ನವದೆಹಲಿ (ಪಿಟಿಐ): ಐಪಿಎಲ್ ಪ್ಲೇಆಫ್ ಸ್ಥಾನದ ದೃಷ್ಟಿಯಿಂದ ಮಹತ್ವದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಭಾನುವಾರ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ನಿರ್ಭೀತಿಯಿಂದ ಆಡುವ ವೈಭವ್ ಸೂರ್ಯವಂಶಿ ಅವರಿಗೆ ಈ ಪಂದ್ಯದಲ್ಲಿ ಪರಿಣತ ಸೀಮ್ ಮತ್ತು ಸ್ವಿಂಗ್ ಬೌಲರ್ ಮಿಚೆಲ್ ಸ್ಟಾರ್ಕ್ ಅವರ ಪರೀಕ್ಷೆ ಎದುರಾಗಲಿದೆ.

12 ಪಂದ್ಯಗಳಿಂದ 10 ಪಾಯಿಂಟ್ಸ್ ಗಳಿಸಿರುವ ಡೆಲ್ಲಿ ತಂಡದ ಪ್ಲೇ ಆಫ್ ಅವಕಾಶ ಕ್ಷೀಣಿಸಿದೆ. ಭಾನುವಾರದ ಪಂದ್ಯದಲ್ಲಿ ಸೋತರೆ ಅಧಿಕೃತವಾಗಿ ರೇಸ್ನಿಂದ ಹೊರಬೀಳಲಿದೆ. ಒಂದು ವಾರದ ವಿರಾಮದಿಂದ ನವೋಲ್ಲಾಸ ದಲ್ಲಿರುವ ರಾಯಲ್ಸ್ ತಂಡ (11 ಪಂದ್ಯಗಳಿಂದ 12) ಪಂದ್ಯ ಗೆದ್ದರೆ ಪ್ಲೇ ಆಫ್ ಅವಕಾಶ ಉಜ್ವಲವಾಗಲಿದೆ. ಜತೆಗೆ ಪಂಜಾಬ್ ಕಿಂಗ್ಸ್ (12 ಪಂದ್ಯಗಳಿಂದ 13) ಮೇಲೆ ಒತ್ತಡ ಹೆಚ್ಚಲಿದೆ.

ಸಚಿನ್ ತೆಂಡೂಲ್ಕರ್ ಅವರ ನಂತರದ ಕಾಲಘಟ್ಟದಲ್ಲಿ ಹದಿಹರೆಯ ದಲ್ಲಿ ಕ್ರಿಕೆಟ್ ಪ್ರಿಯರ ಗಮನವನ್ನು ಸೂರ್ಯವಂಶಿ ಅವರಷ್ಟು ಬೇರಾರೂ ಸೆಳೆದಿಲ್ಲ. ಸಮಷ್ಟಿಪುರದ ಈ ಬಾಲಪ್ರತಿಭೆ ದೊಡ್ಡ ಅಭಿಮಾನಿವರ್ಗವನ್ನು ಸೃಷ್ಟಿಸಿಕೊಂಡಿದ್ದಾರೆ. ಅವರಿಗೆ ಇದು ರಾಷ್ಟ್ರ ರಾಜಧಾನಿಯಲ್ಲಿ ‘ಪದಾರ್ಪಣೆ ಪಂದ್ಯ’. ಈ ‘ಅಚ್ಚರಿಯ ಬಾಲಕ’ನ ಆಟ ನೋಡುವುದಕ್ಕಾಗಿ ಸಾಕಷ್ಟು ಅಭಿಮಾನಿವರ್ಗ ಸೇರುವ ಸಾಧ್ಯತೆಯಿದೆ.

ಆರಂಭದಲ್ಲೇ ಸ್ಫೋಟಕ ಆಟಕ್ಕಿಳಿಯುವ ಸೂರ್ಯವಂಶಿ 11 ಪಂದ್ಯಗಳಿಂದ 40 ಸಿಕ್ಸರ್ಗಳನ್ನು ಸಿಡಿಸಿದ್ದಾರೆ. 236.55 ಸ್ಟ್ರೈಕ್ರೇಟ್ ನಲ್ಲಿ 440 ರನ್ ಬಾರಿಸಿದ್ದಾರೆ. ಅವರು ಅನುಭವಿ ಎಡಗೈ ವೇಗಿ ಸ್ಟಾರ್ಕ್ ಅವರನ್ನು ಹೇಗೆ ಎದುರಿಸಲಿದ್ದಾರೆ ಎಂಬ ಕುತೂಹಲವಿದೆ.

ಡೆಲ್ಲಿ ತಂಡದ ಅಂತರರಾಷ್ಟ್ರೀಯ ಬೌಲರ್ಗಳಾದ ಅಕ್ಷರ್ ಪಟೇಲ್ (12 ಪಂದ್ಯಗಳಿಂದ 10 ವಿಕೆಟ್) ಮತ್ತು ಕುಲದೀಪ್ ಯಾದವ್ (11 ಪಂದ್ಯಗಳಿಂದ 7 ವಿಕೆಟ್) ಅವರ ಸ್ಪಿನ್ ದಾಳಿ ಅಷ್ಟೇನೂ ಪರಿಣಾಮಕಾರಿಯಾಗಿಲ್ಲ. ಇದು ತಂಡಕ್ಕೆ ಸಮಸ್ಯೆಯಾಗಿದೆ. ಲುಂಗಿ ಎನ್ಗಿಡಿ ಬಿಟ್ಟರೆ ಉಳಿದ ವೇಗದ ಬೌಲರ್ಗಳೂ ಅಷ್ಟೇನೂ ಯಶಸ್ಸು ಕಾಣುತ್ತಿಲ್ಲ.

ರಾಜಸ್ಥಾನ ತಂಡಕ್ಕೆ ಕಳವಳದ ವಿಷಯವೆಂದರೆ ನಾಯಕ ರಿಯಾನ್ ಪರಾಗ್ ಅವರ ಅಸ್ಥಿರ ಬ್ಯಾಟಿಂಗ್. ಅಸ್ಸಾಂನ ಆಟಗಾರ 10 ಪಂದ್ಯಗಳಿಂದ 143 ಸ್ಟ್ರೈಕ್ ರೇಟ್ನಲ್ಲಿ 143 ರನ್ ಮಾತ್ರ ಗಳಿಸಿದ್ದಾರೆ.

ರಾಯಲ್ಸ್ ಬೌಲಿಂಗ್ ವಿಭಾಗ ಪ್ರಬಲವಾಗಿದ್ದು ಜೋಫ್ರಾ ಆರ್ಚರ್ ಆರಂಭದಲ್ಲೇ ಯಶಸ್ಸು ಕಾಣುತ್ತಿದ್ದಾರೆ.

ಡೆಲ್ಲಿ ಬ್ಯಾಟರ್ಗಳ ಪೈಕಿ ಕೆ.ಎಲ್.ರಾಹುಲ್ ಅವರನ್ನು ಬಿಟ್ಟರೆ ಪ್ರಮುಖ ಬ್ಯಾಟರ್ಗಳಾದ ನಿತೀಶ್ ರಾಣಾ ಮತ್ತು ಸಮೀರ್ ರಿಝ್ವಿ ಗುಣಮಟ್ಟದ ಬೌಲಿಂಗ್ ಎದುರು ಪರದಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-4-1702849147

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.