ಮಂಗಳವಾರ, ಅಕ್ಟೋಬರ್ 27, 2020
28 °C

IPL 2020 | SRH vs RR: ಸನ್‌ರೈಸರ್ಸ್‌ ವಿರುದ್ಧ ರಾಯಲ್ಸ್‌ಗೆ ಜಯ

Published:
Updated:
ಸತತ ಸೋಲುಗಳ ಸುಳಿಯಲ್ಲಿ ಸಿಲುಕಿರುವ ರಾಜಸ್ಥಾನ ರಾಯಲ್ಸ್ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್ ಸೆಣಸಾಟ ನಡೆಸುತ್ತಿವೆ.
 • 07:18 pm

  ಜಯ ತಂದುಕೊಟ್ಟ ರಾಹುಲ್‌–ರಿಯಾನ್‌

  ಪ್ರಮುಖ ಬ್ಯಾಟ್ಸ್‌ಮನ್‌ಗಳು ಕೈಕೊಟ್ಟರೂ ಕೊನೆಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿದ ರಾಹುಲ್‌ ತೆವಾಟಿಯಾ ಮತ್ತು ರಿಯಾನ್ ಪರಾಗ್‌ ರಾಜಸ್ಥಾನ ರಾಯಲ್ಸ್‌ಗೆ ಗೆಲುವು ತಂದುಕೊಟ್ಟರು.

  ಮೊದಲು ಬ್ಯಾಟಿಂಗ್‌ ಮಾಡಿದ್ದ ಸನ್‌ರೈಸರ್ಸ್‌ ಹೈದರಾಬಾರ್‌ ತಂಡ ನಾಯಕ ಡೇವಿಡ್‌ ವಾರ್ನರ್‌ ಮತ್ತು ಮನೀಷ್ ಪಾಂಡೆ ಗಳಿಸಿದ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 158 ರನ್‌ ಕಲೆಹಾಕಿತ್ತು.

  ಈ ಗುರಿಯನ್ನು ರಾಯಲ್ಸ್‌ ಕೊನೆಯ ಓವರ್‌ನ 5ನೇ ಎಸೆತದಲ್ಲಿ ತಲುಪಿತು.

  ರಾಹುಲ್‌ ತೆವಾಟಿಯಾ (45) ಮತ್ತು ರಿಯಾನ್‌ ಪರಾಗ್‌ (42) ಜೋಡಿ 6ನೇ ವಿಕೆಟ್‌ಗೆ ಅಜೇಯ 85 ರನ್‌ಗಳ ಕಲೆಹಾಕಿತು.

  ಕೊನೆಯ ಓವರ್‌ನಲ್ಲಿ ರಾಯಲ್ಸ್‌ಗೆ 8 ರನ್‌ ಬೇಕಿತ್ತು. ಖಲೀಲ್‌ ಅಹಮದ್‌ ಎಸೆದ ಈ ಓವರ್‌ನ 5 ಎಸೆತಗಳಲ್ಲಿ 13 ರನ್‌ ಬಂದಿತು.

 • 07:11 pm

  19ನೇ ಓವರ್‌ ಮುಕ್ತಾಯ

  ರಾಯಲ್ಸ್‌ ತಂಡದ ಮೊತ್ತ 5 ವಿಕೆಟ್‌ ನಷ್ಟಕ್ಕೆ 155 ರನ್‌ ಆಗಿದೆ.

  ಉಳಿದಿರುವ 6 ಎಸೆತಗಳಲ್ಲಿ 8 ರನ್‌ ಬೇಕಾಗಿದೆ. ತೆವಾಟಿಯಾ ಮತ್ತು ಪರಾಗ್‌ ಕ್ರೀಸ್‌ನಲ್ಲಿದ್ದಾರೆ.

  (1 1 4 6 1 1)

 • 07:00 pm

  18ನೇ ಓವರ್ ಮುಕ್ತಾಯ

  ರಶೀದ್ ಖಾನ್‌ ಎಸೆದ 18ನೇ ಓವರ್‌ನಲ್ಲಿ ಹ್ಯಾಟ್ರಿಕ್‌ ಬೌಂಡರಿ ಸಹಿತ 14 ರನ್ ಬಾರಿಸಿದ ತೆವಾಟಿಯಾ ಮತ್ತು ಪರಾಗ್‌ ತಮ್ಮ ತಂಡದ ಮೊತ್ತವನ್ನು 137ಕ್ಕೆ ಏರಿಸಿದ್ದಾರೆ.

  ಉಳಿದಿರುವ 12 ಎಸೆತಗಳಲ್ಲಿ 22 ರನ್‌ ಗಳಿಸಬೇಕಿದೆ.

  (1 4 4 4 0 L1)

 • 06:54 pm

  18ನೇ ಓವರ್‌ ಮುಕ್ತಾಯ

  ಸಂದೀಪ್‌ ಶರ್ಮಾ ಎಸೆದ 15ನೇ ಓವರ್‌ನಲ್ಲಿ ರಾಹುಲ್‌ ತೆವಾಟಿಯಾ (18) ಮತ್ತು ರಿಯಾನ್‌ ಪರಾಗ್‌ (30) ಜೋಡಿ 18 ರನ್‌ ಗಳಿಸಿಕೊಂಡಿದೆ. ಹೀಗಾಗಿ ರಾಯಲ್ಸ್‌ ಮೊತ್ತ 123ಕ್ಕೆ ಏರಿದೆ.

  ಉಳಿದಿರುವ 18 ಎಸೆತಗಳಲ್ಲಿ ಗೆಲ್ಲಲು 36 ರನ್ ಗಳಿಸಬೇಕಿದೆ.

  ಬೌಲರ್‌: ಸಂದೀಪ್‌ ಶರ್ಮಾ (6 2 1 4 4 1)

 • 06:49 pm

  16ನೇ ಓವರ್ ಮುಕ್ತಾಯ: ಶತಕ ಪೂರೈಸಿದ ರಾಯಲ್ಸ್‌

  ರಾಜಸ್ಥಾನ ರಾಯಲ್ಸ್‌ ತಂಡ 16 ಓವರ್‌ಗಳ ಮುಕ್ತಾಯಕ್ಕೆ 106 ರನ್‌ ಗಳಿಸಿದೆ. ಉಳಿದಿರುವ ನಾಲ್ಕು ಓವರ್‌ಗಳಲ್ಲಿ ಗೆಲ್ಲಲು 54 ರನ್‌ ಗಳಿಸಬೇಕಿದೆ.

  ಬೌಲರ್‌: ಖಲೀಲ್‌ ಅಹ್ಮದ್‌ (0 1 1 1 2 6)

 • 06:45 pm

  15ನೇ ಓವರ್‌ ಮುಕ್ತಾಯ

  ಸ್ಟೀವ್‌ ಸ್ಮಿತ್‌ ಪಡೆ 5 ವಿಕೆಟ್‌ ನಷ್ಟಕ್ಕೆ 94 ರನ್‌ ಗಳಿಸಿದೆ. ಉಳಿದಿರುವ 5 ಓವರ್‌ಗಳಲ್ಲಿ ಗೆಲ್ಲಲು 65 ರನ್‌ ಗಳಿಸಬೇಕಿದೆ. ಸದ್ಯ ರಾಹುಲ್‌ ತೆವಾಟಿಯಾ (7) ಮತ್ತು ರಿಯಾನ್ ಪರಾಗ್ (12)‌ ಕ್ರೀಸ್‌ನಲ್ಲಿದ್ದಾರೆ.

  ಬೌಲರ್‌: ಟಿ.ನಟರಾಜನ್‌ (1 1 1 1 1 1)

 • 06:43 pm

  14ನೇ ಓವರ್ ಮುಕ್ತಾಯ

  ರಾಯಲ್ಸ್‌ ತಂಡದ ಮೊತ್ತ 5 ವಿಕೆಟ್‌ ನಷ್ಟಕ್ಕೆ 84 ರನ್‌ ಗಳಿಸಿದೆ.

  ಬೌಲರ್‌: ಸಂದೀಪ್‌ ಶರ್ಮಾ (0 0 1 1 1 1)

 • 06:34 pm

  13ನೇ ಓವರ್‌ ಮುಕ್ತಾಯ

  ರಾಯಲ್ಸ್‌ ತಂಡದ ಮೊತ್ತ 5 ವಿಕೆಟ್‌ ನಷ್ಟಕ್ಕೆ 84 ರನ್‌ ಗಳಿಸಿದೆ.

  ಬೌಲರ್‌: ವಿಜಯ್‌ ಶಂಕರ್‌ (1 0 0 1 Wd Wd 1 1)

 • 06:27 pm

  12ನೇ ಓವರ್‌ ಮುಕ್ತಾಯ: ಸಂಜು ಔಟ್

  26ರನ್‌ ಗಳಿಸಿ ಆಡುತ್ತಿದ್ದ  ಸಂಜು ಸ್ಯಾಮ್ಸನ್‌, ರಶೀದ್‌ ಖಾನ್‌ ಎಸೆದ 12ನೇ ಓವರ್‌ನ ಕೊನೆಯ ಎಸೆತದಲ್ಲಿ ವಿಕೆಟ್‌ ಕೀಪರ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದ್ದಾರೆ.

  ರಾಯಲ್ಸ್ ಸದ್ಯ 5 ವಿಕೆಟ್‌ ಪತನಕ್ಕೆ 79 ರನ್‌ ಗಳಿಸಿದೆ. (0 2 L3 1 0 W)

 • 06:22 pm

  11ನೇ ಓವರ್‌ ಮುಕ್ತಾಯ

  ರಾಯಲ್ಸ್‌ ತಂಡದ ಮೊತ್ತ 4 ವಿಕೆಟ್‌ಗೆ 72 ರನ್

  ಬೌಲರ್‌: ವಿಜಯ್‌ ಶಂಕರ್‌ (1 0 1 1 1 1)

 • 06:20 pm

  10ನೇ ಓವರ್‌ ಮುಕ್ತಾಯ: ಉತ್ತಪ್ಪ ವಿಕೆಟ್‌ ಪತನ

  10 ಓವರ್‌ಗಳ ಆಟ ಮುಕ್ತಾಯವಾಗಿದ್ದು, ರಾಯಲ್ಸ್‌ 4 ವಿಕೆಟ್‌ ಕಳೆದುಕೊಂಡು 47 ರನ್‌ ಗಳಿಸಿದೆ.

  ಈ ಓವರ್‌ ಬೌಲಿಂಗ್‌ ಮಾಡಿದ ರಶೀದ್‌, ಮೊದಲ ಎಸೆತದಲ್ಲೇ ರಾಬಿನ್‌ ಉತ್ತಪ್ಪ (18) ಅವರನ್ನು ಎಲ್‌ಬಿ ಬಲೆಗೆ ಕೆಡವಿದರು.

  (W 1 1 1 1 0)

 • 06:19 pm

  9ನೇ ಓವರ್‌ ಮುಕ್ತಾಯ

  9 ಓವರ್‌ಗಳ ಆಟ ಮುಗಿದಿದ್ದು, ರಾಯಲ್ಸ್‌ 3 ವಿಕೆಟ್‌ ನಷ್ಟಕ್ಕೆ 63 ರನ್‌ ಗಳಿಸಿದೆ.

  ಬೌಲರ್‌: ವಿಜಯ್‌ ಶಂಕರ್‌ (1 2 1 2 1 4)

 • 06:04 pm

  8ನೇ ಓವರ್‌ ಮುಕ್ತಾಯ

  7 ಓವರ್‌ ಮುಕ್ತಾಯವಾಗಿದ್ದು, ರಾಯಲ್ಸ್‌ 52 ರನ್‌ ಗಳಿಸಿದೆ.

  ಬೌಲರ್‌: ರಶೀದ್ ಖಾನ್‌ (0 1 1 1 2 0)

 • 06:01 pm

  7ನೇ ಓವರ್‌ ಮುಕ್ತಾಯ

  ರಾಯಲ್ಸ್‌ 3 ವಿಕೆಟ್‌ ನಷ್ಟಕ್ಕೆ 47 ರನ್ ಗಳಿಸಿದೆ.

  ಬೌಲರ್: ಅಭಿಷೇಕ್‌ ಶರ್ಮಾ (1 4 4 1 0 1)

 • 05:57 pm

  6ನೇ ಓವರ್‌ ಮುಕ್ತಾಯ

  ತಮ್ಮ ಮೊದಲ ಓವರ್‌ನಲ್ಲಿ ಸಿಕ್ಸರ್ ಸಹಿತ 12 ರನ್‌ ಬಿಟ್ಟುಕೊಟ್ಟಿದ್ದ ಟಿ.ನಟರಾಜನ್‌ ಪವರ್‌ ಪ್ಲೇನ ಕೊನೆಯ ಓವರ್‌ನಲ್ಲಿ ರನ್‌ ನೀಡದೆ ಬೌಲಿಂಗ್‌ ಮಾಡಿದರು.

  ರಾಯಲ್ಸ್‌ ಸದ್ಯ 3 ವಿಕೆಟ್‌ಗೆ 36 ರನ್‌ ಗಳಿಸಿದೆ.

  (0 0 0 0 0 0)

 • 05:51 pm

  5ನೆ ಓವರ್ ಮುಕ್ತಾಯ

  5ನೇ ಓವರ್‌ ಬೌಲಿಂಗ್‌ ಮಾಡಿದ ಖಲೀಲ್‌ ಅಹಮದ್ ಆರಂಭಿಕ ಬ್ಯಾಟ್ಸ್‌ಮನ್‌‌ ಜಾಸ್‌ ಬಟ್ಲರ್ (16)‌ ಅವರನ್ನು ಔಟ್‌ ಮಾಡಿದ್ದಾರೆ.

  ಸದ್ಯ 5 ಓವರ್‌ ಮುಕ್ತಾಯವಾಗಿದ್ದು, ರಾಯಲ್ಸ್‌ 3 ವಿಕೆಟ್‌ ಕಳೆದುಕೊಂಡು 36 ರನ್‌ ಗಳಿಸಿದೆ. ಐಪಿಎಲ್‌ನಲ್ಲಿ ನೂರನೇ ಪಂದ್ಯ ಅಡುತ್ತಿರುವ ಸಂಜು ಸ್ಯಾಮ್ಸನ್ (0)‌ ಮತ್ತು ರಾಬಿನ್‌ ಉತ್ತಪ್ಪ (10) ಕ್ರಿಸ್‌ನಲ್ಲಿದ್ದಾರೆ.

  (W 0 0 6 0 4)

 • 05:47 pm

  4ನೇ ಓವರ್‌ ಮುಕ್ತಾಯ: ಸ್ಮಿತ್ ರನೌಟ್‌

  ಎರಡು ರನ್‌ ಕದಿಯುವ ಭರದಲ್ಲಿ ರಾಯಲ್ಸ್‌ ನಾಯಕ ಸ್ಟೀವ್‌ ಸ್ಮಿತ್‌ ರನೌಟ್ ಆಗಿದ್ದಾರೆ.

  4 ಓವರ್‌ ಮುಗಿದಿದ್ದು, ರಾಯಲ್ಸ್‌ 2 ವಿಕೆಟ್‌ ನಷ್ಟಕ್ಕೆ 26 ರನ್ ಗಳಿಸಿದೆ.

  ಬೌಲರ್‌: ಟಿ.ನಟರಾಜನ್‌ (0 4 6 W1 0 1)

 • 05:44 pm

  3ನೇ ಓವರ್‌ ಮುಕ್ತಾಯ

  1 ವಿಕೆಟ್‌ ನಷ್ಟಕ್ಕೆ ರಾಯಲ್ಸ್‌ 14 ರನ್‌ ಗಳಿಸಿದೆ.

  ಬೌಲರ್‌: ಸಂದೀಪ್‌ ಶರ್ಮಾ (0 1 1 1 0 1)

 • 05:34 pm

  2ನೇ ಓವರ್ ಮುಕ್ತಾಯ: ಸ್ಟೋಕ್ಸ್ ವಿಕೆಟ್ ಪತನ

  ಸವಾಲಿನ ಗುರಿ ಬೆನ್ನತ್ತಿರುವ ರಾಜಸ್ಥಾನ ರಾಯಲ್ಸ್‌ ತಂಡ ಮೊದಲ ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿದೆ.

  ಈ ಟೂರ್ನಿಯಲ್ಲಿ ಇದೇ ಮೊದಲ ಪಂದ್ಯ ಆಡುತ್ತಿರುವ ಬೆನ್ ಸ್ಟೋಕ್ಸ್ (5) 2ನೇ ಓವರ್‌ನ ಮೊದಲ 2ನೇ ಎಸೆತದಲ್ಲಿ ಖಲೀಲ್‌ ಅಹಮದ್‌ಗೆ ವಿಕೆಟ್‌ ಒಪ್ಪಿಸಿದರು. (1 W 0 0 3 0)

  ಸಂದೀಪ್‌ ಶರ್ಮಾ ಎಸೆದ ಮೊದಲ ಓವರ್‌ನಲ್ಲಿ ( 0 0 4 0 1 1) ರಾಯಲ್ಸ್‌ ತಂಡ 6 ರನ್‌ ಗಳಿಸಿತ್ತು.

 • 05:05 pm

  ರಾಯಲ್ಸ್‌ಗೆ 159 ರನ್‌ ಗುರಿ

  ಜಯದೇವ್‌ ಉನದ್ಕಟ್‌ ಎಸೆದ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಪ್ರಿಯಂ ಗರ್ಗ್‌ ಹಾಗೂ ಕೇನ್‌ ವಿಲಿಯಮ್ಸನ್‌ ಜೋಡಿ 16 ರನ್ ಗಳಿಸಿಕೊಂಡಿತು. ಹೀಗಾಗಿ ರೈಸರ್ಸ್‌ ಮೊತ್ತ 158ಕ್ಕೆ ಏರಿದೆ.

  (6 1 2 Wd 1 4 W1)

 • 04:59 pm

  19ನೇ ಓವರ್ ಮುಕ್ತಾಯ

  ಮೊದಲ 3 ಓವರ್‌ಗಳಲ್ಲಿ ಕೇವಲ 6 ರನ್‌ ನೀಡಿ 1 ವಿಕೆಟ್ ಪಡೆದುಕೊಂಡಿದ್ದ ಜೋಫ್ರಾ ಆರ್ಚರ್‌ ತಮ್ಮ 4ನೇ ಓವರ್‌ನಲ್ಲಿ 19 ರನ್‌ ಬಿಟ್ಟುಕೊಟ್ಟರು.

  19 ಓವರ್‌ ಮುಗಿದಿದ್ದು ರೈಸರ್ಸ್‌ 3 ವಿಕೆಟ್‌ಗೆ 142 ರನ್‌ ಗಳಿಸಿದೆ.

  (6 N1 0 2 1 2 6)

 • 04:57 pm

  18ನೇ ಓವರ್ ಮುಕ್ತಾಯ: ಪಾಂಡೆ ವಿಕೆಟ್ ಪತನ

  54 ರನ್‌ ಗಳಿಸಿದ್ದ ಮನೀಷ್ ಪಾಂಡೆ 18ನೇ ಓವರ್‌ನಲ್ಲಿ ಔಟಾಗಿದ್ದು, ರೈಸರ್ಸ್‌ 3 ವಿಕೆಟ್‌ಗೆ 123 ರನ್‌ ಗಳಿಸಿದೆ.

  ಬೌಲರ್‌: ಜಯದೇವ್‌ ಉನದ್ಕಟ್‌ (1 2 2 W 1 0)

 • 04:48 pm

  17ನೇ ಓವರ್ ಮುಕ್ತಾಯ: ಅರ್ಧಶತಕ ಗಳಿಸಿದ ಪಾಂಡೆ

  ಕನ್ನಡಿಗ ಮನಿಷ್‌ ಪಾಂಡೆ 41 ಎಸೆತಗಳಲ್ಲಿ 50 ರನ್‌ ಬಾರಿಸಿ ಆಡುತ್ತಿದ್ದಾರೆ. ಇದು ಐಪಿಎಲ್‌ನಲ್ಲಿ ಅವರ 17ನೇ ಅರ್ಧಶತಕ.

  ಸದ್ಯ 17 ಓವರ್ ಮುಗಿದಿದ್ದು ರೈಸರ್ಸ್ 2 ವಿಕೆಟ್‌ ನಷ್ಟಕ್ಕೆ‌ 117 ರನ್‌ ಗಳಿಸಿದೆ.

 • 04:41 pm

  16ನೇ ಓವರ್ ಮುಕ್ತಾಯ: ನೂರರ ಗಡಿ ದಾಟಿದ ರೈಸರ್ಸ್‌

  ರಾಹುಲ್‌ ತೆವಾಟಿಯಾ ಎಸೆತ 16ನೇ ಓವರ್‌ನಲ್ಲಿ ತಲಾ ಒಂದು ಬೌಂಡರಿ ಮತ್ತು ಸಿಕ್ಸರ್‌ ಸಹಿತ 13 ರನ್‌ ಬಾರಿಸಿದ ಮನೀಷ್ ಪಾಂಡೆ ರೈಸರ್ಸ್‌ ಮೊತ್ತವನ್ನು ಶತಕದ ಗಡಿ ದಾಟಿಸಿದ್ದಾರೆ.

  ಪಾಂಡೆ (44) ಮತ್ತು ವಿಲಿಯಮ್ಸನ್‌ (0) ಕ್ರೀಸ್‌ನಲ್ಲಿದ್ದಾರೆ.

  (4 0 0 6 2 1)

 • 04:38 pm

  15ನೇ ಓವರ್ ಮುಕ್ತಾಯ: ವಾರ್ನರ್ ವಿಕೆಟ್ ಪತನ

  ರೈಸರ್ಸ್‌ ತಂಡದ ನಾಯಕ್ ಡೇವಿಡ್‌ ವಾರ್ನರ್ (48() 15ನೇ ಓವರ್‌ನಲ್ಲಿ ವಿಕೆಟ್‌ ಒಪ್ಪಿಸಿದ್ದಾರೆ. ಸದ್ಯ ಅನುಭವಿ ಬ್ಯಾಟ್ಸ್‌ಮನ್‌ ಕೇನ್‌ ವಿಲಿಯಮ್ಸನ್‌ ಕ್ರೀಸ್‌ನಲ್ಲಿದ್ದಾರೆ.

  15 ಓವರ್ ಮುಕ್ತಾಯವಾಗಿದ್ದು, ರೈಸರ್ಸ್‌ 96 ರನ್‌ಗಳಿಸಿ 2 ವಿಕೆಟ್‌ ಕಳೆದುಕೊಂಡಿದೆ.

  ಬೌಲರ್‌: ಜೋಫ್ರಾ ಆರ್ಚರ್‌ (1 0 2 W 0 0)

 • 04:35 pm

  14ನೇ ಓವರ್ ಮುಕ್ತಾಯ

  14 ಓವರ್‌ಗಳ ಆಟ ಮುಕ್ತಾಯವಾಗಿದ್ದು ರೈಸರ್ಸ್‌ 1 ವಿಕೆಟ್‌ ನಷ್ಟಕ್ಕೆ 93 ರನ್‌ ಗಳಿಸಿದೆ.

  ಬೌಲರ್‌: ಶ್ರೇಯಸ್‌ ಗೋಲಾಪ್‌ (1 0 6 1 0 2)

 • 04:31 pm
   
  13 ಓವರ್ ಅಂತ್ಯ; 1 ವಿಕೆಟ್ ನಷ್ಟಕ್ಕೆ 83 ರನ್ ದಾಖಲಿಸಿದ ರೈಸರ್ಸ್
 • 04:25 pm

  12 ಓವರ್ ಅಂತ್ಯ; 1 ವಿಕೆಟ್ ನಷ್ಟಕ್ಕೆ 77 ರನ್ ದಾಖಲಿಸಿದ ರೈಸರ್ಸ್

  29 ಎಸೆತಗಳಲ್ಲಿ 40 ರನ್ ದಾಖಲಿಸಿ ವಾರ್ನರ್.  24 ಎಸೆತಗಳಲ್ಲಿ ಮನೀಶ್ ಪಾಂಡೆ 20 ರನ್ ದಾಖಲಿಸಿದ್ದಾರೆ.

 • 04:22 pm

  11 ಓವರ್ ಅಂತ್ಯವಾದಾಗ ರೈಸರ್ಸ್ ಸ್ಕೋರ್ 74

 • 04:15 pm

  10 ಓವರ್ ಅಂತ್ಯಕ್ಕೆ 1 ವಿಕೆಟ್ ನಷ್ಟದಲ್ಲಿ ಸನ್ ರೈಸರ್ಸ್ ಸ್ಕೋರ್ 63

 • 03:57 pm

  6ನೇ ಓವರ್ ಮುಕ್ತಾಯ

  ಪವರ್‌ ಪ್ಲೇ ಮುಕ್ತಾಯವಾಗಿದೆ. ರೈಸರ್ಸ್‌1 ವಿಕೆಟ್‌ ಕಳೆದುಕೊಂಡು 26 ರನ್‌ ಗಳಿಸಿದೆ. ಜೋಫ್ರಾ ಆರ್ಚರ್‌ ಹಾಗೂ ಶ್ರೇಯಸ್‌ ಗೋಪಾಲ್ ತಲಾ 2 ಓವರ್‌ ಬೌಲಿಂಗ್‌ ಮಾಡಿದ್ದಾರೆ. ಕಾರ್ತಿಕ್‌ ತ್ಯಾಗಿ ಮತ್ತು ಜಯದೇವ್ ಉನದ್ಕಟ್‌ ಒಂದೊಂದು ಓವರ್‌ ಎಸೆದಿದ್ದಾರೆ. ಬೌಲರ್‌: ಜಯದೇವ್‌ ಉನದ್ಕಟ್‌ (0 0 1 1 1 0)
 • 03:50 pm

  5ನೇ ಓವರ್ ಮುಕ್ತಾಯ: ಮೊದಲ ವಿಕೆಟ್‌ ಕಳೆದುಕೊಂಡ ರೈಸರ್ಸ್

  5ನೇ ಓವರ್‌ಗಳ ಆಟ ಮುಕ್ತಾಯವಾಗಿದ್ದು ಸನ್‌ರೈಸರ್ಸ್ ತಂಡ ಮೊದಲ ವಿಕೆಟ್‌ ಕಳೆದುಕೊಂಡು 23 ರನ್‌ ಗಳಿಸಿದೆ.

  ಯುವ ವೇಗಿ ಕಾರ್ತಿಕ್‌ ತ್ಯಾಗಿ ಎಸೆದ ಈ ಓವರ್‌ನ 4ನೇ ಎಸೆತದಲ್ಲಿ ಜಾನಿ ಬೈರ್ಸ್ಟ್ರೋವ್‌ (16) ಔಟಾಗಿದ್ದಾರೆ. ಮನಿಷ್‌ ಪಾಂಡೆ ಕ್ರೀಸ್‌ಗೆ ಬಂದಿದ್ದಾರೆ.

  (2 2 6 W 0 0)

 • 03:47 pm

  4ನೇ ಓವರ್ ಮುಕ್ತಾಯ

  4 ಓವರ್‌ಗಳ ಆಟ ಮುಕ್ತಾಯವಾಗಿದ್ದು, ರೈಸರ್ಸ್‌ ವಿಕೆಟ್‌ ನಷ್ಟವಿಲ್ಲದೆ 13 ರನ್‌ ಗಳಿಸಿದೆ. ರೈಸರ್ಸ್‌ ಈ ಓವರ್‌ನಲ್ಲಿ ಮೊದಲ ಬೌಂಡರಿ ಗಳಿಸಿಕೊಂಡಿತು.

  ಬೌಲರ್‌: ಶ್ರೇಯಸ್‌ ಗೋಪಾಲ್‌ (1 4 1 0 1 0)

 • 03:43 pm

  3ನೇ ಓವರ್ ಮುಕ್ತಾಯ

  ರೈಸರ್ಸ್ ವಿಕೆಟ್‌ ನಷ್ಟವಿಲ್ಲದೆ 6 ರನ್‌ ಗಳಿಸಿದೆ.

  ಬೌಲರ್‌: ಜೋಫ್ರಾ ಆರ್ಚರ್ (0 0 0 0 0 1)

 • 03:38 pm

  2ನೇ ಓವರ್ ಮುಕ್ತಾಯ

  ಇನಿಂಗ್ಸ್‌ ಎರಡನೇ ಓವರ್‌ನಲ್ಲಿ ಸ್ಪಿನ್ನರ್‌ ಶ್ರೇಯಸ್‌ ಗೋ‍ಪಾಲ್‌ ಬೌಲಿಂಗ್‌ ಮಾಡಿದರು. ಈ ಓವರ್‌ನಲ್ಲಿ ರೈಸರ್ಸ್ 3 ರನ್‌ ಗಳಿಸಿಕೊಂಡಿತು.

  ಈ ಪಂದ್ಯದಲ್ಲಿ 2 ರನ್‌ ಗಳಿಸಿದ ವೇಳೆ ಡೇವಿಡ್‌ ವಾರ್ನರ್‌ ರೈಸರ್ಸ್‌ ಪರ ಐಪಿಎಲ್‌ನಲ್ಲಿ 3,500 ರನ್‌ ಪೇರಿಸಿದ ಸಾಧನೆ ಮಾಡಿದರು.

  (0 1 1 0 0 1)

 • 03:34 pm

  ಇನಿಂಗ್ಸ್‌ ಆರಂಭಿಸಿದ ರೈಸರ್ಸ್

  ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಪರ ನಾಯಕ ಡೇವಿಡ್ ವಾರ್ನರ್‌ ಮತ್ತು ಜಾನಿ ಬೈರ್ಸ್ಟ್ರೋವ್‌ ಕ್ರೀಸ್‌ಗೆ ಇಳಿದಿದ್ದಾರೆ.

  ಮೊದಲ ಓವರ್‌ ಆಟ ಮುಕ್ತಾಯವಾಗಿದ್ದು ರೈಸರ್ಸ್‌ ವಿಕೆಟ್‌ ನಷ್ಟವಿಲ್ಲದೆ 2 ರನ್ ಗಳಿಸಿದೆ.

  ಬೌಲರ್‌: ಜೋಫ್ರಾ ಆರ್ಚರ್‌ ( 0 0 0 1 1 0)

 • 03:07 pm

  ಹನ್ನೊಂದರ ಬಳಗ; ರಾಯಲ್ಸ್‌ನಲ್ಲಿ ಮೂರು ಬದಲಾವಣೆ

  ರಾಯಲ್ಸ್‌ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಮೂರು ಬದಲಾವಣೆಗಳನ್ನು ಮಾಡಲಾಗಿದೆ. ಆರಂಭಿಕ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್, ಮಹಿಪಾಲ್‌ ಲಾಮ್ರೋರ್, ವರುಣ್‌ ಆ್ಯರೋನ್‌ ಹಾಗೂ ಆಂಡ್ರೋ ಟೈ‌ ಅವರ ಜಾಗದಲ್ಲಿ ರಾಬಿನ್‌ ಉತ್ತಪ್ಪ, ರಿಯಾನ್‌ ಪರಾಗ್, ಜಯದೇವ್‌ ಉನದ್ಕಟ್‌ ಮತ್ತು ಬೆನ್‌ ಸ್ಟೋಕ್ಸ್ ಕಣಕ್ಕಿಳಿಯಲಿದ್ದಾರೆ.

  ಸನ್‌ರೈಸರ್ಸ್‌ ಹೈದರಾಬಾದ್‌ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಅಬ್ದುಲ್‌ ಸಮದ್‌ ಬದಲು ವಿಜಯ್‌ ಶಂಕರ್‌ಗೆ ಸ್ಥಾನ ನೀಡಲಾಗಿದೆ.

  ಸನ್‌ರೈಸರ್ಸ್‌ ಹೈದರಾಬಾದ್‌: ಡೇವಿಡ್‌ ವಾರ್ನರ್‌ (ನಾಯಕ), ಜಾನಿ ಬೈರ್ಸ್ಟ್ರೋವ್‌ (ವಿಕೆಟ್‌ ಕೀಪರ್‌), ಮನೀಷ್ ಪಾಂಡೆ, ಕೇನ್‌ ವಿಲಿಯಮ್ಸನ್‌, ವಿಜಯ್‌ ಶಂಕರ್‌, ಪ್ರಿಯಂ ಗರ್ಗ್‌, ಅಭಿಷೇಕ್‌ ಶರ್ಮಾ, ವಿಜಯ್‌ ಶಂಕರ್‌, ರಶೀದ್‌ ಖಾನ್‌, ಸಂದೀಪ್‌ ಶರ್ಮಾ, ಕೆ.ಖಲೀಲ್‌ ಅಹಮದ್‌, ಟಿ.ನಟರಾಜನ್‌

  ರಾಜಸ್ಥಾನ ರಾಯಲ್ಸ್‌: ಜಾಸ್‌ ಬಟ್ಲರ್‌ (ವಿಕೆಟ್‌ ಕೀಪರ್‌), ಸ್ಟೀವ್‌ ಸ್ಮಿತ್‌ (ನಾಯಕ), ಸಂಜು ಸ್ಯಾಮ್ಸನ್‌, ಬೆನ್‌ ಸ್ಟೋಕ್ಸ್‌, ರಾಬಿನ್‌ ಉತ್ತಪ್ಪ, ರಿಯಾನ್‌ ಪರಾಗ್‌, ರಾಹುಲ್‌ ತೆವಾಟಿಯಾ, ಜೋಫ್ರಾ ಆರ್ಚರ್‌, ಶ್ರೇಯಸ್‌ ಗೋಪಾಲ್‌, ಕಾರ್ತಿಕ್‌ ತ್ಯಾಗಿ, ಜಯದೇವ್‌ ಉನದ್ಕಟ್

 • 03:03 pm

  ರೈಸರ್ಸ್‌ ಬ್ಯಾಟಿಂಗ್‌

  ರಾಜಸ್ಥಾನ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಸನ್‌ರೈಸರ್ಸ್ ಹೈದರಾಬಾದ್‌ ತಂಡದ ನಾಯಕ ಡೇವಿಡ್‌ ವಾರ್ನರ್‌ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ.

 • 02:41 pm

  ಗೆಲುವು ಯಾರಿಗೆ? ವೋಟ್ ಮಾಡಿ

 • 02:27 pm

  ಸ್ಟೀವ್‌ ಸ್ಮಿತ್ vs ಡೇವಿಡ್ ವಾರ್ನರ್