ಸೋಮವಾರ, ಅಕ್ಟೋಬರ್ 26, 2020
21 °C

IPL-2020 | ಶಾರ್ಜಾ ಅಂಗಳದಲ್ಲಿ ಬ್ಯಾಟಿಂಗ್ ವೈಭವ; ರಾಯಲ್ಸ್‌ಗೆ 4 ವಿಕೆಟ್ ಜಯ

Published:
Updated:
ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಇಂದು ನಡೆಯಲಿರುವ ಪಂದ್ಯವು ಇಬ್ಬರು ವಿಕೆಟ್‌ಕೀಪರ್‌ಗಳ ನಡುವಣ ಪೈಪೋಟಿಯಾಗುವ ಸಾಧ್ಯತೆ ಇದೆ. ಈ ಸಲದ ಐಪಿಎಲ್‌ನಲ್ಲಿ ಮೊಟ್ಟ ಮೊದಲ ಶತಕ ದಾಖಲಿಸಿರುವ ಕನ್ನಡಿಗ ಕೆ.ಎಲ್. ರಾಹುಲ್ ಮತ್ತು ಕೇರಳದ ಸ್ಫೋಟಕ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್‌ ‘ಸಿಕ್ಸರ್‌ಗಳ ಮಳೆ’ ಸುರಿಸುವ ಸ್ಪರ್ಧೆಗೆ ಸಿದ್ಧರಾಗಿದ್ದಾರೆ. ರಾಹುಲ್ ನಾಯಕತ್ವದ ಕಿಂಗ್ಸ್‌ ಇಲೆವನ್ ಪಂಜಾಬ್ ಮತ್ತು ಸಂಜು ಪ್ರತಿನಿಧಿಸುವ ರಾಜಸ್ಥಾನ್ ರಾಯಲ್ಸ್‌ ತಂಡಗಳು ಇದೇ ಮೊದಲ ಸಲ ಇಲ್ಲಿ ಹಣಾಹಣಿ ನಡೆಸಲಿವೆ.
 • 11:11 pm

  ಶಾರ್ಜಾದಲ್ಲಿ ಬ್ಯಾಟಿಂಗ್ ವೈಭವ; ರಾಯಲ್ಸ್‌ಗೆ 4 ವಿಕೆಟ್ ಜಯ

  ಕೊನೆಯವರೆಗೂ ತೂಗುಯ್ಯಾಲೆಯಲ್ಲಿ ಸಾಗಿದ ಪಂದ್ಯವನ್ನು ರಾಜಸ್ಥಾನ್‌ ರಾಯಲ್ಸ್ ತಂಡ ಇನ್ನೂ ಮೂರು ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್‌ ಅಂತರದಿಂದ ಗೆದ್ದು ಬೀಗಿತು.

  ಮೊದಲು ಬ್ಯಾಟಿಂಗ್‌ ಮಾಡಿದ್ದ ಪಂಜಾಬ್‌ ತಂಡ ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 223 ರನ್‌ ಪೇರಿಸಿತ್ತು.

  ಈ ಗುರಿ ಬೆನ್ನತ್ತಿದ ರಾಯಲ್ಸ್‌ ನಾಯಕ ಸ್ಮಿತ್‌ (50), ಸಂಜು ಸ್ಯಾಮ್ಸನ್‌ (85) ಹಾಗೂ ರಾಹುಲ್‌ ತೆವಾಟಿಯಾ (53) ಬ್ಯಾಟಿಂಗ್‌ ನೆರವಿನಿಂದ ಇನ್ನೂ 3 ಎಸೆತಗಳು ಬಾಕಿ ಇರುವಂತೆಯೇ ಮುಟ್ಟಿತು.

  ಇದು ಐಪಿಎಲ್‌ ಇತಿಹಾಸದಲ್ಲಿಯೇ ಗರಿಷ್ಠ ಮೊತ್ತದ ರನ್‌ ಚೇಸ್‌ ಆಗಿದೆ.

  2008ರಲ್ಲೂ ರಾಯಲ್ಸ್‌ 217 ರನ್‌ ಬೆನ್ನಟ್ಟಿ ಗೆದ್ದಿದ್ದುದು ಈವರೆಗಿನ ದಾಖಲೆಯಾಗಿತ್ತು.

 • 11:08 pm

  ರಾಹುಲ್ ತೆವಾಟಿಯಾ ವಿಕೆಟ್ ಪತನ

  ಒಂದೇ ಓವರ್‌ನಲ್ಲಿ ಐದು ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿದ ರಾಹುಲ್‌ ತೆವಾಟಿಯಾ ಅರ್ಧಶತಕ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. 30 ಎಸೆತಗಳನ್ನು ಆಡಿದ ಅವರು 7 ಸಿಕ್ಸರ್ ಸಹಿತ 53 ರನ್‌ ಗಳಿಸಿದರು.

 • 10:59 pm

  ಐದು‌ ಸಿಕ್ಸರ್ ಸಿಡಿಸಿದ ತೆವಾಟಿಯಾ; ರಾಯಲ್ಸ್ ಹೋರಾಟ

  18ನೇ ಓವರ್‌ ಬೌಲಿಂಗ್‌ ಮಾಡಿದ ಶೇಲ್ಡನ್‌ ಕಾರ್ಟ್ರೇಲ್‌ ಅವರ ಮೊದಲ ನಾಲ್ಕು ಮತ್ತು ಆರನೇ ಎಸೆತಗಳನ್ನು ರಾಹುಲ್‌ ತೆವಾಟಿಯಾ ಸಿಕ್ಸರ್‌ಗೆ ಅಟ್ಟಿದರು. ಇದರೊಂದಿಗೆ ರಾಯಲ್ಸ್‌ 3 ವಿಕೆಟ್‌ ನಷ್ಟಕ್ಕೆ 203 ರನ್ ಗಳಿಸಿದೆ.

  ತೆವಾಟಿಯಾ (47) ಮತ್ತು ರಾಬಿನ್‌ ಉತ್ತಪ್ಪ (9) ಕ್ರೀಸ್‌ನಲ್ಲಿದ್ದಾರೆ.

  ಪಂಜಾಬ್‌ ಈ ಹಂತದಲ್ಲಿ 195 ರನ್‌ ಗಳಿಸಿ 2 ವಿಕೆಟ್‌ ಕಳೆದುಕೊಂಡಿತ್ತು.

 • 10:57 pm

  ಸ್ಯಾಮ್ಸನ್‌ ವಿಕೆಟ್ ಪತನ

  42 ಎಸೆತಗಳಲ್ಲಿ 85 ರನ್‌ ಗಳಿಸಿ ರಾಯಲ್‌ಗೆ ಗೆಲುವಿ ವಿಶ್ವಾಸ ಮೂಡಿಸಿದ್ದ ಸಂಜು ಸ್ಯಾಮ್ಸನ್‌ಗೆ ಅನುಭವಿ ವೇಗಿ ಮೊಹಮ್ಮದ್‌ ಶಮಿ ಪೆವಿಲಿಯನ್ ದಾರಿ ತೋರಿಸಿದ್ದಾರೆ.

  ಸದ್ಯ ರಾಯಲ್ಸ್‌ 17 ಓವರ್‌ಗಳಲ್ಲಿ 173 ರನ್‌ ಗಳಿಸಿದೆ.

 • 10:46 pm

  16ನೇ ಓವರ್ ಮುಕ್ತಾಯ; 2 ವಿಕೆಟ್‌ಗೆ 162 ರನ್

  15 ಓವರ್‌ ಮುಕ್ತಾಯವಾಗಿದ್ದು ರಾಯಲ್ಸ್‌ 2 ವಿಕೆಟ್‌ಗೆ 162 ರನ್‌ ಗಳಿಸಿದೆ. ಸಂಜು (85) ಮತ್ತು ರಾಹುಲ್‌ (14) ಕ್ರೀಸ್‌ನಲ್ಲಿದ್ದಾರೆ.

  ಪಂಜಾಬ್‌ ಈ ಹಂತದಲ್ಲಿ ವಿಕೆಟ್‌ ನಷ್ಟವಿಲ್ಲದೆ 172 ರನ್‌ ಗಳಿಸಿತ್ತು.

 • 10:43 pm

  15ನೇ ಓವರ್ ಮುಕ್ತಾಯ; 2 ವಿಕೆಟ್‌ಗೆ 140 ರನ್

  ಸಂಜು (64) ಮತ್ತು ರಾಹುಲ್‌ (14) ಕ್ರೀಸ್‌ನಲ್ಲಿದ್ದಾರೆ.

 • 10:37 pm

  14ನೇ ಓವರ್ ಮುಕ್ತಾಯ: 2 ವಿಕೆಟ್‌ಗೆ 132ರನ್

  ಸಂಜು (63) ಮತ್ತು ರಾಹುಲ್‌ (7) ಕ್ರೀಸ್‌ನಲ್ಲಿದ್ದಾರೆ.

  ಈ ಹಂತದಲ್ಲಿ ಪಂಜಾಬ್‌ ವಿಕೆಟ್‌ ನಷ್ಟವಿಲ್ಲದೆ 160 ರನ್‌ ಗಳಿಸಿತ್ತು,

 • 10:31 pm

  13 ಓವರ್ ಮುಕ್ತಾಯ: 2‌ ನಷ್ಟಕ್ಕೆ 122 ರನ್

  ತಂಡದ ಮೊತ್ತ 13 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 133 ರನ್‌ ಆಗಿದೆ.

  ಸಂಜು (55) ಮತ್ತು ರಾಹುಲ್‌ (5) ಕ್ರೀಸ್‌ನಲ್ಲಿದ್ದಾರೆ.

  ಎರಡನೇ ವಿಕೆಟ್‌ ಪತನದ ಬಳಿಕ ರನ್‌ ಗಳಿಕೆ ಸರಾಸರಿ ಕುಸಿದಿದೆ. ಉಳಿದಿರುವ 42 ಎಸೆತಗಳಲ್ಲಿ ರಾಯಲ್ಸ್‌ 102 ರನ್‌ ಗಳಿಸಬೇಕಿದೆ.

 • 10:26 pm

  ಅರ್ಧಶತಕದ ಪೂರೈಸಿದ ಸ್ಯಾಮ್ಸನ್

  ಕೇವಲ 28 ಎಸೆತಗಳನ್ನು ಎದುರಿಸಿರುವ ಸಂಜು 4 ಬೌಂಡರಿ ಮತ್ತು 3 ಸಿಕ್ಸರ್‌ ಸಹಿತ 52 ರನ್‌ ಗಳಿಸಿ ಆಡುತ್ತಿದ್ದಾರೆ.

  ಇದು ಅವರಿಗೆ ಈ ಬಾರಿ ಐಪಿಎಲ್‌ನಲ್ಲಿ ಎರಡನೇ ಹಾಗೂ ಒಟ್ಟಾರೆ 12ನೇ ಅರ್ಧಶತಕ.

  ಸದ್ಯ ತಂಡದ ಮೊತ್ತ 12 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 118 ರನ್‌ ಆಗಿದೆ.

 • 10:21 pm

  11ನೇ ಓವರ್‌ ಮುಕ್ತಾಯ: 2 ವಿಕೆಟ್‌ಗೆ 112 ರನ್‌

  ಸಂಜು (49) ಮತ್ತು ರಾಹುಲ್‌ (3) ಕ್ರೀಸ್‌ನಲ್ಲಿದ್ದಾರೆ.

  ಈ ಹಂತದಲ್ಲಿ ಪಂಜಾಬ್‌ 120 ರನ್‌ ಗಳಿಸಿತ್ತು.

 • 10:18 pm

  10ನೇ ಓವರ್‌ ಮುಕ್ತಾಯ: 2 ವಿಕೆಟ್‌ಗೆ 104 ರನ್‌

  ರಾಯಲ್ಸ್‌ ತಂಡ ಉಳಿದಿರುವ 10 ಓವರ್‌ಗಳಲ್ಲಿ 120 ರನ್ ಗಳಿಸಬೇಕಿದೆ.

  ಸಂಜು (43) ಮತ್ತು ರಾಹುಲ್‌ ತೆವಾಟಿಯಾ (1) ಕ್ರೀಸ್‌ನಲ್ಲಿದ್ದಾರೆ.

 • 10:12 pm

  9ನೇ ಓವರ್‌ ಮುಕ್ತಾಯ: ಸ್ಮಿತ್‌ ವಿಕೆಟ್ ಪತನ

  9 ಓವರ್‌ಗಳ ಆಟ ಮುಕ್ತಾಯವಾಗಿದ್ದು ರಾಯಲ್ಸ್‌ ತಂಡ ಎರಡು ವಿಕೆಟ್‌ ಕಳೆದುಕೊಂಡು 100 ರನ್‌ ಗಳಿಸಿದೆ.

  ನಾಯಕ ಸ್ಮಿತ್ ಅರ್ಧಶತಕ (50)‌ ಗಳಿಸಿ ಔಟಾಗಿದ್ದಾರೆ. ಇದು ಅವರಿಗೆ 10ನೇ ಅರ್ಧಶತಕ.

  ಸಂಜು ಸ್ಯಾಮ್ಸನ್ (41) ಕ್ರೀಸ್‌ನಲ್ಲಿದ್ದಾರೆ.

 • 10:08 pm

  8ನೇ ಓವರ್‌ ಮುಕ್ತಾಯ: 1 ವಿಕೆಟ್‌ಗೆ 92 ರನ್‌

  ಸ್ಮಿತ್ (48)‌ ಮತ್ತು ಸಂಜು ಸ್ಯಾಮ್ಸನ್‌ (35) ಕ್ರೀಸ್‌ನಲ್ಲಿದ್ದಾರೆ.

 • 09:57 pm

  7 ಓವರ್ ಮುಕ್ತಾಯ:1 ವಿಕೆಟ್ ನಷ್ಟಕ್ಕೆ 80

  ಬೃಹತ್‌ ಗುರಿ ಎದರು ದಿಟ್ಟ ಆಟವಾಡುತ್ತಿರುವ ರಾಯಲ್ಸ್‌ 7 ಓವರ್‌ಗಳ ಅಂತ್ಯಕ್ಕೆ 1 ವಿಕೆಟ್‌ ಕಳೆದುಕೊಂಡು 80 ರನ್‌ ಗಳಿಸಿದೆ.

  ಸ್ಮಿತ್ (46)‌ ಮತ್ತು ಸಂಜು ಸ್ಯಾಮ್ಸನ್‌ (25) ಕ್ರೀಸ್‌ನಲ್ಲಿದ್ದಾರೆ. ಈ ಇಬ್ಬರೂ ಎರಡನೇ ವಿಕೆಟ್‌ಗೆ 28 ಎಸೆತಗಳಲ್ಲಿ 61 ಸೇರಿಸಿದ್ದಾರೆ. ಇದೇ ವೇಳೆ ಸ್ಯಾಮ್ಸನ್‌ ಐಪಿಎಲ್‌ನಲ್ಲಿ 100ನೇ ಸಿಕ್ಸರ್‌ ಸಿಡಿಸಿದ್ದಾರೆ.

 • 09:52 pm

  6ನೇ ಓವರ್‌ ಮುಕ್ತಾಯ: 1 ವಿಕೆಟ್‌ ನಷ್ಟಕ್ಕೆ 69 ರನ್‌

  ರಾಯಲ್ಸ್ ಪಡೆ 6 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು 69 ರನ್‌ ಗಳಿಸಿದೆ. ಸ್ಮಿತ್ (37)‌ ಮತ್ತು ಸಂಜು ಸ್ಯಾಮ್ಸನ್‌ (23) ಕ್ರೀಸ್‌ನಲ್ಲಿದ್ದಾರೆ

  ಈ ಹಂತದಲ್ಲಿ ಪಂಜಾಬ್‌ ವಿಕೆಟ್‌ ನಷ್ಟವಿಲ್ಲದೆ 60 ರನ್‌ ಗಳಿಸಿತ್ತು.

 • 09:49 pm

  5ನೇ ಓವರ್ ಮುಕ್ತಾಯ: ಅರ್ಧಶತಕ ಪೂರೈಸಿದ ರಾಯಲ್ಸ್

  5 ಓವರ್‌ ಮುಗಿದಿದ್ದು, ರಾಯಲ್ಸ್‌ ಒಂದು ವಿಕೆಟ್‌ ಕಳೆದುಕೊಂಡು 55 ರನ್‌ ಗಳಿಸಿದೆ.

  ಸ್ಮಿತ್ (23)‌ ಮತ್ತು ಸಂಜು ಸ್ಯಾಮ್ಸನ್‌ (13) ಕ್ರೀಸ್‌ನಲ್ಲಿದ್ದಾರೆ.

 • 09:44 pm

  4ನೇ ಓವರ್ ಮುಕ್ತಾಯ: 1 ವಿಕೆಟ್‌ ನಷಕ್ಕೆ 44 ರನ್‌

  ಸ್ಮಿತ್ (23)‌ ಮತ್ತು ಸಂಜು ಸ್ಯಾಮ್ಸನ್‌ (13) ಕ್ರೀಸ್‌ನಲ್ಲಿದ್ದಾರೆ

 • 09:37 pm

  ಮೊದಲ ವಿಕೆಟ್ ಪತನ

  ಮೂರನೇ ಓವರ್‌ ಬೌಲಿಂಗ್‌ ಮಾಡಿದ ಶೇಲ್ಡನ್‌ ಕಾರ್ಟ್ರೇಲ್‌ ಅವರು ಬಟ್ಲರ್‌ ಅವರನ್ನು ಪೆವಿಲಿಯನ್‌ಗೆ ಅಟ್ಟಿದ್ದಾರೆ.

  ರಾಯಲ್ಸ್‌ ಸದ್ಯ 3 ಓವರ್‌ ಮುಕ್ತಾಯಕ್ಕೆ 1 ವಿಕೆಟ್‌ ಕಳೆದುಕೊಂಡು 30 ರನ್‌ ಗಳಿಸಿದೆ.

  ಸ್ಮಿತ್ (12)‌ ಮತ್ತು ಸಂಜು ಸ್ಯಾಮ್ಸನ್‌ (10) ಕ್ರೀಸ್‌ನಲ್ಲಿದ್ದಾರೆ.

 • 09:35 pm

  2ನೇ ಓವರ್ ಮುಕ್ತಾಯ: ವಿಕೆಟ್ ನಷ‌್ಟವಿಲ್ಲದೆ 19 ರನ್‌

  ಪಂಜಾಬ್‌ ನೀಡಿರುವ ಬೃಹತ್‌ ಗುರಿ ಬೆನ್ನತ್ತಿರುವ ರಾಯಲ್ಸ್‌ ಎರಡು ಓವರ್‌ ಮುಕ್ತಾಯಕ್ಕೆ 19 ರನ್‌ ಗಳಿಸಿದೆ.

  ಜೋಸ್‌ ಬಟ್ಲರ್ (4) ಮತ್ತು ಸ್ಟೀವ್‌ ಸ್ಮಿತ್‌ (12) ಕ್ರೀಸ್‌ನಲ್ಲಿದ್ದಾರೆ.

 • 09:04 pm

  ಇನಿಂಗ್ಸ್ ಮುಕ್ತಾಯ: ರಾಯಲ್ಸ್‌ಗೆ 224 ರನ್‌ ಗುರಿ

  ಮೊದಲ ಇನಿಂಗ್ಸ್ ಮುಕ್ತಾಯವಾಗಿದ್ದು ಪಂಜಾಬ್‌ ತಂಡ ರಾಜಸ್ಥಾನ ರಾಯಲ್ಸ್‌ಗೆ 224 ರನ್‌ ಗುರಿ ನೀಡಿದೆ.

 • 09:02 pm

  19ನೇ ಓವರ್ ಮುಕ್ತಾಯ; ದ್ವಿಶತಕ ದಾಟಿದ ಪಂಜಾಬ್

  ಪಂಜಾಬ್‌ ತಂಡ ಎರಡು ವಿಕೆಟ್‌ ನಷ್ಟಕ್ಕೆ 204 ರನ್‌ ಗಳಿಸಿದೆ.

  ಮ್ಯಾಕ್ಸ್‌ವೆಲ್ ಮತ್ತು ನಿಕೋಲಸ್‌ ಪೂರನ್ ಕ್ರೀಸ್‌ನಲ್ಲಿದ್ದಾರೆ.

 • 08:57 pm

  ವಿಕೆಟ್ ಒಪ್ಪಿಸಿದ ರಾಹುಲ್‌

  54 ಎಸೆತಗಳಲ್ಲಿ 69 ರನ್‌ ಸಿಡಿಸಿದ ಕನ್ನಡಿಗ ರಾಹುಲ್‌ ಎರಡನೇ ವಿಕೆಟ್‌ ರೂಪದಲ್ಲಿ ವಿಕೆಟ್‌ ಒಪ್ಪಿಸಿದ್ದಾರೆ.

  ಸದ್ಯ ಪಂಜಾಬ್‌ 18 ಓವರ್‌ಗಳಲ್ಲಿ 195 ರನ್‌ ಗಳಿಸಿ 2 ವಿಕೆಟ್‌ ಕಳೆದುಕೊಂಡಿದೆ.

 • 08:50 pm

  ಮೊದಲ ವಿಕೆಟ್ ಪತನ

  ಕೇವಲ 56 ಎಸೆತಗಳಲ್ಲಿ 106 ರನ್‌ ಗಳಿಸಿದ್ದ ಮಯಂಕ್ ಅಗರವಾಲ್‌ ಅವರು ಟಾಮ್‌ ಕರನ್‌ ಎಸೆದ 16.3ನೇ ಓವರ್‌ನಲ್ಲಿ ವಿಕೆಟ್‌ ಒಪ್ಪಿಸಿದ್ದಾರೆ.

  ಸದ್ಯ ಪಂಜಾಬ್‌ 183 ರನ್‌ ಗಳಿಸಿದೆ. ರಾಹುಲ್ (68)‌ ಮತ್ತು ಮ್ಯಾಕ್ಸ್‌ವೆಲ್‌ ಕ್ರೀಸ್‌ನಲ್ಲಿದ್ದಾರೆ.

 • 08:43 pm

  ಶತಕ ಪೂರೈಸಿದ ಮಯಂಕ್

  ಬಿರುಸಿನ ಬ್ಯಾಟಿಂಗ್‌ ನಡೆಸುತ್ತಿರುವ ಮಯಂಕ್‌ ಅಗರವಾಲ್‌ 45 ಎಸೆತಗಳಲ್ಲಿ 100 ರನ್‌ ಬಾರಿಸಿದರು. ಐಪಿಎಲ್‌ನಲ್ಲಿ ಇದು ಅವರ ಚೊಚ್ಚಲ ಶತಕವಾಗಿದೆ.

  ಸದ್ಯ 15 ಓವರ್‌ ಮುಕ್ತಾಯವಾಗಿದ್ದು ಪಂಜಾಬ್‌ ವಿಕೆಟ್‌ ನಷ್ಟವಿಲ್ಲದೆ 172 ರನ್‌ ಗಳಿಸಿದೆ.

 • 08:32 pm

  14ನೇ ಓವರ್ ಮುಕ್ತಾಯ; ವಿಕೆಟ್‌ ನಷ್ಟವಿಲ್ಲದೆ 160 ರನ್‌

  ಕನ್ನಡಿಗರಾದ ಮಯಂಕ್ (95)‌ ಮತ್ತು ರಾಹುಲ್ (58)‌ ಬ್ಯಾಟಿಂಗ್‌ ಅಬ್ಬರ ಮುಂದುವರಿಸಿದ್ದು, ಪಂಜಾಬ್‌ ತಂಡ 14 ಓವರ್‌ಗಳ ಅಂತ್ಯಕ್ಕೆ 161 ರನ್‌ ಗಳಿಸಿದೆ.

 • 08:30 pm

  13 ಓವರ್ ಮುಕ್ತಾಯ: ವಿಕೆಟ್‌ ನಷ್ಟವಿಲ್ಲದೆ 148 ರನ್

  ಕನ್ನಡಿಗರಾದ ಮಯಂಕ್‌ ಮತ್ತು ರಾಹುಲ್‌ ಬ್ಯಾಟಿಂಗ್‌ ಅಬ್ಬರ ಮುಂದುವರಿಸಿದ್ದು, ಪಂಜಾಬ್‌ ತಂಡ 13 ಓವರ್‌ಗಳ ಅಂತ್ಯಕ್ಕೆ 148 ರನ್‌ ಗಳಿಸಿದೆ.

  ಮಯಂಕ್‌ (88) ಮತ್ತು ರಾಹುಲ್‌ (52) ರನ್‌ ಬಾರಿಸಿದ್ದಾರೆ.

 • 08:27 pm

  12 ಓವರ್‌ ಮುಕ್ತಾಯ: ವಿಕೆಟ್‌ ನಷ್ಟವಿಲ್ಲದೆ 138 ರನ್

  12 ಓವರ್‌ ಮುಕ್ತಾಯವಾಗಿದ್ದು, ಪಂಜಾಬ್‌ ತಂಡ ವಿಕೆಟ್‌ ನಷ್ಟವಿಲ್ಲದೆ 138 ರನ್‌ ಗಳಿಸಿದೆ.

  ಮಯಂಕ್‌ 81 ರನ್‌ ಗಳಿಸಿದ್ದು, ರಾಹುಲ್ 50 ರನ್‌ ಗಳಿಸಿದ್ದಾರೆ. ರಾಹುಲ್‌ ಐಪಿಎಲ್‌ನಲ್ಲಿ ಗಳಿಸಿದ 17ನೇ ಅರ್ಧಶತಕ ಇದಾಗಿದೆ.

 • 08:20 pm

  11ನೇ ಓವರ್‌ ಮುಕ್ತಾಯ: ವಿಕೆಟ್‌ ನಷ್ಟವಿಲ್ಲದೆ 120 ರನ್‌

  11 ಓವರ್‌ಗಳ ಆಟ ಮುಕ್ತಾಯವಾಗಿದ್ದು ಪಂಜಾಬ್‌ ವಿಕೆಟ್‌ ನಷ್ಟವಿಲ್ಲದೆ 120 ರನ್‌ ಗಳಿಸಿದೆ.

  ಕಳೆದ ನಾಲ್ಕು ಓವರ್‌ಗಳಲ್ಲಿ 52 ರನ್‌ ಹರಿದು ಬಂದಿದೆ.

  ಮಯಂಕ್‌ (76) ಹಾಗೂ (38) ರಾಹುಲ್‌ ಕ್ರೀಸ್‌ನಲ್ಲಿದ್ದಾರೆ.

 • 08:17 pm

  10ನೇ ಓವರ್‌ ಮುಕ್ತಾಯ: ವಿಕೆಟ್‌ ನಷ್ಟವಿಲ್ಲದೆ 110 ರನ್‌

  ಮಯಂಕ್‌ (69) ಹಾಗೂ (36) ರಾಹುಲ್‌ ಕ್ರೀಸ್‌ನಲ್ಲಿದ್ದಾರೆ.

 • 08:10 pm

  ಅರ್ಧಶತಕದ ಪೂರೈಸಿದ ಮಯಂಕ್

  ರಾಜಸ್ಥಾನ ಬೌಲರ್‌ಗಳೆದುರು ಲೀಲಾಜಾಲವಾಗಿ ಬ್ಯಾಟಿಂಗ್‌ ಮಾಡಿದ ಮಯಂಕ್‌ ಅಗರವಾಲ್‌ ಅವರು ಕೇವಲ 26 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು.

  ಸದ್ಯ ಅವರು 29 ಎಸೆತಗಳನ್ನು ಎದುರಿಸಿದ್ದು 6 ಸಿಕ್ಸರ್‌ ಮತ್ತು 4 ಬೌಂಡರಿ ಸಹಿತ 63 ರನ್‌ ಗಳಿಸಿದ್ದಾರೆ. ಇನ್ನೊಂದು ತುದಿಯಲ್ಲಿ ರಾಹುಲ್‌ (34) ಇದ್ದಾರೆ.

  9 ಓವರ್‌ ಮುಕ್ತಾಯವಾಗಿದ್ದು ಪಂಜಾಬ್‌ ವಿಕೆಟ್‌ ನಷ್ಟವಿಲ್ಲದೆ 102 ರನ್‌ ಗಳಿಸಿದೆ.

 • 08:04 pm

  8ನೇ ಓವರ್‌ ಮುಕ್ತಾಯ: ವಿಕೆಟ್ ನಷ್ಟವಿಲ್ಲದೆ 86 ರನ್‌

  ರಾಹುಲ್‌ ತೆವಾಟಿಯ ಎಸೆದ 8ನೇ ಓವರ್‌ನಲ್ಲಿ ಮಯಂಕ್‌ ಅಗರವಾಲ್ ಎರಡು ಸಿಕ್ಸರ್‌ ಮತ್ತು 1 ಬೌಂಡರಿ ಸಹಿತ 19 ರನ್‌ ಗಳಿಸಿದರು.

  ಮಯಂಕ್‌ (48) ಜೊತೆಗೆ ರಾಹುಲ್‌ (33) ಇನ್ನೊಂದು ತುದಿಯಲ್ಲಿ ಬ್ಯಾಟಿಂಗ್‌ ನಡೆಸುತ್ತಿದ್ದಾರೆ.

 • 07:58 pm

  7ನೇ ಓವರ್‌ ಮುಕ್ತಾಯ: ವಿಕೆಟ್ ನಷ್ಟವಿಲ್ಲದೆ 67

  ಮಯಂಕ್‌ (31) ಹಾಗೂ (31) ರಾಹುಲ್‌ ಕ್ರೀಸ್‌ನಲ್ಲಿದ್ದಾರೆ.

 • 07:56 pm

  6ನೇ ಓವರ್‌ ಮುಕ್ತಾಯ: ವಿಕೆಟ್‌ ನಷ್ಟವಿಲ್ಲದೆ 60 ರನ್‌

  ಮಯಂಕ್‌ (29) ಹಾಗೂ (26) ರಾಹುಲ್‌ ಕ್ರೀಸ್‌ನಲ್ಲಿದ್ದಾರೆ.

  ಇದು ಈ ಆವೃತ್ತಿಯಲ್ಲಿ ಪವರ್‌ ಪ್ಲೇನಲ್ಲಿ ಬಂದ ಗರಿಷ್ಠ ರನ್‌ ಆಗಿದೆ.

 • 07:49 pm

  5 ಓವರ್‌ ಮುಕ್ತಾಯ: ಅರ್ಧಶತಕದ ಗಡಿ ದಾಟಿದ ಪಂಜಾಬ್‌

  ಐದು ಓವರ್‌ಗಳ ಆಟ ಮುಕ್ತಾಯವಾಗಿದ್ದು ಪಂಜಾಬ್‌ ತಂಡ ವಿಕೆಟ್‌ ನಷ್ಟವಿಲ್ಲದೆ 58 ರನ್‌ ಗಳಿಸಿದೆ.

  ಮಯಂಕ್‌ (28) ಹಾಗೂ (25) ರಾಹುಲ್‌ ಕ್ರೀಸ್‌ನಲ್ಲಿದ್ದಾರೆ.

 • 07:45 pm

  ಆರ್ಚರ್ ಬೌಲಿಂಗ್‌ನಲ್ಲಿ ಹ್ಯಾಟ್ರಿಕ್‌ ಬೌಂಡರಿ ಸಿಡಿಸಿದ ರಾಹುಲ್

  ನಾಲ್ಕನೇ ಓವರ್‌ ಬೌಲ್‌ ಮಾಡಿದ ರಾಯಲ್ಸ್‌ ಪಡೆಯ ಪ್ರಮುಖ ವೇಗಿ ಜೋಫ್ರಾ ಆರ್ಚರ್‌ಗೆ ಮೊದಲ ಮೂರು ಎಸೆತಗಳನ್ನು ರಾಹುಲ್‌ ಬೌಂಡರಿಗಟ್ಟಿದರು.

  ಪಂಜಾಬ್‌ ವಿಕೆಟ್‌ ನಷ್ಟವಿಲ್ಲದೆ 41 ರನ್‌ ಗಳಿಸಿದೆ. ಮಯಂಕ್‌, ರಾಹುಲ್‌ ಇಬ್ಬರೂ ತಲಾ 19 ರನ್‌ ಗಳಿಸಿದ್ದಾರೆ.

 • 07:43 pm

  3 ಓವರ್‌ ಮುಕ್ತಾಯ: ವಿಕೆಟ್‌ ನಷ್ಟವಿಲ್ಲದೆ 28 ರನ್‌

  ಮಯಂಕ್‌ (19) ಮತ್ತು ರಾಹುಲ್ (6)‌ ಕ್ರೀಸ್‌ನಲ್ಲಿದ್ದಾರೆ

 • 07:37 pm

  2ನೇ ಓವರ್ ಮುಕ್ತಾಯ: ವಿಕೆಟ್ ನಷ‌್ಟವಿಲ್ಲದೆ 8 ರನ್‌

  ಮಯಂಕ್‌ (8) ಮತ್ತು ರಾಹುಲ್ (3)‌ ಕ್ರೀಸ್‌ನಲ್ಲಿದ್ದಾರೆ.

 • 07:33 pm

  ಇನಿಂಗ್ಸ್ ಆರಂಭಿಸಿದ ಪಂಜಾಬ್‌

  ಕಿಂಗ್ಸ್‌ ಇಲವೆನ್‌ ಪಂಜಾಬ್‌ ತಂಡದ ಪರ ಕನ್ನಡಿಗರಾದ ಕೆ.ಎಲ್‌.ರಾಹುಲ್‌ ಮತ್ತು ಮಯಂಕ್‌ ಅಗರವಾಲ್‌ ಇನಿಂಗ್ಸ್‌ ಆರಂಭಿಸಿದ್ದಾರೆ.

  ಮೊದಲ ಓವರ್‌ ಮುಕ್ತಾಯವಾಗಿದ್ದು ಪಂಜಾಬ್‌ 4 ರನ್‌ ಗಳಿಸಿದೆ.

  ರಾಯಲ್ಸ್‌ ಪರ ಜಯದೇವ್‌ ಉನದ್ಕಟ್‌ ಮೊದಲ ಓವರ್‌ ಎಸೆದಿದ್ದಾರೆ.

 • 07:23 pm

  ಉಭಯ ತಂಡಗಳ ಆಡುವ ಹನ್ನೊಂದರ ಬಳಗ

  ಕಿಂಗ್ಸ್‌ ಇಲವೆನ್‌ ಪಂಜಾಬ್‌: ಕೆಎಲ್ ರಾಹುಲ್‌, ಮಯಂಕ್‌ ಅಗರವಾಲ್‌, ಕರುಣ್‌ ನಾಯರ್‌, ನಿಕೋಲಸ್‌ ಪೂರನ್‌, ಸರ್ಫರಾಜ್‌ ಖಾನ್‌, ಗ್ಲೇನ್‌ ಮ್ಯಾಕ್ಸ್‌ವೆಲ್‌, ಜಿಮ್ಮಿ ನೀಸಮ್‌, ಮುರುಗನ್‌ ಅಶ್ವಿನ್‌, ಶೇಲ್ಡನ್‌ ಕಾರ್ಟ್ರೆಲ್‌, ಮೊಹಮದ್‌ ಶಮಿ, ರವಿ ಬಿಷ್ಣೋಯಿ

  ರಾಜಸ್ಥಾನ್‌ ರಾಯಲ್ಸ್‌: ಸ್ಟೀವ್‌ ಸ್ಮಿತ್‌, ಜೋಶ್‌ ಬಟ್ಲರ್‌, ಸಂಜು ಸ್ಯಾಮ್ಸನ್‌, ರಾಬಿನ್‌ ಉತ್ತಪ್ಪ, ರಿಯಾನ್‌ ಪರಾಗ್‌, ಟಾಮ್‌ ಕರನ್‌, ರಾಹುಲ್‌ ತವಾಟಿಯಾ, ಶ್ರೇಯಸ್ ಗೋಪಾಲ್‌, ಜೋಫ್ರಾ ಆರ್ಚರ್‌, ಅಂಕಿತ್‌ ರಜ್‌ಪೂತ್‌, ಜಯದೇವ್‌ ಉನದ್ಕಟ್‌

 • 06:56 pm

  ಟಾಸ್‌ ಗೆದ್ದ ರಾಯಲ್ಸ್ ಬೌಲಿಂಗ್‌ ಆಯ್ಕೆ

  ಕಿಂಗ್ಸ್‌ ಇಲವೆನ್‌ ಪಂಜಾಬ್‌ ವಿರುದ್ಧ ಇಂದು ನಡೆಯಲಿರುವ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ರಾಜಸ್ಥಾನ್ ರಾಯಲ್ಸ್‌ ತಂಡವು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

 • 03:19 pm

  ಇಂದಿನ ಪಂದ್ಯದಲ್ಲಿ ಯಾವ ತಂಡ ಮೇಲುಗೈ ಸಾಧಿಸಲಿದೆ?

 • 03:03 pm

  IPL-2020: ಇಬ್ಬರು ವಿಕೆಟ್‌ಕೀಪರ್‌ಗಳ ಪೈಪೋಟಿ