ಕೋಲ್ಕತ್ತ (ಪಿಟಿಐ): ಆತಿಥೇಯ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಶನಿವಾರ ಈಡನ್ ಗಾರ್ಡನ್ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಕಣಕ್ಕಿಳಿಯಲಿದೆ.

ಅಜಿಂಕ್ಯ ರಹಾನೆ ನಾಯಕತ್ವದ ಕೋಲ್ಕತ್ತ ತಂಡವು ಈ ಪಂದ್ಯದಲ್ಲಿ ಜಯಿಸಿ ಪ್ಲೇ ಆಫ್ ಪ್ರವೇಶದ ಕನಸು ಜೀವಂತವಾಗಿಟ್ಟುಕೊಳ್ಳುವ ಛಲದಲ್ಲಿದೆ. ಇನ್ನೊಂದೆಡೆ ಶುಭಮನ್ ಗಿಲ್ ನಾಯಕತ್ವದ ಟೈಟನ್ಸ್ ಪಡೆಯುಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ಕೊಳ್ಳುವತ್ತ ಚಿತ್ತ ನೆಟ್ಟಿದೆ.

ಹೋದ ವರ್ಷದ ಟೂರ್ನಿಯಲ್ಲಿ ಕೋಲ್ಕತ್ತ ತಂಡವು ಎಂಟನೇ ಸ್ಥಾನ ಪಡೆದಿತ್ತು. ಅದರಿಂದಾಗಿ ರಹಾನೆ ಬಹಳಷ್ಟು ಟೀಕೆಗೊಳಗಾಗಿದ್ದರು. ಆದರೂ ಅವರನ್ನು ಈ ವರ್ಷವೂ ನಾಯಕತ್ವದಲ್ಲಿ ಮುಂದುವರಿಸಿದ್ದು ಕೂಡ ಚರ್ಚೆಗೆ ಗ್ರಾಸವಾಗಿತ್ತು. ಈ ಸಲ ಮೊದಲ ಆರು ಪಂದ್ಯಗಳಲ್ಲಿ ಐದರಲ್ಲಿ ತಂಡವು ಸೋತಿತ್ತು. ಒಂದು ಮಳೆಗೆ ರದ್ದಾಗಿತ್ತು.

ನಂತರ ನಾಲ್ಕು ಪಂದ್ಯ ಗೆದ್ದಿದ್ದ ಅಜಿಂಕ್ಯ ಬಳಗವು ಮೂರು ದಿನಗಳ ಹಿಂದೆ ರಾಯಪುರದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಸೋತಿತ್ತು. ಒಟ್ಟು 9 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ. ಅದರಿಂದಾಗಿ ಪ್ಲೇಆಫ್ ಹಾದಿ ಸುಲಭವೇನಿಲ್ಲ. ಉಳಿದಿರುವ ಮೂರು ಪಂದ್ಯಗಳಲ್ಲಿಯೂ ಉತ್ತಮ ರನ್ರೇಟ್ನೊಂದಿಗೆ ಜಯಿಸಬೇಕು. ನಂತರ ಬೇರೆ ತಂಡಗಳ ಗೆಲುವು, ಸೋಲಿನ ಲೆಕ್ಕಾಚಾರ ಮಾಡಬೇಕಿದೆ.

ಗಾಯಗೊಂಡಿರುವ ವರುಣ್ ಚಕ್ರವರ್ತಿ ಅವರು ಆರ್ಸಿಬಿ ಎದುರು ಆಡಿರಲಿಲ್ಲ. ಈ ಪಂದ್ಯದಲ್ಲಿ ಅವರು ಮರಳುವುದು ಬಹುತೇಕ ಖಚಿತ ಎಂದು ಕೋಚ್ ಅಭಿಷೇಕ್ ನಾಯರ್ ಹೇಳಿದ್ದಾರೆ. ಅಂಗಕ್ರಿಷ್ ರಘುವಂಶಿ ಬಿಟ್ಟರೆ ಉಳಿದ ಬ್ಯಾಟರ್ಗಳು ಸ್ಥಿರವಾದ ಆಟವಾಡುತ್ತಿಲ್ಲ. ನಾಲ್ಕು ಅರ್ಧಶತಕಗಳೊಂದಿಗೆ 340 ರನ್ ಗಳಿಸಿದ್ದಾರೆ. ರಿಂಕು ಸಿಂಗ್ 286 ರನ್ ಗಳಿಸಿದ್ದಾರೆ.

ಇನ್ನೊಂದೆಡೆ ಗಿಲ್ ಬಳಗವು ಪೂರ್ಣಪ್ರಮಾಣದ ಸಾಮರ್ಥ್ಯದೊಂದಿಗೆ ಸಜ್ಜಾಗಿದೆ. ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಜೇಸನ್ ಹೋಲ್ಡರ್ ಅವರು ಸರಿಯಾದ ಸಮಯದಲ್ಲಿ ಲಯಕ್ಕೆ ಮರಳಿದ್ದಾರೆ. ತಂಡಕ್ಕೆ ಉತ್ತಮವಾದ ಕಾಣಿಕೆ ನೀಡುತ್ತಿದ್ದಾರೆ.

ಬ್ಯಾಟಿಂಗ್ನಲ್ಲಿ ಆರಂಭಿಕ ಜೋಡಿ ಗಿಲ್ ಮತ್ತು ಸಾಯಿ ಸುದರ್ಶನ್ ಅವರು ಕೂಡ ಉತ್ತಮ ಲಯದಲ್ಲಿದ್ದಾರೆ. ಸಾಯಿ ಒಂದು ಶತಕ ಹೊಡೆದಿದ್ದಾರೆ. ಜೋಸ್ ಬಟ್ಲರ್, ಅರ್ಷದ್ ಖಾನ್, ವಾಷಿಂಗ್ಟನ್ ಸುಂದರ್, ಸ್ಪಿನ್ನರ್ ರಶೀದ್ ಖಾನ್ ಕೂಡ ತಂಡದ ಜಯದಾಸೆಗೆ ಬಲ ತುಂಬಬಲ್ಲ ಸಮರ್ಥರು.

ಈ ಋತುವಿನಲ್ಲಿ ಈಡನ್ ಗಾರ್ಡನ್ ಪಿಚ್ ಬೌಲರ್ಗಳಿಗೆ ಹೆಚ್ಚು ನೆರವು ನೀಡಿದೆ. ಸ್ಪಿನ್ ಜೋಡಿ ಸುನಿಲ್ ನಾರಾಯಣ್, ವರುಣ್ ಮತ್ತು ಆಲ್ರೌಂಡರ್ ಕ್ಯಾಮೆರಾನ್ ಗ್ರೀನ್ ಅವರು ಇಲ್ಲಿ ತಮ್ಮ ಸಾಮರ್ಥ್ಯ ಮೆರೆಯುವ ವಿಶ್ವಾಸದಲ್ಲಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-51-604149034

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.