ಜೈಪುರ (ಪಿಟಿಐ): ಸತತ ಮೂರು ಪಂದ್ಯಗಳಲ್ಲಿ ಬಲಾಢ್ಯ ತಂಡಗಳನ್ನು ಸದೆಬಡಿದು ಭರ್ತಿ ಆತ್ಮವಿಶ್ವಾಸದಲ್ಲಿರುವ ಗುಜರಾತ್ ಟೈಟನ್ಸ್ ತಂಡವು ಶನಿವಾರ ಇಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಹಣಾಹಣಿ ನಡೆಸಲಿದೆ.

ತಲಾ 10 ಪಂದ್ಯಗಳನ್ನು ಆಡಿರುವ ಉಭಯ ತಂಡಗಳು ಸೋಲು, ಗೆಲುವಿನ ಲೆಕ್ಕದಲ್ಲಿಯೂ ಸಮಬಲಶಾಲಿಗಳು. ಎರಡೂ ತಂಡಗಳು ಆರರಲ್ಲಿ ಗೆದ್ದು, ನಾಲ್ಕರಲ್ಲಿ ಸೋತಿವೆ. ಆದರೆ ನಿವ್ವಳ ರನ್ ರೇಟ್ನಲ್ಲಿ ಮಾತ್ರ ರಾಜಸ್ಥಾನ (0.510) ತಂಡವು ಗುಜರಾತ್ (–0.147) ಬಳಗಕ್ಕಿಂತ ಮುಂದಿದೆ. ರಿಯಾನ್ ಪರಾಗ್ ಪಡೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಆದರೆ ರಾಜಸ್ಥಾನ ತಂಡವು ತನ್ನ ಕಳೆದ ಐದು ಪಂದ್ಯಗಳಲ್ಲಿ ಮೂರರಲ್ಲಿ ಸೋತಿದೆ. ಅದೇ ಶುಭಮನ್ ಗಿಲ್ ನಾಯಕತ್ವದ ಗುಜರಾತ್ ತಂಡವು ಸತತ ಮೂರು ಪಂದ್ಯಗಳಲ್ಲಿ ಗೆದ್ದಿದೆ. ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಪಂದ್ಯದಲ್ಲಿ ರಾಜಸ್ಥಾನ ತಂಡದ ನಾಯಕ ಪರಾಗ್ ಅವರು 90 ರನ್ ಗಳಿಸಿದ್ದರು. ಅದರಿಂದಾಗಿ 225 ರನ್ಗಳ ಗುರಿಯನ್ನು ಒಡ್ಡಿತ್ತು. ಆದರೂ ಡೆಲ್ಲಿ ತಂಡವು ಜಯಸಾಧಿಸಿತ್ತು.

ರಾಯಲ್ಸ್ ಬ್ಯಾಟಿಂಗ್ ಉತ್ತಮವಾಗಿದೆ. ವೈಭವ್ ಸೂರ್ಯವಂಶಿ (404 ರನ್), ಯಶಸ್ವಿ ಜೈಸ್ವಾಲ್ (312) ಮತ್ತು ಧ್ರುವ ಜುರೇಲ್ (290) ಅವರು ಅಗ್ರಕ್ರಮಾಂಕದಲ್ಲಿ ರನ್ಗಳ ಹೊಳೆ ಹರಿಸುತ್ತಿದ್ದಾರೆ. ಅದರಲ್ಲೂ ಮೂರನೇ ಕ್ರಮಾಂಕದಲ್ಲಿ ಜುರೇಲ್ ಅವರು ಸತತವಾಗಿ ಉಪಯುಕ್ತ ಕಾಣಿಕೆ ನೀಡುತ್ತಿದ್ದಾರೆ. ಕೆಳಮಧ್ಯಮ ಕ್ರಮಾಂಕದಲ್ಲಿ ಡೊನೊವಾನ್ ಫೆರಿರಾ (229) ಅಮೋಘ ಲಯದಲ್ಲಿದ್ದಾರೆ.

ಗುಜರಾತ್ ತಂಡದಲ್ಲಿ ನಾಯಕ ಗಿಲ್ (378 ರನ್), ಸಾಯಿ ಸುದರ್ಶನ್ (385) ಅವರು ಉತ್ತಮ ಆರಂಭ ನೀಡುತ್ತಿದ್ದಾರೆ. ಸಾಯಿ ಈಗಾಗಲೇ ಎರಡು ಅರ್ಧಶತಕ ಮತ್ತು ಒಂದು ಶತಕ ಕೂಡ ದಾಖಲಿಸಿದ್ದಾರೆ. ಜೋಸ್ ಬಟ್ಲರ್ (335) ಅವರು ಕೂಡ ತಮ್ಮ ಆಟದಲ್ಲಿ ಸ್ಥಿರತೆ ಕಾಪಾಡಿಕೊಂಡಿದ್ದಾರೆ. ತಂಡದ ಬೌಲಿಂಗ್ ವಿಭಾಗವೂ ಉತ್ತಮವಾಗಿದೆ.

ಕಗಿಸೊ ರಬಾಡ (16 ವಿಕೆಟ್), ಪ್ರಸಿದ್ಧ ಕೃಷ್ಣ (12) ಮತ್ತು ಮೊಹಮ್ಮದ್ ಸಿರಾಜ್ (11) ಅವರು ಎದುರಾಳಿ ಬ್ಯಾಟರ್ಗಳಿಗೆ ಸಿಂಹಸ್ವಪ್ನರಾಗಬಲ್ಲರು.

ರಾಯಲ್ಸ್ ತಂಡದ ಜೋಫ್ರಾ ಆರ್ಚರ್, ನಾಂದ್ರೆ ಬರ್ಗರ್, ಕರ್ನಾಟಕದ ಯಶ್ರಾಜ್ ಪೂಂಜಾ ಮತ್ತು ಸ್ಪಿನ್ನರ್ ರವಿ ಬಿಷ್ಣೋಯಿ ಅವರು ಗುಜರಾತ್ ಬ್ಯಾಟರ್ಗಳಿಗೆ ಸಿಂಹಸ್ವಪ್ನರಾಗಬಲ್ಲರು. ಟೂರ್ನಿಯ ಮೊದಲ ಸುತ್ತಿನಲ್ಲಿ ಉಭಯ ತಂಡಗಳು ಮುಖಾಮುಖಿಯಾದಾಗ ರವಿ ಬಿಷ್ಣೋಯಿ ದಾಳಿಯ ಮುಂದೆ ಗುಜರಾತ್ ಸೋತಿತ್ತು. ಆ ಸೋಲಿಗೆ ಗಿಲ್ ಬಳಗವು ಮುಯ್ಯಿ ತೀರಿಸಿಕೊಳ್ಳುವುದೇ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.