ಗುರುವಾರ , ಅಕ್ಟೋಬರ್ 22, 2020
22 °C

IPL-2020 | KKR vs KXIP: ಕಿಂಗ್ಸ್‌ ಎದುರು ರೋಚಕ ಜಯ ಸಾಧಿಸಿದ ಕೆಕೆಆರ್‌

Published:
Updated:
ಸತತ ಸೋಲಿನ ಸುಳಿಯಲ್ಲಿ ಸಿಲುಕಿರುವ ಕಿಂಗ್ಸ್ ಇಲವೆನ್‌ ಪಂಜಾಬ್‌ ತಂಡ ಇಂದು ಕೋಲ್ಕತ್ತ ನೈಟ್‌ರೈಡರ್ಸ್‌ ವಿರುದ್ಧವೂ ಮುಖಭಂಗ ಅನುಭವಿಸಿತು.
 • 07:37 pm

  ಕೆಕೆಆರ್‌ಗೆ‌ ಗೆಲುವು

  ಅಬುಧಾಬಿ: ಕೋಲ್ಕತ್ತ ನೈಟ್‌ರೈಡರ್ಸ್ ನೀಡಿದ ಸ್ಪರ್ಧಾತ್ಮಕ ಗುರಿ ಎದುರು ಆರಂಭದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ, ಕೊನೆಯಲ್ಲಿ ಎಡವಿದ ಕಿಂಗ್ಸ್‌ ಇಲವೆನ್‌ ಪಂಜಾಬ್‌ ತಂಡ ಕೇವಲ 2 ರನ್‌ ಅಂತರದ ಸೋಲು ಅನುಭವಿಸಿತು. ಇದರೊಂದಿಗೆ ಈ ತಂಡ ಟೂರ್ನಿಯಲ್ಲಿ ಸತತ ಐದನೇ ಸೋಲು ಅನುಭವಿಸಿತು.

  ಕಿಂಗ್ಸ್‌ಗೆ ಗೆಲ್ಲಲು ಕೊನೆಯ ಓವರ್‌ನಲ್ಲಿ 14 ರನ್‌ ಬೇಕಾಗಿತ್ತು. ಗ್ಲೇನ್‌ ಮ್ಯಾಕ್ಸ್‌ವೆಲ್‌ ಮತ್ತು ಮನ್‌ದೀಪ್‌ ಸಿಂಗ್‌ ಕ್ರೀಸ್‌ನಲ್ಲಿದ್ದರು. ಸುನೀಲ್‌ ನರೇನ್‌ ಎಸೆದ 20ನೇ ಓವರ್‌ನಲ್ಲಿ ಈ ಜೋಡಿ ಕೇವಲ 11 ರನ್‌ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ಕೆಕೆಆರ್‌ ಕೇವಲ 2 ರನ್‌ ಅಂತರದ ಗೆಲುವು ಸಾಧಿಸಿತು.

  (2 0 4 L1 W 4)

 • 07:15 pm

  19ನೇ ಓವರ್ ಮುಕ್ತಾಯ; ಪ್ರಬ್ಸಿಮ್ರನ್‌–ರಾಹುಲ್ ವಿಕೆಟ್ ಪತನ

  ಕೊನೆಯ ಓವರ್‌ನ 4ನೇ ಎಸೆತದಲ್ಲಿ ಪ್ರಬ್ಸಿಮ್ರನ್‌ ಸಿಂಗ್‌ (4) ಮತ್ತು 6ನೇ ಎಸೆತದಲ್ಲಿ ಕೆಎಲ್‌ ರಾಹುಲ್‌ (74) ವಿಕೆಟ್ ಒಪ್ಪಿಸಿದ್ದಾರೆ. ಸದ್ಯ ಕಿಂಗ್ಸ್‌ ತಂಡದ ಮೊತ್ತ 4 ವಿಕೆಟ್‌ಗೆ 151

  ಬಾಕಿ ಇರುವ 6 ಎಸೆತದಲ್ಲಿ 14 ರನ್‌ ಬೇಕಾಗಿದೆ.

  ಬೌಲರ್‌: ಪ್ರಸಿದ್ಧ ಕೃಷ್ಣ ( 2 1 1 W 2 W )

 • 07:11 pm

  18ನೇ ಓವರ್ ಮುಕ್ತಾಯ

  18 ಓವರ್‌ಗಳ ಆಟ ಮುಕ್ತಾಯವಾಗಿದ್ದು ಕಿಂಗ್ಸ್‌ 145 ರನ್‌ ಗಳಿಸಿದೆ. ಗೆಲ್ಲಲು ಉಳಿದಿರುವ 2 ಓವರ್‌ಗಳಲ್ಲಿ ಇನ್ನೂ 20 ರನ್‌ ಬೇಕಾಗಿದೆ.

  ಬೌಲರ್‌: ಸುನೀಲ್‌ ನರೇನ್‌ (1 W 0 0 0 1)

 • 07:05 pm

  17ನೇ ಓವರ್ ಮುಕ್ತಾಯ

  17 ಓವರ್‌ಗಳ ಅಂತ್ಯಕ್ಕೆ ಕಿಂಗ್ಸ್ ಇಲವೆನ್‌ ಪಂಜಾಬ್‌ ತಂಡ 1 ವಿಕೆಟ್‌ ನಷ್ಟಕ್ಕೆ 143 ರನ್‌ ಗಳಿಸಿದೆ.

  ಬೌಲರ್‌: ವರುಣ್‌ ಚಕ್ರವರ್ತಿ (1 0 4 0 1 1)

 • 06:58 pm

  16ನೇ ಓವರ್ ಮುಕ್ತಾಯ

  ಕಿಂಗ್ಸ್‌ ತಂಡ 1 ವಿಕೆಟ್‌ ಕಳೆದುಕೊಂಡು 136 ರನ್ ಗಳಿಸಿದೆ. ರಾಹುಲ್‌ (68) ಮತ್ತು ಪೂರನ್ (11)‌ ಕ್ರೀಸ್‌ನಲ್ಲಿದ್ದಾರೆ.

  ಬೌಲರ್‌: ಕಮಲೇಶ್‌ ನಾಗರಕೋಟಿ (1 0 4 0 1 1)

 • 06:48 pm

  15ನೇ ಓವರ್ ಮುಕ್ತಾಯ

  ವೇಗವಾಗಿ ರನ್‌ ಗಳಿಸುತ್ತಿದ್ದ ಮಯಂಕ್‌ ಅಗರವಾಲ್‌ 56 ರನ್‌ ಗಳಿಸಿ ಔಟಾಗಿದ್ದಾರೆ. ಪ್ರಸಿದ್ಧ ಕೃಷ್ಣ ಎಸೆದ 15ನೇ ಓವರ್‌ನ 2ನೇ ಎಸೆತದಲ್ಲಿ ಔಟಾಗಿದ್ದಾರೆ.

  ನಿಕೋಲಸ್‌ ಪೂರನ್‌ ಇದೀಗ ಕ್ರೀಸ್‌ಗೆ ಮರಳಿದ್ದಾರೆ.

  ಬೌಲರ್‌: ಪ್ರಸಿದ್ಧ ಕೃಷ್ಣ (2 W 1 1 0 0)

 • 06:46 pm

  14ನೇ ಓವರ್ ಮುಕ್ತಾಯ

  ಆರಂಭಿಕ ಜೋಡಿ ಲೀಲಾಜಾಲವಾಗಿ ಬ್ಯಾಟಿಂಗ್‌ ಮಾಡುತ್ತಿದ್ದು ಕಿಂಗ್ಸ್ ತಂಡ 14 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 106 ರನ್‌ ಗಳಿಸಿದೆ.

  ಬೌಲರ್‌: ನಿತೀಶ್‌ ರಾಣಾ (1 1 1 1 1 2)

 • 06:38 pm

  13ನೇ ಓವರ್‌ ಮುಕ್ತಾಯ

  ಕಿಂಗ್ಸ್‌ ಇಲವೆನ್‌ ತಂಡದ ಆರಂಭಿಕರಿಬ್ಬರೂ ಅರ್ಧಶತಕ ಪೂರೈಸಿದರು. ಇವರ ಆಟದ ನೆರವಿನಿಂದ ಕಿಂಗ್ಸ್‌ ಮೊದಲ ವಿಕೆಟ್‌ ಜೊತೆಯಾಟದಲ್ಲಿ ವಿಕೆಟ್‌ ನಷ್ಟವಿಲ್ಲದೆ 102 ರನ್ ಗಳಿಸಿಕೊಂಡಿದೆ.

  ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಈ ಟೂರ್ನಿಯಲ್ಲಿ ಆಡಿದ ಎರಡನೇ ಶತಕದ ಜೊತೆಯಾಟವಾಗಿದೆ.

  ರಾಹುಲ್‌ 54 ರನ್‌ ಮತ್ತು ಮಯಂಕ್‌ 51 ರನ್‌ ಗಳಿಸಿ ಬ್ಯಾಟಿಂಗ್‌ ಮುಂದುವರಿಸಿದ್ದಾರೆ.

  ಬೌಲರ್‌: ಪ್ಯಾಟ್‌ ಕಮಿನ್ಸ್‌ (4 4 1 1 1 1)

 • 06:35 pm

  12ನೇ ಓವರ್ ಮುಕ್ತಾಯ

  ಬಿರುಸಾಗಿ ಬ್ಯಾಟಿಂಗ್ ಮಾಡುತ್ತಿರುವ ಮಯಂಕ್‌ ಅಗರವಾಲ್ (49)‌ ಮತ್ತು ಕೆಎಲ್‌ ರಾಹುಲ್‌ (44) ಕ್ರೀಸ್‌ನಲ್ಲಿದ್ದಾರೆ.

  ಕಿಂಗ್ಸ್‌ ವಿಕೆಟ್‌ ನಷ್ಟವಿಲ್ಲದೆ 94 ರನ್‌ ಗಳಿಸಿದೆ.

  ಬೌಲರ್‌: ವರುಣ್‌ ಚಕ್ರವರ್ತಿ (1 1 0 1 1 4)

 • 06:29 pm

  11ನೇ ಓವರ್ ಮುಕ್ತಾಯ

  ಈ ಹಂತದಲ್ಲಿ ಕಿಂಗ್ಸ್‌ ವಿಕೆಟ್‌ ನಷ್ಟವಿಲ್ಲದೆ 86 ರನ್ ಗಳಿಸಿದೆ.

  ಬೌಲರ್‌: ಕಮಲೇಶ್‌ ನಾಗರಕೋಟಿ ( 0 1 4 4 1 0)

 • 06:27 pm

  10ನೇ ಓವರ್ ಮುಕ್ತಾಯ

  10 ಓವರ್‌ಗಳ ಆಟ ಮುಕ್ತಾಯವಾಗಿದ್ದು ಕಿಂಗ್ಸ್‌ ವಿಕೆಟ್‌ ನಷ್ಟವಿಲ್ಲದೆ 76 ರನ್ ಗಳಿಸಿದೆ. ಈ ಹಂತದಲ್ಲಿ ಕೆಕೆಆರ್‌ 2 ವಿಕೆಟ್ ಕಳೆದುಕಂಡು 60 ರನ್ ಬಾರಿಸಿತ್ತು.

  ಬೌಲರ್‌: ಸುನೀಲ್‌ ನರೇನ್‌ (2 2 1 1 L1 2)

 • 06:22 pm

  9ನೇ ಓವರ್ ಮುಕ್ತಾಯ

  ಕಿಂಗ್ಸ್‌ ವಿಕೆಟ್‌ ನಷ್ಟವಿಲ್ಲದೆ 67 ರನ್‌ ಗಳಿಸಿದೆ. ಮಯಂಕ್ (31)‌ ಮತ್ತು ರಾಹುಲ್‌ (40) ಕ್ರೀಸ್‌ನಲ್ಲಿದ್ದಾರೆ.

  ಬೌಲರ್‌: ವರುಣ್‌ ಚಕ್ರವರ್ತಿ (2 1 1 0 0 1)

 • 06:17 pm

  8ನೇ ಓವರ್ ಮುಕ್ತಾಯ

  ಕಿಂಗ್ಸ್‌ ತಂಡ ವಿಕೆಟ್‌ ನಷ್ಟವಿಲ್ಲದೆ 62 ರನ್‌ ಗಳಿಸಿದೆ.

  ಬೌಲರ್:‌ ಸುನೀಲ್‌ ನರೇನ್‌ (1 1 4 1 0 1)

 • 06:13 pm

  7ನೇ ಓವರ್ ಮುಕ್ತಾಯ

  7 ಓವರ್‌ಗಳ ಆಟ ಮುಕ್ತಾಯವಾಗಿದ್ದು ಕಿಂಗ್ಸ್‌ ಇಲವೆನ್ ಪಂಜಾಬ್‌ ತಂಡ ವಿಕೆಟ್ ನಷ್ಟವಿಲ್ಲದೆ 54 ರನ್‌ ಗಳಿಸಿದೆ.

  ಮಯಂಕ್‌ (24) ಮತ್ತು ರಾಹುಲ್‌ (30) ಕ್ರೀಸ್‌ನಲ್ಲಿದ್ದಾರೆ.

  ಬೌಲರ್‌: ವರುಣ್‌ ಚಕ್ರವರ್ತಿ (1 1 1 2 1 1)

 • 06:05 pm

  6ನೇ ಓವರ್ ಮುಕ್ತಾಯ

  ಪವರ್‌ ಪ್ಲೇ ಆಟ ಮುಕ್ತಾಯವಾಗಿದ್ದು ಕಿಂಗ್ಸ್‌ ಇಲವೆನ್‌ ಪಂಜಾಬ್ ತಂಡ ವಿಕೆಟ್‌ ನಷ್ಟವಿಲ್ಲದೆ 47 ರನ್ ಗಳಿಸಿದೆ. ಕೆಕೆಆರ್ ತಂಡ ಈ ಹಂತದಲ್ಲಿ 2 ವಿಕೆಟ್‌ ಕಳೆದುಕೊಂಡು 28 ರನ್‌ ಗಳಿಸಿತ್ತು.

  ಬೌಲರ್‌: ಕಮಲೇಶ್‌ ನಾಗರಕೋಟಿ (1 3 1 4 1 1)

 • 06:02 pm

  5ನೇ ಓವರ್ ಮುಕ್ತಾಯ

  ಕಿಂಗ್ಸ್‌ ಇಲವೆನ್‌ ಪಂಜಾಬ್‌ ತಂಡ 5 ಓವರ್‌ ಮುಕ್ತಾಯಕ್ಕೆ 36 ರನ್‌ ಗಳಿಸಿದೆ. ಗೆಲ್ಲಲು ಇನ್ನು 90 ಎಸೆತಗಳಲ್ಲಿ 129 ರನ್ ಬೇಕಾಗಿದೆ.

  ಬೌಲರ್‌: ಪ್ಯಾಟ್‌ ಕಮಿನ್ಸ್‌ (0 1 1 0 4 2)

 • 05:57 pm

  4ನೇ ಓವರ್ ಮುಕ್ತಾಯ

  ಕಿಂಗ್ಸ್‌ ಪಡೆ ಯಾವುದೇ ವಿಕೆಟ್ ನಷ್ಟವಿಲ್ಲದೆ 28 ರನ್ ಗಳಿಸಿದೆ.

  ಪ್ರಸಿದ್ಧ ಕೃಷ್ಣ ಎಸೆದ 4ನೇ ಓವರ್‌ನಲ್ಲಿ ಕರ್ನಾಟಕದ ಜೋಡಿ ಎರಡು 4 ಬೌಂಡರಿ ಮತ್ತು 1 ಸಿಕ್ಸರ್‌ ಸಹಿತ 14 ರನ್‌ ಗಳಿಸಿಕೊಂಡಿತು.

  (0 4 0 4 0 6)

 • 05:56 pm

  3ನೇ ಓವರ್ ಮುಕ್ತಾಯ

  3ನೇ ಓವರ್‌ ಮುಕ್ತಾಯಕ್ಕೆ ಕಿಂಗ್ಸ್‌ 14 ರನ್ ಗಳಿಸಿದೆ.

  ಬೌಲರ್‌: ಪ್ಯಾಟ್‌ ಕಮಿನ್ಸ್ (1 1 2 1 0 1)

 • 05:44 pm

  2ನೇ ಓವರ್ ಮುಕ್ತಾಯ

  ಕಿಂಗ್ಸ್‌ ತಂಡ ವಿಕೆಟ್‌ ನಷ್ಟವಿಲ್ಲದೆ 8 ರನ್‌ ಗಳಿಸಿದೆ.

  ಬೌಲರ್‌: ಪ್ರಸಿದ್ಧ ಕೃಷ್ಣ (0 4 0 1 0 0)

 • 05:38 pm

  ಇನಿಂಗ್ಸ್‌ ಆರಂಭಿಸಿದ ಕಿಂಗ್ಸ್‌

  ಕನ್ನಡಿಗರಾದ ಮಯಂಕ್ ಅಗರವಾಲ್‌ ಮತ್ತು ಕೆಎಲ್‌ ರಾಹುಲ್‌ ಜೋಡಿ ಕಿಂಗ್ಸ್‌ ಇಲವೆನ್‌ ಪಂಜಾಬ್‌ ತಂಡದ ಇನಿಂಗ್ಸ್‌ ಆರಂಭಿಸಿದೆ.

  1 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಕಿಂಗ್ಸ್‌ 3 ರನ್‌ ಗಳಿಸಿದೆ.

  ಬೌಲರ್‌: ಪ್ಯಾಟ್‌ ಕಮಿನ್ಸ್‌ (0 1 1 0 0 1)

 • 05:23 pm

  ಕಿಂಗ್ಸ್‌ಗೆ 165 ರನ್‌ ಗುರಿ

  ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 164 ರನ್‌ ಗಳಿಸಿದೆ.

  ಆರಂಭದಲ್ಲಿ ಬಿಗುವಿನ ಬೌಲಿಂಗ್‌ ನಡೆಸಿದ ಕಿಂಗ್ಸ್ ಇಲವೆನ್ ತಂಡದ ಬೌಲರ್‌ಗಳು ಕೊನೆಯಲ್ಲಿ ಹಿಡಿತ ಸಡಿಲಗೊಳಿಸಿದರು. ಪವರ್‌ ಪ್ಲೇ ಮುಗಿಯುವಷ್ಟರಲ್ಲಿ ಪ್ರಮುಖ 2 ವಿಕೆಟ್‌ ಕಳೆದುಕೊಂಡು 25 ರನ್‌ ಗಳಿಸಿದ್ದ ಕೆಕೆಆರ್‌, 10 ಓವರ್‌ ಅಂತ್ಯಕ್ಕೆ 60 ರನ್‌ ಗಳಿಸಿತ್ತು. ಹೀಗಾಗಿ ಈ ತಂಡ 150 ರನ್‌ ಗಳಿಸುವುದು ಅನುಮಾನವಾಗಿತ್ತು. ಆದರೆ, ಇನಿಂಗ್ಸ್‌ ಎರಡನೇ ಅವಧಿಯಲ್ಲಿ ಕೆಕೆಆರ್‌ ಇನಿಂಗ್ಸ್‌ಗೆ ಬಲ ತುಂಬಿದ ಶುಭಮನ್‌ ಗಿಲ್‌ ಮತ್ತು ನಾಯಕ ದಿನೇಶ್‌ ಕಾರ್ತಿಕ್‌ ತಂಡದ ಮೊತ್ತ 160ರ ಗಡಿ ದಾಟಲು ನೆರವಾದರು.

 • 05:14 pm

  19ನೇ ಓವರ್ ಮುಕ್ತಾಯ

  ಸ್ಪೋಟಕ ಬ್ಯಾಟ್ಸ್‌ಮನ್‌ ಆ್ಯಂಡ್ರೆ ರಸೆಲ್‌ (5) 19ನೇ ಓವರ್‌ ಎರಡನೇ ಎಸೆತದಲ್ಲಿ ಔಟಾಗಿದ್ದಾರೆ. ಆಲ್ರೌಂಡರ್‌ ಪ್ಯಾಟ್‌ ಕಮಿನ್ಸ್‌ ಕ್ರೀಸ್‌ಗೆ ಬಂದಿದ್ದು, ಇನ್ನೊಂದು ತುದಿಯಲ್ಲಿ ದಿನೇಶ್ ಕಾರ್ತಿಕ್‌ (53) ಕ್ರೀಸ್‌ನಲ್ಲಿದ್ದಾರೆ.

  ತಂಡದ ಮೊತ್ತ 5 ವಿಕೆಟ್‌ಗೆ 155 ಆಗಿದೆ.

  ಬೌಲರ್‌: ಅರ್ಶದೀಪ್‌ ಸಿಂಗ್‌ (4 W Wd Wd 2 1 0 0)

 • 05:04 pm

  18ನೇ ಓವರ್ ಮುಕ್ತಾಯ: ಕಾರ್ತಿಕ್ ಅರ್ಧಶತಕ

  ಸಂಕಷ್ಟದ ಸಂದರ್ಭದಲ್ಲಿ ನಾಯಕನ ಆಟವಾಡಿದ ದಿನೇಶ್‌ ಕಾರ್ತಿಕ್‌ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇನ್ನೊಂದು ತುದಿಯಲ್ಲಿ ಉತ್ತಮ ಬ್ಯಾಟಿಂಗ್‌ ನಡೆಸುತ್ತಿದ್ದ ಶುಭಮನ್‌ ಗಿಲ್‌ 57 ರನ್‌ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ.

  ಸದ್ಯ 18 ಓವರ್‌ ಮುಗಿದಿದ್ದು, ತಂಡದ ಮೊತ್ತ 4 ವಿಕೆಟ್‌ ನಷ್ಟಕ್ಕೆ 146 ರನ್ ಆಗಿದೆ.

  ಬೌಲರ್‌: ಮೊಹಮ್ಮದ್ ಶಮಿ (2 4 4 B1 W1 1)

 • 05:01 pm

  17ನೇ ಓವರ್ ಮುಕ್ತಾಯ

  ಬಿರುಸಿನ ಬ್ಯಾಟಿಂಗ್‌ ನಡೆಸುತ್ತಿರುವ ದಿನೇಶ್‌ ಕಾರ್ತಿಕ್‌ ಹಾಗೂ ಗಿಲ್ ಜೋಡಿ 4ನೇ ವಿಕೆಟ್‌ ಜೊತೆಯಾಟದಲ್ಲಿ ಕೇವಲ 39 ಎಸೆತಗಳಲ್ಲಿ 72 ರನ್‌ ಬಾರಿಸಿದೆ.

  ಸದ್ಯ ತಂಡದ ಮೊತ್ತ 3 ವಿಕೆಟ್‌ಗೆ 139 ರನ್‌ ಆಗಿದೆ.

  ಬೌಲರ್‌: ಕ್ರಿಸ್‌ ಜೋರ್ಡನ್‌ (1 4 6 4 1 2)

 • 04:59 pm

  16ನೇ ಓವರ್ ಮುಕ್ತಾಯ

  16 ಓವರ್‌ ಮುಕ್ತಾಯಕ್ಕೆ ಕೆಕೆಆರ್‌ 3 ವಿಕೆಟ್‌ಗೆ 115 ರನ್‌ ಗಳಿಸಿದೆ.

  ಗಿಲ್‌ (52) ಮತ್ತು ಕಾರ್ತಿಕ್‌ (28) ಕ್ರೀಸ್‌ನಲ್ಲಿದ್ದಾರೆ.

  ಬೌಲರ್‌: ಅರ್ಶದೀಪ್‌ ಸಿಂಗ್‌ (2 4 0 4 0 4)

 • 04:46 pm

  15ನೇ ಓವರ್ ಮುಕ್ತಾಯ: ಗಿಲ್ ಅರ್ಧಶತಕ

  ಒಂದೆಡೆ ವಿಕೆಟ್‌ ಉರುಳುತ್ತಿದ್ದರೂ ತಾಳ್ಮೆಯ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತಿರುವ ಶುಭಮನ್‌ ಗಿಲ್ (53)‌ ಅರ್ಧಶತಕ ಪೂರೈಸಿದರು.

  ಸದ್ಯ 15 ಓವರ್‌ಗಳ ಆಟ ಮುಗಿದಿದ್ದು. ಕೆಕೆಆರ್‌ 3 ವಿಕೆಟ್‌ಗೆ 101 ರನ್‌ ಗಳಿಸಿದೆ.

 • 04:45 pm

  14ನೇ ಓವರ್ ಮುಕ್ತಾಯ

  ಮುಜೀಬ್‌ ಉರ್‌ ರೆಹಮಾನ್‌ ಎಸೆದ ಈ ಓವರ್‌ನಲ್ಲಿ ಕೆಕೆಆರ್‌ ಬ್ಯಾಟ್ಸ್‌ಮನ್‌ಗಳೂ 16 ರನ್‌ ಗಳಿಸಿಕೊಂಡರು.

  ತಂಡದ ಮೊತ್ತ 3 ವಿಕೆಟ್‌ಗೆ 91 ರನ್‌ ಆಗಿದೆ.

  (1 4 2 1 2 6)

 • 04:35 pm

  13ನೇ ಓವರ್ ಮುಕ್ತಾಯ

  ಕೆಕೆಆರ್‌ ಮೊತ್ತ 3 ವಿಕೆಟ್‌ ಕಳೆದುಕೊಂಡು 75 ರನ್‌ ಆಗಿದೆ.

  ಬೌಲರ್‌: ರವಿ ಬಿಷ್ಣೋಯಿ (1 1 0 2 1 2)

 • 04:32 pm

  12ನೇ ಓವರ್ ಮುಕ್ತಾಯ

  3 ವಿಕೆಟ್‌ ನಷ್ಟಕ್ಕೆ 68 ರನ್‌ ಆಗಿದೆ.

  ಬೌಲರ್‌: ಮಜೀಬ್ ಉರ್ ರೆಹಮಾನ್‌ (0 4 0 0 0 0)

 • 04:27 pm

  11ನೇ ಓವರ್ ಮುಕ್ತಾಯ: ಮಾರ್ಗನ್ ವಿಕೆಟ್ ಪತನ

  24 ಗಳಿಸಿ ಆಡುತ್ತಿದ್ದ ಎಯಾನ್ ಮಾರ್ಗನ್, ಲೆಗ್‌ ಸ್ಪಿನ್ನರ್‌‌ ರವಿ ಬಿಷ್ಣೋಯಿ ಬೌಲಿಂಗ್‌ನಲ್ಲಿ ಔಟಾಗಿದ್ದಾರೆ. ಇದರೊಂದಿಗೆ ರವಿ ಈ ಬಾರಿ 8ನೇ ವಿಕೆಟ್‌ ಪಡೆದು ಸಂಭ್ರಮಿಸಿದರು. ಇದೀಗ ನಾಯಕ ದಿನೇಶ್ ಕಾರ್ತಿಕ್‌ ಕ್ರೀಸ್‌ಗೆ ಮರಳಿದ್ದಾರೆ.

  11 ಓವರ್‌ ಅಂತ್ಯಕ್ಕೆ ಕೆಕೆಆರ್‌ 3 ವಿಕೆಟ್‌ ಕಳೆದುಕೊಂಡು 64 ರನ್‌ ಗಳಿಸಿದೆ.

  (1 1 1 W 1 0)

 • 04:24 pm

  10ನೇ ಓವರ್ ಮುಕ್ತಾಯ

  10 ಓವರ್‌ಗಳ ಆಟ ಮುಗಿದಿದ್ದು ಕೆಕೆಆರ್ 60 ರನ್‌ ಗಳಿಸಿದೆ. ಮಾರ್ಗನ್‌ (23) ಮತ್ತು ಗಿಲ್‌ (27) ಕ್ರೀಸ್‌ನಲ್ಲಿದ್ದಾರೆ.

  ಬೌಲರ್‌: ಮುಜೀಬ್‌ ಉರ್ ರೆಹಮಾನ್‌ (1 6 1 1 1 1)

 • 04:17 pm

  9ನೇ ಓವರ್ ಮುಕ್ತಾಯ

  2 ವಿಕೆಟ್‌ ಕಳೆದುಕೊಂಡಿರುವ ಕೆಕೆಆರ್ 49 ರನ್‌ ಗಳಿಸಿದೆ. ಮೂರನೇ ವಿಕೆಟ್‌ಗೆ 35 ರನ್‌ ಕಲೆಹಾಕಿರುವ ಮಾರ್ಗನ್‌ ಮತ್ತು ಗಿಲ್‌ ಜೋಡಿ ಕ್ರೀಸ್‌ನಲ್ಲಿದೆ.

  ಬೌಲರ್‌: ರವಿ ಬಿಷ್ಣೋಯಿ (0 0 0 1 2 1)

 • 04:12 pm

  8ನೇ ಓವರ್ ಮುಕ್ತಾಯ

  8 ಓವರ್‌ಗಳ ಆಟ ಮುಕ್ತಾಯವಾಗಿದ್ದು ದಿನೇಶ್‌ ಕಾರ್ತಿಕ್‌ ಪಡೆ 2 ವಿಕೆಟ್‌ ಕಳೆದುಕೊಂಡು 45 ರನ್ ಗಳಿಸಿದೆ.

  ಬೌಲರ್: ಕ್ರಿಸ್‌ ಜೋರ್ಡನ್‌ (2 0 1 1 1 2)

 • 04:08 pm

  7ನೇ ಓವರ್ ಮುಕ್ತಾಯ

  7 ಓವರ್‌ ಮುಗಿದಿದ್ದು ಕೆಕೆಆರ್‌ 2 ವಿಕೆಟ್‌ಗೆ 38 ರನ್‌ ಗಳಿಸಿದೆ.

  ಬೌಲರ್‌: ಮಜೀಬ್‌ ಉರ್‌ ರೆಹಮಾನ್‌ (2 2 1 Wd3 0 4 1)

 • 04:02 pm

  6ನೇ ಓವರ್ ಮುಕ್ತಾಯ: ಮಾರ್ಗನ್ ಸಾವಿರ ರನ್

  ಐಪಿಎಲ್‌ನಲ್ಲಿ 58ನೇ ಪಂದ್ಯ ಆಡುತ್ತಿರುವ ಎಯಾನ್‌ ಮಾರ್ಗನ್‌ 1000 ರನ್‌ ಪೂರೈಸಿದ್ದಾರೆ. ಈ ಪಂದ್ಯಕ್ಕೂ ಮೊದಲು ಮಾರ್ಗನ್‌ ಖಾತೆಯಲ್ಲಿ 997 ರನ್‌ ಗಳಿದ್ದವು.

  ಸದ್ಯ ಪವರ್‌ ಪ್ಲೇ ಆಟ ಮುಗಿದಿದ್ದು, ಕೆಕೆಆರ್‌ 2 ವಿಕೆಟ್‌ಗೆ 25 ರನ್‌ ಗಳಿಸಿದೆ.

  ಮಾರ್ಗನ್‌ (4) ಮತ್ತು ಗಿಲ್‌ (13) ಕ್ರೀಸ್‌ನಲ್ಲಿದ್ದಾರೆ.

  ಬೌಲರ್‌: ಮೊಹಮ್ಮದ್‌ ಶಮಿ (0 0 4 0 1 1)

 • 03:58 pm

  5ನೇ ಓವರ್ ಮುಕ್ತಾಯ

  ಐದು ಓವರ್‌ಗಳ ಆಟ ಮುಗಿದಿದ್ದು ಕೆಕೆಆರ್‌ 2 ವಿಕೆಟ್‌ ಕಳೆದುಕೊಂಡು 19 ರನ್ ಗಳಿಸಿದೆ.

  ಬೌಲರ್‌: ಕ್ರಿಸ್‌ ಜೋರ್ಡನ್‌ (0 0 0 0 4 0)

 • 03:51 pm

  4ನೇ ಓವರ್ ಮುಕ್ತಾಯ: ರಾಣಾ ರನೌಟ್

  ತ್ರಿಪಾಠಿ ವಿಕೆಟ್‌ ಪತನದ ಬಳಿಕ ಕ್ರೀಸ್‌ಗೆ ಬಂದ ನಿತೀಶ್ ರಾಣಾ (2) ಇಲ್ಲದ ರನ್‌ ಕದಿಯಲು ಹೋಗಿ ರನೌಟ್‌ ಆದರು. ಎಯಾನ್‌ ಮೋರ್ಗನ್‌ ಕ್ರೀಸ್‌ಗೆ ಬಂದಿದ್ದಾರೆ.

  4 ಓವರ್ ಮುಕ್ತಾಯಕ್ಕೆ ಕೆಕೆಆರ್ 2 ವಿಕೆಟ್‌ ಕಳೆದುಕೊಂಡು 15 ರನ್‌ ಗಳಿಸಿದೆ.

  ಬೌಲರ್‌: ಅರ್ಶದೀಪ್ ಸಿಂಗ್‌ (0 1 W 1 0 0)

 • 03:45 pm

  3ನೇ ಓವರ್ ಮುಕ್ತಾಯ: ತ್ರಿಪಾಠಿ ಔಟ್‌

  ಕಳೆದ ಪಂದ್ಯದ ಹೀರೊ ರಾಹುಲ್‌ ತ್ರಿಪಾಠಿ ಅವರನ್ನು ಮೊಹಮ್ಮದ್‌ ಶಮಿ ಕ್ಲೀನ್‌ ಬೌಲ್ಡ್ ಮಾಡಿದರು. ಐಪಿಎಲ್‌ನಲ್ಲಿ 56ನೇ ಪಂದ್ಯ ಆಡುತ್ತಿರುವ ಶಮಿಗೆ ಇದು 50ನೇ ವಿಕೆಟ್‌.

  10 ಎಸೆತಗಳಲ್ಲಿ ಕೇವಲ 4 ರನ್‌ ಗಳಿಸಿದ್ದ ತ್ರಿಪಾಠಿ ಪೆವಿಲಿಯನ್‌ ಸೇರಿಕೊಂಡಿದ್ದಾರೆ.

  ಸದ್ಯ ಮೂರು ಓವರ್‌ಗಳ ಆಟ ಮುಕ್ತಾಯವಾಗಿದ್ದು ಕೆಕೆಆರ್‌ 1 ವಿಕೆಟ್ ಕಳೆದುಕೊಂಡು 13 ರನ್‌ ಗಳಿಸಿದೆ.

  (1 0 4 W 0 1)

 • 03:40 pm

  2ನೇ ಓವರ್ ಮುಕ್ತಾಯ

  ಎರಡನೇ ಓವರ್‌ ಬೌಲಿಂಗ್‌ ಮಾಡಿದ ಅರ್ಶದೀಪ್‌ ಸಿಂಗ್‌ ಒಂದೂ ರನ್‌ ನೀಡದೆ ಓವರ್‌ ಮುಗಿಸಿದರು.

 • 03:31 pm

  ಇನಿಂಗ್ಸ್‌ ಆರಂಭಿಸಿದ ಕೆಕೆಆರ್‌

  ಮೊದಲ ಓವರ್‌ನ ಆಟ ಮುಕ್ತಾಯವಾಗಿದ್ದು, ಕೆಕೆಆರ್‌ ವಿಕೆಟ್ ನಷ್ಟವಿಲ್ಲದೆ 7 ರನ್‌ ಗಳಿಸಿಕೊಂಡಿದೆ.

  ಶುಭಮನ್‌ ಗಿಲ್‌ ಮತ್ತು ರಾಹುಲ್‌ ತ್ರಿಪಾಠಿ ಕ್ರೀಸ್‌ನಲ್ಲಿದ್ದಾರೆ.

  ಬೌಲರ್‌: ಮೊಹಮ್ಮದ್‌ ಶಮಿ (L1 0 2 4 0 0)

 • 03:04 pm

  ತಂಡಗಳಲ್ಲಿ ಬದಲಾವಣೆ

  ಸತತ ಸೋಲುಗಳಿಂದ ಕಂಗೆಟ್ಟಿರುವ ಕಿಂಗ್ಸ್‌ ಪಡೆಯಿಂದ ಶೇಲ್ಡನ್‌ ಕಾರ್ಟ್ರೇಲ್ ಅವರನ್ನು ಕೈಬಿಡಲಾಗಿದೆ. ಕಳೆದ ಪಂದ್ಯಗಳಲ್ಲಿ ದುಬಾರಿಯಾಗಿದ್ದ ಅವರ ಬದಲು ಕ್ರಿಸ್‌ ಜೋರ್ಡನ್‌ ತಂಡ ಕೂಡಿಕೊಂಡಿದ್ದಾರೆ.

  ಸ್ಥಿರ ಪ್ರದರ್ಶನ ತೋರಲು ವಿಫಲವಾಗುತ್ತಿರುವ ಕೆಕೆಆರ್‌ನಲ್ಲೂ ಒಂದು ಬದಲಾವಣೆ ಮಾಡಲಾಗಿದ್ದು, ಈ ಪಂದ್ಯದಲ್ಲಿ ಶಿವಂ ಮಾವಿ ಬದಲು ಪ್ರಸಿದ್ಧ ಕೃಷ್ಣ ಕಣಕ್ಕಿಳಿಯಲಿದ್ದಾರೆ.

  ಹನ್ನೊಂದರ ಬಳಗ
  ರೈಡರ್ಸ್:
  ಶುಭಮನ್‌ ಗಿಲ್‌, ರಾಹುಲ್‌ ತ್ರಿಪಾಠಿ, ನಿತೀಶ್‌ ರಾಣಾ, ಆ್ಯಂಡ್ರೆ ರಸೇಲ್‌, ಸುನೀಲ್‌ ನರೇನ್‌, ದಿನೇಶ್ ಕಾರ್ತಿಕ್ (ನಾಯಕ/ವಿಕೆಟ್‌ ಕೀಪರ್‌), ಎಯಾನ್ ಮಾರ್ಗನ್, ಪ್ಯಾಟ್ ಕಮಿನ್ಸ್, ಕಮಲೇಶ್‌ ನಾಗರಕೋಟಿ, ಶಿವಂ ಮಾವಿ, ವರುಣ್‌ ಚಕ್ರವರ್ತಿ

  ಕಿಂಗ್ಸ್‌: ಕೆಎಲ್‌ ರಾಹುಲ್‌ (ನಾಯಕ), ಮಯಂಕ್‌ ಅಗರವಾಲ್‌, ಮನ್‌ದೀಪ್‌ ಸಿಂಗ್‌, ನಿಕೋಲಸ್‌ ಪೂರನ್‌, ಗ್ಲೇನ್ ಮ್ಯಾಕ್ಸ್‌ವೆಲ್, ಪ್ರಬ್ಸಿಮ್ರನ್ ಸಿಂಗ್‌ (ವಿಕೆಟ್‌ ಕೀಪರ್‌), ಮುಜೀಬ್‌ ಉರ್‌ ರೆಹಮಾನ್, ರವಿ ಬಿಷ್ಣೋಯಿ, ಅರ್ಶದೀಪ್‌ ಸಿಂಗ್‌, ಮೊಹಮ್ಮದ್ ಶಮಿ, ಶೇಲ್ಡನ್‌ ಕಾರ್ಟೆಲ್‌

 • 03:01 pm

  ರೈಡರ್ಸ್‌ ಬ್ಯಾಟಿಂಗ್‌

  ಕಿಂಗ್ಸ್‌ ಇಲವೆನ್‌ ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಕೋಲ್ಕತ್ತ ನೈಟ್‌ರೈಡರ್ಸ್‌ ತಂಡದ ನಾಯಕ ದಿನೇಶ್‌ ಕಾರ್ತಿಕ್‌ ಅವರು ಬ್ಯಾಟಿಂಗ್‌ ಆಯ್ದುಕೊಂಡಿದ್ದಾರೆ.

 • 02:16 pm

  ಗೆಲುವು ಯಾರಿಗೆ? ವೋಟ್ ಮಾಡಿ

 • 11:49 am