ಶುಕ್ರವಾರ, ಅಕ್ಟೋಬರ್ 23, 2020
21 °C

IPL-2020 | RCB vs DC: ಆರ್‌ಸಿಬಿ ವಿರುದ್ಧ ಡೆಲ್ಲಿಗೆ ಜಯ

Published:
Updated:
ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿರುದ್ಧ ಇಂದು ರಾತ್ರಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಗೆಲುವು ಸಾಧಿಸಿತು. ಇದರೊಂದಿಗೆ ಈ ತಂಡ ಟೂರ್ನಿಯಲ್ಲಿ ಆಡಿರುವ 5 ಪಂದ್ಯಗಳಿಂದ 4ನೇ ಗೆಲುವು ಸಾಧಿಸಿ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
 • 11:10 pm

  ಡೆಲ್ಲಿಗೆ 59 ರನ್ ಗೆಲುವು

  ಡೆಲ್ಲಿ ಕ್ಯಾಪಿಟಲ್ಸ್‌ ನೀಡಿದ ಸವಾಲಿನ ಗುರಿ ಎದುರು ಬ್ಯಾಟಿಂಗ್‌ ನಡೆಸಿದ ಆರ್‌ಸಿಬಿ 9 ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 137 ರನ್‌ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ಈ ತಂಡ 59 ರನ್‌ ಅಂತರದ ಸೋಲೊಪ್ಪಿಕೊಂಡಿತು.

  ಈ ಜಯದೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್‌ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

 • 11:04 pm

  9ನೇ ವಿಕೆಟ್ ಪತನ

  ಮೊಹಮ್ಮದ್‌ ಸಿರಾಜ್‌ 19ನೇ ಓವರ್‌ನ ಕೊನೆಯ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದ್ದಾರೆ. ಇದರೊಂದಿಗೆ ಆರ್‌ಸಿಬಿ 9 ವಿಕೆಟ್‌ ಕಳೆದುಕೊಂಡಿದ್ದು, 1 ಓವರ್‌ ಆಟ ಬಾಕಿ ಇದೆ. ಕೊನೆಯ ಓವರ್‌ನಲ್ಲಿ 70 ರನ್‌ ಬೇಕಾಗಿದೆ.

 • 10:53 pm

  18 ಓವರ್ ಮುಕ್ತಾಯ: 8 ವಿಕೆಟ್‌ಗೆ 121 ರನ್

  18ನೇ ಓವರ್‌ ಬೌಲಿಂಗ್ ಮಾಡಿದ ಕಗಿಸೊ ರಬಾಡ ಶಿವಂ ದುಬೆ ಮತ್ತು ಇಸುರು ಉದಾನ ಅವರನ್ನು ಔಟ್‌ ಮಾಡಿ ಕೇವಲ 3 ರನ್‌ ಬಿಟ್ಟುಕೊಟ್ಟರು.

  ಇನ್ನು 2 ಓವರ್‌ಗಳ ಆಟ ಬಾಕಿ ಇದ್ದು, ಆರ್‌ಸಿಬಿ 76 ರನ್‌ ಗಳಿಸಬೇಕಿದೆ.

 • 10:47 pm

  17ನೇ ಓವರ್ ಮುಕ್ತಾಯ: 7 ವಿಕೆಟ್‌ಗೆ 118 ರನ್

  ಬಾಕಿ ಇರುವ 18 ಎಸೆತಗಳಲ್ಲಿ ಕೊಹ್ಲಿ ಪಡೆ 79 ರನ್‌ ಗಳಿಸಬೇಕಿದೆ. ಶಿವಂ ದುಬೆ ಮತ್ತು ಇಸುರು ಉದಾನ ಕ್ರೀಸ್‌ನಲ್ಲಿದ್ದಾರೆ.

 • 10:44 pm

  16ನೇ ಓವರ್‌ ಮುಕ್ತಾಯ: 6 ವಿಕೆಟ್‌ಗೆ 115 ರನ್

  16ನೇ ಓವರ್‌ ಮುಕ್ತಾಯವಾಗಿದ್ದು ಆರ್‌ಸಿಬಿ 6 ವಿಕೆಟ್‌ ಕಳೆದುಕೊಂಡು 115 ರನ್‌ ಗಳಿಸಿದೆ.

  11 ಎಸೆತಗಳಲ್ಲಿ 17 ರನ್ ಗಳಿಸಿದ್ದ ವಾಷಿಂಗ್ಟನ್‌ ಸುಂದರ್‌ 6ನೇ ವಿಕೆಟ್‌ ರೂಪದಲ್ಲಿ ಪೆವಿಲಿಯನ್ ಸೇರಿಕೊಂಡಿದ್ದಾರೆ.

  ಉಳಿದಿರುವ 24 ಎಸೆತಗಳಲ್ಲಿ ಈ ತಂಡ ಗೆಲ್ಲಲು 82 ರನ್‌ ಬೇಕಾಗಿದೆ.

 • 10:37 pm

  ಕೊಹ್ಲಿ ವಿಕೆಟ್‌ ಪತನ

  43 ರನ್‌ ಗಳಿಸಿ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸುತ್ತಿದ್ದ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ 14ನೇ ಓವರ್‌ನಲ್ಲಿ ವಿಕೆಟ್‌ ಒಪ್ಪಿಸಿದ್ದಾರೆ.

  ಸದ್ಯ 14 ಓವರ್ ಮುಗಿದಿದ್ದು, ಆರ್‌ಸಿಬಿ 5 ವಿಕೆಟ್‌ ನಷ್ಟಕ್ಕೆ 97ರನ್‌ ಗಳಿಸಿದೆ.

 • 10:32 pm

  ಏಳು ಓವರ್‌ಗಳಲ್ಲಿ ಬೇಕು 106 ರನ್

  13 ಓವರ್‌ಗಳ ಆಟ ಮುಕ್ತಾಯವಾಗಿದ್ದ ಆರ್‌ಸಿಬಿ 4 ವಿಕೆಟ್‌ ನಷ್ಟಕ್ಕೆ 91 ರನ್‌ ಗಳಿಸಿದೆ.

  ಉಳಿದಿರುವ 42 ಎಸೆತಗಳಲ್ಲಿ 106 ರನ್‌ ಬೇಕಾಗಿದೆ.

 • 10:25 pm

  4ನೇ ವಿಕೆಟ್‌ ಪತನ

  12 ಓವರ್‌ನ ಕೊನೆಯ ಎಸೆತದಲ್ಲಿ ಅಲ್ರೌಂಡರ್‌ ಮೋಯಿನ್‌ ಅಲಿ ವಿಕೆಟ್‌ ಒಪ್ಪಿಸಿದ್ದಾರೆ.

 • 10:18 pm

  10ನೇ ಓವರ್‌ ಮುಕ್ತಾಯ: 3 ವಿಕೆಟ್‌ಗೆ 63 ರನ್

  ಹತ್ತು ಓವರ್‌ಗಳ ಆಟ ಮುಕ್ತಾಯವಾಗಿದ್ದು, ಆರ್‌ಸಿಬಿ 3 ವಿಕೆಟ್‌ಗೆ 63 ರನ್‌ ಗಳಿಸಿದೆ.

 • 10:13 pm

  9ನೇ ಓವರ್‌ ಮುಕ್ತಾಯ: 3 ವಿಕೆಟ್‌ಗೆ 61 ರನ್

  9 ಓವರ್‌ಗಳ ಆಟ ಮುಕ್ತಾಯವಾಗಿದ್ದು ಆರ್‌ಸಿಬಿ 61 ರನ್‌ ಗಳಿಸಿದೆ.

  ಕಳೆದ ಪಂದ್ಯಗಳಲ್ಲಿ ಮಿಂಚಿದ್ದ ದೇವದತ್ತ ಪಡಿಕ್ಕಲ್‌ (4), ಆ್ಯರನ್‌ ಪಿಂಚ್‌ (13), ಎಬಿ ಡಿ ವಿಲಿಯರ್ಸ್‌ (9) ವಿಕೆಟ್‌ ಒಪ್ಪಿಸಿದ್ದಾರೆ.

  ನಾಯಕ ಕೊಹ್ಲಿ (22) ಮತ್ತು ಅಲಿ (8) ಕ್ರೀಸ್‌ನಲ್ಲಿದ್ದಾರೆ.

 • 10:11 pm

  8 ಓವರ್ ಮುಕ್ತಾಯ: 3 ವಿಕೆಟ್‌ಗೆ 54 ರನ್

  8 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಆರ್‌ಸಿಬಿ 3 ವಿಕೆಟ್‌ ಕಳೆದುಕೊಂಡು 54 ರನ್‌ ಕಲೆಹಾಕಿದೆ. ಸದ್ಯ ವಿರಾಟ್‌ ಕೊಹ್ಲಿ (18) ಮತ್ತು ಮೋಯಿನ್‌ ಅಲಿ (6) ಕ್ರೀಸ್‌ನಲ್ಲಿದ್ದಾರೆ.
 • 10:06 pm

  3ನೇ ವಿಕೆಟ್‌ ಪತನ

  ಬೃಹತ್ ಗುರಿ ಬೆನ್ನತ್ತಿರುವ ಆರ್‌ಸಿಬಿ ಕೇವಲ 43 ರನ್‌ ಆಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿದೆ.

 • 09:20 pm

  197 ರನ್‌ ಗುರಿ

  ದುಬೈ ಅಂತರರಾಷ್ಟ್ರೀಯ ಕ್ರಿಕೆಟ್‌ ಮೈದಾನದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 196 ರನ್ ಗಳಿಸಿದೆ.

 • 09:09 pm

  ಪಂತ್ ವಿಕೆಟ್ ಪತನ

  25 ಎಸೆತಗಳಲ್ಲಿ 37 ರನ್‌ ಗಳಿಸಿ ಆಡುತ್ತಿದ್ದ ರಿಷಭ್‌ ಪಂತ್‌ ನಾಲ್ಕನೇ ವಿಕೆಟ್ ರೂಪದಲ್ಲಿ ಪೆವಿಲಿಯನ್‌ ಸೇರಿಕೊಂಡಿದ್ದಾರೆ.

  ಸದ್ಯ 19ನೇ ಓವರ್‌ ಮುಕ್ತಾಯವಾಗಿದ್ದು ಡೆಲ್ಲಿ 4 ವಿಕೆಟ್‌ ನಷ್ಟಕ್ಕೆ 184 ರನ್‌ ಗಳಿಸಿದೆ.

 • 09:05 pm

  18 ಓವರ್ ಮುಕ್ತಾಯ: 3 ವಿಕೆಟ್‌ಗೆ 171

  18ನೇ ಓವರ್‌ ಮುಕ್ತಾಯವಾಗಿದ್ದು ಡೆಲ್ಲಿ ಕ್ಯಾಪಿಟಲ್ಸ್‌ 3 ವಿಕೆಟ್‌ ಕಳೆದುಕೊಂಡು 171 ರನ್‌ ಗಳಿಸಿದೆ.

  ಸ್ಟೋಯಿನಸ್‌ (48) ಮತ್ತು ಪಂತ್‌ (31) ಬಿರುಸಿನ ಬ್ಯಾಟಿಂಗ್‌ ನಡೆಸುತ್ತಿದ್ದಾರೆ.

 • 08:58 pm

  17ನೇ ಓವರ್ ಮುಕ್ತಾಯ: 3 ವಿಕೆಟ್‌ಗೆ 161 ರನ್‌

  17ನೇ ಓವರ್‌ಗಳ ಆಟ ಮುಕ್ತಾಯವಾಗಿದ್ದು ಡೆಲ್ಲಿ ತಂಡ 3 ವಿಕೆಟ್‌ ಕಳೆದುಕೊಂಡು161 ರನ್‌ ಗಳಿಸಿದೆ.

  ಸ್ಟೋಯಿನಸ್‌ (46) ಮತ್ತು ಪಂತ್‌ (25) ಕ್ರೀಸ್‌ನಲ್ಲಿದ್ದಾರೆ.

 • 08:50 pm

  ಪಂತ್–ಸ್ಟೋಯಿನಸ್ ಅರ್ಧಶತಕದ ಜೊತೆಯಾಟ

  ಪಂತ್‌ ಮತ್ತು ಸ್ಟೋಯಿನಸ್‌ ಜೋಡಿ ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ 53 ರನ್‌ ಕಲೆಹಾಕಿದೆ.

  15ನೇ ಓವರ್‌ಗಳ ಆಟ ಮುಕ್ತಾಯವಾಗಿದ್ದಯ ಡೆಲ್ಲಿ 3 ವಿಕೆಟ್‌ ಕಳೆದುಕೊಂಡು 143 ರನ್‌ ಗಳಿಸಿದೆ. 

 • 08:46 pm

  15ನೇ ಓವರ್‌ ಮುಕ್ತಾಯ; 134ಕ್ಕೆ 3 ವಿಕೆಟ್‌

  15 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಡೆಲ್ಲಿ ತಂಡ 3 ವಿಕೆಟ್‌ ಕಳೆದುಕೊಂಡು 134ರನ್ ಗಳಿಸಿದೆ.

  ಸ್ಟಾಯಿನಸ್‌ ಮತ್ತು ಪಂತ್‌ ಕ್ರೀಸ್‌ನಲ್ಲಿದ್ದಾರೆ.

 • 08:36 pm

  14ನೇ ಓವರ್ ಮುಕ್ತಾಯ: 3 ವಿಕೆಟ್ ನಷ್ಟಕ್ಕೆ 117 ರನ್‌

  ಸದ್ಯ ಮಾರ್ಕಸ್‌ ಸ್ಟೋಯಿನಸ್ (16)‌ ಮತ್ತು ರಿಷಭ್‌ ಪಂತ್ (13)‌ ಕ್ರೀಸ್‌ನಲ್ಲಿದ್ದಾರೆ.

 • 08:29 pm

  ಕೊನೆಯ 5 ಓವರ್‌ಗಳಲ್ಲಿ 2 ವಿಕೆಟ್‌ 27 ರನ್‌

  13 ಓವರ್‌ಗಳ ಆಟ ಮುಗಿದಿದ್ದು, ಡೆಲ್ಲಿ 3 ವಿಕೆಟ್‌ಗೆ 102 ರನ್‌ ಗಳಿಸಿದೆ.

  ಕಳೆದ ಐದು ಓವರ್‌ಗಳಲ್ಲಿ ಕೇವಲ 27 ರನ್‌ ನೀಡಿ 2 ವಿಕೆಟ್‌ ಪಡೆದಿರುವ ಆರ್‌ಸಿಬಿ ಪಂದ್ಯದ ಮೇಲೆ ಹಿಡಿತ ಸಾಧಿಸುವತ್ತ ಸಾಗಿದೆ.

  ಸದ್ಯ ಮಾರ್ಕಸ್‌ ಸ್ಟೋಯಿನಸ್‌ ಮತ್ತು ರಿಷಭ್‌ ಪಂತ್‌ ಕ್ರೀಸ್‌ನಲ್ಲಿದ್ದಾರೆ.

 • 08:24 pm

  ಅಯ್ಯರ್ ಔಟ್

  ಬೌಂಡರಿ ಗೆರೆ ಬಳಿ ಕನ್ನಡಿಗ ದೇವದತ್ತ ಹಿಡಿದ ಅಮೋಘ ಕ್ಯಾಚ್‌ನಿಂದಾಗಿ ಡೆಲ್ಲಿ ತಂಡದ ನಾಯಕ ಶ್ರೇಯಸ್‌ ಅಯ್ಯರ್‌ (11) ಔಟಾಗಿದ್ದಾರೆ.

  ಸದ್ಯ 12 ಓವರ್‌ಗಳ ಆಟ ಮುಗಿದಿದ್ದು ಡೆಲ್ಲಿ 3 ವಿಕೆಟ್‌ ಕಳೆದುಕೊಂಡು 94 ರನ್ ಗಳಿಸಿದೆ.

 • 08:14 pm

  10 ಓವರ್ ಮುಕ್ತಾಯ: 2 ವಿಕೆಟ್‌ಗೆ 85 ರನ್‌

  10ನೇ ಓವರ್‌ನ ಆಟ ಮುಕ್ತಾಯವಾಗಿದ್ದು ಡೆಲ್ಲಿ ತಂಡ 2 ವಿಕೆಟ್‌ ನಷ್ಟಕ್ಕೆ 85 ರನ್ ಗಳಿಸಿದೆ.

  10ನೇ ಓವರ್‌ನ 4ನೇ ಎಸೆತದಲ್ಲಿ ಧವನ್, ಮೋಯಿನ್‌ ಅಲಿಗೆ‌ ವಿಕೆಟ್‌ ಒಪ್ಪಿಸಿದ್ದಾರೆ. ಅವರು 28 ಎಸೆತಗಳಲ್ಲಿ 32 ರನ್‌ ಗಳಿಸಿದ್ದರು. ಮೊದಲ ವಿಕೆಟ್‌ ರೂಪದಲ್ಲಿ ಪೃಥ್ವಿ ಶಾ (42) ಪೆವಿಲಿಯನ್‌ ಸೇರಿಕೊಂಡಿದ್ದರು.

  ಸದ್ಯ ನಾಯಕ ಅಯ್ಯರ್ ()‌ ಮತ್ತು ರಿಷಭ್‌ ಪಂತ್‌ ಕ್ರೀಸ್‌ನಲ್ಲಿದ್ದಾರೆ. 

 • 08:03 pm

  ಮೊದಲ ವಿಕೆಟ್ ಪತನ

  7ನೇ ಓವರ್‌ನಲ್ಲಿ ಬೌಲಿಂಗ್‌ ಮಾಡಲು ಬಂದ ಮೊಹಮ್ಮದ್‌ ಸಿರಾಜ್‌ ಆರ್‌ಸಿಬಿಗೆ ಮೊದಲ ವಿಕೆಟ್‌ ಗಳಿಸಿಕೊಟ್ಟರು.

  ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಪೃಥ್ವಿ ಶಾ (42) ಅವರಿಗೆ ಓವರ್‌ನ ನಾಲ್ಕನೇ ಎಸೆತದಲ್ಲಿ ಪೆವಿಲಿಯನ್‌ ದಾರಿ ತೋರಿದರು.

  ಸದ್ಯ 7 ಓವರ್‌ ಮುಕ್ತಾಯವಾಗಿದ್ದು ಡೆಲ್ಲಿ 1 ವಿಕೆಟ್‌ಗೆ 72 ರನ್‌ ಗಳಿಸಿದೆ. ನಾಯಕ ಶ್ರೇಯಸ್‌ ಅಯ್ಯರ್‌ (4) ಮತ್ತು ಧವನ್‌ (25) ಕ್ರೀಸ್‌ನಲ್ಲಿದ್ದಾರೆ.

 • 07:54 pm

  ಪವರ್‌ ಪ್ಲೇ ಮುಕ್ತಾಯ: ವಿಕೆಟ್‌ ನಷ್ಟವಿಲ್ಲದೆ 63 ರನ್‌

  ಆರು ಓವರ್‌ಗಳ ಆಟ ಮುಕ್ತಾಯವಾಗಿದ್ದು ಡೆಲ್ಲಿ ತಂಡ ವಿಕೆಟ್‌ ನಷ್ಟವಿಲ್ಲದೆ 63 ರನ್ ಗಳಿಸಿದೆ.

  ಪೃಥ್ವಿ ಶಾ ಬಿರುಸಿನ ಬ್ಯಾಟಿಂಗ್ ಮಾಡುತ್ತಿದ್ದು, 5 ಬೌಂಡರಿ ಮತ್ತು 2 ಸಿಕ್ಸರ್‌ ಸಹಿತ 22 ಎಸೆತಗಳಲ್ಲಿ 42 ರನ್‌ ಗಳಿಸಿದ್ದಾರೆ. 10 ಎಸೆತಗಳಲ್ಲಿ 20 ರನ್‌ ಬಾರಿಸಿರುವ ಶಿಖರ್‌ ಧವನ್‌ ಇನ್ನೊಂದು ತುದಿಯಲ್ಲಿ ಕ್ರೀಸ್‌ನಲ್ಲಿದ್ದಾರೆ.

 • 07:50 pm

  5ನೇ ಓವರ್‌ ಮುಕ್ತಾಯ: ಐವತ್ತು ರನ್‌ ಪೂರೈಸಿದ ಡೆಲ್ಲಿ

  ಡೆಲ್ಲಿ ತಂಡ 4.5ನೇ ಓವರ್‌ನಲ್ಲಿ 50ರನ್‌ ಗಡಿ ದಾಟಿದೆ. ಶಾ (33) ಮತ್ತು ಧವನ್‌ (19) ಕ್ರೀಸ್‌ನಲ್ಲಿದ್ದಾರೆ.

 • 07:42 pm

  3ನೇ ಓವರ್‌ ಮುಕ್ತಾಯ: ವಿಕೆಟ್ ನಷ್ಟವಿಲ್ಲದೆ 31 ರನ್

  ಮೂರು ಓವರ್‌ಗಳ ಆಟ ಮುಕ್ತಾಯವಾಗಿದ್ದು ಡೆಲ್ಲಿ ವಿಕೆಟ್ ನಷ್ಟವಿಲ್ಲದೆ 31 ರನ್‌ ಗಳಿಸಿದೆ.

  ಪೃಥ್ವಿ ಶಾ ಬಿರುಸಿನ ಬ್ಯಾಟಿಂಗ್ ಮಾಡುತ್ತಿದ್ದು, 3 ಬೌಂಡರಿ ಮತ್ತು 1 ಸಿಕ್ಸರ್‌ ಸಹಿತ 10 ಎಸೆತಗಳಲ್ಲಿ 20 ರನ್‌ ಗಳಿಸಿದ್ದಾರೆ. ಶಿಖರ್‌ ಧವನ್‌ (10) ಇನ್ನೊಂದು ತುದಿಯಲ್ಲಿ ಕ್ರೀಸ್‌ನಲ್ಲಿದ್ದಾರೆ.

 • 07:30 pm

  ಇನಿಂಗ್ಸ್ ಆರಂಭಿಸಿದ ಡೆಲ್ಲಿ

  ಡೆಲ್ಲಿ ಕ್ಯಾಪಿಟಲ್ಸ್ ತಂಡ ಬ್ಯಾಟಿಂಗ್‌ ಆರಂಭಿಸಿದ್ದು, ಮೊದಲ ಓವರ್‌ ಮುಕ್ತಾಯಕ್ಕೆ 14 ರನ್‌ ಗಳಿಸಿದೆ.

  ಪೃಥ್ವಿ ಶಾ ಬಿರುಸಿನ ಬ್ಯಾಟಿಂಗ್ ಮಾಡುತ್ತಿದ್ದು, 3 ಬೌಂಡರಿ ಸಹಿತ 13 ರನ್‌ ಗಳಿಸಿದ್ದಾರೆ. ಶಿಖರ್‌ ಧವನ್‌ (1) ಇನ್ನೊಂದು ತುದಿಯಲ್ಲಿ ಕ್ರೀಸ್‌ನಲ್ಲಿದ್ದಾರೆ.

 • 07:13 pm

  ಆಡುವ ಬಳಗದಲ್ಲಿ ಬದಲಾವಣೆ

  ಆರ್‌ಸಿಬಿ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗಿದೆ. ಅನಾರೋಗ್ಯದಿಂದ ಬಳಲುತ್ತಿರುವ ಲೆಗ್‌ ಸ್ಪಿನ್ನರ್‌ ಆ್ಯಡಂ ಜಂಪಾ ಅವರ ಬದಲು ಮೋಯಿನ್‌ ಅಲಿ ತಂಡ ಕೂಡಿಕೊಂಡಿದ್ದಾರೆ. ಗುರುಕೀರತ್‌ ಸಿಂಗ್‌ ಬದಲು ಮೊಹಮ್ಮದ್‌ ಸಿರಾಜ್‌ಗೆ ಅವಕಾಶ ನೀಡಲಾಗಿದೆ.

  ಕಳೆದ ಪಂದ್ಯದಲ್ಲಿ ಗಾಯಗೊಂಡಿದ್ದ ಅಮಿತ್‌ ಮಿಶ್ರಾ ಅವರ ಬದಲು ಆಲ್ರೌಂಡರ್‌ ಅಕ್ಷರ್‌ ಪಟೇಲ್‌ ಅವರಿಗೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಅವಕಾಶ ನೀಡಿದೆ.

 • 07:06 pm

  ಹನ್ನೊಂದರ ಬಳಗ

  ಡೆಲ್ಲಿ ಕ್ಯಾಪಿಟಲ್ಸ್‌: ಪೃಥ್ವಿ ಶಾ, ಶಿಖರ್‌ ಧವನ್‌, ಶ್ರೇಯಸ್‌ ಅಯ್ಯರ್‌ (ನಾಯಕ), ರಿಷಭ್‌ ಪಂತ್‌ (ವಿಕೆಟ್‌ ಕೀಪರ್‌), ಶಿಮ್ರೋನ್‌ ಹೆಟ್ಮೆಯರ್‌, ಮಾರ್ಕಸ್‌ ಸ್ಟೋಯಿನಸ್‌, ರವಿಚಂದ್ರನ್‌ ಅಶ್ವಿನ್‌, ಅಕ್ಷರ್‌ ಪಟೇಲ್‌, .ಹರ್ಷಲ್‌ ‍ಪಟೇಲ್‌, ಕಗಿಸೊ ರಬಾಡ, ಎನ್ರಿಚ್‌ ನೋರ್ಟ್ಜೆ

   

  ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: ದೇವದತ್ತ ಪಡಿಕ್ಕಲ್‌, ಆ್ಯರನ್‌ ಫಿಂಚ್‌, ವಿರಾಟ್‌ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್‌ (ವಿಕೆಟ್‌ ಕೀಪರ್‌), ಮೋಯಿನ್‌ ಅಲಿ, ಶಿವಂ ದುಬೆ, ವಾಷಿಂಗ್ಟನ್‌ ಸುಂದರ್‌, ಇಸುರು ಉದಾನ, ನವದೀಪ್‌ ಸೈನಿ, ಮೊಹಮ್ಮದ್‌ ಸಿರಾಜ್‌, ಯಜುವೇಂದ್ರ ಚಾಹಲ್‌

 • 07:03 pm

  ಆರ್‌ಸಿಬಿ ಬೌಲಿಂಗ್

  ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಟಾಸ್ ಗೆದ್ದಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ವಿರಾಟ್‌ ಕೊಹ್ಲಿ ಬೌಲಿಂಗ್‌ ಮಾಡಿಕೊಂಡಿದ್ದಾರೆ.

 • 03:01 pm

  ಇಂದಿನ ಪಂದ್ಯದಲ್ಲಿ ಗೆಲುವು ಯಾರಿಗೆ? ವೋಟ್‌ ಮಾಡಿ