ಸೋಮವಾರ, ಅಕ್ಟೋಬರ್ 26, 2020
28 °C

IPL-2020 | SRH vs CSK: ಚೆನ್ನೈ ಸೂಪರ್‌ ಕಿಂಗ್ಸ್‌ಗೆ 20 ರನ್‌ ಅಂತರದ ಗೆಲುವು

Published:
Updated:
ಸತತ ಸೋಲಿನಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಇಂದು ನಡೆದ ಪಂದ್ಯದಲ್ಲಿ ಗೆಲುವು ಸಾಧಿಸಿತು. ಟೂರ್ನಿಯಲ್ಲಿ 8 ಪಂದ್ಯ ಆಡಿರುವ ಚೆನ್ನೈ ತಂಡಕ್ಕೆ ಇದು 3ನೇ ಜಯ.
 • 11:13 pm

  ಚೆನ್ನೈ ತಂಡಕ್ಕೆ 20 ರನ್‌ ಗೆಲುವು

  ಸನ್‌ರೈಸರ್ಸ್ ಹೈದರಾಬಾದ್‌ ತಂಡವು ಕೊನೆಯ ಓವರ್‌ನಲ್ಲಿ ಕೇವಲ 1 ರನ್‌ ಗಳಿಸಿತು. ಇದರೊಂದಿಗೆ ಈ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡು 147 ರನ್‌ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು 20 ರನ್‌ ಅಂತರದ ಗೆಲುವು ಸಾಧಿಸಿತು.

  ಈ ಎರಡೂ ತಂಡಗಳೂ ಟೂರ್ನಿಯಲ್ಲಿ 8 ಪಂದ್ಯಗಳನ್ನು ಆಡಿದ್ದು, ತಲಾ ಮೂರರಲ್ಲಿ ಗೆಲುವು ಸಾಧಿಸಿವೆ. ರನ್‌ರೇಟ್ ಆಧಾರದಲ್ಲಿ ರೈಸರ್ಸ್‌ 5ನೇ ಸ್ಥಾನದಲ್ಲಿದ್ದು, ಕಿಂಗ್ಸ್‌ ಆರರಲ್ಲಿದೆ.

  ಕೊನೆಯ ಓವರ್‌: ಡ್ವೇನ್ ಬ್ರಾವೋ (0 0 W 0 1 0)

 • 11:10 pm

  19ನೇ ಓವರ್ ಮುಕ್ತಾಯ

  19 ಓವರ್‌ಗಳ ಅಂತ್ಯಕ್ಕೆ ರೈಸರ್ಸ್‌ 7 ವಿಕೆಟ್ ಕಳೆದುಕೊಂಡು 146 ರನ್‌ ಗಳಿಸಿದೆ. ಈ ಓವರ್‌ನ ಕೊನೆಯ ಎಸೆತದಲ್ಲಿ ರಶೀದ್‌ ಖಾನ್‌ ಔಟಾಗಿದ್ದಾರೆ.

  ಬೌಲರ್‌: ಶಾರ್ದೂಲ್‌ ಠಾಕೂರ್‌ (2 Wd 0 1 1 0 W)

 • 10:59 pm

  18ನೇ ಓವರ್ ಮುಕ್ತಾಯ: ಕೇನ್ ವಿಲಿಯಮ್ಸನ್ ಔಟ್

  18ನೇ ಓವರ್‌ನಲ್ಲಿ ಕೇನ್‌ ವಿಲಿಯಮ್ಸನ್‌ ಔಟಾಗಿದ್ದಾರೆ. ಕರಣ್‌ ಶರ್ಮಾ ಎಸೆದ ಈ ಓವರ್‌ ಮೊದಲ ಎಸೆತದಲ್ಲಿ ಸಿಕ್ಸರ್ ಸಿಡಿಸಿದ ಅವರು ಎರಡನೇ ಎಸೆತದಲ್ಲಿ ಔಟಾಗಿದ್ದಾರೆ.

  ಮೂರು ಮತ್ತು ನಾಲ್ಕನೇ ಎಸೆತಗಳಲ್ಲಿ ರಶೀದ್ ಖಾನ್‌ ಕ್ರಮವಾಗಿ ಸಿಕ್ಸರ್‌ ಮತ್ತು ಬೌಂಡರಿ ಬಾರಿಸಿದರು. ಕೊನೆಯ ಎಸೆತದಲ್ಲಿ ಶಹಬಾದ್‌ ನದೀಂ ಬೌಂಡರಿ ಬಾರಿಸಿದ್ದು, 18 ಓವರ್‌ ಅಂತ್ಯಕ್ಕೆ ರೈಸರ್ಸ್‌ ತಂಡದ ಮೊತ್ತ 6 ವಿಕೆಟ್‌ ನಷ್ಟಕ್ಕೆ 141 ರನ್‌ ಆಗಿದೆ.

  ಬೌಲರ್‌: ಕರಣ್‌ ಶರ್ಮಾ (4 W 6 4 1 4)

 • 10:56 pm

  17ನೇ ಓವರ್ ಮುಕ್ತಾಯ: ಕೇನ್ ಅರ್ಧಶತಕ

  ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸುತ್ತಿರುವ ಕೇನ್‌ ವಿಲಿಯಮ್ಸನ್‌ 36ನೇ ಎಸೆತದಲ್ಲಿ ಅರ್ಧಶತಕ ಪೂರೈಸಿದ್ದಾರೆ.

  17 ಓವರ್‌ಗಳ ಆಟ ಮುಕ್ತಾಯವಾಗಿದ್ದು, ರೈಸರ್ಸ್‌ 5 ವಿಕೆಟ್‌ ಕಳೆದುಕೊಂಡು 122 ರನ್‌ ಗಳಿಸಿದೆ.

  ಬೌಲರ್‌: ಡ್ವೇನ್‌ ಬ್ರಾವೋ (6 1 1 W 4 1)

 • 10:48 pm

  16ನೇ ಓವರ್ ಮುಕ್ತಾಯ

  16 ಓವರ್‌ಗಳ ಆಟ ಮುಕ್ತಾಯವಾಗಿದ್ದು ರೈಸರ್ಸ್ ತಂಡ 4 ವಿಕೆಟ್‌ ಕಳೆದುಕೊಂಡು 109 ರನ್‌ ಗಳಿಸಿದೆ.

  ಉಳಿದಿರುವ 4 ಓವರ್‌ಗಳಲ್ಲಿ ಗೆಲ್ಲಲು 59 ರನ್‌ ಗಳಿಸಬೇಕಿದೆ.

  ಬೌಲರ್‌: ಪಿಯೂಷ್‌ ಚಾವ್ಲಾ (1 2 1 2 1 1)

 • 10:44 pm

  15ನೇ ಓವರ್ ಮುಕ್ತಾಯ: ಶತಕ ಪೂರೈಸಿದ ರೈಸರ್ಸ್‌

  15 ಓವರ್‌ಗಳ ಅಂತ್ಯಕ್ಕೆ ಹೈದರಾಬಾದ್‌ 4 ವಿಕೆಟ್‌ ಕಳೆದುಕೊಂಡು 101 ರನ್‌ ಗಳಿಸಿದೆ. ಇದೇ ಓವರ್‌ನಲ್ಲಿ ಪ್ರಿಯಂ ಗರ್ಗ್ (16)‌ ಔಟಾಗಿದ್ದಾರೆ. ಸದ್ಯ ಕೇನ್‌ (43) ಮತ್ತು ವಿಜಯ್‌ ಶಂಕರ್‌ (1) ಕ್ರೀಸ್‌ನಲ್ಲಿದ್ದಾರೆ.

  ಬೌಲರ್‌: ಕರಣ್‌ ಶರ್ಮಾ (1 1 Wd Wd 2 W 1 1)

 • 10:40 pm

  14ನೇ ಓವರ್ ಮುಕ್ತಾಯ

  14 ಓವರ್‌ಗಳ ಮುಕ್ತಾಯಕ್ಕೆ ರೈಸರ್ಸ್‌ 93 ರನ್‌ ಗಳಿಸಿ 3 ವಿಕೆಟ್‌ ಕಳೆದುಕೊಂಡಿದೆ.

  ಉಳಿದಿರುವ ಆರು ಓವರ್‌ಗಳಲ್ಲಿ ಗೆಲ್ಲಲು 75 ರನ್‌ ಗಳಿಸಬೇಕಾಗಿದೆ.

  ಬೌಲರ್‌: ಡ್ವೇನ್‌ ಬ್ರಾವೊ (0 0 4 1 4 2)

 • 10:33 pm

  13ನೇ ಓವರ್ ಮುಕ್ತಾಯ

  13 ಓವರ್‌ ಮುಕ್ತಾಯವಾಗಿದ್ದು ರೈಸರ್ಸ್ 82 ರನ್‌ ಕಲೆಹಾಕಿದೆ.

  ವಿಲಿಯಮ್ಸನ್‌ (35) ಮತ್ತು ಗರ್ಗ್‌ (8) ಕ್ರೀಸ್‌ನಲ್ಲಿದ್ದಾರೆ.

  ಬೌಲರ್‌: ಕರಣ್‌ ಶರ್ಮಾ (1 1 Wd 1 1 0 1)

 • 10:31 pm

  12ನೇ ಓವರ್ ಮುಕ್ತಾಯ

  ರೈಸರ್ಸ್ ತಂಡ 3 ವಿಕೆಟ್‌ಗೆ 76 ರನ್ ಗಳಿಸಿದೆ.

  ಕೇನ್‌ ವಿಲಿಯಮ್ಸನ್‌ ಮತ್ತು ಪ್ರಿಯಂ ಗರ್ಗ್‌ ಕ್ರೀಸ್‌ನಲ್ಲಿದ್ದಾರೆ.

  ಬೌಲರ್‌: ರವೀಂದ್ರ ಜಡೇಜಾ (1 1 1 1 4 4)

 • 10:29 pm

  11ನೇ ಓವರ್ ಮುಕ್ತಾಯ

  11 ಓವರ್‌ ಅಂತ್ಯಕ್ಕೆ ಹೈದರಾಬಾದ್‌ 64 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡಿದೆ.

  ಬೌಲರ್‌: ಕರನ್‌ ಶರ್ಮಾ (1 1 0 0 1 1)

 • 10:25 pm

  10ನೇ ಓವರ್ ಮುಕ್ತಾಯ

  10 ಓವರ್‌ಗಳ ಆಟ ಮುಕ್ತಾಯವಾಗಿದ್ದು ರೈಸರ್ಸ್‌ ತಂಡ 60 ರನ್‌ ಗಳಿಸಿ 3 ವಿಕೆಟ್‌ ಕಳೆದುಕೊಂಡಿದೆ. 23 ರನ್‌ ಗಳಿಸಿದ್ದ ಬೈರ್ಸ್ಟ್ರೋವ್‌ ಔಟಾಗಿದ್ದಾರೆ.

  ಈ ಹಂತದಲ್ಲಿ ಚೆನ್ನೈ 2 ವಿಕೆಟ್‌ಗೆ 69 ರನ್‌ ಗಳಿಸಿದೆ.

  ಬೌಲರ್‌: ರವೀಂದ್ರ ಜಡೇಜಾ (1 1 0 0 W 1)

 • 10:16 pm

  9ನೇ ಓವರ್ ಮುಕ್ತಾಯ

  ರೈಸರ್ಸ್‌ ತಂಡದ ಮೊತ್ತ 2 ವಿಕೆಟ್‌ಗೆ 57 ರನ್‌ ಆಗಿದೆ.

  ಬೌಲರ್‌: ಶಾರ್ದೂಲ್‌ ಠಾಕೂರ್‌ (1 1 1 0 1 1)

 • 10:15 pm

  8ನೇ ಓವರ್ ಮುಕ್ತಾಯ

  8 ಓವರ್‌ ಅಂತ್ಯಕ್ಕೆ ವಾರ್ನರ್‌ ಬಳಗ 52 ರನ್‌ ಗಳಿಸಿ 2 ವಿಕೆಟ್‌ ಕಳೆದುಕೊಂಡಿದೆ.

  ಬೌಲರ್‌: ರವೀಂದ್ರ ಜಡೇಜಾ (0 2 1 2 0 1)

 • 10:13 pm

  7ನೇ ಓವರ್‌ ಮುಕ್ತಾಯ

  7ನೇ ಓವರ್‌ ಅಂತ್ಯಕ್ಕೆ ರೈಸರ್ಸ್‌ 2 ವಿಕೆಟ್‌ ನಷ್ಟಕ್ಕೆ 46 ರನ್‌ ಗಳಿಸಿದೆ.

  ಬೌಲರ್‌: ದೀಪಕ್‌ ಚಾಹರ್‌ (1 2 1 0 2 0)

 • 10:10 pm

  6ನೇ ಓವರ್ ಮುಕ್ತಾಯ

  ರೈಸರ್ಸ್‌ ತಂಡ ಪವರ್‌ ಪ್ಲೇ ಅಂತ್ಯಕ್ಕೆ 2 ವಿಕೆಟ್‌ ಕಳೆದುಕೊಂಡು 40 ರನ್‌ ಗಳಿಸಿದೆ. ಈ ಹಂತದಲ್ಲಿ ಚೆನ್ನೈ ತಂಡವೂ ಇದೇ ಸ್ಥಿತಿಯಲ್ಲಿತ್ತು.

  ಡೇವಿಡ್‌ ವಾರ್ನರ್ (9) ಮತ್ತು ಮನೀಷ್‌ ಪಾಂಡೆ (4) ಔಟಾಗಿದ್ದಾರೆ. ಜಾನಿ ಬೈರ್ಸ್ಟ್ರೋವ್ ಮತ್ತು ಕೇನ್‌ ವಿಲಿಯಮ್ಸನ್‌ ಕ್ರೀಸ್‌ನಲ್ಲಿದ್ದಾರೆ.

  ಬೌಲರ್: ಸ್ಯಾಮ್‌ ಕರನ್‌ (0 0 0 2 4 0)

 • 10:03 pm

  6ನೇ ಓವರ್ ಮುಕ್ತಾಯ

  ಪವರ್‌ ಪ್ಲೇ ಮುಕ್ತಾಯವಾಗಿದ್ದು, ಸನ್‌ರೈಸರ್ಸ್‌ ತಂಡ 2ನೇ ವಿಕೆಟ್‌ ಕಳೆದುಕೊಂಡು 40 ರನ್‌ ಗಳಿಸಿದೆ.

  ಕೇನ್‌ ವಿಲಿಯಮ್ಸನ್‌ ಮತ್ತು ಜಾನಿ ಬೈರ್ಸ್ಟ್ರೋವ್‌ ಕ್ರೀಸ್‌ನ‌ಲ್ಲಿದ್ದಾರೆ.

  ಡೇವಿಡ್‌ ವಾರ್ನರ್ (9)‌ ಮತ್ತು ಮನಿಷ್‌ ಪಾಂಡೆ (4) ಔಟಾಗಿದ್ದಾರೆ. ಈ ಹಂತದಲ್ಲಿ ಚೆನ್ನೈ ಕೂಡ ಇದೇ ಸ್ಥಿತಿಯಲ್ಲಿತ್ತು.

  ಬೌಲರ್‌: ಸ್ಯಾಮ್‌ ಕರನ್ (0 0 0 2 4 0)

 • 10:00 pm

  5ನೇ ಓವರ್ ಮುಕ್ತಾಯ

  5 ನೇ ಓವರ್‌ ಅಂತ್ಯಕ್ಕೆ ರೈಸರ್ಸ್ 34 ರನ್ ಗಳಿಸಿದೆ. ಕೇನ್‌ ವಿಲಿಯಮ್ಸನ್‌ ಮತ್ತು ಜಾನಿ ಬೈರ್ಸ್ಟ್ರೋವ್‌ ಕ್ರೀಸ್‌ನ್ಲಲಿದ್ದಾರೆ.

 • 09:50 pm

  ಇನಿಂಗ್ಸ್ ಆರಂಭಿಸಿದ ಎಸ್‌ಆರ್‌ಎಚ್‌ಗೆ ಆರಂಭಿಕ ಆಘಾತ

  ಸನ್‌ರೈಸರ್ಸ್ ಹೈದರಾಬಾದ್‌ ತಂಡ 4 ಓವರ್‌ಗಳ ಅಂತ್ಯಕ್ಕೆ 2 ವಿಕೆಟ್‌ಗಳನ್ನು ಕಳೆದುಕೊಂಡು 27 ರನ್‌ ಗಳಿಸಿದೆ.

  ಬೌಲರ್‌: ಸ್ಯಾಮ್‌ ಕರನ್‌ ( 2 0 W 0 4 W)

   ದೀಪಕ್‌ ಚಾಹರ್‌ ಎಸೆದ ಮೊದಲ ಮತ್ತು ಮೂರನೇ ಓವರ್‌ನಲ್ಲಿ ಕ್ರಮವಾಗಿ 4 ರನ್‌ ಮತ್ತು 11 ರನ್‌ಗಳು ಬಂದಿವೆ.

  ಸ್ಯಾಮ್ ಕರನ್‌ ಎಸೆದ 2ನೇ ಓವರ್‌ನಲ್ಲಿ 6 ರನ್‌ಗಳು ಬಂದಿದೆ.

 • 09:17 pm

  20ನೇ ಓವರ್ ಮುಕ್ತಾಯ: ರೈಸರ್ಸ್‌ಗೆ 168 ರನ್ ಗುರಿ

  ಖಲೀಲ್‌ ಅಹಮದ್‌ ಎಸೆದ ಕೊನೆಯ ಓವರ್‌ನಲ್ಲಿ ಸಿಎಸ್‌ಕೆ 1 ವಿಕೆಟ್‌ ಕಳೆದುಕೊಂಡು 15 ರನ್‌ ಗಳಿಸಿತು. ಇದರೊಂದಿಗೆ ಧೋನಿ ಪಡೆ 20 ಓವರ್‌ಗಳ ಅಂತ್ಯಕ್ಕೆ 167 ರನ್‌ ಕಲೆಹಾಕಿದೆ.

  (W 2 L1 6 4 2)

 • 09:08 pm

  19ನೇ ಓವರ್ ಮುಕ್ತಾಯ

  19 ಓವರ್‌ಗಳ ಆಟ ಮುಗಿದಿದ್ದು, ಓವರ್‌ನ ಕೊನೆ ಎಸೆತದಲ್ಲಿ ಧೊನಿ (21) ಔಟಾಗಿದ್ದಾರೆ.  ಸದ್ಯ ತಂಡದ ಮೊತ್ತ 5 ವಿಕೆಟ್‌ ನಷ್ಟಕ್ಕೆ 152 ರನ್‌ ಆಗಿದೆ.

  ಬೌಲರ್‌: ಟಿ ನಟರಾಜನ್‌ (Wd 4 1 1 1 6 W)

 • 09:02 pm

  18ನೇ ಓವರ್ ಮುಕ್ತಾಯ

  18 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಸಿಎಸ್‌ಕೆ 4 ವಿಕೆಟ್‌ ಕಳೆದುಕೊಂಡು 139 ರನ್‌ ಗಳಿಸಿದೆ. ಎರಡು ಓವರ್‌ಗಳ ಆಟ ಬಾಕಿ ಉಳಿದಿದ್ದು, ಜಡೇಜಾ ಮತ್ತು ಧೋನಿ ಕ್ರೀಸ್‌ನಲ್ಲಿದ್ದಾರೆ.

  ಬೌಲರ್‌: ಸಂದೀಪ್‌ ಶರ್ಮಾ (1 1 4 1 0 2)

 • 08:53 pm

  17ನೇ ಓವರ್ ಮುಕ್ತಾಯ

  42 ರನ್‌ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಶೇನ್‌ ವಾಟ್ಸನ್‌ ಅವರು 17ನೇ ಓವರ್‌ನಲ್ಲಿ ವಿಕೆಟ್‌ ಒಪ್ಪಿಸಿದ್ದಾರೆ. ಕಳೆದ ಓವರ್‌ನಲ್ಲಿ ಅಂಬಟಿ ರಾಯುಡು ಔಟಾಗಿದ್ದರು. ಈ ಜೋಡಿ ಮೂರನೇ ವಿಕೆಟ್‌ ಜೊತೆಯಾಟದಲ್ಲಿ 81 ರನ್‌ ಕಲೆಹಾಕಿತ್ತು.

  ಚೆನ್ನೈ ತಂಡದ ಮೊತ್ತ 4 ವಿಕೆಟ್‌ ನಷ್ಟಕ್ಕೆ 129 ರನ್‌ ಆಗಿದೆ. ನಾಯಕ ಧೋನಿ ಮತ್ತು ಆಲ್‌ರೌಂಡರ್‌ ಜಡೇಜಾ ಕ್ರೀಸ್‌ನಲ್ಲಿದ್ದಾರೆ.

  ಬೌಲರ್‌: ಟಿ ನಟರಾಜನ್ (1 W 1 4 4 0)

 • 08:50 pm

  16ನೇ ಓವರ್ ಮುಕ್ತಾಯ; ಮೂರನೇ ವಿಕೆಟ್ ಪತನ

  31 ರನ್‌ ಗಳಿಸಿ ಆಡುತ್ತಿದ್ದ ಅಂಬಟಿ ರಾಯುಡು 16ನೇ ಓವರ್‌ನ ಎರಡನೇ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದ್ದಾರೆ.

  ಓವರ್‌ ಮುಕ್ತಾಯವಾಗಿದ್ದು, ಸಿಎಸ್‌ಕೆ ಮೊತ್ತ 3 ವಿಕೆಟ್‌ಗೆ 119 ರನ್ ಆಗಿದೆ.

  ಬೌಲರ್‌: ಖಲೀಲ್‌ ಅಹಮದ್‌ (0 W 1 1 0 1)

 • 08:47 pm

  15ನೇ ಓವರ್ ಮುಕ್ತಾಯ

  ರಶೀದ್‌ ಖಾನ್‌ ಎಸೆದ 15ನೇ ಓವರ್‌ನಲ್ಲಿ ಸಿಎಸ್‌ಕೆ 2 ಸಿಕ್ಸರ್‌ ಸಹಿತ 14 ರನ್‌ ಗಳಿಸಿಕೊಂಡಿದೆ. ಓವರ್‌ ಮುಕ್ತಾಯವಾಗಿದ್ದು ತಂಡದ ಮೊತ್ತ 2 ವಿಕೆಟ್‌ ನಷ್ಟಕ್ಕೆ 116 ರನ್‌ ಆಗಿದೆ.

  ಬೌಲರ್‌: ರಶೀದ್‌ ಖಾನ್‌ (6 1 0 0 6 1)

 • 08:46 pm

  14ನೇ ಓವರ್ ಮುಕ್ತಾಯ: ಶತಕ ಗಳಿಸಿದ ಚೆನ್ನೈ

  ಚೆನ್ನೈ ತಂಡ 14ನೇ ಓವರ್ ಮುಕ್ತಾಯಕ್ಕೆ 2 ವಿಕೆಟ್‌ ಕಳೆದುಕೊಂಡು 102 ರನ್‌ ಗಳಿಸಿದೆ.

  ಬೌಲರ್: ಟಿ.ನಟರಾಜನ್‌ (2 1 1 4 L1 1)

 • 08:44 pm

  13ನೇ ಓವರ್ ಮುಕ್ತಾಯ

  13 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಧೋನಿ ಪಡೆ 2 ವಿಕೆಟ್‌ ನಷ್ಟಕ್ಕೆ 92 ರನ್‌ ಗಳಿಸಿದೆ.

  ವಾಟ್ಸನ್‌ ಮತ್ತು ರಾಯುಡು ಕ್ರೀಸ್‌ನಲ್ಲಿದ್ದಾರೆ.

  ಬೌಲರ್‌: ರಶೀದ್‌ ಖಾನ್‌ (6 1 0 1 0 0)

 • 08:44 pm

  12ನೇ ಓವರ್ ಮುಕ್ತಾಯ

  ಸಿಎಸ್‌ಕೆ 2 ವಿಕೆಟ್‌ ಅಂತ್ಯಕ್ಕೆ 84 ರನ್‌ ಗಳಿಸಿದೆ.

  ಬೌಲರ್‌: ಶಹಬಾಜ್‌ ನದೀಂ (1 0 1 1 1 6)

  Match 29. 11.6: S Nadeem to A Rayudu, 6 runs, 84/2 https://t.co/OluF2THicL #SRHvCSK #Dream11IPL #IPL2020

  — IndianPremierLeague (@IPL) October 13, 2020
 • 08:40 pm

  11ನೇ ಓವರ್ ಮುಕ್ತಾಯ

  11 ಓವರ್‌ ಅಂತ್ಯಕ್ಕೆ ಚೆನ್ನೈ 74 ರನ್‌ ಗಳಿಸಿ 2 ವಿಕೆಟ್‌ ಕಳೆದುಕೊಂಡಿದೆ.

  ಬೌಲರ್‌: ರಶೀದ್‌ ಖಾನ್‌ (0 0 1 1 1 2)

 • 08:37 pm

  10ನೇ ಓವರ್ ಮುಕ್ತಾಯ

  10 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಚೆನ್ನೈ ಸೂಪರ್ಕಿಂಗ್ಸ್‌ ತಂಡ 69 ರನ್‌ ಗಳಿಸಿ 2 ವಿಕೆಟ್‌ ಕಳೆದುಕೊಂಡಿದೆ.

  ವಾಟ್ಸನ್‌ (20) ರಾಯುಡು (16) ಕ್ರೀಸ್‌ನಲ್ಲಿದ್ದಾರೆ.

  ಬೌಲರ್‌: ಶಹಬಾಜ್‌ ನದೀಂ (1 0 0 2 1 1)

 • 08:36 pm

  9ನೇ ಓವರ್ ಮುಕ್ತಾಯ

  9 ಓವರ್‌ ಅಂತ್ಯಕ್ಕೆ ಧೋನಿ ಪಡೆ 2 ವಿಕೆಟ್‌ಗಳನ್ನು ಕಳೆದುಕೊಂಡು 64 ರನ್‌ ಗಳಿಸಿದೆ.

  ಬೌಲರ್: ರಶೀದ್‌ ಖಾನ್‌ (0 0 1 1 1 0)

 • 08:35 pm

  8ನೇ ಓವರ್ ಮುಕ್ತಾಯ

  8 ಓವರ್‌ಗಳ ಅಂತ್ಯಕ್ಕೆ ಚೆನ್ನೈ ತಂಡ 2 ವಿಕೆಟ್‌ ನಷ್ಟಕ್ಕೆ 61 ರನ್‌ ಗಳಿಸಿದೆ.

  ಬೌಲರ್‌: ಶಹಬಾಜ್‌ ನದೀಂ (1 4 1 1 1 1)

 • 08:08 pm

  7ನೇ ಓವರ್‌ ಮುಕ್ತಾಯ: ಅರ್ಧಶತಕ ಗಳಿಸಿದ ಚೆನ್ನೈ

  ಚೆನ್ನೈ ತಂಡ 7ನೇ ಓವರ್‌ನ ಅಂತ್ಯಕ್ಕೆ 52 ರನ್‌ ಗಳಿಸಿದೆ.

  ಬೌಲರ್‌: ಟಿ.ನಟರಾಜನ್‌ (0 1 1 6 0 0)

 • 08:02 pm

  6ನೇ ಓವರ್ ಮುಕ್ತಾಯ

  ಪವರ್‌ ಪ್ಲೇ (ಆರು ಓವರ್‌ಗಳ ಆಟ) ಮುಕ್ತಾಯವಾಗಿದ್ದು, ಚೆನ್ನೈ ಸೂಪರ್‌ಕಿಂಗ್ಸ್‌ ತಂಡ 2 ವಿಕೆಟ್‌ ಕಳೆದುಕೊಂಡು 44 ರನ್‌ ಗಳಿಸಿದೆ. ವಾಟ್ಸನ್ ಮತ್ತು ರಾಯುಡು ಕ್ರೀಸ್‌ನಲ್ಲಿದ್ದಾರೆ.

  ಫಾಫ್ ಡು ಪ್ಲೆಸಿ (0) ಮತ್ತು ಸ್ಯಾಮ್‌ ಕರನ್‌ (31) ವಿಕೆಟ್‌ ಒಪ್ಪಿಸಿದ್ದಾರೆ. ಈ ಇಬ್ಬರೂ ಸಂದೀಪ್‌ ಶರ್ಮಾ ಬೌಲಿಂಗ್‌ನಲ್ಲಿ ಔಟಾಗಿದ್ದಾರೆ.

  ಬೌಲರ್‌: ಶಹಬಾಜ್‌ ನದೀಂ (0 0 1 0 0 4)

 • 07:57 pm

  5ನೇ ಓವರ್ ಮುಕ್ತಾಯ: ಎರಡನೇ ವಿಕೆಟ್ ಪತನ

  ಬಿರುಸಾಗಿ ಬ್ಯಾಟ್‌ ಬೀಸುತ್ತಿದ್ದ ಸ್ಯಾಮ್‌ ಕರನ್ (31)‌ 5ನೇ ಓವರ್‌ನ 4ನೇ ಎಸೆತದಲ್ಲಿ ಬೌಲ್ಡ್‌ ಅಗಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಅಂಬಟಿ ರಾಯುಡು ಕ್ರೀಸ್‌ಗೆ ಬಂದಿದ್ದಾರೆ.

  ಓವರ್‌ನ ಅಂತ್ಯಕ್ಕೆ ತಂಡದ ಮೊತ್ತ 2 ವಿಕೆಟ್‌ಗೆ 39 ರನ್‌ ಆಗಿದೆ.

  ಬೌಲರ್‌: ಸಂದೀಪ್‌ ಶರ್ಮಾ (0 0 1 W 0 4)

 • 07:52 pm

  4ನೇ ಓವರ್ ಮುಕ್ತಾಯ

  ನಾಲ್ಕು ಓವರ್‌ ಮುಕ್ತಾಯಕ್ಕೆ ಕಿಂಗ್ಸ್‌ 34 ರನ್‌ ಗಳಿಸಿದೆ. ಆರಂಭಿಕನಾಗಿ ಬಡ್ತಿ ಪಡೆದು ಆಡುತ್ತಿರುವ ಸ್ಯಾಮ್‌ ಕರನ್‌ 20 ಎಸೆತಗಳಲ್ಲಿ 31 ರನ್‌ ಗಳಿಸಿ ಆಡುತ್ತಿದ್ದಾರೆ. ಖಲೀಲ್‌ ಅಹಮದ್ ಎಸೆದ 4ನೇ ಓವರ್‌ನಲ್ಲಿ ಸ್ಯಾಮ್‌ ತಲಾ 2 ಬೌಂಡರಿ ಮತ್ತು ಸಿಕ್ಸರ್ ಸಹಿತ 22 ರನ್‌ ಬಾರಿಸಿದ್ದಾರೆ.

  (4 4 6 1 L1 6)

 • 07:42 pm

  3ನೇ ಓವರ್ ಮುಕ್ತಾಯ: ಪ್ಲೆಸಿ ಔಟ್

  ಸಂದೀಪ್‌ ಶರ್ಮಾ ಎಸೆದ ಮೂರನೇ ಓವರ್‌ನ ಮೊದಲ ಎಸೆತದಲ್ಲಿ ಚೆನ್ನೈನ ಆರಂಭಿಕ ಫಾಫ್‌ ಡು ಪ್ಲೆಸಿ (0) ಅವರು ವಿಕೆಟ್‌ ಒಪ್ಪಿಸಿದ್ದಾರೆ.

  ಮೂರನೇ ಕ್ರಮಾಂಕದಲ್ಲಿ ಶೇನ್‌ ವಾಟ್ಸನ್ ಕಣಕ್ಕಿಳಿದಿದ್ದಾರೆ. ಓವರ್‌ನ ಅಂತ್ಯಕ್ಕೆ ಸಿಎಸ್‌ಕೆ 1 ವಿಕೆಟ್‌ ಕಳೆದುಕೊಂಡು 12 ರನ್ ಗಳಿಸಿದೆ.

  ಬೌಲರ್‌: ಸಂದೀಪ್‌ ಶರ್ಮಾ (W 1 0 0 1 0)

 • 07:40 pm

  2ನೇ ಓವರ್ ಮುಕ್ತಾಯ

  ಎರಡ ಓವರ್‌ಗಳ ಅಂತ್ಯಕ್ಕೆ ಚೆನ್ನೈ 10 ರನ್ ಗಳಿಸಿದೆ.

  ಬೌಲರ್‌: ಖಲೀಲ್‌ ಅಹಮದ್ (Wd 0 4 0 0 0 2)

 • 07:35 pm

  ಇನಿಂಗ್ಸ್ ಆರಂಭಿಸಿದ ಕಿಂಗ್ಸ್; ವಾಟ್ಸನ್ ಜಾಗದಲ್ಲಿ ಕರನ್ ಬ್ಯಾಟಿಂಗ್‌

  ಚೆನ್ನೈ ಸೂಪರ್‌ಕಿಂಗ್ಸ್‌ ತಂಡ ಇನಿಂಗ್ಸ್‌ ಆರಂಭಿಸಿದೆ. ಫಾಫ್‌ ಡು ಪ್ಲೆಸಿ ಜೊತೆಗೆ ಕಳೆದ ಪಂದ್ಯಗಳಲ್ಲಿ ಇನಿಂಗ್ಸ್‌ ಆರಂಭಿಸಿದ್ದ ಶೇನ್‌ ವಾಟ್ಸನ್‌ ಅವರ ಜಾಗದಲ್ಲಿ ಇಂದು ಸ್ಯಾಮ್‌ ಕರನ್‌ ಕ್ರೀಸ್‌ಗಿಳಿದಿದ್ದಾರೆ.

  ಮೊದಲ ಓವರ್‌ ಮುಕ್ತಾಯವಾಗಿದ್ದು, ಸಿಎಸ್‌ಕೆ ವಿಕೆಟ್‌ ನಷ್ಟವಿಲ್ಲದೆ 3 ರನ್‌ ಗಳಿಸಿದೆ.

  ಬೌಲರ್‌: ಸಂದೀಪ್‌ ಶರ್ಮಾ (0 0 2 0 0 1)

 • 07:02 pm

  ಹನ್ನೊಂದರ ಬಳಗದಲ್ಲಿ ಒಂದೊಂದು ಬದಲಾವಣೆ

  ಸನ್‌ರೈಸರ್ಸ್‌ ಹೈದರಾಬಾದ್‌ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಅಭಿಷೇಕ್‌ ಶರ್ಮಾ ಅವರ ಬದಲು ಶಹಬಾದ್‌ ನದೀಂ ಕಣಕ್ಕಿಳಿಯಲಿದ್ದಾರೆ. ಚೆನ್ನೈ ಸೂಪರ್‌ಕಿಂಗ್ಸ್‌‌ ತಂಡದಲ್ಲಿಯೂ ಒಂದು ಬದಲಾವಣೆ ಮಾಡಲಾಗಿದೆ. ಎನ್.‌ ಜಗದೀಶನ್ ಬದಲು ಈ ಪಂದ್ಯದಲ್ಲಿ ಪಿಯೂಷ್‌ ಚಾವ್ಲಾ ಆಡಲಿದ್ದಾರೆ.

  ಸನ್‌ರೈಸರ್ಸ್‌ ಹೈದರಾಬಾದ್‌: ಡೇವಿಡ್‌ ವಾರ್ನರ್‌ (ನಾಯಕ), ಜಾನಿ ಬೈರ್ಸ್ಟ್ರೋವ್‌ (ವಿಕೆಟ್‌ ಕೀಪರ್‌), ಮನೀಷ್ ಪಾಂಡೆ, ಕೇನ್‌ ವಿಲಿಯಮ್ಸನ್‌, ವಿಜಯ್‌ ಶಂಕರ್‌, ಪ್ರಿಯಂ ಗರ್ಗ್‌, ಶಹಬಾದ್‌ ನದೀಂ, ವಿಜಯ್‌ ಶಂಕರ್‌, ರಶೀದ್‌ ಖಾನ್‌, ಸಂದೀಪ್‌ ಶರ್ಮಾ, ಕೆ.ಖಲೀಲ್‌ ಅಹಮದ್‌, ಟಿ.ನಟರಾಜನ್‌

  ಚೆನ್ನೈ ಸೂಪರ್‌ಕಿಂಗ್ಸ್‌: ಶೇನ್‌ ವಾಟ್ಸನ್‌, ಫಾಫ್‌ ಡು ಪ್ಲೆಸಿ, ಅಂಬಟಿ ರಾಯುಡು, ಎಂಎಸ್‌ ಧೋನಿ (ನಾಯಕ/ವಿಕೆಟ್‌ ಕೀಪರ್‌), ಪಿಯೂಷ್‌ ಚಾವ್ಲಾ, ಸ್ಯಾಮ್‌ ಕರನ್‌, ರವಿಂದ್ರ ಜಡೇಜಾ, ಡ್ವೇನ್ ‌ಬ್ರಾವೋ, ಶಾರ್ದೂಲ್‌ ಠಾಕೂರ್‌, ದೀಪಕ್‌ ಚಾಹರ್‌, ಕರನ್ ಶರ್ಮಾ

 • 06:57 pm

  ಚೆನ್ನೈ ಸೂಪರ್‌ಕಿಂಗ್ಸ್ ಬ್ಯಾಟಿಂಗ್‌

  ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಚೆನ್ನೈ ಸೂಪರ್‌ಕಿಂಗ್ಸ್ ತಂಡದ ನಾಯಕ ಎಂ.ಎಸ್‌.ಧೋನಿ ಬ್ಯಾಟಿಂಗ್‌ ಆಯ್ದುಕೊಂಡಿದ್ದಾರೆ.

 • 06:51 pm
 • 06:50 pm
 • 06:49 pm