ಅಹಮದಾಬಾದ್: ಇಲ್ಲಿ ಮುಕ್ತಾಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಮಣಿಸಿದ ಆರ್ಸಿಬಿ ತಂಡವು ಸತತ ಎರಡು ಆವೃತ್ತಿಗಳಲ್ಲಿ ಚಾಂಪಿಯನ್ ಆದ ಸಾಧನೆ ಮಾಡಿತು.

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ 2010 ಹಾಗೂ 2011ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ 2019 ಹಾಗೂ 2020ರಲ್ಲಿ ಮುಂಬೈ ಇಂಡಿಯನ್ಸ್ ತಂಡಗಳು ಮಾತ್ರ ಸತತ ಎರಡು ಆವೃತ್ತಿಗಳಲ್ಲಿ ಚಾಂಪಿಯನ್ ಆಗಿದ್ದವು. ಇದೀಗ, 2025 ಹಾಗೂ 2026ರಲ್ಲಿ ಚಾಂಪಿಯನ್ ಆಗಿರುವ ಆರ್ಸಿಬಿ ತಂಡವು ಎಂಐ ಹಾಗೂ ಸಿಎಸ್ಕೆ ತಂಡಗಳ ಸಾಲಿಗೆ ಸೇರಿದೆ.

ಗುಜರಾತ್ ಟೈಟನ್ಸ್ ನೀಡಿದ್ದ 156 ರನ್ಗಳ ಗುರಿ ಬೆನ್ನಟ್ಟಿದ ಆರ್ಸಿಬಿ ತಂಡಕ್ಕೆ ವೆಂಕಟೇಶ್ ಐಯ್ಯರ್ ಹಾಗೂ ವಿರಾಟ್ ಕೊಹ್ಲಿ 62 ರನ್ಗಳ ಸ್ಫೋಟಕ ಆರಂಭ ನೀಡಿದರು. ಈ ಹಂತದಲ್ಲಿ 32 ರನ್ಗಳಿಸಿದ್ದ ಐಯ್ಯರ್ ಔಟ್ ಆಗುತ್ತಿದ್ದಂತೆ ಬಂದ ದೇವದತ್ತ ಪಡಿಕ್ಕಲ್ (1), ನಾಯಕ ರಜತ್ ಪಾಟಿದಾರ್ (15) ಮತ್ತು ಕೃನಾಲ್ ಪಾಂಡ್ಯ (1) ರನ್ ಗಳಿಸಿ ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿಕೊಂಡರು.

ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಸ್ಫೋಟಕ ಬ್ಯಾಟಿಂಗ್ ನಡೆಸಿದ ವಿರಾಟ್ ಕೊಹ್ಲಿ ಅವರು 42 ಎಸೆತಗಳಲ್ಲಿ ಅಜೇಯ 75 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಕೊಹ್ಲಿ ಅವರ ಈ ಪ್ರದರ್ಶನದ ನೆರವಿನಿಂದ ಆರ್ಸಿಬಿ ತಂಡವು 18 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಗುಜರಾತ್ ಟೈಟನ್ಸ್ ಪರ ರಶೀದ್ ಖಾನ್ (2), ಕಗಿಸೊ ರಬಾಡ ಹಾಗೂ ಮೊಹಮ್ಮದ್ ಸಿರಾಜ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಶುಭಮನ್ ಗಿಲ್ (10), ಸಾಯಿ ಸುದರ್ಶನ್ (12), ಅರ್ಷದ್ ಖಾನ್ (20) ಹಾಗೂ ಜೋಸ್ ಬಟ್ಲರ್ (19) ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ನಂತರ ಬಂದ ಬ್ಯಾಟರ್ಗಳು ಕೂಡ ಬಂದಷ್ಟೆ ವೇಗದಲ್ಲಿ ಪೆವಿಲಿಯನ್ ಸೇರಿಕೊಂಡರು.

ಒಂದೆಡೆ ವಿಕೆಟ್ ಬೀಳುತ್ತಿದ್ದರೂ, ಕ್ರೀಸ್ ಕಚ್ಚಿ ಆಡಿದ ವಾಷಿಂಗ್ಟನ್ ಸುಂದರ್ ಗುಜರಾತ್ ಟೈಟನ್ಸ್ ಪರ (ಅಜೇಯ 50 ರನ್) ಅತ್ಯುತ್ತಮ ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಆ ಮೂಲಕ ಗುಜರಾತ್ ಮೊತ್ತವನ್ನು 155ಕ್ಕೆ ತಲುಪಿಸಿದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ರಸಿಕ್ ಸಲಾಂ ದಾರ್ 3, ಜೋಶ್ ಹೇಜಲ್ವುಡ್ ಹಾಗೂ ಭುವನೇಶ್ವರ ಕುಮಾರ್ ತಲಾ 2 ವಿಕೆಟ್ ಪಡೆದುಕೊಂಡರೆ, ಕೃನಾಲ್ ಪಾಂಡ್ಯ ಒಂದು ವಿಕೆಟ್ ಪಡೆದು ಮಿಂಚಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.