ಗುರುವಾರ , ಅಕ್ಟೋಬರ್ 22, 2020
22 °C

IPL-2020 | RCB vs RR: ಪಡಿಕ್ಕಲ್‌–ಕೊಹ್ಲಿ ಜೊತೆಯಾಟ; ಆರ್‌ಸಿಬಿಗೆ 8 ವಿಕೆಟ್ ಜಯ

Published:
Updated:
ಇಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್‌ ತಂಡಗಳು ಸೆಣಸಾಟ ನಡೆಸಲಿವೆ. ಈ ತಂಡಗಳು ಟೂರ್ನಿಯಲ್ಲಿ ತಲಾ ಮೂರು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, ಎರಡರಲ್ಲಿ ಜಯ ಹಾಗೂ ಒಂದು ಪಂದ್ಯದಲ್ಲಿ ಸೋಲು ಕಂಡಿವೆ. ಪಾಯಿಂಟ್ಸ್‌ ಪಟ್ಟಿಯಲ್ಲಿ ಮೇಲೇರಲು ಈ ಪಂದ್ಯ ಉಭಯ ತಂಡಗಳಿಗೆ ಮಹತ್ವದ್ದಾಗಿದೆ.
Secondary Categories: 
 • 07:13 pm

  ಆರ್‌ಸಿಬಿಗೆ 8 ವಿಕೆಟ್‌ ಜಯ

  ರಾಜಸ್ಥಾನ ರಾಯಲ್ಸ್‌ ನೀಡಿದ ಸವಾಲಿನ ಗುರಿ ಎದುರು ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದ ಆರ್‌ಸಿಬಿ ಇನ್ನೂ 5 ಎಸೆತಗಳು ಬಾಕಿ ಇರುವಂತೆಯೇ 8 ವಿಕೆಟ್‌ ಅಂತರದಿಂದ ಗೆದ್ದು ಬೀಗಿತು. ಈ ಜಯದೊಂದಿಗೆ ಆರ್‌ಸಿಬಿ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

 • 06:50 pm

  37ನೇ ಅರ್ಧಶತಕ ಗಳಿಸಿದ ಕೊಹ್ಲಿ

  ಮೊದಲ ಮೂರು ಪಂದ್ಯಗಳಲ್ಲಿ ದೊಡ್ಡ ಮೊತ್ತ ಕಲೆಹಾಕಲು ವಿಫಲವಾಗಿದ್ದ ಆರ್‌ಸಿಬಿ ತಂಡದ ನಾಯಕ ಕೊಹ್ಲಿ ಈ ಪಂದ್ಯದಲ್ಲಿ ಅರ್ಧಶತಕ ಗಳಿಸಿದರು.

  ಇದು ಐಪಿಎಲ್‌ನಲ್ಲಿ ಅವರು ಗಳಿಸಿದ 37ನೇ ಅರ್ಧಶತಕ.

  ಸದ್ಯ 15 ಓವರ್‌ಗಳ ಆಟ ಮುಕ್ತಾಯವಾಗಿದ್ದು ಆರ್‌ಸಿಬಿ 1 ವಿಕೆಟ್‌ಗೆ 118 ರನ್‌ ಗಳಿಸಿದೆ.

 • 06:41 pm

  ಶತಕ ಪೂರೈಸಿದ ಆರ್‌ಸಿಬಿ

  ಸವಾಲಿನ ಗುರಿ ಎದುರು ದಿಟ್ಟ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತಿರುವ ಆರ್‌ಸಿಬಿ 12.3ನೇ ಓವರ್‌ನಲ್ಲಿ 100 ರನ್‌ ಗಳಿಸಿದೆ.

  ಪಡಿಕ್ಕಲ್‌ (54) ಮತ್ತು ನಾಯಕ ಕೊಹ್ಲಿ (40) ಕ್ರೀಸ್‌ನಲ್ಲಿದ್ದಾರೆ.

  ಗೆಲ್ಲಲು ಉಳಿದಿರುವ 42 ಎಸೆತಗಳಲ್ಲಿ 51 ರನ್‌ ಗಳಿಸಬೇಕಿದೆ.

 • 06:35 pm

  ಮೂರನೇ ಅರ್ಧಶತಕ ಸಿಡಿಸಿದ ಪಡಿಕ್ಕಲ್‌

  ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ನಾಲ್ಕನೇ ಪಂದ್ಯ ಆಡುತ್ತಿರುವ ದೇವದತ್ತ ಪಡಿಕ್ಕಲ್‌ ಮೂರನೇ ಅರ್ಧಶತಕ ಸಿಡಿಸಿದರು.

  ಅವರಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ 56, ಮುಂಬೈ ವಿರುದ್ಧ 54 ರನ್‌ ಗಳಿಸಿದ್ದರು.

  ಸದ್ಯ ಅವರು 54 ರನ್‌ ಗಳಿಸಿ ಆಡುತ್ತಿದ್ದು ಇನ್ನೊಂದು ತುದಿಯಲ್ಲಿ ಕೊಹ್ಲಿ (29) ಬ್ಯಾಟ್‌ ಬೀಸುತ್ತಿದ್ದಾರೆ.

  ಸದ್ಯ 12 ಓವರ್‌ಗಳ ಆಟ ಮುಕ್ತಾಯವಾಗಿದ್ದು ಆರ್‌ಸಿಬಿ 1 ವಿಕೆಟ್‌ಗೆ 91 ರನ್‌ ಗಳಿಸಿದೆ.

 • 06:32 pm

  11ನೇ ಓವರ್‌ ಮುಕ್ತಾಯ: 1 ವಿಕೆಟ್‌ಗೆ 82 ರನ್‌

  ಕೊಹ್ಲಿ (27) ಮತ್ತು ಪಡಿಕ್ಕಲ್ (47)‌ ಕ್ರೀಸ್‌ನಲ್ಲಿದ್ದಾರೆ.

 • 06:24 pm

  10ನೇ ಓವರ್‌ ಮುಕ್ತಾಯ: 1 ವಿಕೆಟ್‌ಗೆ 77 ರನ್

  ಹತ್ತು ಓವರ್‌ಗಳ ಆಟ ಮುಕ್ತಾಯವಾಗಿದ್ದು, 1 ವಿಕೆಟ್‌ ನಷ್ಟಕ್ಕೆ 77 ರನ್‌ ಕಲೆಹಾಕಿದೆ.

  ಕೊಹ್ಲಿ (23) ಮತ್ತು ಪಡಿಕ್ಕಲ್ (46)‌ ಕ್ರೀಸ್‌ನಲ್ಲಿದ್ದಾರೆ.

  ಈ ಹಂತದಲ್ಲಿ ಆರ್‌ಆರ್‌ 3 ವಿಕೆಟ್‌ ಕಳೆದುಕೊಂಡು 70 ರನ್‌ ಗಳಿಸಿತ್ತು.

 • 06:21 pm

  8 ಓವರ್ ಮುಕ್ತಾಯ: ಆರ್‌ಸಿಬಿ 64ಕ್ಕೆ 1

  ನಾಯಕ ಕೊಹ್ಲಿ (16) ಮತ್ತು ಪಡಿಕ್ಕಲ್ (40)‌ ಕ್ರೀಸ್‌ನಲ್ಲಿದ್ದಾರೆ.

  ಈ ಹಂತದಲ್ಲಿ ಆರ್‌ಆರ್‌ 3 ವಿಕೆಟ್‌ ಕಳೆದುಕೊಂಡು 38 ರನ್ ಗಳಿಸಿತ್ತು.

 • 06:13 pm

  7ನೇ ಓವರ್ ಮುಕ್ತಾಯ: 1 ವಿಕೆಟ್‌ಗೆ 55 ರನ್‌

  ನಾಯಕ ಕೊಹ್ಲಿ (9) ಮತ್ತು ಪಡಿಕ್ಕಲ್ (38)‌ ಕ್ರೀಸ್‌ನಲ್ಲಿದ್ದಾರೆ.

 • 06:06 pm

  ಪವರ್‌ ಪ್ಲೇ ಮುಕ್ತಾಯ: ಅರ್ಧಶತಕ ಪೂರೈಸಿದ ಆರ್‌ಸಿಬಿ

  ಆರು ಓವರ್‌ಗಳ ಆಟ ಮುಕ್ತಾಯವಾಗಿದ್ದು ಆರ್‌ಸಿಬಿ 1 ವಿಕೆಟ್‌ ನಷ್ಟಕ್ಕೆ 50 ರನ್‌ ಗಳಿಸಿದೆ.

  ನಾಯಕ ಕೊಹ್ಲಿ (6) ಮತ್ತು ಪಡಿಕ್ಕಲ್ (35)‌ ಕ್ರೀಸ್‌ನಲ್ಲಿದ್ದಾರೆ.

  ಈ ಹಂತದಲ್ಲಿ ಆರ್‌ಆರ್‌ 3 ವಿಕೆಟ್‌ ಕಳೆದುಕೊಂಡು 38 ರನ್ ಗಳಿಸಿತ್ತು.

 • 06:01 pm

  5ನೇ ಓವರ್‌ ಮುಕ್ತಾಯ: 1 ವಿಕೆಟ್‌ಗೆ 39 ರನ್‌

  5 ಓವರ್‌ಗಳ ಆಟ ಮುಕ್ತಾಯವಾಗಿದ್ದು ಆರ್‌ಸಿಬಿ 1 ವಿಕೆಟ್‌ ಕಳೆದುಕೊಂಡು 39 ರನ್‌ ಗಳಿಸಿದೆ.

  ನಾಯಕ ವಿರಾಟ್‌ ಕೊಹ್ಲಿ (8) ಮತ್ತು ದೇವದತ್ತ ಪಡಿಕ್ಕಲ್ (25) ಕ್ರೀಸ್‌ನಲ್ಲಿದ್ದಾರೆ.

 • 05:53 pm

  ಮೊದಲ ವಿಕೆಟ್ ಪತನ

  ಮೂರನೇ ಓವರ್‌ನಲ್ಲಿ ಬೌಲಿಂಗ್‌ ಮಾಡಿದ ಶ್ರೇಯಸ್‌ ಗೋಪಾಲ್‌ ಆ್ಯರನ್ ಫಿಂಚ್‌ ಅವರನ್ನು ಎಲ್‌ಬಿ ಬಲೆಗೆ ಬೀಳಿಸಿದರು.

  ಆರ್‌ಸಿಬಿ 3 ಓವರ್‌ ಮುಕ್ತಾಯಕ್ಕೆ 1 ವಿಕೆಟ್ ಕಳೆದುಕೊಂಡು 27 ರನ್‌ ಗಳಿಸಿದೆ. ಪಡಿಕ್ಕಲ್ (17)‌ ಮತ್ತು ಕೊಹ್ಲಿ (1) ಕ್ರೀಸ್‌ನಲ್ಲಿದ್ದಾರೆ.

 • 05:48 pm

  2ನೇ ಓವರ್‌ ಮುಕ್ತಾಯ: ವಿಕೆಟ್‌ ನಷ್ಟವಿಲ್ಲದೆ 20 ರನ್‌

  ಆರ್‌ಸಿಬಿ ಎರಡು ಓವರ್‌ ಮುಕ್ತಾಯಕ್ಕೆ ವಿಕೆಟ್‌ ನಷ್ಟವಿಲ್ಲದೆ 20 ರನ್‌ ಗಳಿಸಿದೆ.

 • 05:44 pm

  ಇನಿಂಗ್ಸ್ ಆರಂಭಿಸಿದ ಆರ್‌ಸಿಬಿ

  ಆ್ಯರನ್‌ ಫಿಂಚ್‌ ಮತ್ತು ದೇವದತ್ತ ಪಡಿಕಲ್‌ ಆರ್‌ಸಿಬಿ ಇನಿಂಗ್ಸ್‌ ಆರಂಭಿಸಿದ್ದಾರೆ. ಮೊದಲ ಓವರ್‌ ಮುಕ್ತಾಯಕ್ಕೆ 5 ರನ್‌ ಗಳಿಸಿದೆ.

  ಜೋಫ್ರಾ ಆರ್ಚರ್‌ ಮೊದಲ ಓವರ್‌ ಬೌಲಿಂಗ್‌ ಮಾಡಿದರು.

 • 05:26 pm

  ಸವಾಲಿನ ಗುರಿ ನೀಡಿದ ರಾಯಲ್ಸ್‌

  ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್‌ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 154 ರನ್‌ ಗಳಿಸಿದೆ.

 • 05:19 pm

  19 ಓವರ್ ಮುಕ್ತಾಯ: 6 ವಿಕೆಟ್‌ಗೆ 139 ರನ್‌

  ಜೋಫ್ರಾ ಆರ್ಚರ್‌ (15) ಮತ್ತು ರಾಹುಲ್‌ ತೆವಾಟಿಯ (11) ಕ್ರೀಸ್‌ನಲ್ಲಿದ್ದಾರೆ.

 • 05:01 pm

  ಲಾಮ್ರೋರ್ ವಿಕೆಟ್‌ ಪತನ

  ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸುತ್ತಿದ್ದ ಲಾಮ್ರೋರ್‌ ಔಟಾಗಿದ್ದು, 47 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದಾರೆ.

  ಇದರೊಂದಿಗೆ ರಾಜಸ್ಥಾನ 17 ಓವರ್‌ಗಳ ಅಂತ್ಯಕ್ಕೆ 6 ವಿಕೆಟ್‌ ಕಳೆದುಕೊಂಡು 117 ರನ್‌ ಗಳಿಸಿದೆ.

 • 04:50 pm

  ಶತಕ ಪೂರೈಸಿದ ಆರ್‌ಆರ್‌

  ರಾಜಸ್ಥಾನ ರಾಯಲ್ಸ್‌ ತಂಡವು 15.1 ಓವರ್‌ನಲ್ಲಿ ನೂರು ರನ್‌ಗಳ ಗಡಿ ದಾಟಿದೆ. ಇದೇ ಓವರ್‌ನ 5ನೇ ಎಸೆತದಲ್ಲಿ ರಿಯಾನ್‌ ಪರಾಗ್‌ ವಿಕೆಟ್‌ ಒಪ್ಪಿಸಿದ್ದಾರೆ.

  ಲಾಮ್ರೋರ್‌ ಹಾಗೂ ಪರಾಗ್‌ ಜೋಡಿ 5ನೇ ವಿಕೆಟ್‌ ಜೊತೆಯಾಟದಲ್ಲಿ 35 ರನ್‌ ಕಲೆಹಾಕಿತ್ತು.

  ಸದ್ಯ 16 ಓವರ್‌ಗಳ ಆಟ‌ ಮುಕ್ತಾಯವಾಗಿದ್ದು ರಾಜಸ್ಥಾನ 5 ವಿಕೆಟ್‌ ನಷ್ಟಕ್ಕೆ 106 ರನ್‌ ಗಳಿಸಿದೆ.

 • 04:43 pm

  14ನೇ ಓವರ್‌ ಮುಕ್ತಾಯ: 4 ವಿಕೆಟ್‌ ನಷ್ಟಕ್ಕೆ 89 ರನ್‌

  ಲಾಮ್ರೋರ್ (30)‌ ಮತ್ತು ರಿಯಾನ್‌ ಪರಾಗ್‌ (11) ಕ್ರೀಸ್‌ನಲ್ಲಿದ್ದಾರೆ.

 • 04:34 pm

  12ನೇ ಓವರ್‌ ಮುಕ್ತಾಯ: 4 ವಿಕೆಟ್‌ ನಷ್ಟಕ್ಕೆ 77 ರನ್‌

  ಲಾಮ್ರೋರ್ (26)‌ ಮತ್ತು ರಿಯಾನ್‌ ಪರಾಗ್‌ (3) ಕ್ರೀಸ್‌ನಲ್ಲಿದ್ದಾರೆ.

 • 04:26 pm

  ಮತ್ತೊಂದು ವಿಕೆಟ್‌ ಕಳೆದುಕೊಂಡ ಆರ್‌ಆರ್‌

  ಸಂಕಷ್ಟದ ಪರಿಸ್ಥಿತಿಯಲ್ಲಿ ರಾಜಸ್ಥಾನಕ್ಕೆ ನೆರವಾಗುವ ಸೂಚನೆ ಅನುಭವಿ ಆಟಗಾರ ರಾಬಿನ್‌ ಉತ್ತಮ್ಮ 10.1ನೇ ಓವರ್‌ನಲ್ಲಿ ಚಾಹಲ್‌ಗೆ ವಿಕೆಟ್‌ ಒಪ್ಪಿಸಿದ್ದಾರೆ.

 • 04:22 pm

  10 ಓವರ್ ಮುಕ್ತಾಯ: 3 ವಿಕೆಟ್‌ಗೆ 70ರನ್‌

  ಸದ್ಯ 10 ಓವರ್‌ಗಳ ಆಟ ಮುಕ್ತಾಯವಾಗಿದ್ದು, ರಾಯಲ್ಸ್ 3 ವಿಕೆಟ್‌ ಕಳೆದುಕೊಂಡು 70 ರನ್‌ ಗಳಿಸಿದೆ.

  ಅನುಭವಿ ರಾಬಿನ್‌ ಉತ್ತಮ (17) ಹಾಗೂ ಯುವ ಆಟಗಾರ ಲಾಮ್ರೋರ್ (22)‌ ಕ್ರೀಸ್‌ನಲ್ಲಿದ್ದಾರೆ.

 • 04:13 pm

  200ನೇ ಸಿಕ್ಸರ್‌ ಸಿಡಿಸಿದ ಲಾಮ್ರೋರ್‌

  ಈ ಬಾರಿಯ ಟೂರ್ನಿಯ 15ನೇ ಪಂದ್ಯ ನಡೆಯುತ್ತಿದ್ದು ಇದುವರೆಗೆ ಒಟ್ಟು 200 ಸಿಕ್ಸರ್‌ಗಳು ಸಿಡಿದಿವೆ.

  ಈ ಪಂದ್ಯಕ್ಕೂ ಮುನ್ನ 198 ಸಿಕ್ಸರ್‌ಗಳು ದಾಖಲಾಗಿದ್ದವು. ಜಾಸ್‌ ಬಟ್ಲರ್‌ 199ನೇ ಸಿಕ್ಸರ್‌ ಸಿಡಿಸಿದರೆ, ಆ್ಯಡಂ ಜಂಪಾ ಎಸೆದ ಇನಿಂಗ್ಸ್‌ನ 9ನೇ ಓವರ್‌ನಲ್ಲಿ ಮಹಿಪಾಲ್ ಲಾಮ್ರೋರ್‌ 200ನೇ ಸಿಕ್ಸರ್‌ ಬಾರಿಸಿದರು.

 • 04:11 pm

  ಅರ್ಧಶತಕ ಪೂರೈಸಿದ ರಾಯಲ್ಸ್

  8 ಓವರ್‌ ಮುಕ್ತಾಯವಾಗಿದ್ದು ರಾಜಸ್ಥಾನ ತಂಡ 3 ವಿಕೆಟ್‌ ಕಳೆದುಕೊಂಡು 50 ರನ್‌ ಗಳಿಸಿದೆ.

 • 04:02 pm

  ಪವರ್‌ ಪ್ಲೇ ಮುಕ್ತಾಯ: 38ಕ್ಕೆ 3

  ಮೊದಲ ಆರು ಓವರ್‌ಗಳ ಆಟ ಮುಕ್ತಾಯವಾಗಿದ್ದು ರಾಜಸ್ಥಾನ 3 ವಿಕೆಟ್‌ ಕಳೆದುಕೊಂಡು 38 ರನ್‌ ಗಳಿಸಿದೆ.

  ರಾಬಿನ್‌ ಉತ್ತಪ್ಪ (5) ಮತ್ತು ಮಹಿಪಾಲ್‌ ಲಾಮ್ರೋರ್‌ (2) ಕ್ರೀಸ್‌ನಲ್ಲಿದ್ದಾರೆ.

 • 03:57 pm

  ಸ್ಯಾಮ್ಸನ್‌ ವಿಕೆಟ್ ಪತನ

  ಸ್ಮಿತ್‌ ವಿಕೆಟ್‌ ಪತನದ ಬಳಿಕ ಬಂದ ಸಂಜು ಸ್ಯಾಮ್ಸನ್‌ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿ ಭರವಸೆ ಮೂಡಿಸಿದ್ದರು. ಆದರೆ ಅವರು ಹೆಚ್ಚು ರನ್‌ ಗಳಿಸಲು ಸ್ಪಿನ್ನರ್‌ ಯಜುವೇಂದ್ರ ಚಾಹಲ್‌ ಬಿಡಲಿಲ್ಲ.

  5ನೇ ಓವರ್‌ನ ಮೊದಲ ಎಸೆತದಲ್ಲಿ ಔಟ್‌ ಮಾಡಿದರು.

  ಸದ್ಯ 5 ಓವರ್ ಮುಕ್ತಾಯವಾಗಿದ್ದು ಸ್ಮಿತ್ ಪಡೆ 3 ವಿಕೆಟ್‌ ಕಳೆದುಕೊಂಡು 33 ರನ್‌ ಗಳಿಸಿದೆ.

 • 03:46 pm

  ಪೆವಿಲಿಯನ್ ‌ಸೇರಿಕೊಂಡ ಆರಂಭಿಕ ಜೋಡಿ

  ರಾಜಸ್ಥಾನ ತಂಡದ ಆರಂಭಿಕ ಜೋಡಿ ಬಂದಷ್ಟೇ ವೇಗವಾಗಿ ಪೆವಿಲಿಯನ್‌ಗೆ ಮರಳಿದೆ.

  ಇಸುರು ಉದಾನ ಎಸೆದ ಮೂರನೇ ಓವರ್‌ನಲ್ಲಿ ನಾಯಕ ಸ್ಮಿತ್‌ (5) ವಿಕೆಟ್‌ ಒಪ್ಪಿಸಿದರೆ, 4ನೇ ಓವರ್‌ನ ಮೊದಲ ಎಸೆತದಲ್ಲಿ ಜಾಸ್‌ ಬಟ್ಲರ್‌ ಅವರನ್ನು ನವದೀಪ್‌ ಸೈನಿ ಔಟ್‌ ಮಾಡಿದರು.

  ಸದ್ಯ ತಂಡದ ಮೊತ್ತ 3.3 ಓವರ್‌ಗಳಲ್ಲಿ 2 ವಿಕೆಟ್‌ 31 ಆಗಿದೆ.

 • 03:42 pm

  ಸ್ಮಿತ್‌ ವಿಕೆಟ್ ಪತನ

  ಇಸುರು ಉದಾನ ಎಸೆದ 3ನೇ ಓವರ್‌ನ 4ನೇ ಎಸೆತದಲ್ಲಿ ಸ್ಟೀವ್‌ ಸ್ಮಿತ್‌ ಔಟಾಗಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಆಡಲು ಸಂಜು ಸ್ಯಾಮ್ಸನ್‌ ಕ್ರೀಸ್‌ಗಿಳಿದಿದ್ದಾರೆ.

 • 03:39 pm

  2ನೇ ಓವರ್‌ ಮುಕ್ತಾಯ: ವಿಕೆಟ್‌ ನಷ್ಟವಿಲ್ಲದೆ 16

  ಸ್ಮಿತ್ (5) ಮತ್ತು ಬಟ್ಲರ್ (11)‌ ಕ್ರೀಸ್‌ನಲ್ಲಿದ್ದಾರೆ.

 • 02:40 pm

  RCB vs RR: ಇಂದಿನ ಪಂದ್ಯದಲ್ಲಿ ಯಾರಿಗೆ ಗೆಲುವು? ವೋಟ್ ಮಾಡಿ

 • 03:30 pm

  ಇನಿಂಗ್ಸ್ ಆರಂಭಿಸಿದ ರಾಯಲ್ಸ್‌

  ರಾಜಸ್ಥಾನ ತಂಡದ ಪರ ಜಾಸ್‌ ಬಟ್ಲರ್‌ ಮತ್ತು ನಾಯಕ ಸ್ವೀವ್‌ ಸ್ಮಿತ್‌ ಇನಿಂಗ್ಸ್‌ ಆರಂಭಿಸಿದ್ದಾರೆ.

  ಈ ಜೋಡಿ ಇಸುರು ಉದಾನ ಎಸೆದ ಮೊದಲ ಓವರ್‌ನಲ್ಲಿ ವಿಕೆಟ್‌ ನಷ್ಟವಿಲ್ಲದೆ 9 ರನ್‌ ಗಳಿಸಿದೆ.

 • 03:19 pm

  ಸ್ಮಿತ್‌ ಪಡೆಯಲ್ಲಿ ಒಂದು ಬದಲಾವಣೆ

  ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸಿದ್ದ ತಂಡವನ್ನೇ ಮುನ್ನಡೆಸಲು ಆರ್‌ಸಿಬಿ ನಾಯಕ ನಿರ್ಧರಿಸಿದ್ದಾರೆ.

  ಆದರೆ ರಾಜಸ್ಥಾನ ರಾಯಲ್ಸ್‌ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಅಂಕಿತ್ ರಜಪೂತ್‌ ಬದಲಿಗೆ ಮಹಿಪಾಲ್‌ ಲಾಮ್ರೋರ್‌ಗೆ ಸ್ಥಾನ ನೀಡಲಾಗಿದೆ.

 • 03:13 pm

  ಹನ್ನೊಂದರ ಬಳಗ

  ಆರ್‌ಸಿಬಿ: ದೇವದತ್ತ ಪಡಿಕ್ಕಲ್‌, ಆ್ಯರನ್‌ ಫಿಂಚ್‌, ವಿರಾಟ್‌ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್‌ (ವಿಕೆಟ್‌ ಕೀಪರ್‌), ಶಿವಂ ದುಬೆ, ಗುರುಕೀರತ್‌ ಸಿಂಗ್‌, ವಾಷಿಂಗ್ಟನ್‌ ಸುಂದರ್‌, ಇಸುರು ಉದಾನ, ನವದೀಪ್‌ ಸೈನಿ, ಆ್ಯಡಂ ಜಂಪಾ, ಯಜುವೇಂದ್ರ ಚಾಹಲ್‌

  ಆರ್‌ಆರ್‌: ಜಾಸ್‌ ಬಟ್ಲರ್‌ (ವಿಕೆಟ್ ಕೀಪರ್‌) ಸ್ಟೀವ್‌ ಸ್ಮಿತ್‌ (ನಾಯಕ), ಸಂಜು ಸ್ಯಾಮ್ಸನ್‌, ರಾಬಿನ್‌ ಉತ್ತಪ್ಪ, ರಿಯಾನ್‌ ಪರಾಗ್‌, ರಾಹುಲ್‌ ತೆವಾಟಿಯಾ, ಮಹಿಪಾಲ್‌ ಲಾಮ್ರೋರ್‌, ಟಾಮ್‌ ಕರನ್‌, ಶ್ರೇಯಸ್‌ ಗೋಪಾಲ್‌, ಜೋಫ್ರಾ ಆರ್ಚರ್‌, ಜಯದೇವ್‌ ಉನದ್ಕತ್

 • 03:02 pm

  ರಾಜಸ್ಥಾನ ಬ್ಯಾಟಿಂಗ್‌

  ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ರಾಜಸ್ಥಾನ ರಾಯಲ್ಸ್‌ ತಂಡದ ನಾಯಕ ಸ್ಟೀವ್‌ ಸ್ಮಿತ್‌ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ.