ನವದೆಹಲಿ (ಪಿಟಿಐ): ಈ ಬಾರಿಯ ಐಪಿಎಲ್ನಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡದ ಪ್ರದರ್ಶನ ಮಟ್ಟವು ಏರಿಳಿಕೆ ಕಂಡಿದೆ. ಕೆಲವು ಪಂದ್ಯಗಳಲ್ಲಿ ಉತ್ತಮ ವಾಗಿ ಆಡಿದ್ದು, ಗೆಲ್ಲಬಹುದಾಗಿದ್ದ ಕೆಲವು ಪಂದ್ಯಗಳನ್ನೂ ಸೋತಿದೆ. ಮಂಗಳವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿರುವ ಡೆಲ್ಲಿ ತಂಡ ಸ್ಥಿರ ಪ್ರದರ್ಶನ ನೀಡಬೇಕಾದ ಅನಿವಾರ್ಯತೆಯಲ್ಲಿದೆ.

ಚೆನ್ನೈ ಸೂಪರ್ ಕಿಂಗ್ಸ್ಗೂ ಗೆಲುವು ಅತ್ಯಗತ್ಯವಾಗಿದೆ. ಎರಡೂ ತಂಡಗಳು ತಲಾ 9 ಪಂದ್ಯಗಳನ್ನು ಆಡಿದ್ದು ಎಂಟು ಪಾಯಿಂಟ್ಸ್ ಸಂಗ್ರಹಿಸಿವೆ.

ಅಕ್ಷರ್ ಪಟೇಲ್ ಪಡೆ ತವರಿನಲ್ಲಿ ಆಡಿದ ಕೊನೆಯ ಮೂರು ಪಂದ್ಯಗಳನ್ನು ಸೋತಿದೆ. ಆದರೆ ಜೈಪುರದಲ್ಲಿ ಶುಕ್ರವಾರ ಆಡಿದ ತನ್ನ ಕೊನೆಯ ಪಂದ್ಯದಲ್ಲಿ ರಾಜ ಸ್ಥಾನ ರಾಯಲ್ಸ್ ವಿರುದ್ಧ ಸುಲಭವಾಗಿ ಗೆದ್ದುಕೊಂಡು ಆತ್ಮವಿಶ್ವಾಸದಲ್ಲಿದೆ.

ತವರಿನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 2 ವಿಕೆಟ್ಗೆ 264 ರನ್ಗಳ ಭಾರಿ ಮೊತ್ತ ಗಳಿಸಿದರೂ ಗೆಲುವು ಪಡೆಯ ಲಾಗಲಿಲ್ಲ. ನಂತರದ ಪಂದ್ಯದಲ್ಲಿ ಆರ್ಸಿಬಿಯ ಅಮೋಘ ವೇಗದ ದಾಳಿಗೆ ಅಗ್ರ ಬ್ಯಾಟರ್ಗಳು ತರಗೆಲೆಗಳಂತೆ ಉದುರಿದ್ದರು. ಗುಜರಾತ್ ಟೈಟನ್ಸ್ ಎದುರಿನ ಪಂದ್ಯದಲ್ಲಿ ಮೇಲುಗೈ ಸಾಧಿಸಿದ್ದರೂ, ಕೊನೆಯಲ್ಲಿ ಒಂದು ರನ್ನಿಂದ ಸೋತಿತ್ತು.

ಆರಂಭ ಆಟಗಾರ ಪಥುಮ್ ನಿಸಾಂಕ ಲಯಕ್ಕೆ ಮರಳಿರುವುದು ಡೆಲ್ಲಿ ತಂಡಕ್ಕೆ ಸಕಾರಾತ್ಮಕ ಅಂಶ. ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ವಾಪಸಾಗಿರುವುದು ಬೌಲಿಂಗ್ ವಿಭಾಗದ ಮೊನಚನ್ನು ಹೆಚ್ಚಿಸಿದೆ. ಅನುಭವಿ ಸ್ಪಿನ್ನರ್ ಕುಲದೀಪ್ ಯಾದವ್ ನಿರ್ವಹಣೆ ಸುಧಾರಿಸಬೇಕಾಗಿದೆ. ಅವರು ಓವರೊಂದಕ್ಕೆ ಹತ್ತಕ್ಕಿಂತಲೂ ಹೆಚ್ಚು ರನ್ ತೆತ್ತಿದ್ದಾರೆ. ಗಳಿಸಿದ್ದು ಏಳು ವಿಕೆಟ್ಗಳಷ್ಟೇ. ಟಿ. ನಟರಾಜನ್ ಕೂಡ ಯಶಸ್ಸು ಗಳಿಸುತ್ತಿಲ್ಲ.

ಧೋನಿ ಅಲಭ್ಯ: ಚೆನ್ನೈ ಸೂಪರ್ ಕಿಂಗ್ ತನ್ನ ಹತ್ತನೇ ಪಂದ್ಯದಲ್ಲೂ, ದಿಗ್ಗಜ ಆಟಗಾರ ಎಂ.ಎಸ್.ಧೋನಿ ಅವರಿಲ್ಲದೇ ಆಡಬೇಕಾಗಿದೆ. ಧೋನಿ ಇನ್ನೂ ಪೂರ್ಣವಾಗಿ ದೈಹಿಕ ಕ್ಷಮತೆ ಪಡೆದಿಲ್ಲ ಎಂದು ತಂಡದ ಸಿಇಒ ಕಾಶಿ ವಿಶ್ವನಾಥನ್ ಖಚಿತಪಡಿಸಿದ್ದಾರೆ.

ಚೆನ್ನೈ ತಂಡಕ್ಕೂ ಪ್ರತಿ ಪಂದ್ಯ ನಿರ್ಣಾಯಕ. ಒಂದು ಪಂದ್ಯ ಸೋತರೂ ಹೊರಬೀಳುವ ಅಪಾಯ ಇದ್ದೇ ಇದೆ. ಕಳೆದ ವರ್ಷ ಈ ತಂಡ ಕೊನೆಯ ಸ್ಥಾನ ಪಡೆದಿತ್ತು. ನಾಯಕ ಋತುರಾಜ್ ಗಾಯಕವಾಡ ಸೇರಿ ತಂಡದ ಹೆಚ್ಚಿನವರು ಸಣ್ಣ ವಯಸ್ಸಿನವರು. ಲೀಗ್ನ ಮೊದಲರ್ಧ ಭಾಗದಲ್ಲಿ ಸಂಜು ಸ್ಯಾಮ್ಸನ್ ಯಶಸ್ಸು ಗಳಿಸಿದ್ದರು. ಈಗ ಋತುರಾಜ್ ಲಯಕ್ಕೆ ಮರಳಿ, ಸತತ ಎರಡು ಅರ್ಧಶತಕಗಳನ್ನು ಬಾರಿಸಿರುವುದು ತಂಡದಲ್ಲಿ ಉತ್ಸಾಹ ಮೂಡಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-51-365529330

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.