ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್ ಪಂದ್ಯವನ್ನು ಬೆಂಗಳೂರಿನಿಂದ ಅಹಮದಾಬಾದ್ಗೆ ಸ್ಥಳಾಂತರಿಸುವ ಕುರಿತು ಲೀಗ್ ಮುಖ್ಯಸ್ಥ ಅರುಣ ಸಿಂಗ್ ಧುಮಾಲ್ ಗುರುವಾರ ಸ್ಪಷ್ಟನೆ ನೀಡಿದ್ದಾರೆ.

ಮೇ 31ರಂದು ನಡೆಯಲಿರುವ ಫೈನಲ್ ಪಂದ್ಯದ ಸಂದರ್ಭದಲ್ಲಿಯೇ ಅಹಮದಾಬಾದಿನಲ್ಲಿ ಐಸಿಸಿ ಸಭೆ ಕೂಡ ಆಯೋಜನೆಗೊಂಡಿದೆ. ಅಲ್ಲದೇ ನರೇಂದ್ರ ಮೋದಿ ಕ್ರೀಡಾಂಗಣದ ಪ್ರೇಕ್ಷಕರ ಆಸನ ಸಾಮರ್ಥ್ಯವು ಉಳಿದೆಲ್ಲ ಮೈದಾನಗಳಿಗಿಂತ ಹೆಚ್ಚಿರುವುದರಿಂದ ಫೈನಲ್ ಪಂದ್ಯವನ್ನು ಇಲ್ಲಿಗೆ ಸ್ಥಳಾಂತರಿಸಲಾಗಿದೆ ಎಂದು ಧುಮಾಲ್ ಹೇಳಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದ ಆಸನ ಸಾಮರ್ಥ್ಯವು 36 ಸಾವಿರ ಇದೆ. ಆದರೆ ಅಹಮದಾಬಾದಿನಲ್ಲಿ 1.30 ಲಕ್ಷ ಇದೆ. ಪಂದ್ಯ ಸ್ಥಳಾಂತರಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಬೇಸರ ವ್ಯಕ್ತಪಡಿಸಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಧುಮಾಲ್, ‘ಬೆಂಗಳೂರಿನಲ್ಲಿಯೇ ಪಂದ್ಯ ನಡೆಯಬೇಕಿತ್ತು. ಆದ್ದರಿಂದ ರಾಜ್ಯ ಸಂಸ್ಥೆಯಿಂದ ಮಾಹಿತಿ ಪಡೆದುಕೊಂಡಿದ್ದೆವು. ಕೆಎಸ್ಸಿಎ ಮುಂದೆ ಕೆಲವು ಗುರುತರ ಸವಾಲುಗಳಿದ್ದವು. ಶಾಸಕರಿಗೆ ಉಚಿತ ಟಿಕೆಟ್ ನೀಡುವುದು ಸೇರಿದಂತೆ ಇನ್ನೂ ಕೆಲವು ಸವಾಲುಗಳು ಕೆಎಸ್ಸಿಎ ಮುಂದಿವೆ. ಈ ಕ್ರೀಡಾಂಗಣದ ಆಸನ ಸಾಮರ್ಥ್ಯ ಕಡಿಮೆ ಇದೆ. ಅದರಲ್ಲಿಯೇ ಉಚಿತ ಟಿಕೆಟ್ಗಳನ್ನು ಹಂಚಿದ ನಂತರ ಮಾರಾಟಕ್ಕೆ ಉಳಿಯುವುದು ಬಹಳ ಕಡಿಮೆ. ಅಲ್ಲದೇ ಐಪಿಎಲ್ ಫೈನಲ್ ವೀಕ್ಷಿಸಲು ದೇಶದ ಬೇರೆ ಬೇರೆ ಭಾಗಗಳಿಂದ ಹಾಗೂ ವಿದೇಶಗಳಿಂದಲೂ ಅತಿಥಿಗಳು, ಅಭಿಮಾನಿಗಳು ಬರುತ್ತಾರೆ. ಇದೇ ಹೊತ್ತಿನಲ್ಲಿ ಐಸಿಸಿ ಸಭೆಯೂ ಇರುವುದರಿಂದ ವಿದೇಶಗಳ ಪ್ರತಿನಿಧಿಗಳು ಇಲ್ಲಿ ಸೇರುತ್ತಾರೆ. ಅವರಿಗೆ ಐಪಿಎಲ್ ಫೈನಲ್ ವೀಕ್ಷಣೆಯ ಅವಕಾಶ ನೀಡಬೇಕಾಗುತ್ತದೆ. ಅದಕ್ಕಾಗಿ ದೊಡ್ಡ ಮಟ್ಟದ ಆಸನ ಸಾಮರ್ಥ್ಯ ಇರುವ ಅಹಮದಾಬಾದ್ ಕ್ರೀಡಾಂಗಣವೇ ಸೂಕ್ತವೆಂದು ನಿರ್ಧರಿಸಲಾಯಿತು’ ಎಂದರು.

ಅಹಮದಾಬಾದ್ ಕ್ರೀಡಾಂಗಣಕ್ಕೆ ಫೈನಲ್ ಪಂದ್ಯಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಗುತ್ತಿರುವುದು ಬೇರೆ ಭಾಗದ ಜನರಲ್ಲಿ ಅಸಮಾಧಾನ ಮೂಡಿಸುತ್ತಿದೆಯಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಇಲ್ಲ. ಹಾಲಿ ಚಾಂಪಿಯನ್ ತಂಡದ ತವರಿನಲ್ಲಿ ಫೈನಲ್ ನಡೆಸುವುದು ವಾಡಿಕೆ. ಆದರೆ ಈಗಾಗಲೇ ನಾನು ಹೇಳಿರುವ ಕಾರಣಗಳಿಂದಾಗಿ ಈ ಬಾರಿಯೂ ಅಹಮದಾಬಾದಿನಲ್ಲಿ ಫೈನಲ್ ನಡೆಸಲಾಗುತ್ತದೆ. ಒಂದೊಮ್ಮೆ ಹೋದ ವರ್ಷ ಚೆನ್ನೈ ಸೂಪರ್ ಕಿಂಗ್ಸ್ ಜಯಿಸಿದ್ದರೆ ನಾವು ಖಂಡಿತವಾಗಿಯೂ ಚೆನ್ನೈ ನಗರವನ್ನೇ ಫೈನಲ್ಗೆ ಆಯ್ಕೆ ಮಾಡಿಕೊಳ್ಳುತ್ತಿದ್ದೆವು’ ಎಂದರು.

ಆರ್ಸಿಬಿ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಈಚೆಗೆ ಭಾರಿ ಮೊತ್ತಕ್ಕೆ ಬಿಡ್ ಆಗಿರುವುದರ ಕುರಿತು ಪ್ರತಿಕ್ರಿಯಿಸಿದ ಅವರು, ‘ಇದು ಐಪಿಎಲ್ ಟೂರ್ನಿಯ ಜನಪ್ರಿಯತೆ ಮತ್ತು ಅಗಾಧ ಸಾಮರ್ಥ್ಯವನ್ನು ತೋರಿಸುತ್ತದೆ. ಕೇವಲ 18 ವರ್ಷಗಳಲ್ಲಿ ಬೃಹತ್ ಆಗಿ ಬೆಳೆದಿರುವ ಲೀಗ್ ಇದೊಂದೇ. ಅದಕ್ಕಾಗಿಯೇ ಐಪಿಎಲ್ ಎಂದರೆ ಭಾರತದ ಮೇಕ್ ಇನ್ ಇಂಡಿಯಾ‘ ಉತ್ಪನ್ನಗಳಲ್ಲಿ ಮುಂಚೂಣಿಯಲ್ಲಿದೆ’ ಎಂದರು.

‘ಹೊಸ ಮಾಲೀಕರಿಗೆ ಈ ಫ್ರ್ಯಾಂಚೈಸಿಗಳ ಹಸ್ತಾಂತರಕ್ಕೆ ಬೇಕಾದ ಎಲ್ಲವನ್ನೂ ನಿಯಮಾನುಸಾರ ಮಾಡಲಾಗುವುದು. ಪ್ರತಿಯೊಂದು ದಾಖಲೆ, ಕಾಗದಪತ್ರ ಪರಿಶೀಲನೆ ಮಾಡಿಯೇ ಮುಂದುವರಿಯುತ್ತೇವೆ. ಟೂರ್ನಿಯಲ್ಲಿ ಪಂದ್ಯಗಳನ್ನು 94ಕ್ಕೆ ಹೆಚ್ಚಿಸುವ ಯೋಜನೆಯನ್ನು 2027ರ ನಂತರ ಮಾಡಲಾಗುವುದು. ಅಂತರರಾಷ್ಟ್ರೀಯ ಕ್ಯಾಲೆಂಡರ್ ನೋಡಿಕೊಂಡು ಯೋಜಿಸಬೇಕಾಗುತ್ತದೆ’ ಎಂದೂ ಹೇಳಿದರು.

ಪ್ರಸ್ತುತ ಟೂರ್ನಿಗಳಲ್ಲಿ ಒಟ್ಟು 74 ಪಂದ್ಯಗಳು ನಡೆಯುತ್ತಿವೆ. 10 ತಂಡಗಳು ಭಾಗವಹಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.