ಚೆನ್ನೈ (ಪಿಟಿಐ): ಬ್ಯಾಟರ್ಗಳ ಆರ್ಭಟವೇ ತುಂಬಿರುವ ಐಪಿಎಲ್ ಟೂರ್ನಿಯಲ್ಲಿ ಭಾನುವಾರ ಗುಜರಾತ್ ಟೈಟನ್ಸ್ ಬೌಲರ್ಗಳು ಮೆರೆದರು. ಅದರಲ್ಲೂ ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ ಅವರ ಅಮೋಘ ಬೌಲಿಂಗ್ ಮುಂದೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ತವರಿನ ಅಂಗಳದಲ್ಲಿ ಸೋಲಿನ ಕಹಿಯುಂಡಿತು.

ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡವು 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 158 ರನ್ ಸಾಧಾರಣ ಮೊತ್ತ ಗಳಿಸಿತು. ಕಗಿಸೊ (25ಕ್ಕೆ3) ಮತ್ತು ಅರ್ಷದ್ ಖಾನ್ (43ಕ್ಕೆ2) ಅಮೋಘ ಬೌಲಿಂಗ್ ಮಾಡಿದರು.

ಸಾಧಾರಣ ಗುರಿ ಬೆನ್ನಟ್ಟಿದ ಗುಜರಾತ್ ತಂಡವು 16.4 ಓವರ್ಗಳಲ್ಲಿ 2 ವಿಕೆಟ್ಗಳಿಗೆ 162 ರನ್ ಗಳಿಸಿತು. ಆರಂಭಿಕ ಬ್ಯಾಟರ್ ಸಾಯಿ ಸುದರ್ಶನ್ (87; 46ಎ, 4x4, 6x7) ಹಾಗೂ ಶುಭಮನ್ ಗಿಲ್ (33; 23ಎ) ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ 58 ರನ್ ಸೇರಿಸಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ ಸಾಯಿ ಮತ್ತು ಜೋಸ್ ಬಟ್ಲರ್ 97 ರನ್ ಗಳಿಸಿ ತಂಡದ ಜಯ ವನ್ನು ಸುಲಭಗೊಳಿಸಿದರು..

ಋತುರಾಜ್ ಮಿಂಚು: ಚೆನ್ನೈ ತಂಡದ ನಾಯಕ ಋತುರಾಜ್ ಗಾಯಕವಾಡ (ಅಜೇಯ74; 60ಎ, 4x6, 6x4) ಅವರು ಲಯ ಕಂಡುಕೊಂಡರು. ಸಂಜು ಸ್ಯಾಮ್ಸನ್ (11 ; 15ಎ) ಅವರನ್ನು ನಾಲ್ಕನೇ ಓವರ್ನಲ್ಲಿ ಔಟ್ ಮಾಡುವ ಮೂಲಕ ರಬಾಡ ಖಾತೆ ತೆರೆದರು. ನಂತರ ಊರ್ವಿಲ್ ಪಟೇಲ್ (4 ರನ್) ಮತ್ತು ಕಾರ್ತಿಕ್ ಶರ್ಮಾ (15 ರನ್) ಅವರ ವಿಕೆಟ್ ಕೂಡ ತಮ್ಮ ಬುಟ್ಟಿಗೆ ಹಾಕಿಕೊಂಡರು. ಮೊಹಮ್ಮದ್ ಸಿರಾಜ್ ಅವರು ಸರ್ಫರಾಜ್ ಖಾನ್ ಅವರಿಗೆ ಖಾತೆ ತೆರೆಯುವ ಅವಕಾಶವನ್ನೇ ನೀಡಲಿಲ್ಲ. ಶಿವಂ ದುಬೆ ಮತ್ತು ಜೆಮಿ ಒವರ್ಟನ್ ಅವರ ವಿಕೆಟ್ ಗಳಿಸಿದ ಅರ್ಷದ್ ಖಾನ್ ಮಿಂಚಿದರು.

ಸಂಕ್ಷಿಪ್ತ ಸ್ಕೋರು: ಚೆನ್ನೈ ಸೂಪರ್ಕಿಂಗ್ಸ್: 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 158 (ಋತುರಾಜ್ ಗಾಯಕವಾಡ ಔಟಾಗದೇ 74, ಶಿವಂ ದುಬೆ 22, ಜೆಮಿ ಒವರ್ಟನ್ 18, ಕಗಿಸೊ ರಬಾಡ 25ಕ್ಕೆ3, ಅರ್ಷದ್ ಖಾನ್ 43ಕ್ಕೆ2) ಗುಜರಾತ್ ಟೈಟನ್ಸ್: 16.4 ಓವರ್ಗಳಲ್ಲಿ 2 ವಿಕೆಟ್ಗಳಿಗೆ 162 (ಸಾಯಿ ಸುದರ್ಶನ್ 87, ಶುಭಮನ್ ಗಿಲ್ 33, ಜೋಸ್ ಬಟ್ಲರ್ ಔಟಾಗದೇ 39, ಅಕೀಲ್ ಹುಸೇನ್ 46ಕ್ಕೆ1, ನೂರ್ ಅಹಮದ್ 29ಕ್ಕೆ1)

ಫಲಿತಾಂಶ:ಗುಜರಾತ್ ಟೈಟನ್ಸ್ 8 ವಿಕೆಟ್ಗಳ ಜಯ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-51-100524853

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.