ಇಂಡಿಯನ್ ಪ್ರೀಮಿಯರ್ –2026 ಅಂತಿಮ ಘಟ್ಟ ತಲುಪಿದೆ. ಇಂದು (ಮೇ 31) ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಈ ಎರಡೂ ತಂಡಗಳ ಜೊತೆಗೂ ಅನನ್ಯಾ ಬಿರ್ಲಾ ಅವರು ವಿಭಿನ್ನ ರೀತಿಯಲ್ಲಿ ಸಂಬಂಧ ಹೊಂದಿರುವುದು ವಿಶೇಷವಾಗಿದೆ.

ಅನನ್ಯಾ ಬಿರ್ಲಾ ಭಾರತದ ಪ್ರಮುಖ ಉದ್ಯಮ ಕುಟುಂಬವಾಗಿರುವ ‘ಬಿರ್ಲಾ’ ಕುಟುಂಬದ ಕುಡಿ. ಅವರು ಉದ್ಯಮಿ, ಗಾಯಕಿ ಮತ್ತು ಹೂಡಿಕೆದಾರರಾಗಿ ವಾಣಿಜ್ಯ ಕ್ಷೇತ್ರದಲ್ಲಿ ತಮ್ಮದೇ ಹೆಸರು ಮಾಡಿದ್ದಾರೆ. ಆದಿತ್ಯ ಬಿರ್ಲಾ ಗ್ರೂಪ್ ಅಧ್ಯಕ್ಷರಾದ ಕುಮಾರ್ ಮಂಗಳಂ ಬಿರ್ಲಾ ಅವರ ಹಿರಿಯ ಪುತ್ರಿ, ಮಾತ್ರವಲ್ಲ ಆರ್ಸಿಬಿ ತಂಡದ ನೂತನ ಸಿಇಒ ಆಗಿರುವ ಆರ್ಯಮಾನ್ ಬಿರ್ಲಾ ಅವರ ಸಹೋದರಿ. ಆ ಮೂಲಕ, ಅನನ್ಯಾ ಕೂಡ ತಂಡದ ಮಾಲೀಕತ್ವದಲ್ಲಿ ಪಾಲು ಹೊಂದಿದ್ದಾರೆ.

ಗುಜರಾತ್ ಟೈಟನ್ಸ್ ತಂಡಕ್ಕೆ ಸ್ಪಾನ್ಸರ್ಶಿಪ್

ಆದಿತ್ಯ ಬಿರ್ಲಾ ಗ್ರೂಪ್ ಅಡಿಯಲ್ಲಿ ಬರುವ ಬಿರ್ಲಾ ಎಸ್ಟೇಟ್ಸ್ (ರಿಯಲ್ ಎಸ್ಟೇಟ್ ಕಂಪನಿ) ಕಂಪನಿಯು ಐಪಿಎಲ್ 2026ರ ಆವೃತ್ತಿಯಲ್ಲಿ ಗುಜರಾತ್ ಟೈಟನ್ಸ್ ತಂಡದ ಪ್ರಮುಖ ಸ್ಪಾನ್ಸರ್ (ಜರ್ಸಿ ಸ್ಪಾನ್ಸರ್) ಆಗಿದೆ. ಅನನ್ಯಾ ಬಿರ್ಲಾ ಅವರು ಈ ಒಪ್ಪಂದವನ್ನು ವೈಯಕ್ತಿಕವಾಗಿ ಪ್ರೋತ್ಸಾಹಿಸಿದ್ದಾರೆ. ಮಾತ್ರವಲ್ಲ, ಗುಜರಾತ್ ಟೈಟನ್ಸ್ ತಂಡದ ‘Shubharambh–2026’ ಜೆರ್ಸಿ ಅನಾವರಣ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಶುಭಮನ್ ಗಿಲ್ ಅವರು ಅನನ್ಯಾ ಅವರಿಗೆ ಸಹಿ ಮಾಡಿದ ಜರ್ಸಿ ನೀಡಿದ್ದರು.

ಗುಜರಾತ್ ಟೈಟನ್ಸ್ ತಂಡದ ಮಾಲೀಕತ್ವದಲ್ಲಿ ಬಿರ್ಲಾ ಗ್ರೂಪ್ ಅಥವಾ ಅನನ್ಯಾ ಬಿರ್ಲಾ ಅವರು ಯಾವುದೇ ಒಪ್ಪಂದ ಹೊಂದಿಲ್ಲ. ಆದರೆ, ತಮ್ಮ ಸಂಸ್ಥೆಯ ಪ್ರಮುಖ ಸ್ಪಾನ್ಸರ್ ಆಗಿರುವ ಗುಜರಾತ್ ಟೈಟನ್ಸ್ ತಂಡವು ಫೈನಲ್ ತಲುಪಿರುವುದು ಸಹಜವಾಗಿಯೇ ಅನನ್ಯಾ ಅವರ ಸಂತಸಕ್ಕೆ ಕಾರಣವಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ 19ನೇ ಆವೃತ್ತಿ ಆರಂಭಕ್ಕೂ ಮುನ್ನಾ ಪ್ರತಿಷ್ಠಿತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬಿರ್ಲಾ ಗ್ರೂಪ್ ನೇತೃತ್ವದ ಒಕ್ಕೂಟವು ₹16,700 ಕೋಟಿಗೆ ಖರೀದಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.