ನವದೆಹಲಿ (ಪಿಟಿಐ): ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ‘ಹನಿಟ್ರ್ಯಾಪ್, ಕಾನೂನು ಉಲ್ಲಂಘನೆ ಮತ್ತು ಭದ್ರತೆಗೆ ಆಪಾಯ’ ಉಂಟಾಗುವುದನ್ನು ತಡೆಯಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಕಟ್ಟುನಿಟ್ಟಾದ ನಿಯಮ ಜಾರಿಗೊಳಿಸುತ್ತಿದೆ.

ಆಟಗಾರರು, ತಂಡದ ನೆರವು ಸಿಬ್ಬಂದಿ ಮತ್ತು ಅಧಿಕಾರಿಗಳು ತಂಗಿರುವ ಹೋಟೆಲ್ ಕೋಣೆಗಳಿಗೆ ಅನಧಿಕೃತ ವ್ಯಕ್ತಿಗಳ (ಪೂರ್ವಾನುಮತಿ ಪಡೆಯದವರು/ಅಪರಿಚಿತರು) ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಐಪಿಎಲ್ನಲ್ಲಿ ‘ದುರ್ನಡತೆ ಮತ್ತು ಶಿಷ್ಟಾಚಾರ ಉಲ್ಲಂಘನೆ’ ನಡೆದಿರುವ ಕುರಿತು ಮಂಡಳಿಯ ಭ್ರಷ್ಟಾಚಾರ ನಿಗ್ರಹ ಘಟಕ (ಎಸಿಯು) ವರದಿ ನೀಡಿತ್ತು.

ಈ ಬಗ್ಗೆ ಐಪಿಎಲ್ ಟೂರ್ನಿಯ ಹತ್ತು ಫ್ರ್ಯಾಂಚೈಸಿ ಗಳಿಗೆ ಬಿಸಿಸಿಐ ಮಾರ್ಗಸೂಚಿಗಳನ್ನು ನೀಡಿದೆ. ಆಟಗಾರರು ಮತ್ತು ಅಧಿಕಾರಿಗಳ ಕೋಣೆಗಳಿಗೆ ಭೇಟಿ ನೀಡುವ ಅತಿಥಿಗಳು ತಂಡದ ವ್ಯವಸ್ಥಾಪಕರಿಂದ ಅಧಿಕೃತ ಅನುಮತಿ ಪತ್ರ ಪಡೆಯುವುದು ಕಡ್ಡಾಯ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

‘ಪ್ರಸಕ್ತ ಐಪಿಎಲ್ ಆವೃತ್ತಿಯಲ್ಲಿ ನಡೆದಿರುವ ಕೆಲವು ಘಟನೆಗಳನ್ನು ಅವಲೋಕಿಸಿದ ನಂತರ ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸಿ ನೀಡಲಾಗಿದೆ. ವೃತ್ತಿಪರತೆ, ಶಿಸ್ತು, ಸುರಕ್ಷತೆ ಕುರಿತ ಜಾಗೃತಿ ಮತ್ತು ಶಿಷ್ಷಾಚಾರ ಪಾಲನೆಯನ್ನು ಎಲ್ಲ ಭಾಗಿದಾರರೂ ಮಾಡಬೇಕು ಎಂಬುದು ನಮ್ಮ ಉದ್ದೇಶ’ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜೀತ್ ಸೈಕಿಯಾ ಅವರು ಫ್ರ್ಯಾಂಚೈಸಿಗಳ ಸಿಇಒಗಳಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಪತ್ರವು ಪಿಟಿಐ ಸುದ್ದಿಸಂಸ್ಥೆಗೆ ಲಭ್ಯವಾಗಿದೆ.

‘ಅನುಚಿತ ಘಟನೆಗಳನ್ನು ಯಾವುದೇ ಕ್ರಮ ಕೈಗೊಳ್ಳದೇ ಬಿಟ್ಟರೆ ಟೂರ್ನಿಯ ಘನತೆಗೆ ಧಕ್ಕೆಯಾಗುವ ಅಪಾಯವಿರುತ್ತದೆ. ಸಂಬಂಧಪಟ್ಟ ಫ್ರ್ಯಾಂಚೈಸಿಗಳು ಮತ್ತು ಆಡಳಿತ ಸಂಸ್ಥೆಯಾಗಿ ಬಿಸಿಸಿಐ ಹೊಣೆಹೊತ್ತು ಟೂರ್ನಿಯ ಘನತೆ, ಗೌರವ ಕಾಪಾಡಬೇಕು’ ಎಂದು ಹೇಳಿದ್ದಾರೆ.

ಕೆಲವು ಆಟಗಾರರು ಮತ್ತು ನೆರವು ಸಿಬ್ಬಂದಿಯು ಅನಧಿಕೃತ ವ್ಯಕ್ತಿಗಳು ತಮ್ಮ ಕೋಣೆಗಳಿಗೆ ಪ್ರವೇಶಿಸಲು ಅವಕಾಶ ಕೊಟ್ಟಿರುವುದನ್ನು ಬಿಸಿಸಿಐ ಗಮನಿಸಿದೆ. ಈ ಪ್ರಕರಣಗಳಲ್ಲಿ ತಂಡದ ವ್ಯವಸ್ಥಾಪಕ ರಿಗೆ ಅನಧಿಕೃತ ವ್ಯಕ್ತಿಗಳ ಕುರಿತ ಯಾವುದೇ ಮಾಹಿತಿ ಇರಲಿಲ್ಲ ಮತ್ತು ಅವರಿಂದ ಅನುಮತಿ ಕೂಡ ಪಡೆದಿರಲಿಲ್ಲವೆನ್ನಲಾಗಿದೆ.

‘ಕೆಲವು ಸಂದರ್ಶಕರ ಕುರಿತು ತಂಡದ ಮ್ಯಾನೇಜರ್ಗಳಿಗೆ ಯಾವುದೇ ಮಾಹಿತಿಯೇ ಇರಲಿಲ್ಲ. ಇಂತಹ ಪರಿಪಾಠವನ್ನು ತಕ್ಷಣದಿಂದಲೇ ನಿರ್ಬಂಧಿಸಲಾಗಿದೆ’ ಎಂದು ಸೂಚಿಸಲಾಗಿದೆ.

‘ಅನಧಿಕೃತ ವ್ಯಕ್ತಿಗಳು ಆಟಗಾರರು, ನೆರವು ಸಿಬ್ಬಂದಿ ಅಥವಾ ಅಧಿಕಾರಿಗಳನ್ನು ಹನಿಟ್ರ್ಯಾಪ್ ಮಾಡಬಹುದು. ಇದರಿಂದಾಗಿ ತಂಡದ ರಹಸ್ಯ ಮಾಹಿತಿಗಳ ಸೋರಿಕೆ ಮತ್ತಿತರ ಅಪರಾಧ ಕೃತ್ಯಗಳೂ ನಡೆಯಬಹುದು. ಇದರಿಂದಾಗಿ ಲೈಂಗಿಕ ದುರ್ನಡತೆ ಯಂತಹ ಪ್ರಕರಣಗಳನ್ನು ಭಾರತೀಯ ದಂಡ ಸಂಹಿತೆಯಲ್ಲಿ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಇಂತಹ ಕೃತ್ಯಗಳು ನಡೆಯದಂತೆ ಫ್ರ್ಯಾಂಚೈಸಿಗಳು ಜಾಗೃತವಾಗಿರಬೇಕು. ದುರ್ನಡತೆ, ನಿಯಮಬಾಹಿರ ಪ್ರಕರಣಗಳು ನಡೆಯದಂತೆ ತಡೆಯಬೇಕು’ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ತಂಡಗಳಿಗೆ ನೇಮಕ ಮಾಡಲಾಗಿರುವ ಭದ್ರತಾ ಸಂಪರ್ಕ ಅಧಿಕಾರಿ (ಎಸ್ಎಲ್ಒ) ಮತ್ತು ತಂಡದ ಸಮನ್ವಯ ಅಧಿಕಾರಿ (ಟಿಐಒ)ಯ ಅನುಮತಿ ಇಲ್ಲದೇ ಹೋಟೆಲ್ಗಳಿಂದ ‘ಅವೇಳೆ’ಯಲ್ಲಿ ಹೊರ ಹೋದ ಕೆಲ ಆಟಗಾರರು ಮತ್ತು ನೆರವು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

‘ಪಂದ್ಯಗಳು ಪ್ರಗತಿಯಲ್ಲಿರುವಾಗಲೇ ಫ್ರ್ಯಾಂಚೈಸಿ ಮಾಲೀಕರು ಅಥವಾ ಅವರ ಪ್ರತಿನಿಧಿಗಳು ತಮ್ಮ ತಂಡದ ಆಟಗಾರರೊಂದಿಗೆ ಭೇಟಿಯಾಗುವುದು, ಚರ್ಚಿಸುವುದು, ಒಡನಾಡುವುದನ್ನು ನಿರ್ಬಂಧಿಸ ಲಾಗಿದೆ’ ಎಂದೂ ಮಂಡಳಿ ತಿಳಿಸಿದೆ.

‘ಇ ಸಿಗರೇಟ್ ಮತ್ತು ನಿಷೇಧಿತ ವಸ್ತುಗಳನ್ನು ಪಂದ್ಯದ ಸಂದರ್ಭಧಲ್ಲಿ ಬಳಸುವುದು ಐಪಿಎಲ್ ಮತ್ತು ಬಿಸಿಸಿಐ ನಿಯಮಗಳ ಉಲ್ಲಂಘನೆ ಮಾತ್ರವಲ್ಲ. ಭಾರತೀಯ ದಂಡಸಂಹಿತೆಯ ಪ್ರಕಾರವೂ ಅಪರಾಧವೇ. ಅಂತಹವರು ಕಾನೂನು ಕ್ರಮಕ್ಕೆ ಒಳಗಾಗುತ್ತಾರೆ’ ಎಂದಿದ್ದಾರೆ.

ಈಚೆಗೆ ಪಂದ್ಯದೊಂದರ ಸಂದರ್ಭದಲ್ಲಿ ರಾಜಸ್ಥಾನ ರಾಯಲ್ಸ್ ನಾಯಕ ರಿಯಾನ್ ಪರಾಗ್ ಅವರು ಇ ಸಿಗರೇಟ್ ಸೇದುವ ವಿಡಿಯೊ ದೊಡ್ಡ ಸುದ್ದಿ ಮಾಡಿತ್ತು. ನಂತರ ಅವರಿಗೆ ಬಿಸಿಸಿಐ ದಂಡ ವಿಧಿಸಿತ್ತು. ಭಾರತದಲ್ಲಿ ಇ ಸಿಗರೇಟ್ ಬಳಕೆ, ಉತ್ಪಾದನೆಯನ್ನು ನಿಷೇಧಿಸಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-51-78120328

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.