ಈ ಬಾರಿಯ ಐಪಿಎಲ್ನಲ್ಲಿ ಮೊದಲ ಬಾರಿಗೆ ಸೂಪರ್ ಓವರ್ವರೆಗೆ ಸಾಗಿದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಲಖನೌ ಸೂಪರ್ ಜೈಂಟ್ಸ್ ತಂಡದ ವಿರುದ್ಧ ರೋಚಕ ಜಯ ಸಾಧಿಸಿತು.

ಲಖನೌದ ಏಕನಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದ ಲಖನೌ ತಂಡದ ನಾಯಕ ರಿಷಭ್ ಪಂತ್, ಬೌಲಿಂಗ್ ಆಯ್ಕೆ ಮಾಡಿಕೊಂಡರು.

ಕೆಕೆಆರ್ ತಂಡದ ನಾಯಕ ಅಜಿಂಕ್ಯ ರಹಾನೆ ಸೇರಿದಂತೆ ಪ್ರಮುಖ ಬ್ಯಾಟರ್ಗಳ ವೈಫಲ್ಯ ಅನುಭವಿಸಿದರು.

ಕೆಕೆಆರ್ನ ರಿಂಕು ಸಿಂಗ್ (ಔಟಾಗದೇ 83; 51ಎ, 4x7, 6x5) ಅರ್ಧಶತಕ ಗಳಿಸಿ, ತಂಡಕ್ಕೆ ಆಸರೆಯಾದರು. ಇದರಿಂದಾಗಿ, ಕೆಕೆಆರ್ 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 155 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಲಖನೌ ತಂಡದ ಏಡನ್ ಮರ್ಕರಂ (31; 27ಎ) ಹಾಗೂ ರಿಷಭ್ ಪಂತ್ (42; 38ಎ) ಹೋರಾಟ ತೋರಿದ್ದು ಬಿಟ್ಟರೆ, ಉಳಿದ ಬ್ಯಾಟರ್ಗಳು ನಿರೀಕ್ಷಿತ ಕಾಣಿಕೆ ನೀಡಲಿಲ್ಲ. ಕೊನೆಯ ಎಸೆತದಲ್ಲಿ ಗೆಲುವಿಗೆ 7 ರನ್ ಅಗತ್ಯ ವಿದ್ದಾಗ ಮೊಹಮ್ಮದ್ ಶಮಿ ಸಿಕ್ಸರ್ ಸಿಡಿಸಿದರು. ಹೀಗಾಗಿ, ಪಂದ್ಯವು ಸೂಪರ್ ಓವರ್ಗೆ ಸಾಗಿತು.

156 ರನ್ ಗುರಿ ಬೆನ್ನಟ್ಟಿದ ಲಖನೌ ತಂಡಕ್ಕೆ ಕೊನೆಯ ಎಸೆತದಲ್ಲಿ ಗೆಲುವಿಗೆ 7 ರನ್ ಅಗತ್ಯ ವಿದ್ದಾಗ ಮೊಹಮ್ಮದ್ ಶಮಿ ಸಿಕ್ಸರ್ ಸಿಡಿಸಿದರು. ಹೀಗಾಗಿ, ಪಂದ್ಯವು ಸೂಪರ್ ಓವರ್ಗೆ ಸಾಗಿತು.

ಕೆಕೆಆರ್ ತಂಡದ ನಾಯಕ ಅಜಿಂಕ್ಯ ರಹಾನೆ ಅವರು ವೆಸ್ಟ್ ಇಂಡೀಸ್ನ ದಿಗ್ಗಜ ಸ್ಪಿನ್ನರ್ ಸುನಿಲ್ ನಾರಾಯಣ್ ಅವರಿಗೆ ಚೆಂಡನ್ನು ನೀಡಿದರು. ಸುನಿಲ್ ಅವರು ಸೂಪರ್ ಓವರ್ನ ಮೊದಲ ಎಸೆತದಲ್ಲಿ ನಿಕೊಲಸ್ ಪೂರನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಎರಡನೇ ಎಸೆತದಲ್ಲಿ ಪಂತ್ ಒಂದು ರನ್ ತೆಗೆದುಕೊಂಡರು. ಮೂರನೇ ಎಸೆತದಲ್ಲಿ ಏಡನ್ ಮರ್ಕರಂ ಅವರು ರೋವ್ಮನ್ ಪೊವೆಲ್– ರಿಂಕು ಹಿಡಿದ ಕ್ಯಾಚ್ಗೆ ಬಲಿಯಾದರು.

2 ರನ್ ಗುರಿ ಬೆನ್ನಟ್ಟಿದ ಕೋಲ್ಕತ್ತ ತಂಡದ ರಿಂಕು ಮೊದಲ ಎಸೆತದಲ್ಲಿಯೇ ಬೌಂಡರಿ ಗಳಿಸಿ, ಗೆಲುವು ತಂದಿತ್ತರು. ಸತತ ಐದು ಪಂದ್ಯ ಸೋತ ಲಖನೌ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಸರಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.