋನಿಗೆ ನೂರನೇ ಕ್ಯಾಚ್

  ಚೆನ್ನೈ ತಂಡದ ನಾಯಕ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಎಂಎಸ್ ಧೋನಿ ಐಪಿಎಲ್‌ನಲ್ಲಿ ವಿಕೆಟ್‌ಕೀಪರ್‌ ಆಗಿ 100ನೇ ಕ್ಯಾಚ್‌ ಪಡೆದುಕೊಂಡರು.

  ಪಂಜಾಬ್‌ ಇನಿಂಗ್ಸ್‌ನ 18ನೇ ಓವರ್‌ನಲ್ಲಿ ಕೆಎಲ್‌ ರಾಹುಲ್‌ ಅವರನ್ನು ಔಟ್‌ ಮಾಡುವ ಮೂಲಕ ಅವರು ಈ ಸಾಧನೆ ಮಾಡಿದರು.

 • 08:57 pm

   ಎರಡು ವಿಕೆಟ್‌ ಉರುಳಿಸಿದ ಶಾರ್ದೂಲ್

  18ನೇ ಓವರ್‌ನಲ್ಲಿ ಬೌಲಿಂಗ್‌ ಮಾಡಿದ ಶಾರ್ದೂಲ್‌ ಠಾಕೂರ್‌ ಮೊದಲ ಎರಡು ಎಸೆತಗಳಲ್ಲಿ ಕ್ರಮವಾಗಿ ನಿಕೋಲಸ್‌ ಪೂರನ್‌ ಮತ್ತು ನಾಯಕ ರಾಹುಲ್‌ಗೆ ಪೆವಿಲಿಯನ್‌ ದಾರಿತೋರಿದ್ದಾರೆ.

  ಈ ಜೋಡಿ 3ನೇ ವಿಕೆಟ್‌ ಜೊತೆಯಾಟದಲ್ಲಿ 58 ರನ್‌ ಕಲೆಹಾಕಿತ್ತು.

 • 08:53 pm

  17ನೇ ಓವರ್ ಮುಕ್ತಾಯ: 2 ವಿಕೆಟ್‌ಗೆ 152 ರನ್‌

  17ನೇ ಓವರ್ ಮುಕ್ತಾಯವಾಗಿದೆ. ಈ ಹಂತದಲ್ಲಿ ಪಂಜಾಬ್ 2 ವಿಕೆಟ್‌ ಕಳೆದುಕೊಂಡು 152 ರನ್‌ ಗಳಿಸಿದೆ.

  ಪೂರನ್‌ 33 ರನ್‌ ಹಾಗೂ ರಾಹುಲ್‌ 63 ರನ್ ಗಳಿಸಿ ಆಡುತ್ತಿದ್ದಾರೆ.

 • 08:50 pm

  16ನೇ ಓವರ್‌ ಮುಕ್ತಾಯ: 2 ವಿಕೆಟ್‌ಗೆ 141 ರನ್

  16 ಓವರ್‌ಗಳ ಆಟ ಮುಕ್ತಾಯವಾಗಿದ್ದು ಪಂಜಾಬ್‌ 2 ವಿಕೆಟ್‌ ಕಳೆದುಕೊಂಡು 141 ರನ್‌ ಗಳಿಸಿದೆ. ರಾಹುಲ್ (63) ಮತ್ತು ಪೂರನ್‌ (22) ಕ್ರೀಸ್‌ನಲ್ಲಿದ್ದಾರೆ.
 • 08:35 pm

  ಕಿಂಗ್ಸ್‌ ಪರ 1,500 ರನ್

  ಇಂದಿನ ಪಂದ್ಯದಲ್ಲಿ ಅರ್ಧಶತಕ ಗಳಿಸಿದ ಕಿಂಗ್ಸ್‌ ಇಲವೆನ್‌ ಪಂಜಾಬ್‌ ತಂಡದ ನಾಯಕ ಕೆಎಲ್‌ ರಾಹುಲ್‌, ಈ ಮೂಲಕ ಕಿಂಗ್ಸ್ ತಂಡದ ಪರ 1,500 ರನ್‌ ಕಲೆಹಾಕಿದ ಸಾಧನೆಯನ್ನೂ ಮಾಡಿದರು.

  ಸದ್ಯ 15 ಓವರ್‌ಗಳ ಆಟ ಮುಕ್ತಾಯವಾಗಿದ್ದು ಪಂಜಾಬ್‌ 2 ವಿಕೆಟ್‌ ಕಳೆದುಕೊಂಡು 130 ರನ್ ಗಳಿಸಿದೆ.

  ರಾಹುಲ್‌ 62 ರನ್‌ ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದು, ಇನ್ನೊಂದು ತುದಿಯಲ್ಲಿ ನಿಕೋಲಸ್‌ ಪೂರನ್‌ (12) ಕ್ರೀಸ್‌ನಲ್ಲಿದ್ದಾರೆ.

 • 08:33 pm

  ಶತಕ ಪೂರೈಸಿದ ಪಂಜಾಬ್‌

  ಕಿಂಗ್ಸ್ ಇಲವೆನ್ ಪಂಜಾಬ್‌ ತಂಡ 13ನೇ ಓವರ್‌ನಲ್ಲಿ ನೂರು ರನ್‌ ಗಳಿಸಿದೆ.

  ನಾಯಕ ರಾಹುಲ್‌ (44) ಮತ್ತು ನಿಕೋಲಸ್‌ ಪೂರನ್ (1)‌ ಕ್ರೀಸ್‌ನಲ್ಲಿದ್ದಾರೆ.

 • 08:31 pm

  ಮನ್‌ದೀಪ್ ವಿಕೆಟ್ ಪತನ

  ಬಿರುಸಿನ ಬ್ಯಾಟಿಂಗ್‌ ನಡೆಸುತ್ತಿದ್ದ ಮನ್‌ದೀಪ್‌ ಸಿಂಗ್‌ 27 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದಾರೆ.

  ಸದ್ಯ 12 ಓವರ್‌ಗಳ ಆಟ ಮುಕ್ತಾಯವಾಗಿದ್ದು ಪಂಜಾಬ್‌ 2 ವಿಕೆಟ್‌ ಕಳೆದುಕೊಂಡು 92 ರನ್‌ ಗಳಿಸಿದೆ.

 • 08:29 pm

  11ನೇ ಓವರ್‌ ಮುಕ್ತಾಯ: 1 ವಿಕೆಟ್‌ಗೆ 88 ರನ್‌

  ಕರುಣ್‌ ನಾಯರ್‌ ಬದಲು ಸ್ಥಾನ ಪಡೆದಿರುವ ಮನ್‌ದೀಪ್‌ ಸಿಂಗ್‌ ಬಿರುಸಿನ ಬ್ಯಾಟಿಂಗ್‌ ನಡೆಸುತ್ತಿದ್ದಾರೆ.

  ನಾಯಕ ರಾಹುಲ್‌ ಜೊತೆ ಸೇರಿ ಅವರು 2ನೇ ವಿಕೆಟ್‌ಗೆ 32 ರನ್‌ ಸೇರಿಸಿದ್ದಾರೆ. ಇದರಲ್ಲಿ ಮನ್‌ದೀಪ್‌ ಅವರದ್ದು 27 ರನ್‌ ಎಂಬುದು ವಿಶೇಷ.

 • 08:13 pm

  ಮಯಂಕ್ ಔಟ್

  26 ರನ್‌ ಗಳಿಸಿ ಆಡುತ್ತಿದ್ದ ಮಯಂಕ್‌ ಅಗರವಾಲ್‌ 9ನೇ ಓವರ್‌ನ ಮೊದಲ ಎಸೆತದಲ್ಲಿ ವಿಕೆಟ್ ಒಪ್ಪಿಸಿದ್ದಾರೆ.

  ಸದ್ಯ ತಂಡದ ಮೊತ್ತ 61 ರನ್‌ ಅಗಿದೆ.

 • 07:56 pm

  ಪವರ್‌ ಪ್ಲೇ ಮುಕ್ತಾಯ: ವಿಕೆಟ್‌ ನಷ್ಟವಿಲ್ಲದೆ 46 ರನ್‌

  ಆರು ಓವರ್‌ಗಳ ಆಟ ಮುಗಿದಿದ್ದು, ಪಂಜಾಬ್‌‌ ತಂಡ 46 ರನ್ ಗಳಿಸಿಕೊಂಡಿದೆ. ಪಂಜಾಬ್‌ ಪರ 24 ರನ್‌ ಗಳಿಸಿರುವ ಕೆಎಲ್‌ ರಾಹುಲ್‌ ಮತ್ತು 21 ರನ್‌ ಗಳಿಸಿರುವ ಮಯಂಕ್‌ ಅಗರವಾಲ್‌ ಕ್ರೀಸ್‌ನಲ್ಲಿದ್ದಾರೆ.
 • 07:52 pm

  5ನೇ ಓವರ್‌ ಮುಕ್ತಾಯ: ವಿಕೆಟ್‌ ನಷ್ಟವಿಲ್ಲದೆ 38 ರನ್

  5 ಓವರ್‌ಗಳ ಆಟ ಮುಕ್ತಾಯವಾಗಿದ್ದು ಕಿಂಗ್ಸ್‌ ಇಲವೆನ್‌ ತಂಡ ವಿಕೆಟ್‌ ನಷ್ಟವಿಲ್ಲದೆ 38 ರನ್‌ ಗಳಿಸಿದೆ. ನಾಯಕ ರಾಹುಲ್ (22) ಮತ್ತು ಮಯಂಕ್ (15) ಕ್ರೀಸ್‌ನಲ್ಲಿದ್ದಾರೆ.

 • 07:45 pm

  ಇನಿಂಗ್ಸ್ ಆರಂಭಿಸಿದ ಪಂಜಾಬ್‌

  ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಕಿಂಗ್ಸ್‌ ಇಲವೆನ್‌ ಪಂಜಾಬ್‌ ತಂಡ 4 ಓವರ್‌ಗಳ ಮುಕ್ತಾಯಕ್ಕೆ ವಿಕೆಟ್‌ ನಷ್ಟವಿಲ್ಲದೆ 31 ರನ್ ಗಳಿಸಿದೆ.

  ಕನ್ನಡಿಗರಾದ ನಾಯಕ ಕೆ.ಎಲ್‌.ರಾಹುಲ್‌ ಮತ್ತು ಮಯಂಕ್‌ ಅಗರವಾಲ್‌ ಕ್ರೀಸ್‌ನಲ್ಲಿದ್ದಾರೆ.

 • 07:44 pm

  ಹನ್ನೊಂದರ ಬಳಗ