ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) 2026ರ ಆವೃತ್ತಿ ಅಂತಿಮ ಹಂತಕ್ಕೆ ಬಂದು ನಿಂತಿದೆ. ರಜತ್ ಪಾಟೀದಾರ್ ನಾಯಕತ್ವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಶುಭಮನ್ ಗಿಲ್ ನಾಯಕರಾಗಿರುವ ಗುಜರಾತ್ ಟೈಟನ್ಸ್ ಇಂದು (ಮೇ 31) ರಾತ್ರಿ ನಡೆಯುವ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಮೇಲ್ನೋಟಕ್ಕೆ ಎರಡೂ ತಂಡಗಳು ಸಮಬಲಶಾಲಿಗಳಂತೆಯೇ ಕಾಣುತ್ತಿವೆ. ಎಲ್ಲ ವಿಭಾಗಗಳಲ್ಲಿಯೂ ಉತ್ತಮ ಹಾಗೂ ಲಯದಲ್ಲಿರುವ ಆಟಗಾರರು ಇದ್ದಾರೆ. ಹೀಗಾಗಿ, ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಫೈನಲ್ ಪಂದ್ಯದಲ್ಲಿ ರೋಚಕ ಕದನದ ನಿರೀಕ್ಷೆ ಗರಿಗೆದರಿದೆ.
.IPL Final: ಕಿರೀಟ ಉಳಿಸಿಕೊಳ್ಳುವತ್ತ ಆರ್ಸಿಬಿ ಚಿತ್ತ.IPL Final: ಆರ್ಸಿಬಿ vs ಜಿಟಿ ಫೈನಲ್ ಪಂದ್ಯದ ವಿಶ್ಲೇಷಣೆ ಇಲ್ಲಿ ವೀಕ್ಷಿಸಿ...
ಪಂದ್ಯದ ನಿರ್ಣಾಯಕ ಅಂಶಗಳೇನು? ಫಲಿತಾಂಶ ನಿರ್ಧರಿಸಬಲ್ಲ ಆಟಗಾರರು ಯಾರು? ಎರಡೂ ತಂಡಗಳ ಬಲ – ದೌರ್ಬಲ್ಯಗಳೇನು? ಪಿಚ್ ಹೇಗಿದೆ? ಎಂಬಿತ್ಯಾದಿ ವಿಚಾರಗಳ ಕುರಿತು ಕ್ರಿಕೆಟ್ ವಲಯದಲ್ಲಿ ವಿಶ್ಲೇಷಣೆ ನಡೆಯುತ್ತಿದೆ. ಇವೆಲ್ಲದರ ಹೊರತಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ‘ಹಾರ್ದಿಕ್ ಎಫೆಕ್ಟ್’ ಕುರಿತ ಪೋಸ್ಟ್ವೊಂದು ಹರಿದಾಡುತ್ತಿದ್ದು, ಎರಡೂ ತಂಡಗಳ ಅಭಿಮಾನಿಗಳನ್ನು ಸೆಳೆಯುತ್ತಿದೆ.

ಏನಿದು ಹಾರ್ದಿಕ್ ಎಫೆಕ್ಟ್?
ಗುಜರಾತ್ ಟೈಟನ್ಸ್ ಫ್ರಾಂಚೈಸಿ 2022ರಲ್ಲಿ ಐಪಿಎಲ್ಗೆ ಪದಾರ್ಪಣೆ ಮಾಡಿದ ವರ್ಷವೇ ಕಪ್ ಗೆದ್ದುಕೊಟ್ಟ ನಾಯಕ ಹಾರ್ದಿಕ್ ಪಾಂಡ್ಯ. ಮರುವರ್ಷ ಮತ್ತೊಮ್ಮೆ ತಂಡವನ್ನು ಫೈನಲ್ಗೆ ಮುನ್ನಡೆಸಿದ್ದರು.

ಕಳೆದ ಆವೃತ್ತಿಯಿಂದೀಚೆಗೆ ಈ ‘ಹಾರ್ದಿಕ್ ಎಫೆಕ್ಟ್’ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ.

ನಾಯಕನಾಗಿ ಚೊಚ್ಚಲ ಆವೃತ್ತಿಯಲ್ಲೇ ಕಪ್ ಗೆದ್ದುಕೊಂಡಿದ್ದರು ಹಾರ್ದಿಕ್. ಅದಾದ ನಂತರ ಈ ‘ಎಫೆಕ್ಟ್’ ಶುರುವಾಗಿದೆ ಎಂಬುದು ನೆಟ್ಟಿಗರ ವಾದ.

2023ರಿಂದ ಈಚೆಗೆ ಟೂರ್ನಿ ಆರಂಭಕ್ಕೂ ಮುನ್ನ ನಡೆಯುವ ಫೋಟೊಶೂಟ್ ವೇಳೆ ಹಾರ್ದಿಕ್ ಪಾಂಡ್ಯ ಅಕ್ಕಪಕ್ಕ ಇದ್ದ ನಾಯಕರ ಪೈಕಿ ಯಾರ ತಂಡ ಫೈನಲ್ ತಲುವುದೋ ಆ ತಂಡವೇ ಚಾಂಪಿಯನ್ ಪಟ್ಟಕ್ಕೇರಿದೆ.

ಫೋಟೊಶೂಟ್ ವೇಳೆ 2023ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ, 2024ರಲ್ಲಿ ಕೋಲ್ಕತ್ತ ನೈಟ್ರೈಡರ್ಸ್ ನಾಯಕ ಶ್ರೇಯಸ್ ಅಯ್ಯರ್ ಮತ್ತು 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ರಜತ್ ಪಾಟೀದಾರ್ ಅವರು ಹಾರ್ದಿಕ್ ಪಕ್ಕದಲ್ಲಿ ನಿಂತಿದ್ದರು.

ಈ ತಂಡಗಳು ಕಳೆದ ಮೂರು ವರ್ಷಗಳಲ್ಲಿ ಕಾಕತಾಳೀಯ ಎಂಬಂತೆ ಪ್ರಶಸ್ತಿ ಎತ್ತಿಹಿಡಿದಿವೆ.

ಈ ವರ್ಷ ಟ್ರೋಫಿ ಯಾರಿಗೆ?
‘ಹಾರ್ದಿಕ್ ಎಫೆಕ್ಟ್’ ಬಗೆಗಿನ ಚರ್ಚೆ ಈ ವರ್ಷವೂ ಮುಂದುವರಿದಿದೆ. 2026ರ ಆವೃತ್ತಿ ಆರಂಭಕ್ಕೂ ಮುನ್ನ ನಡೆದ ಫೋಟೊಶೂಟ್ ವೇಳೆ ಹಾರ್ದಿಕ್ ಎಡದಲ್ಲಿ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಹಾಗೂ ಬಲ ಭಾಗದಲ್ಲಿ ಗುಜರಾತ್ ನಾಯಕ ಶುಭಮನ್ ಗಿಲ್ ಇದ್ದಾರೆ.

ಅಯ್ಯರ್ ಬಳಗ ಲೀಗ್ ಹಂತದಲ್ಲೇ ಹೊರಬಿದ್ದಿದ್ದರೆ, ಗಿಲ್ ಪಡೆ ಅಂತಿಮ ಸುತ್ತಿಗೆ ಏರಿದೆ. ಹೀಗಾಗಿ, ಈ ಸಲ ಕಪ್ ಗುಜರಾತ್ ಬಳಗದ್ದೇ ಎಂಬುದಾಗಿ ಚರ್ಚೆ ನಡೆಯುತ್ತಿದೆ. ಹಾಗೇನಾದರೂ ಆದರೆ, ‘ಹಾರ್ದಿಕ್ ಎಫೆಕ್ಟ್’ಗೆ ಇನ್ನಷ್ಟು ಶಕ್ತಿ ಬಂದೀತು!

ಆದರೆ, ಈ ವಾದವನ್ನು ಬುಡಮೇಲು ಮಾಡುವ ಸಾಮರ್ಥ್ಯ ರಜತ್ ಪಡೆಗಿದೆ.

ಆರ್ಸಿಬಿ, ಜಿಟಿ ಪ್ರದರ್ಶನ

ರಾಯಲ್ ಚಾಲೆಂಜರ್ಸ್ ಬೆಂಗಳೂರು
vs ಸನ್ರೈಸರ್ಸ್ ಹೈದರಾಬಾದ್ – 6 ವಿಕೆಟ್ ಜಯ
vs ಚೆನ್ನೈ ಸೂಪರ್ ಕಿಂಗ್ಸ್ – 43 ರನ್ ಜಯ
vs ರಾಜಸ್ಥಾನ ರಾಯಲ್ಸ್ – 6 ವಿಕೆಟ್ ಸೋಲು
vs ಮುಂಬೈ ಇಂಡಿಯನ್ಸ್ – 18 ರನ್ ಜಯ
vs ಲಖನೌ ಸೂಪರ್ಜೈಂಟ್ಸ್ – 5 ವಿಕೆಟ್ ಜಯ
vs ಡೆಲ್ಲಿ ಕ್ಯಾಪಿಟಲ್ಸ್ – 6 ವಿಕೆಟ್ ಸೋಲು
vs ಗುಜರಾತ್ ಟೈಟನ್ಸ್ – 5 ವಿಕೆಟ್ ಜಯ
vs ಡೆಲ್ಲಿ ಕ್ಯಾಪಿಟಲ್ಸ್ – 9 ವಿಕೆಟ್ ಜಯ
vs ಗುಜರಾತ್ ಟೈಟನ್ಸ್ – 4 ವಿಕೆಟ್ ಸೋಲು
vs ಲಖನೌ ಸೂಪರ್ಜೈಂಟ್ಸ್ – 9 ರನ್ ಸೋಲು
vs ಮುಂಬೈ ಇಂಡಿಯನ್ಸ್ – 2 ವಿಕೆಟ್ ಜಯ
vs ಕೋಲ್ಕತ್ತ ನೈಟ್ ರೈಡರ್ಸ್ – 6 ವಿಕೆಟ್ ಜಯ
vs ಪಂಜಾಬ್ ಕಿಂಗ್ಸ್ – 23 ರನ್ ಜಯ
vs ಸನ್ರೈಸರ್ಸ್ ಹೈದರಾಬಾದ್ – 55 ರನ್ ಸೋಲು
vs ಗುಜರಾತ್ ಟೈಟನ್ಸ್ – 92 ರನ್ ಜಯ (ಕ್ವಾಲಿಫಯರ್ 1)

ಗುಜರಾತ್ ಟೈಟನ್ಸ್
vs ಪಂಜಾಬ್ ಕಿಂಗ್ಸ್ – 3 ವಿಕೆಟ್ ಸೋಲು
vs ರಾಜಸ್ಥಾನ ರಾಯಲ್ಸ್ – 6 ರನ್ ಸೋಲು
vs ಡೆಲ್ಲಿ ಕ್ಯಾಪಿಟಲ್ಸ್ – 1 ರನ್ ಜಯ
vs ಲಖನೌ ಸೂಪರ್ಜೈಂಟ್ಸ್ – 7 ವಿಕೆಟ್ ಜಯ
vs ಕೋಲ್ಕತ್ತ ನೈಟ್ ರೈಡರ್ಸ್ – 5 ವಿಕೆಟ್ ಜಯ
vs ಮುಂಬೈ ಇಂಡಿಯನ್ಸ್ – 99 ರನ್ ಸೋಲು
vs ರಾಯಲ್ ಚಾಲೆಂಜರ್ಸ್ ಬೆಂಗಳೂರು - 5 ವಿಕೆಟ್ ಸೋಲು
vs ಚೆನ್ನೈ ಸೂಪರ್ ಕಿಂಗ್ಸ್ – 8 ವಿಕೆಟ್ ಜಯ
vs ರಾಯಲ್ ಚಾಲೆಂಜರ್ಸ್ ಬೆಂಗಳೂರು - 4 ವಿಕೆಟ್ ಜಯ
vs ರಾಜಸ್ಥಾನ ರಾಯಲ್ಸ್ – 77 ರನ್ ಜಯ
vs ಸನ್ರೈಸರ್ಸ್ ಹೈದರಾಬಾದ್ – 82 ರನ್ ಜಯ
vs ಕೋಲ್ಕತ್ತ ನೈಟ್ ರೈಡರ್ಸ್ – 29 ರನ್ ಸೋಲು
vs ಚೆನ್ನೈ ಸೂಪರ್ ಕಿಂಗ್ಸ್ – 89 ರನ್ ಸೋಲು
vs ರಾಯಲ್ ಚಾಲೆಂಜರ್ಸ್ ಬೆಂಗಳೂರು - 92 ರನ್ ಸೋಲು (ಕ್ವಾಲಿಫಯರ್ 1)
vs ರಾಜಸ್ಥಾನ ರಾಯಲ್ಸ್ – 7 ವಿಕೆಟ್ ಜಯ (ಕ್ವಾಲಿಫಯರ್ 2)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.