ಅಹಮದಾಬಾದ್: ಐಪಿಎಲ್ ಅಂಕಪಟ್ಟಿಯ ಅಗ್ರ ಎರಡು ತಂಡಗಳಲ್ಲಿ ಸ್ಥಾನ ಪಡೆಯುವತ್ತ ಚಿತ್ತ ನೆಟ್ಟಿರುವ ಗುಜರಾತ್ ಟೈಟನ್ಸ್ ಗುರುವಾರ ಚೆನ್ನೈ ಸೂಪರ್ ಕಿಂಗ್ಸ್ ಪಡೆಯನ್ನು ಎದುರಿಸಲಿದೆ.

ಉಭಯ ತಂಡಗಳಿಗೂ ಇದು ಲೀಗ್ ಹಂತದ ಕೊನೆಯ ಪಂದ್ಯವಾಗಿದೆ. ಶುಭಮನ್ ಗಿಲ್ ನಾಯಕತ್ವದ ಟೈಟನ್ಸ್ 16 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. 18 ಅಂಕ ಗಳಿಸಿರುವ ‘ಹಾಲಿ ಚಾಂಪಿಯನ್’ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಋತುರಾಜ್ ಗಾಯಕವಾಡ ನಾಯಕತ್ವದ ಚೆನ್ನೈ ತಂಡವು ತನ್ನ 13ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಎದುರು ಸೋತಿತ್ತು. ಆದರೂ ಪ್ಲೇ ಆಫ್ ಪ್ರವೇಶಿಸುವ ಸಣ್ಣ ಅವಕಾಶವೊಂದು ಇನ್ನೂ ಇದೆ. ಅದೂ ದೊಡ್ಡ ಅಂತರದ ಗೆಲುವು ಸಾಧಿಸಿ ನೆಟ್ರನ್ ರೇಟ್ ಕೂಡ ಹೆಚ್ಚಿಸಿಕೊಳ್ಳಬೆಕು. ಚೆನ್ನೈ ಖಾತೆಯಲ್ಲಿ ಈಗ 12 ಅಂಕಗಳಿವೆ.

ಪಂಜಾಬ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ತಮ್ಮ ಪಾಲಿನಲ್ಲಿ ಉಳಿದಿರುವ ತಲಾ ಒಂದು ಪಂದ್ಯದಲ್ಲಿ ಸೋತಾಗ ಚೆನ್ನೈಗೆ ಅವಕಾಶ ಸಿಗಬಹುದು.

ಆದರೆ ಆಲ್ರೌಂಡ್ ಆಟವಾಡು ತ್ತಿರುವ ಗುಜರಾತ್ ತಂಡವನ್ನು ಅದರ ತವರಿನಂಗಳದಲ್ಲಿ ಮಣಿಸುವುದು ಕಠಿಣ ಸವಾಲು. ಆರಂಭಿಕ ಬ್ಯಾಟರ್ ಸಾಯಿ ಸುದರ್ಶನ್, ನಾಯಕ ಗಿಲ್ ಹಾಗೂ ಜೋಸ್ ಬಟ್ಲರ್ ಅವರು ಉತ್ತಮ ಲಯದಲ್ಲಿದ್ದಾರೆ. ಆದರೆ ಅವರಿಗೆ ಚೆನ್ನೈ ತಂಡದ ಸ್ಪಿನ್ನರ್ ಅಕಿಲ್ ಹುಸೇನ್, ನೂರ್ ಅಹಮದ್, ವೇಗಿ ಅನ್ಷುಲ್ ಕಂಬೋಜ್, ಮುಕೇಶ್ ಚೌಧರಿ ಮತ್ತು ಸ್ಪೆನ್ಸರ್ ಜಾನ್ಸನ್ ಅವರು ಕಠಿಣ ಸವಾಲೊಡ್ಡೊಬಲ್ಲರು.

ಚೆನ್ನೈ ಬ್ಯಾಟಿಂಗ್ ಡೆವಾಲ್ಡ್ ಬ್ರೆವಿಸ್, ಊರ್ವಿಲ್ ಪಟೇಲ್, ಸಂಜು ಸ್ಯಾಮ್ಸನ್ ಹಾಗೂ ಕಾರ್ತಿಕ್ ಶರ್ಮಾ ಅವರ ಮೇಲೆ ಹೆಚ್ಚು ಅವಲಂಬಿತವಾಗಿದೆ. ಶಿವಂ ದುಬೆ ಮಧ್ಯಮ ಕ್ರಮಾಂಕದಲ್ಲಿ ಒಂದಿಷ್ಟು ರನ್ ಗಳಿಸುವ ಸಮರ್ಥರು. ಗುಜರಾತ್ ತಂಡದ ಬೌಲಿಂಗ್ ವಿಭಾಗವು ಬಲಿಷ್ಠವಾಗಿದೆ. ಅನುಭವಿ ಮೊಹಮ್ಮದ್ ಸಿರಾಜ್, ಜೇಸನ್ ಹೋಲ್ಡರ್, ಕಗಿಸೊ ರಬಾಡ ಮತ್ತು ರಶೀದ್ ಖಾನ್ ಅವರು ಉತ್ತಮ ಲಯದಲ್ಲಿದ್ದಾರೆ. ತಂಡವು ಈಗಾಗಲೇ ಪ್ಲೇ ಆಫ್ ಪ್ರವೇಶ ಗಿಟ್ಟಿಸಿರು ವುದರಿಂದ ಈ ಪಂದ್ಯದಲ್ಲಿ ಸೋತರೂ ಆತಂಕವಿಲ್ಲ. ಆದರೆ ಅಗ್ರಸ್ಥಾನಕ್ಕೇರಬೇಕಾದರೆ ಗೆಲುವು ಅಗತ್ಯ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-43-2076418695

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.