ಮುಂಬೈ (ಪಿಟಿಐ): ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿರುವ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ರದ್ದು ಮಾಡಬೇಕು ಎಂದು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ 2023ರ ಆವೃತ್ತಿಯಿಂದ ಈ ನಿಯಮ ಜಾರಿ ಯಾಗಿದೆ. ಈ ಬಗ್ಗೆ ಹಲವು ಖ್ಯಾತನಾಮ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಸಚಿನ್ ಅವರು ‘ಇಎಸ್ಪಿಎನ್ಕ್ರಿಕ್ಇನ್ಫೋ ಪ್ರಶಸ್ತಿ’ ಪ್ರದಾನ ಸಂದರ್ಭದಲ್ಲಿ ಹೇಳಿದ್ದಾರೆ. ಅಲ್ಲದೇ ಐಪಿಎಲ್ ಟೂರ್ನಿಯನ್ನು ಮತ್ತಷ್ಟು ಸ್ವಾರಸ್ಯಕರವಾಗಿಸಲು ಅವರು ಮೂರು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ.

‘ಟಿ20 ಕ್ರಿಕೆಟ್ ಮಾದರಿಯಲ್ಲಿ ಆಡಲು ಕೇವಲ 20 ಓವರ್ಗಳು ಮಾತ್ರ ಸಿಗುತ್ತವೆ. ಅಂತಹದರಲ್ಲಿ ಇಂಪ್ಯಾಕ್ಟ್ ನಿಯಮದಲ್ಲಿ ಒಬ್ಬ ಹೆಚ್ಚುವರಿ ಬ್ಯಾಟರ್ಗೆ ಅವಕಾಶ ಕೊಡಲಾಗುತ್ತಿದೆ. ಈ ಮಾದರಿಯಲ್ಲಿ ಬೌಲರ್ಗಳ ಮುಂದೆ ಕಠಿಣ ಸವಾಲು ಇದೆ. ಅದರ ಮೇಲೆ ಈ ನಿಯಮವು ಮತ್ತಷ್ಟು ಹೊರೆ ಹಾಕುತ್ತಿದೆ. ಇದು ಅಸಮತೋಲನಗೊಳಿಸುತ್ತಿದೆ’ ಎಂದು ತೆಂಡೂಲ್ಕರ್ ಹೇಳಿದರು.

‘ಬೌಲರ್ಗಳಿಗೆ ತಲಾ ನಾಲ್ಕು ಓವರ್ ಹಾಕುವ ನಿಯಮವನ್ನು ಪರಿಷ್ಕರಿಸಬೇಕು. ಪ್ರತಿ ಬೌಲರ್ಗೆ ತಲಾ ಐದು ಓವರ್ ಹಾಕುವ ಅವಕಾಶ ನೀಡಬೇಕು’ ಎಂದು ಹೇಳಿದ್ದಾರೆ.

‘ಮೂರನೇಯದಾಗಿ ಪವರ್ಪ್ಲೇ ನಿಯಮವನ್ನು ಬದಲಾಯಿಸಬೇಕು. ಅದನ್ನು ಎರಡು ಭಾಗಗಳಾಗಿ ವಿಭಜಿಸಬೇಕು. ಬ್ಯಾಟಿಂಗ್ ಮಾಡುವ ತಂಡಕ್ಕೆ 4 ಓವರ್ಗಳ ಪವರ್ಪ್ಲೇ ಮತ್ತು ಬೌಲಿಂಗ್ ಮಾಡುವವರಿಗೆ ಎರಡು ಓವರ್ ಪವರ್ಪ್ಲೇ ಪಡೆಯುವ ಅವಕಾಶ ನೀಡಬೇಕು. ಬೌಲಿಂಗ್ ಕಡೆಯ ಪವರ್ಪ್ಲೇ ಇದ್ದಾಗ 30 ಯಾರ್ಡ್ ವೃತ್ತದ ಹೊರಗೆ ಒಬ್ಬ ಹೆಚ್ಚುವರಿ ಫೀಲ್ಡರ್ ನಿಯೋಜನೆಗೆ ಅವಕಾಶವಿರಬೇಕು’ ಎಂದು ಸಚಿನ್ ಸಲಹೆ ಕೊಟ್ಟಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-51-989555191

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.