ಗುರುವಾರ , ಅಕ್ಟೋಬರ್ 29, 2020
19 °C

IPL-2020 | ಕಿಂಗ್ಸ್‌ ಬೌಲಿಂಗ್‌ಗೆ ಆರ್‌ಸಿಬಿ ನಿರುತ್ತರ; ಕೆಎಲ್ ಪಡೆಗೆ 97 ರನ್ ಜಯ

Published:
Updated:
ದುಬೈ: ಇಲ್ಲಿಯ ಐಸಿಸಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ಸಂಜೆ ಕರ್ನಾಟಕ ರಣಜಿ ಕ್ರಿಕೆಟ್ ತಂಡದ ಅರ್ಧಪಾಲು ಆಟಗಾರರು ಸೇರಲಿದ್ದಾರೆ. ಈ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ವಿರಾಟ್‌ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್‌ ತಂಡ ಬೆಂಗಳೂರಿನದ್ದು. ಎದುರಾಳಿ ಕಿಂಗ್ಸ್‌ ಇಲೆವನ್ ಪಂಜಾಬ್‌ ತಂಡದ ನಾಯಕ ಕೆ.ಎಲ್. ರಾಹುಲ್, ಆಟಗಾರರಾದ ಮಯಂಕ್ ಅಗರವಾಲ್, ಕೃಷ್ಣಪ್ಪ ಗೌತಮ್, ಜೆ. ಸುಚಿತ್ ಮತ್ತು ಕರುಣ್ ನಾಯರ್ ಕರ್ನಾಟಕದವರು. ತಂಡದ ಮುಖ್ಯ ಕೋಚ್ ಕೂಡ ಇಲ್ಲಿಯ ಅನಿಲ್ ಕುಂಬ್ಳೆ. ಅದರಿಂದಾಗಿ ಕರ್ನಾಟಕದ ಕ್ರಿಕೆಟ್‌ಪ್ರಿಯರಿಗೆ ಭರ್ಜರಿ ಮೃಷ್ಟಾನ್ನ ಭೋಜನದ ಸವಿ ಖಾತ್ರಿ. ಪಂದ್ಯ ಸಂಜೆ 7.30ಕ್ಕೆ ಆರಂಭವಾಗಲಿದೆ.
Secondary Categories: 
 • 11:01 pm

  ಆರ್‌ಸಿಬಿಗೆ 97 ರನ್ ಸೋಲು

  ನಾಯಕ ಕೆ.ಎಲ್‌.ರಾಹುಲ್‌ ಸ್ಫೋಟಕ ಬ್ಯಾಟಿಂಗ್‌, ಬಳಿಕ ಬೌಲರ್‌ಗಳು ತೋರಿದ ಪರಿಣಾಮಕಾರಿ ಪ್ರದರ್ಶನದ ನೆರವಿನಿಂದ ಕಿಂಗ್ಸ್‌ ಇಲವೆನ್‌ ತಂಡ 98 ರನ್‌ ಅಂತರದ ಬಾರೀ ಗೆಲುವು ಸಾಧಿಸಿತು.

  ಆರ್‌ಸಿಬಿ ಕೇವಲ 109 ರನ್‌ಗಳಿಗೆ ಆಲೌಟ್‌ ಆಯಿತು.

 • 10:57 pm

  9ನೇ ವಿಕೆಟ್‌ ಪತನ; ಸೋಲಿನ ಸುಳಿಯಲ್ಲಿ ಆರ್‌ಸಿಬಿ

  ಆರ್‌ಸಿಬಿಯ 9ನೇ ವಿಕೆಟ್‌ ಪತನವಾಗಿತ್ತು ಸೋಲಿನ ಸುಳಿಯಲ್ಲಿ ಸಿಲುಕಿದೆ.

   

 • 10:52 pm

  8 ವಿಕೆಟ್‌ ಕಳೆದುಕೊಂಡ ಆರ್‌ಸಿಬಿ

  15.2 ಓವರ್‌ಗಳ ಆಟ ಮುಕ್ತಾಯವಾಗಿದ್ದು ಆರ್‌ಸಿಬಿ 101 ರನ್‌ ಗಳಿಗೆ 8 ವಿಕೆಟ್‌ ಕಳೆದುಕೊಂಡಿದೆ.

  ತಂಡದ ಪರ ವೈಯಕ್ತಿಗ ಗರಿಷ್ಠ ಮೊತ್ತ ಗಳಿಸಿದ್ದ ವಾಷಿಂಗ್ಟನ್‌ ಸುಂದರ್‌ (30) ರವಿ ಬಿಷ್ಣೋಯಿ ಬೌಲಿಂಗ್‌ನಲ್ಲಿ ಮಯಂಕ್‌ ಅಗರವಾಲ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದ್ದಾರೆ.

 • 10:44 pm

  7ನೇ ವಿಕೆಟ್ ಪತನ

  14 ಓವರ್‌ಗಳ ಆಟ ಮುಕ್ತಾಯವಾಗಿದ್ದು ಆರ್‌ಸಿಬಿ 88 ರನ್‌ ಗಳಿಗೆ 7 ವಿಕೆಟ್‌ ಕಳೆದುಕೊಂಡಿದೆ.

 • 10:18 pm

  ವಿಲಿಯರ್ಸ್‌ ವಿಕೆಟ್ ಪತನ

  ಆರ್‌ಸಿಬಿ ಕೇವಲ 4 ರನ್ ‌ಗಳಿಗೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ನಾಲ್ಕನೇ ವಿಕೆಟ್‌ಗೆ 49 ರನ್ ಸೇರಿಸಿದ್ದ ಫಿಂಚ್ (20)‌ ಮತ್ತು ವಿಲಿಯರ್ಸ್ (28)‌ ವಿಕೆಟ್‌ ಒಪ್ಪಿಸಿದ್ದಾರೆ.

  ಸದ್ಯ 8.4 ಓವರ್‌ಗಳ ಆಟ ಮುಕ್ತಾಯವಾಗಿದ್ದು ಕೊಹ್ಲಿ ಪಡೆ 5 ವಿಕೆಟ್‌ ಕಳೆದುಕೊಂಡು 60 ರನ್‌ ಗಳಿಸಿದೆ.

  ವಾಷಿಂಗ್ಟನ್‌ ಸುಂದರ್‌ (1) ಮತ್ತು ಶಿವಂ ದುಬೆ (2) ಕ್ರೀಸ್‌ನಲ್ಲಿದ್ದಾರೆ.

  5 ವಿಕೆಟ್‌ಗಳು ಬಾಕಿ ಇದ್ದು, ಉಳಿದಿರುವ 66 ಎಸೆತಗಳಲ್ಲಿ 147 ರನ್‌ ಗಳಿಸಬೇಕಿದೆ.

 • 09:57 pm

  5 ಓವರ್ ಮುಕ್ತಾಯ: 25 ರನ್‌ಗೆ ಮೂರು ವಿಕೆಟ್‌ ಕಳೆದುಕೊಂಡ ಆರ್‌ಸಿಬಿ

  5 ಓವರ್‌ಗಳ ಆಟ ಮುಕ್ತಾಯವಾಗಿದ್ದು ಆರ್‌ಸಿಬಿ 3 ವಿಕೆಟ್‌ ಕಳೆದುಕೊಂಡು 25 ರನ್‌ ಗಳಿಸಿದೆ. ವಿಲಿಯರ್ಸ್‌ (13) ಮತ್ತು ಫಿಂಚ್ (7)‌ ಕ್ರೀಸ್‌ನಲ್ಲಿದ್ದಾರೆ.

 • 09:48 pm

  ಆರ್‌ಸಿಬಿಗೆ ಆರಂಭಿಕ ಆಘಾತ

  ಕಳೆದ ಪಂದ್ಯದಲ್ಲಿ ಅರ್ಧಶತಕಗಳಿಸಿದ್ದ ಆರಂಭಿಕ ಬ್ಯಾಟ್ಸ್‌ಮನ್‌ ದೇವದತ್ತ ಪಡಿಕ್ಕಲ್‌ ಕೇವಲ ಒಂದು ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದಾರೆ.

  ಜೋಶ್‌ ಫಿಲ್ಲಿಪ್ಪೆ  ಶೂನ್ಯಕ್ಕೆ ಮರಳಿದ್ದು, ನಾಯಕ ವಿರಾಟ್‌ ಕೊಹ್ಲಿ 1 ರನ್‌ ಗಳಿಸಿ ಔಟಾಗಿದ್ದಾರೆ.

  ಮೂರು ನಾಲ್ಕು ಓವರ್‌ ಮುಕ್ತಾಯಕ್ಕೆ ಆರ್‌ಸಿಬಿ 3 ವಿಕೆಟ್‌ ಕಳೆದುಕೊಂಡು 5 ರನ್‌ ಗಳಿಸಿದೆ. ಆ್ಯರನ್‌ ಫಿಂಚ್‌ (2) ಮತ್ತು ಎಬಿ ಡಿ ವಿಲಿಯರ್ಸ್‌ (0) ಕ್ರೀಸ್‌ನಲ್ಲಿದ್ದಾರೆ.

 • 10:11 pm

  ಕೊನೆಯ 4 ಓವರ್‌ಗಳಲ್ಲಿ 74 ರನ್

  ಕಿಂಗ್ಸ್‌ ಇಲವೆನ್‌ ಪಂಜಾಬ್‌ ತಂಡ 16 ಓವರ್‌ಗಳು ಮುಕ್ತಾಯವಾಗಿದ್ದಾಗ 132 ರನ್‌ ಗಳಿಸಿ ಮೂರು ವಿಕೆಟ್‌ ಕಳೆದುಕೊಂಡಿತ್ತು. ಈ ವೇಳೆ ಕೆ.ಎಲ್‌.ರಾಹುಲ್‌ 72 ಮತ್ತು ಕರುಣ್‌ ನಾಯರ್ ಮೂರು ರನ್‌ ಗಳಿಸಿ ಆಡುತ್ತಿದ್ದರು.

  ಆರ್‌ಸಿಬಿ ಬೌಲರ್‌ಗಳು ಕೊನೆಯ ನಾಲ್ಕು ಓವರ್‌ಗಳಲ್ಲಿ 74 ರನ್‌ ಬಿಟ್ಟುಕೊಟ್ಟದ್ದರಿಂದ ಪಂಜಾಬ್‌ ತಂಡದ ಮೊತ್ತ 206ಕ್ಕೆ ಏರಿತು.

  ಡೇಲ್ ‌ಸ್ಟೇಯ್ನ್‌ ಎಸೆದ 17ನೇ ಮತ್ತು 19ನೇ ಓವರ್‌ಗಳಲ್ಲಿ ಕ್ರಮವಾಗಿ 14 ಹಾಗೂ 26 ರನ್ ಬಿಟ್ಟುಕೊಟ್ಟರು. ಸೈನಿ 18ನೇ ಓವರ್‌ನಲ್ಲಿ 11 ರನ್‌ ನೀಡಿದರೆ, ಶಿವಂ ದುಬೆ ಕೊನೆಯ ಓವರ್‌ನಲ್ಲಿ 23 ರನ್‌ ನೀಡಿದರು.

 • 09:19 pm

  ಕೆ.ಎಲ್. ರಾಹುಲ್ ಭರ್ಜರಿ ಶತಕ: ಆರ್‌ಸಿಬಿಗೆ 207 ರನ್ ಗುರಿ

  ನಾಯಕ ಕೆ.ಎಲ್‌.ರಾಹುಲ್‌ ಗಳಿಸಿದ ಭರ್ಜರಿ ಶತಕದ ನೆರವಿನಿಂದ ಕಿಂಗ್ಸ್‌ ಇಲವೆನ್‌ ಪಂಜಾನ್‌ ತಂಡ ಆರ್‌ಸಿಬಿಗೆ 207 ರನ್‌ ಗುರಿ ನೀಡಿದೆ.

 • 09:13 pm

  ಐಪಿಎಲ್‌ನಲ್ಲಿ ಎರಡನೇ ಶತಕ ಸಿಡಿಸಿದ ರಾಹುಲ್

  ವಿರಾಟ್‌ ಕೊಹ್ಲಿ ನೀಡಿದ 2 ಜೀವದಾನಗಳನ್ನು ಚೆನ್ನಾಗಿ ಬಳಸಿಕೊಂಡ ಕೆ.ಎಲ್‌.ರಾಹುಲ್‌ ಭರ್ಜರಿ ಶತಕ ಸಿಡಿಸಿದರು.

  ರಾಹುಲ್‌ಗೆ ವೈಯಕ್ತಿಕವಾಗಿ ಇದು ಎರಡನೇ ಶತಕ ಮತ್ತು ಈ ಬಾರಿ ಐಪಿಎಲ್‌ನಲ್ಲಿ ದಾಖಲಾದ ಮೊದಲ ಶತಕವಾಗಿದೆ.

  ರಾಹುಲ್‌ ಸದ್ಯ 116 ರನ್‌ ಗಳಿಸಿದ್ದು, ಪಂಜಾಬ್‌ 3 ವಿಕೆಟ್‌ ಗೆ 183 ರನ್‌ ಗಳಿಸಿದೆ.

  ಇನ್ನೂ ಒಂದು ಓವರ್‌ ಆಟ ಬಾಕಿ ಇದೆ.

 • 09:10 pm

  ರಾಹುಲ್‌ಗೆ ಎರಡು ಜೀವದಾನ ನೀಡಿದ ಕೊಹ್ಲಿ

  ಬಿರುತ್ತಿನ ಬ್ಯಾಟಿಂಗ್‌ ಜೊತೆಗೆ ಶತಕದತ್ತ ಸಾಗಿರುವ ಕನ್ನಡಿಗ ಕೆ.ಎಲ್‌.ರಾಹುಲ್‌ ನೀಡಿದ ಎರಡು ಕ್ಯಾಚ್‌ಗಳನ್ನು ವಿರಾಟ್‌ ಕೊಹ್ಲಿ ಕೈ ಚೆಲ್ಲಿದರು. 17ನೇ ಓವರ್‌ನಲ್ಲಿ ಡೇಲ್‌ ಸ್ಟೇಯ್ನ್‌ ಬೌಲಿಂಗ್‌ನಲ್ಲಿ ಮತ್ತು 18ನೇ ಓವರ್‌ನಲ್ಲಿ ನವದೀಪ್‌ ಶೈನಿ ಬೌಲಿಂಗ್‌ನಲ್ಲಿ ರಾಹುಲ್‌ ಕ್ಯಾಚ್‌ ನೀಡಿದ್ದರು.
 • 09:05 pm

  17 ಓವರ್ ಮುಕ್ತಾಯ: 146 ರನ್‌ ಗಳಿಸಿದ ‘ಪಂಜಾಬ್’

  17 ಓವರ್‌ಗಳ ಆಟ ಮುಕ್ತಾಯವಾಗಿದ್ದು ಪಂಜಾಬ್‌ ತಂಡ 146 ರನ್‌ ಗಳಿಸಿ 3 ವಿಕೆಟ್‌ ಕಳೆದುಕೊಂಡಿದೆ. ರಾಹುಲ್ (84) ಮತ್ತು ಕರುಣ್‌ ನಾಯರ್‌ (3) ಕ್ರೀಸ್‌ನಲ್ಲಿದ್ದಾರೆ.
 • 08:57 pm

  16 ಓವರ್‌; 132ಕ್ಕೆ 3 ವಿಕೆಟ್

  16 ಓವರ್‌ಗಳ ಆಟ ಮುಕ್ತಾಯವಾಗಿದ್ದು ಪಂಜಾಬ್‌ ತಂಡ 132 ರನ್‌ ಗಳಿಸಿ 3 ವಿಕೆಟ್‌ ಕಳೆದುಕೊಂಡಿದೆ.

  ರಾಹುಲ್ (72) ಮತ್ತು ಕರುಣ್‌ ನಾಯರ್‌ (2) ಕ್ರೀಸ್‌ನಲ್ಲಿದ್ದಾರೆ.

  ಮ್ಯಾಕ್ಸ್‌ವೆಲ್‌ ಕೇವಲ 5 ರನ್‌ ಗಳಿಸಿ ದುಬೆ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದ್ದಾರೆ.

 • 08:45 pm

  ಪೂರನ್‌ಗೆ ಪೆವಿಲಿಯನ್ ದಾರಿ ತೋರಿದ ದುಬೆ

  17 ರನ್‌ ಗಳಿಸಿದ್ದ ಪೂರನ್‌ ದುಬೆ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದ್ದಾರೆ.

  ಸದ್ಯ ಪಂಜಾಬ್ 14 ಓವರ್‌ಗಳ ಅಂತ್ಯಕ್ಕೆ 2 ವಿಕೆಟ್‌ ಕಳೆದುಕೊಂಡು 118 ರನ್‌ ಗಳಿಸಿದೆ.

  ರಾಹುಲ್‌ (63) ಮತ್ತು ಗ್ಲೇನ್‌ ಮ್ಯಾಕ್ಸ್‌ವೆಲ್‌ (2) ಕ್ರೀಸ್‌ನಲ್ಲಿದ್ದಾರೆ.

 • 08:32 pm

  17ನೇ ಅರ್ಧಶತಕ ಗಳಿಸಿದ ರಾಹುಲ್

  ಪಂಜಾಬ್ ತಂಡದ ನಾಯಕ ರಾಹುಲ್‌ ಐಪಿಎಲ್‌ನಲ್ಲಿ 17ನೇ ಅರ್ಧಶತಕ ಗಳಿಸಿದರು.

  ಸದ್ಯ ಅವರು 52 ರನ್‌ ಗಳಿಸಿ ಆಡುತ್ತಿದ್ದಾರೆ. ಪೂರನ್‌ (16) ಇನ್ನೊಂದು ತುದಿಯಲ್ಲಿ ಬ್ಯಾಟ್‌ ಬೀಸುತ್ತಿದ್ದಾರೆ.

  ಪಂಜಾಬ್‌ 12 ಓವರ್‌ಗಳಲ್ಲಿ 1 ವಿಕೆಟ್‌ಗೆ 100 ರನ್‌ ಗಳಿಸಿದೆ.

 • 08:23 pm

  10 ಓವರ್‌ಗಳ ಆಟ ಮುಕ್ತಾಯ: 1 ವಿಕೆಟ್ ನಷ್ಟಕ್ಕೆ 90 ರನ್‌ ಗಳಿಸಿದ ಪಂಜಾಬ್

  10 ಓವರ್‌ಗಳ ಆಟ ಮುಕ್ತಾಯ ಮುಕ್ತಾಯವಾಗಿದ್ದು ಕಿಂಗ್ಸ್ ಇಲವೆನ್‌ ಪಂಜಾಬ್‌ ತಂಡ 1 ವಿಕೆಟ್ ನಷ್ಟಕ್ಕೆ 90 ರನ್‌ ಗಳಿಸಿದೆ.

  ರಾಹುಲ್‌ (47) ಮತ್ತು ಪೂರನ್ (11)‌ ಕ್ರೀಸ್‌ನಲ್ಲಿದ್ದಾರೆ.

 • 08:17 pm

  ಪಂಜಾಬ್ 70ಕ್ಕೆ 1 ವಿಕೆಟ್

  9 ಓವರ್‌ಗಳ ಆಟ ಮುಕ್ತಾಯವಾಗಿದ್ದು ಪಂಜಾಬ್‌ ತಂಡ 1 ವಿಕೆಟ್‌ ಕಳೆದುಕೊಂಡು 70 ರನ್‌ ಗಳಸಿದೆ.

  ರಾಹುಲ್‌ (36) ಮತ್ತು ನಿಕೋಲಸ್‌ ಪೂರನ್ (6)‌ ಕ್ರೀಸ್‌ನಲ್ಲಿದ್ದಾರೆ.

 • 08:08 pm

  ಪೆವಿಲಿಯನ್‌ಗೆ ಮರಳಿದ ಮಯಂಕ್

  26 ರನ್‌ ಗಳಿಸಿದ ಮಯಂಕ್‌, ಯಜುವೇಂದ್ರ ಚಾಹಲ್‌ ಎಸೆದ ಗೂಗ್ಲಿ ಸುಳಿಯಲ್ಲಿ ಸಿಲುಕಿ ಕ್ಲೀನ್‌ ಬೌಲ್ಡ್ ಆದರು.

  ಸದ್ಯ ಪಂಜಾಬ್‌ 7 ಓವರ್‌ ಮುಕ್ತಾಯಕ್ಕೆ 1 ವಿಕೆಟ್‌ ಕಳೆದುಕೊಂಡು 57 ರನ್‌ ಗಳಿಸಿದೆ.

 • 08:01 pm

  6 ಓವರ್‌: ವಿಕೆಟ್‌ ನಷ್ಟವಿಲ್ಲದೆ ಅರ್ಧಶತಕ ಪೂರೈಸಿದ ಪಂಜಾಬ್

  6 ಓವರ್‌ಗಳ ಆಟ ಮುಕ್ತಾಯವಾಗಿದ್ದು ಪಂಜಾಬ್‌ ವಿಕೆಟ್‌ ನಷ್ಟವಿಲ್ಲದೆ 50 ರನ್ ಗಳಿಸಿದೆ.

  ರಾಹುಲ್‌ (23) ಮತ್ತು ಮಯಂಕ್‌ (25) ಕ್ರೀಸ್‌ನಲ್ಲಿದ್ದಾರೆ.

 • 07:54 pm

  5 ಓವರ್‌ಗಳಲ್ಲಿ 41 ರನ್ ಗಳಿಸಿದ ಪಂಜಾಬ್

  5 ಓವರ್‌ಗಳ ಆಟ ಮುಕ್ತಾಯವಾಗಿದ್ದು ಪಂಜಾಬ್‌ ವಿಕೆಟ್‌ ನಷ್ಟವಿಲ್ಲದೆ 41 ರನ್ ಗಳಿಸಿದೆ.

  ರಾಹುಲ್‌ (21) ಮತ್ತು ಮಯಂಕ್‌ (20) ಕ್ರೀಸ್‌ನಲ್ಲಿದ್ದಾರೆ.

 • 07:47 pm

  ವೇಗವಾಗಿ 2 ಸಾವಿರ ರನ್‌ ಪೂರೈಸಿದವರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿ ಕೆಎಲ್‌

  ಕೇವಲ 48 ಇನಿಂಗ್ಸ್‌ಗಳಲ್ಲಿ 2 ಸಾವಿರ ರನ್‌ ಪೂರೈಸಿರುವ ಕ್ರಿಸ್‌ ಗೇಲ್‌ ಮೊದಲ ಸ್ಥಾನದಲ್ಲಿದ್ದು, ಆಸ್ಟ್ರೇಲಿಯಾದ ಶಾನ್‌ ಮಾರ್ಸ್ (52)‌ ಎರಡನೇ ಸ್ಥಾನದಲ್ಲಿದ್ದಾರೆ.

  ರಾಹುಲ್‌ 60ನೇ ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದಾರೆ.

 • 07:34 pm

  2 ಸಾವಿರ ರನ್‌ ಪೂರೈಸಿದ ಕೆಎಲ್‌

  ಕೆ.ಎಲ್‌.ರಾಹುಲ್‌ ಐಪಿಎಲ್‌ ಕ್ರಿಕೆಟ್‌ನಲ್ಲಿ 2 ಸಾವಿರ ರನ್‌ ಪೂರೈಸಿದರು.

  ಐಪಿಎಲ್‌ನಲ್ಲಿ ಇದುವರೆಗೆ 69 ಪಂದ್ಯಗಳ 60 ಇನಿಂಗ್ಸ್‌ನಲ್ಲಿ ಕಣಕ್ಕಿಳಿದಿದ್ದ ರಾಹುಲ್‌ 2000 ರನ್‌ ಪೂರೈಸಿದರು.

  ಇದರೊಂದಿಗೆ ವೇಗವಾಗಿ 2 ಸಾವಿರ ರನ್ ಪೂರೈಸಿದ ಭಾರತೀಯ ಬ್ಯಾಟ್ಸ್‌ಮನ್‌ ಎನಿಸಿದರು.

 • 07:31 pm

  ಇನಿಂಗ್ಸ್ ಆರಂಭಿಸಿದ ಪಂಜಾಬ್‌: ಆರಂಭಿಕರಾಗಿ ಕಣಕ್ಕಿಳಿದ ಕನ್ನಡಿಗರು

  ಪಂಜಾಬ್‌ ಸೂರ್‌ ಕಿಂಗ್ಸ್‌ ತಂಡದ ಆರಂಭಿಕರಾಗಿ ಕನ್ನಡಿಗರಾದ ನಾಯಕ ಕೆ.ಎಲ್‌.ರಾಹುಲ್‌ ಮತ್ತು ಮಯಂಕ್‌ ಅಗರವಾಲ್‌ ಕಣಕ್ಕಿಳಿದಿದ್ದಾರೆ.

  ಆರ್‌ಸಿಬಿ ಪರ ಉಮೇಶ್‌ ಯಾದವ್‌ ಬೌಲಿಂಗ್‌ ಆರಂಭಿಸಿದ್ದಾರೆ.

 • 07:29 pm

  ತಂಡಗಳು ಹೀಗಿವೆ

 • 07:24 pm

  ಆರ್‌ಸಿಬಿ ವಿರುದ್ಧದ ಹೋರಾಟಕ್ಕೆ ಸಿದ್ಧ: ಅನಿಲ್ ಕುಂಬ್ಳೆ

  ಬೆಂಗಳೂರು: ತಮ್ಮ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಗೆಲುವು ಕಂಡಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸೂಪರ್‌ ಓವರ್‌ನಲ್ಲಿ ಸೋಲು ಕಂಡಿರುವ ಕಿಂಗ್ಸ್ ಇಲವೆನ್‌ ಪಂಜಾಬ್‌ ತಂಡಗಳು ಇಂದು ಮುಖಾಮುಖಿಯಾಗುತ್ತಿವೆ.

  ಆರ್‌ಸಿಬಿ ವಿರುದ್ಧದ ಪಂದ್ಯದ ಕುರಿತು ಮಾತನಾಡಿರುವ ಪಂಜಾಬ್‌ ತಂಡದ ಕೋಚ್‌ ಅನಿಲ್‌ ಕುಂಬ್ಳೆ, ಸೋಲಿನ ಬಗ್ಗೆ ತಲೆ ಕೆಡಿಸಿಕೊಳ್ಳದೆ ಆರ್‌ಸಿಬಿ ವಿರುದ್ಧದ ಎರಡನೇ ‍ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಐಪಿಎಲ್‌ ಅಭಿಯಾನವನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.

  ಇದನ್ನೂ ಓದಿ: ಐಪಿಎಲ್–2020 | ಆರ್‌ಸಿಬಿ ವಿರುದ್ಧದ ಹೋರಾಟಕ್ಕೆ ಸಿದ್ಧ: ಅನಿಲ್ ಕುಂಬ್ಳೆ

 • 07:12 pm

  ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಆರ್‌ಸಿಬಿ

  ಕಿಂಗ್ಸ್‌ ಇಲವೆನ್‌ ಪಂಜಾಬ್‌ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ.

  ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ ಇದುವರೆಗೆ ನಡೆದಿರುವ ಎಲ್ಲ (5) ಪಂದ್ಯಗಳಲ್ಲಿಯೂ ಟಾಸ್‌ ಗೆದ್ದ ತಂಡ ಬೌಲಿಂಗ್ ಆರಿಸಿಕೊಂಡಿರುವುದು ವಿಶೇಷ.

 • 05:51 pm