ಶನಿವಾರ, ಆಗಸ್ಟ್ 20, 2022
21 °C

ಐಪಿಎಲ್‌ನಲ್ಲಿ ಆಡಲು ದುಬೈ ತಲುಪಿದ ಗಿಡಿ, ಡು ಪ್ಲೆಸಿ, ರಬಾಡ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ದಕ್ಷಿಣ ಆಫ್ರಿಕಾ ಆಟಗಾರರಾದ ಫಾಫ್‌ ಡು ಪ್ಲೆಸಿ, ಲುಂಗಿ ಗಿಡಿ ಹಾಗೂ ಕಗೀಸೊ ರಬಾಡ ಅವರು ಐಪಿಎಲ್‌ ಟೂರ್ನಿಯಲ್ಲಿ ಆಡಲು ಮಂಗಳವಾರ ನಸುಕಿನ ಜಾವ ದುಬೈಗೆ ಬಂದಿಳಿದರು.

ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಡು ಪ್ಲೆಸಿ ಹಾಗೂ ವೇಗಿ ಲುಂಗಿ ಗಿಡಿ ಅವರು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಶಿಬಿರವನ್ನು ಸೇರಿಕೊಂಡಿದ್ದಾರೆ. ಮತ್ತೊಬ್ಬ ವೇಗಿ ರಬಾಡ ಅವರು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪರ ಆಡಲಿದ್ದಾರೆ.

ಎರಡೂ ಫ್ರ್ಯಾಂಚೈಸ್‌ಗಳು (ಡೆಲ್ಲಿ ಹಾಗೂ ಸಿಎಸ್‌ಕೆ) ದಕ್ಷಿಣ ಆಫ್ರಿಕಾ ಆಟಗಾರರ ಆಗಮನವನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿವೆ.

ಈ ಮೂರು ಮಂದಿ ಆಟಗಾರರು ಆರು ದಿನಗಳ ಕಾಲ ಪ್ರತ್ಯೇಕವಾಸದಲ್ಲಿ ಇರುವರು. ನಿಯಮದನ್ವಯ ಈ ಅವಧಿಯ 1, 3 ಹಾಗೂ ಆರನೆಯ ದಿನಗಳಂದು ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು