ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್–2026ರ ಫೈನಲ್ ಪಂದ್ಯವು ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರಂಭಗೊಂಡಿದೆ. ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಟಾಸ್ ಗೆದ್ದಿರುವ ಆರ್ಸಿಬಿ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ.

1 ಲಕ್ಷಕ್ಕೂ ಅಧಿಕ ಪ್ರೇಕ್ಷಕರ ಸಾಮರ್ಥ್ಯ ಹೊಂದಿರುವ ಅಹಮದಾಬಾದ್ ಮೈದಾನದಲ್ಲಿ ದಾಖಲಾಗಿರುವ ಯಶಸ್ವಿ ರನ್ ಚೇಸ್ ಎಷ್ಟು? ಎಂಬುದನ್ನು ನೋಡೋಣ.

2023ರಲ್ಲಿ ಇದೇ ಮೈದಾನದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಗುಜರಾತ್ ಟೈಟನ್ಸ್ ವಿರುದ್ಧ 205 ರನ್ಗಳ ಗುರಿಯನ್ನು ಯಶಸ್ವಿಯಾಗಿ ಚೇಸ್ ಮಾಡಿತ್ತು. ಇದು, ಈ ಮೈದಾನದಲ್ಲಿ ದಾಖಲಾದ ಅತ್ಯಧಿಕ ಯಶಸ್ವಿ ರನ್ ಚೇಸ್ ಆಗಿದೆ. ಅಂದಿನ ಪಂದ್ಯದಲ್ಲಿ, ರಿಂಕು ಸಿಂಗ್ ಅವರು ಅಂತಿಮ ಓವರ್ನ ಕೊನೆಯ 5 ಎಸೆತಗಳಲ್ಲಿ ಐದು ಸಿಕ್ಸರ್ ಸಿಡಿಸುವ ಮೂಲಕ ಪಂದ್ಯವನ್ನು ಗೆಲ್ಲಿಸಿದ್ದರು.
.ಫೈನಲ್ನಲ್ಲೂ ‘ವಿರಾಟ ದರ್ಶನ’; ಸತತ ಎರಡನೇ IPL ಟ್ರೋಫಿ ಗೆದ್ದು ದಾಖಲೆ ಬರೆದ RCB.IPL Final 2026: ಈ ಆಟಗಾರರ ನಡುವಿನ ಕಾಳಗದಲ್ಲಿ ಗೆದ್ದವರು ಕಪ್ ಗೆಲ್ಲೋದು ಪಕ್ಕಾ.
ಈ ಮೈದಾನದಲ್ಲಿ ಎರಡನೇ ಅತ್ಯಧಿಕ ರನ್ ಚೇಸ್ ಮೂಡಿ ಬಂದಿರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ. 2024ರಲ್ಲಿ ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್ಸಿಬಿ ತಂಡವು ಗುಜರಾತ್ ಟೈಟನ್ಸ್ ವಿರುದ್ಧ 201 ರನ್ಗಳ ಗುರಿಯನ್ನು ಅನ್ನು ಕೇವಲ 16 ಓವರ್ಗಳಲ್ಲಿ ತಲುಪುವ ಮೂಲಕ ಗೆಲುವಿನ ನಗೆ ಬೀರಿತ್ತು.

ಇದೇ ಸೀಸನ್ನಲ್ಲಿ ಗುಜರಾತ್ ಟೈಟನ್ಸ್ ತಂಡದ ವಿರುದ್ಧ ಪಂಜಾಬ್ ಕಿಂಗ್ಸ್ 200 ರನ್ಗಳ ಗುರಿಯನ್ನು ತಲುಪಿರುವುದು ಈ ಮೈದಾನದಲ್ಲಿ ದಾಖಲಾಗಿರುವ ಮೂರನೇ ಅತ್ಯಧಿಕ ಯಶಸ್ವಿ ರನ್ ಚೇಸ್ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.