ಗುವಾಹಟಿ: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್ ಪಂದ್ಯದಲ್ಲಿ 10 ಸಾವಿರ ಹೆಚ್ಚುವರಿ ಉಚಿತ ಟಿಕೆಟ್ಗಳಿಗಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಬೇಡಿಕೆ ಇಟ್ಟಿತ್ತು. ಅದನ್ನು ಈಡೇರಿಸುವುದು ಅಸಾಧ್ಯವಾದ ಕಾರಣ ಫೈನಲ್ ಪಂದ್ಯವನ್ನು ಸ್ಥಳಾಂತರಿಸಬೇಕಾದ ಕಠಿಣ ನಿರ್ಧಾರ ಕೈಗೊಳ್ಳ ಬೇಕಾಯಿತು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ದೇವಜೀತ್ ಸೈಕಿಯಾ ಹೇಳಿದ್ದಾರೆ.

‘ಐಪಿಎಲ್ ಶಿಷ್ಟಾಚಾರದ ಪ್ರಕಾರ ಆತಿಥ್ಯ ವಹಿಸುವ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಆಯಾ ಕ್ರೀಡಾಂಗಣದ ಆಸನ ಸಾಮರ್ಥ್ಯದ ಶೇ 15ರಷ್ಟು ಟಿಕೆಟ್ಗಳನ್ನು ಉಚಿತವಾಗಿ ನೀಡಲಾಗುತ್ತದೆ. ಆದರೆ ಕೆಎಸ್ಸಿಎ ನಿಗದಿಯ ಕೋಟಾ ಅಲ್ಲದೇ ಹೆಚ್ಚುವರಿ 10 ಸಾವಿರ ಟಿಕೆಟ್ಗಳನ್ನೂ ಕೇಳಿತ್ತು. ಲೀಗ್ ಪಂದ್ಯಗಳ ಸಂದರ್ಭದಲ್ಲಿಯೂಕೆಎಸ್ಸಿಎ ನಿಗದಿತ ಸಂಖ್ಯೆಗಿಂತಲೂ ಹೆಚ್ಚುವರಿ ಉಚಿತ ಟಿಕೆಟ್ಗಳನ್ನು ಪಡೆದಿತ್ತು ಎಂದು ಬೇರೆ ಬೇರೆ ಮೂಲಗಳಿಂದ ನಮಗೆ ತಿಳಿದುಬಂದಿತು’ ಎಂದು ಸೈಕಿಯಾ ಅವರು ಎಎನ್ಐ ಸುದ್ದಿಸಂಸ್ಥೆಯೊಂದಿಗಿನ ಸಂವಾದದಲ್ಲಿ ಬಹಿರಂಗಪಡಿಸಿದ್ದಾರೆ.

‘ಈ ವಿಷಯ ಕುರಿತು ಮಾಹಿತಿಗಳನ್ನು ನೀಡುವಂತೆ ಕೋರಿ ನಾವು (ಬಿಸಿಸಿಐ) ಕೆಎಸ್ಸಿಎಗೆ ಇಮೇಲ್ ಮಾಡಿದೆವು. ಅದಕ್ಕೆ ಪ್ರತಿಕ್ರಿಯೆಯಾಗಿ ಅವರಿಂದ ಬಂದ ಮೇಲ್ನಲ್ಲಿ ನಿಗದಿತ ಶೇ15 ಟಿಕೆಟ್ ಮತ್ತು ಹೆಚ್ಚುವರಿ ಟಿಕೆಟ್ಗಳಿಗೆ ಬೇಡಿಕೆ ಇಟ್ಟಿತು. ಸಂಸ್ಥೆಯ ಸದಸ್ಯರು, ಮಾನ್ಯತೆ ಪಡೆದ ಕ್ಲಬ್ಗಳು, ಮತ್ತಿತರರಿಗೆ ನೀಡಲು ಉಚಿತ ಟಿಕೆಟ್ ಕೇಳಿತ್ತು. ಸ್ಥಳೀಯ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರಿಗೆ ಉಚಿತ ಟಿಕೆಟ್ ಹಂಚಲು ಕೂಡ ಉಚಿತ ಟಿಕೆಟ್ಗಾಗಿ ಮನವಿ ಮಾಡಿತ್ತು’ ಎಂದು ತಿಳಿಸಿದರು.

ಹಾಲಿ ಚಾಂಪಿಯನ್ ಆರ್ಸಿಬಿಯ ತವರೂರಾದ ಬೆಂಗಳೂರಿನಲ್ಲಿಯೇ ಫೈನಲ್ ನಡೆಸುವುದಾಗಿ ಈ ಮುಂದೆ ಪ್ರಕಟಿಸಲಾಗಿತ್ತು. ಆದರೆ ಪಂದ್ಯವನ್ನು ಅಹಮದಾಬಾದ್ಗೆ ಸ್ಥಳಾಂತರಿಸಿರುವುದಾಗಿ ಬುಧವಾರ ಬಿಸಿಸಿಐ ಪ್ರಕಟಿಸಿತ್ತು. ಇದು ಅಭಿಮಾನಿಗಳಿಗೆ ಬೇಸರ ತರಿಸಿತ್ತು. ಮೇ 31ರಂದು ಫೈನಲ್ ಪಂದ್ಯ ನಡೆಯಲಿದೆ. ಪ್ಲೇ ಆಫ್ ಪಂದ್ಯಗಳು ಧರ್ಮಶಾಲಾ ಮತ್ತು ಮುಲ್ಲನಪುರದಲ್ಲಿ ಆಯೋಜನೆಗೊಂಡಿವೆ.

ಧುಮಾಲ್ ಹೇಳಿಕೆ (ಪಿಟಿಐ ವರದಿ): ‘ಬೆಂಗಳೂರಿನಲ್ಲಿಯೇ ಪಂದ್ಯ ನಡೆಯಬೇಕಿತ್ತು. ಆದ್ದರಿಂದ ರಾಜ್ಯ ಸಂಸ್ಥೆಯಿಂದ ಮಾಹಿತಿ ಪಡೆದುಕೊಂಡಿದ್ದೆವು. ಕೆಎಸ್ಸಿಎ ಮುಂದೆ ಕೆಲವು ಸವಾಲುಗಳಿದ್ದವು. ಶಾಸಕರಿಗೆ ಉಚಿತ ಟಿಕೆಟ್ ನೀಡುವುದು ಸೇರಿದಂತೆ ಇನ್ನೂ ಕೆಲವು ಸವಾಲುಗಳು ಕೆಎಸ್ಸಿಎ ಮುಂದಿವೆ. ಈ ಕ್ರೀಡಾಂಗಣದ ಆಸನ ಸಾಮರ್ಥ್ಯ ಕಡಿಮೆ ಇದೆ. ಐಪಿಎಲ್ ಫೈನಲ್ ವೀಕ್ಷಿಸಲು ದೇಶದ ಬೇರೆ ಬೇರೆ ಭಾಗಗಳಿಂದ ಹಾಗೂ ವಿದೇಶಗಳಿಂದಲೂ ಅತಿಥಿಗಳು, ಅಭಿಮಾನಿಗಳು ಬರುತ್ತಾರೆ. ಇದೇ ಹೊತ್ತಿನಲ್ಲಿ ಐಸಿಸಿ ಸಭೆಯೂ ಇರುವುದರಿಂದ ವಿದೇಶಗಳ ಪ್ರತಿನಿಧಿಗಳು ಇಲ್ಲಿ ಸೇರುತ್ತಾರೆ. ಅವರಿಗೆ ಐಪಿಎಲ್ ಫೈನಲ್ ವೀಕ್ಷಣೆಯ ಅವಕಾಶ ನೀಡಬೇಕಾಗುತ್ತದೆ. ಅದಕ್ಕಾಗಿ ದೊಡ್ಡ ಮಟ್ಟದ ಆಸನ ಸಾಮರ್ಥ್ಯ ಇರುವ ಅಹಮದಾಬಾದ್ ಕ್ರೀಡಾಂಗಣವೇ ಸೂಕ್ತವೆಂದು ನಿರ್ಧರಿಸಲಾಯಿತು’ ಎಂದು ಐಪಿಎಲ್ ಸಮಿತಿ ಮುಖ್ಯಸ್ಥ ಅರುಣ್ ಧುಮಾಲ್ ಹೇಳಿದ್ಧಾರೆ.

‘ಮೇ 31ರಂದು ನಡೆಯಲಿರುವ ಫೈನಲ್ ಪಂದ್ಯದ ವೇಳೆಯಲ್ಲಿಯೇ ಅಹಮದಾಬಾದಿನಲ್ಲಿ ಐಸಿಸಿ ಸಭೆ ಕೂಡ ಆಯೋಜನೆ ಗೊಂಡಿದೆ. ನರೇಂದ್ರ ಮೋದಿ ಕ್ರೀಡಾಂಗಣದ ಪ್ರೇಕ್ಷಕರ ಆಸನ ಸಾಮರ್ಥ್ಯ ಉಳಿದೆಲ್ಲ ಮೈದಾನಗಳಿಗಿಂತ ಹೆಚ್ಚಿರುವುದರಿಂದ ಫೈನಲ್ ಪಂದ್ಯವನ್ನು ಇಲ್ಲಿಗೆ ಸ್ಥಳಾಂತರಿಸಲಾಗಿದೆ’ ಎಂದಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದ ಆಸನ ಸಾಮರ್ಥ್ಯವು 36 ಸಾವಿರ ಇದೆ. ಆದರೆ ಅಹಮದಾಬಾದಿನಲ್ಲಿ 1.32 ಲಕ್ಷ ಇದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-51-1997100042

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.