ಧರ್ಮಶಾಲಾ (ಪಿಟಿಐ): ಐಪಿಎಲ್ ಟೂರ್ನಿ ಅಂತಿಮ ಹಂತದತ್ತ ಸಾಗುತ್ತಿರುವಂತೆ ಪಂಜಾಬ್ ಕಿಂಗ್ಸ್ ಆಟದ ಮಟ್ಟ ನಿಧಾನವಾಗಿ ಕುಸಿಯುತ್ತಿರುವಂತೆ ಕಾಣುತ್ತಿದೆ. ಸೋಮವಾರ ಧರ್ಮಶಾಲಾದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿರುವ ಕಿಂಗ್ಸ್, ಈ ಕುಸಿತ ತಡೆಗಟ್ಟುವತ್ತ ಗಮನಹರಿಸಲಿದೆ.

ಮೊದಲ ಏಳು ಪಂದ್ಯಗಳಲ್ಲಿ ಅಜೇಯವಾಗಿದ್ದ ಶ್ರೇಯಸ್ ಅಯ್ಯರ್ ಬಳಗ ಕೊನೆಯ ಮೂರು ಪಂದ್ಯಗಳಲ್ಲಿ ಸೋಲನುಭವಿಸಿ ಒತ್ತಡಕ್ಕೆ ಸಿಲುಕಿದೆ. ಹೀಗಾಗಿ ಆಟದ ಎಲ್ಲ ವಿಭಾಗಗಳಲ್ಲಿ ಸುಧಾರಿತ ಪ್ರದರ್ಶನ ನೀಡುವ ಸವಾಲು ತಂಡದ ಎದುರು ಇದೆ.

ತಂಡ ಲೀಗ್ನ ಉಳಿದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಬೇಕಾಗಿದೆ. ಹೈದರಾಬಾದ್ನಲ್ಲಿ ತಂಡದ ಕ್ಯಾಚಿಂಗ್ ಕಳಪೆಯಾಗಿತ್ತು. ತಂಡದ ಅಗ್ರ ವೇಗದ ಬೌಲರ್ ಅರ್ಷದೀಪ್ ಸಾಕಷ್ಟು ರನ್ಗಳನ್ನು ತೆತ್ತರು. ಪ್ರಿಯಾಂಶ್ ಆರ್ಯ ಮತ್ತು ಪ್ರಭಸಿಮ್ರನ್ ಸಿಂಗ್ ಜೋಡಿ ಮೊದಲಿನಂತೆ ರನ್ ಹೊಳೆ ಹರಿಸುತ್ತಿಲ್ಲ. ಇದರಿಂದ ತಂಡಕ್ಕೆ ಭದ್ರ ಬುನಾದಿ ದೊರಕುತ್ತಿಲ್ಲ.

ಅಕ್ಷರ್ ಪಟೇಲ್ ಸಾರಥ್ಯದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹಿನ್ನಡೆ ಕಾಣುತ್ತಿದ್ದು ಪಾಯಿಂಟ್ ಪಟ್ಟಿಯ ಕೆಳ ಅರ್ಧದಲ್ಲಿದೆ. ಆ ತಂಡ ಕೊನೆಯ ಆರು ಪಂದ್ಯಗಳಲ್ಲಿ ಐದು ಸೋತಿದ್ದು ಪ್ಲೇಆಫ್ ಸಾಧ್ಯತೆ ಕಠಿಣವಾಗಿದೆ.

ತವರಿನ ಪಂದ್ಯಗಳು ಈ ಬಾರಿ ಡೆಲ್ಲಿ ತಂಡವನ್ನು ದುಃಸ್ವಪ್ನದಂತೆ ಕಾಡಿದವು. ನಿಧಾನಗತಿಯ ಮತ್ತು ತಿರುವು ನೀಡುತ್ತಿದ್ದ ಪಿಚ್ನಲ್ಲಿ ಬ್ಯಾಟರ್ಗಳು ಪರದಾಡಿದರು. ಕೆಲವು ಪಂದ್ಯಗಳಲ್ಲಿ ಕೆ.ಎಲ್.ರಾಹುಲ್ ಉತ್ತಮವಾಗಿ ಆಡಿದ್ದು ಬಿಟ್ಟರೆ, ಯಾರೊಬ್ಬರೂ ಸ್ಥಿರ ಪ್ರದರ್ಶನ ನೀಡಲಿಲ್ಲ.

ಪ್ರಮುಖ ಸ್ಪಿನ್ನರ್ ಕುಲದೀಪ್ ಯಾದವ್ ಯಶಸ್ಸು ಗಳಿಸದಿರುವುದು ತಂಡದ ಮೇಲೆ ಪರಿಣಾಮ ಬೀರುತ್ತಿದೆ. ಆಸ್ಟ್ರೇಲಿಯಾದ ಅನುಭವಿ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ತಂಡವನ್ನು ಬಹಳ ತಡವಾಗಿ ಸೇರಿಕೊಂಡಿದ್ದೂ ಹಿನ್ನಡೆಯಾಯಿತು. ಪಂಜಾಬ್ ಕಿಂಗ್ಸ್ ರೀತಿ ಡೆಲ್ಲಿ ತಂಡದ ಕ್ಷೇತ್ರರಕ್ಷಣೆ ಅಚ್ಚುಕಟ್ಟಾಗಿಲ್ಲ.

ತಾಂತ್ರಿಕವಾಗಿ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ ಆಫ್ ರೇಸ್ನಿಂದ ಇನ್ನೂ ಹೊರಬಿದ್ದಿಲ್ಲ. ಆದರೆ ಆ ಸಾಧ್ಯತೆ ಕ್ಷೀಣವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-51-710577738

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.