ಬೆಂಗಳೂರು/ನವದೆಹಲಿ: ಈ ಸಲದ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದ ಆಯೋಜನೆಯ ಅವಕಾಶವು ಬೆಂಗಳೂರಿನ ಕೈತಪ್ಪಿದೆ. ಈ ಸಲವೂ ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ.

ಈ ಸಲದ ಟೂರ್ನಿಯ ಆರಂಭಕ್ಕೂ ಮುನ್ನ ಬೆಂಗಳೂರಿನಲ್ಲಿ ಪ್ಲೇಆಫ್ ಪಂದ್ಯ ಮತ್ತು ಫೈನಲ್ ಆಯೋಜನೆಯಾಗಲಿವೆ ಎಂದು ಹೇಳಲಾಗಿತ್ತು. ಆದರೆ ಬುಧವಾರ ಪ್ಲೇಆಫ್ ಮತ್ತು ಫೈನಲ್ ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಿದೆ.

ಮೇ 26ರಂದು ಧರ್ಮಶಾಲಾದಲ್ಲಿ ಮೊದಲ ಕ್ವಾಲಿಫೈಯರ್ ಹಾಗೂ ನವ ಚಂಡೀಗಡ(ಮುಲ್ಲನಪುರ) ದಲ್ಲಿ ಎಲಿಮಿನೇಟರ್ ಮತ್ತು ಎರಡನೇ ಕ್ವಾಲಿಫೈಯರ್ ನಡೆಯಲಿವೆ.

‘ಈ ಮೊದಲು ಫೈನಲ್ ಪಂದ್ಯದ ಆತಿಥ್ಯಕ್ಕೆ ಬೆಂಗಳೂರು ನಗರವನ್ನೇ ನಿಗದಿ ಮಾಡಲಾಗಿತ್ತು. ಸ್ಥಳೀಯ ರಾಜ್ಯಸಂಸ್ಥೆ ಹಾಗೂ ಪದಾಧಿಕಾರಿಗಳು ವ್ಯಕ್ತಪಡಿಸಿರುವ ಅವಶ್ಯಕತೆಗಳು ಬಿಸಿಸಿಐ ಶಿಷ್ಟಾಚಾರ ಮತ್ತು ಮಾರ್ಗಸೂಚಿಯ ವ್ಯಾಪ್ತಿಯನ್ನು ಮೀರಿದ್ದಾಗಿವೆ. ಆದ್ದರಿಂದ ಫೈನಲ್ ಪಂದ್ಯದ ತಾಣವನ್ನು ಸ್ಥಳಾಂತರಿಸಲಾಗಿದೆ’ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ ಕಾರಣಗಳನ್ನು ಸ್ಪಷ್ಟಪಡಿಸಿಲ್ಲ.

ಹೋದ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ವಿಜಯೋತ್ಸವದ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿತ್ತು. 11 ಅಭಿಮಾನಿಗಳು ಅಸುನೀಗಿದ್ದರು. ಅದರ ನಂತರ ಸುರಕ್ಷತೆ ಕೊರತೆಯ ನೆಪವೊಡ್ಡಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಯಾವುದೇ ಪಂದ್ಯಗಳ ಆತಿಥ್ಯವನ್ನು ನೀಡಿರಲಿಲ್ಲ. ಸರ್ಕಾರದ ನಿಯೋಗದ ಸೂಚನೆಗಳ ಪ್ರಕಾರ ಕ್ರೀಡಾಂಗಣದಲ್ಲಿ ನವೀಕರಣ ಕಾಮಗಾರಿ ಕೈಗೊಳ್ಳಲಾಗಿತ್ತು. ಅದರ ನಂತರ ಪರಿಶೀಲನೆ ನಡೆಸಿದ್ದ ಸರ್ಕಾರ ನೇಮಕ ಮಾಡಿದ್ದ ಸಮಿತಿಯು ಪಂದ್ಯಗಳ ಆಯೋಜನೆಗೆ ಅನುಮತಿ ನೀಡಿತ್ತು. ಅದರಿಂದಾಗಿ ಈ ಸಲದ ಐಪಿಎಲ್ ಉದ್ಘಾಟನೆ ಪಂದ್ಯವೂ ಸೇರಿದಂತೆ ಆರ್ಸಿಬಿಯ ಒಟ್ಟು ಐದು ಪಂದ್ಯಗಳು ಯಶಸ್ವಿಯಾಗಿ ನಡೆದವು.

ಆದರೆ ಶಾಸಕರಿಗೆ ಉಚಿತ ಪಾಸ್ಗಳನ್ನು ನೀಡಬೇಕೆಂದು ಸದನದಲ್ಲಿಯೇ ಬೇಡಿಕೆ ವ್ಯಕ್ತವಾಗಿತ್ತು. ಅದರಿಂದಾಗಿ ಕೆಎಸ್ಸಿಎ ಮತ್ತು ಆರ್ಸಿಬಿಯು ಪ್ರತಿಯೊಬ್ಬ ಶಾಸಕರು, ಸಚಿವರು ಮತ್ತು ಸಂಸದರಿಗೆ ಉಚಿತ ಪಾಸ್ ನೀಡಿದ್ದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 35 ಸಾವಿರ ಆಸನ ಸಾಮರ್ಥ್ಯ ಇದೆ. ಅದರಲ್ಲಿ 2–3 ಸಾವಿರ ಉಚಿತ ಪಾಸ್ಗಳು ಶಾಸಕರಿಗೇ ಹೋದರೆ ಆಯೋಜಕರಿಗೆ ನಷ್ಟವಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು. ಅದರಿಂದಾಗಿ ಪ್ಲೇಆಫ್ ಮತ್ತು ಫೈನಲ್ ಪಂದ್ಯಗಳನ್ನು ಇಲ್ಲಿ ಆಯೋಜಿಸುವ ಕುರಿತು ಬಿಸಿಸಿಐ ಮರುಚಿಂತನೆ ನಡೆಸಿತ್ತು.

ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣವು 1.32 ಲಕ್ಷ ಪ್ರೇಕ್ಷಕರ ಆಸನ ಸಾಮರ್ಥ್ಯ ಹೊಂದಿರುವುದೂ ಕೂಡ ಫೈನಲ್ ಆತಿಥ್ಯದ ಅವಕಾಶ ಪಡೆಯಲು ಕಾರಣವೆನ್ನಲಾಗಿದೆ. 2022, 2023 ಹಾಗೂ 2025ರಲ್ಲಿ ಇದೇ ತಾಣದಲ್ಲಿ ಫೈನಲ್ ಪಂದ್ಯಗಳು ನಡೆದಿದ್ದವು.

ಫೈನಲ್ ಸ್ಥಳಾಂತರದಿಂದ ಬೇಸರವಾಗಿದೆ: ಕೆಎಸ್ಸಿಎ

ಐಪಿಎಲ್ ಫೈನಲ್ ಪಂದ್ಯವನ್ನು ಬೆಂಗಳೂರಿನ ಬದಲು ಬೇರೆ ತಾಣಕ್ಕೆ ಸ್ಥಳಾಂತರಿಸಿರಿಸಿದ ಬಿಸಿಸಿಐ ನಿರ್ಧಾರಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ತೀವ್ರ ಬೇಸರ ವ್ಯಕ್ತಪಡಿಸಿದೆ. ‘ಪ್ಲೇಆಫ್ ಮತ್ತು ಫೈನಲ್ ಪಂದ್ಯಗಳ ಆಯೋಜನೆಗಾಗಿ ನಾವು ಪೂರ್ಣ ಸಿದ್ಧತೆ ಮಾಡಿಕೊಂಡಿದ್ದೇವೆ. ಆದರೆ ಪಂದ್ಯಗಳನ್ನು ಸ್ಥಳಾಂತರ ಮಾಡಿರುವ ಸುದ್ದಿ ತಿಳಿದುಬಂದಿದೆ. ಆದರೆ ಮಂಡಳಿಯಿಂದ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ. ಕಾರಣಗಳೂ ಗೊತ್ತಾಗಿಲ್ಲ. ನಮ್ಮ ಅಧ್ಯಕ್ಷರಾದ ವೆಂಕಟೇಶ್ ಪ್ರಸಾದ್ ಅವರು ಮಂಡಳಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಸಂಬಂಧಪಟ್ಟವರೊಂದಿಗೆ ಮಾತುಕತೆ ಮಾಡುತ್ತಿದ್ದಾರೆ’ ಎಂದು ಕೆಎಸ್ಸಿಎ ವಕ್ತಾರ ವಿನಯ್ ಮೃತ್ಯುಂಜಯ್ ತಿಳಿಸಿದ್ದಾರೆ.

‘ನಮ್ಮ ಸಿದ್ಧತೆಗಳ ಕುರಿತು ಬಿಸಿಸಿಐಗೆ ವಿವರಗಳನ್ನು ಬರೆದಿದ್ದೇವೆ. ಐಪಿಎಲ್ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಪಂದ್ಯಗಳ ಆಯೋಜನೆಗೂ ಕೂಡ ಸಿದ್ಧತೆಗಳಾಗಿವೆ. ಕಳೆದ ಐದು ಪಂದ್ಯಗಳನ್ನೂ ಯಶಸ್ವಿಯಾಗಿ ನಡೆಸಿದ್ದೇವೆ. ಎಲ್ಲರಿಂದ ಶ್ಲಾಘನೆ ಕೂಡ ವ್ಯಕ್ತವಾಗಿದೆ’ ಎಂದು ಹೇಳಿದರು. ಅಕ್ಟೋಬರ್ 17ರಂದು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಟಿ20 ಪಂದ್ಯ ಹಾಗೂ ಡಿಸೆಂಬರ್ 16ರಂದು ಭಾರತ–ಶ್ರೀಲಂಕಾ ಏಕದಿನ ಪಂದ್ಯವು ಇಲ್ಲಿ ಆಯೋಜನೆಯಾಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.