4
ಇಂದು ಇಂಗ್ಲೆಂಡ್‌ ವಿರುದ್ಧ ಮೊದಲ ಟ್ವೆಂಟಿ–20 ಕ್ರಿಕೆಟ್‌ ಪಂದ್ಯ

ಕೊಹ್ಲಿ ಬಳಗಕ್ಕೆ ಸತ್ವ ಪರೀಕ್ಷೆ

Published:
Updated:

ಮ್ಯಾಂಚೆಸ್ಟರ್‌: ಐರ್ಲೆಂಡ್‌ ಎದುರಿನ ಟ್ವೆಂಟಿ–20 ಕ್ರಿಕೆಟ್‌ ಸರಣಿಯಲ್ಲಿ ‘ಕ್ಲೀನ್‌ ಸ್ವೀಪ್‌’ ಸಾಧನೆ ಮಾಡಿ ವಿಶ್ವಾಸದಿಂದ ಬೀಗುತ್ತಿರುವ ಭಾರತ ತಂಡಕ್ಕೆ ಈಗ ಅಗ್ನಿಪರೀಕ್ಷೆ ಎದುರಾಗಿದೆ.

ಮಂಗಳವಾರ ನಡೆಯುವ ಮೊದಲ ಟ್ವೆಂಟಿ–20 ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಬಳಗ ಆತಿಥೇಯ ಇಂಗ್ಲೆಂಡ್‌ ಎದುರು ಸೆಣಸಲಿದೆ. ಬಲಿಷ್ಠರ ನಡುವಣ ಈ ಹಣಾಹಣಿಗೆ ಓಲ್ಡ್‌ ಟ್ರಾಫರ್ಡ್‌ ಅಂಗಳದಲ್ಲಿ ವೇದಿಕೆ ಸಿದ್ಧವಾಗಿದೆ.

ಭಾರತ ತಂಡ ಟ್ವೆಂಟಿ–20 ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಏಯೊನ್‌ ಮಾರ್ಗನ್‌ ನೇತೃತ್ವದ ಇಂಗ್ಲೆಂಡ್‌ ನಾಲ್ಕನೇ ಸ್ಥಾನ ಹೊಂದಿದೆ.

ಭಾರತ ತಂಡ ಬ್ಯಾಟಿಂಗ್‌ನಲ್ಲಿ ಶಕ್ತಿಯುತವಾಗಿದೆ. ರೋಹಿತ್‌ ಶರ್ಮಾ, ಶಿಖರ್‌ ಧವನ್‌, ಕರ್ನಾಟಕದ ಕೆ.ಎಲ್‌.ರಾಹುಲ್‌ ಮತ್ತು ಸುರೇಶ್‌ ರೈನಾ ಉತ್ತಮ ಲಯದಲ್ಲಿದ್ದು ಇಂಗ್ಲೆಂಡ್‌ ಬೌಲರ್‌ಗಳ ಮೇಲೆ ಸವಾರಿ ಮಾಡಲು ಕಾಯುತ್ತಿದ್ದಾರೆ.  ಕೊಹ್ಲಿ, ಮಹೇಂದ್ರ ಸಿಂಗ್‌ ದೋನಿ, ಮನೀಷ್‌ ಪಾಂಡೆ ಮತ್ತು ದಿನೇಶ್‌ ಕಾರ್ತಿಕ್‌ ಕೂಡಾ ಅಬ್ಬರಿಸುವ ಸಾಮರ್ಥ್ಯ ಹೊಂದಿದ್ದಾರೆ.  ಹೀಗಾಗಿ ಬ್ಯಾಟ್ಸ್‌ಮನ್‌ಗಳ ಪಾಲಿನ ‘ಸ್ವರ್ಗ’ ಎನಿಸಿರುವ ಓಲ್ಡ್‌ ಟ್ರಾಫರ್‌ ಅಂಗಳದಲ್ಲಿ ರನ್‌ ಹೊಳೆ ಹರಿಯುವ ನಿರೀಕ್ಷೆ ಇದೆ.

ರೋಹಿತ್‌, ಧವನ್‌ ಮತ್ತು ರಾಹುಲ್‌ ಅವರು ಐರ್ಲೆಂಡ್‌ ಎದುರು  ಸ್ಫೋಟಕ ಆಟ ಆಡಿದ್ದರು. ಹಾರ್ದಿಕ್‌ ಪಾಂಡ್ಯ ಮೇಲೂ ಭರವಸೆ ಇಡಬ
ಹುದು. ಐಪಿಎಲ್‌ನಲ್ಲಿ ಮಿಂಚಿದ್ದ ಕೃಣಾಲ್‌ ಪಾಂಡ್ಯ ಕೂಡಾ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ಡೆತ್‌ ಓವರ್‌ ಪರಿಣತ ಬೌಲರ್‌ ಜಸ್‌ಪ್ರೀತ್‌ ಬೂಮ್ರಾ ಗಾಯದ ಕಾರಣ ಸರಣಿಗೆ ಅಲಭ್ಯರಾಗಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಭುವನೇಶ್ವರ್‌ ಕುಮಾರ್‌ ಮತ್ತು ಉಮೇಶ್‌ ಯಾದವ್‌ ಮಿಂಚುವ ವಿಶ್ವಾಸದಲ್ಲಿದ್ದಾರೆ. ಸ್ಪಿನ್ನರ್‌ಗಳಾದ ಯಜುವೇಂದ್ರ ಚಾಹಲ್‌ ಮತ್ತು ಕುಲದೀಪ್‌ ಯಾದವ್‌ ಕೂಡಾ ಮಾರ್ಗನ್‌ ಬಳಗದ ಬ್ಯಾಟ್ಸ್‌ಮನ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ.

ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಯಲ್ಲಿ ಕ್ಲೀನ್‌ ಸ್ವೀಪ್‌ ಸಾಧನೆ ಮಾಡಿದ್ದ ಇಂಗ್ಲೆಂಡ್‌ ಕೂಡಾ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಅಲೆಕ್ಸ್‌ ಹೇಲ್ಸ್‌, ಜಾನಿ ಬೇಸ್ಟೊ, ಜೇಸನ್‌ ರಾಯ್‌ ಮತ್ತು ನಾಯಕ ಮಾರ್ಗನ್‌ ಬ್ಯಾಟಿಂಗ್‌ನಲ್ಲಿ ತಂಡದ ಬೆನ್ನೆಲುಬಾಗಿದ್ದಾರೆ. ಬೌಲಿಂಗ್‌ನಲ್ಲೂ ಈ ತಂಡ ಶಕ್ತಿಯುತವಾಗಿದೆ.

ಆರಂಭ: ರಾತ್ರಿ 10.
ನೇರ ಪ್ರಸಾರ: ಸೋನಿ ನೆಟ್‌ವರ್ಕ್‌

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !