ಕೋಲ್ಕತ್ತ: ಪೆಟ್ಟು ತಿಂದ ಹುಲಿಯಂತಾಗಿರುವ ರಾಜಸ್ಥಾನ ರಾಯಲ್ಸ್ ತಂಡವು ಭಾನುವಾರ ಕೋಲ್ಕತ್ತ ನೈಟ್ ರೈಡರ್ಸ್ ಎದುರು ಕಣಕ್ಕಿಳಿಯಲಿದೆ.

ಆತಿಥೇಯ ತಂಡವು ಟೂರ್ನಿಯಲ್ಲಿ ಇದುವರೆಗೂ ಗೆಲುವಿನ ಮುಖ ನೋಡಿಲ್ಲ. ಆರು ಪಂದ್ಯ ಆಡಿರುವ ಕೋಲ್ಕತ್ತ ತಂಡವು ಐದರಲ್ಲಿ ಸೋತಿದೆ. ಒಂದು ಪಂದ್ಯ ಮಳೆಯಿಂದ ರದ್ದಾಗಿತ್ತು. ಅದರ ಒಂದು ಅಂಕ ತಂಡದ ಖಾತೆಯಲ್ಲಿದೆ. ಈಡನ್ ಗಾರ್ಡನ್ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಕೋಲ್ಕತ್ತ ಜಯಿಸಲೇ ಬೇಕಾದ ಒತ್ತಡದಲ್ಲಿದೆ. ಆದರೆ ತಂಡದ ಸ್ಪಿನ್ ಜೋಡಿ ವರುಣ್ ಚಕ್ರವರ್ತಿ ಮತ್ತು ಸುನಿಲ್ ನಾರಾಯಣ್ ಅವರು ಫಾರ್ಮ್ನಲ್ಲಿ ಇಲ್ಲ. ವೇಗಿಗಳಾದ ಹರ್ಷಿತ್ ರಾಣಾ ಮತ್ತು ಆಕಾಶ್ ದೀಪ್ ಅವರು ಗಾಯಗೊಂಡಿರುವುದರಿಂದ ತಂಡದ ಹಿನ್ನಡೆಗೆ ಕಾರಣವಾಗಿದೆ. ಮಹೀಷ ಪಥಿರಾಣ ಅವರ ಅಲಭ್ಯತೆಯೂ ತಂಡವನ್ನು ಕಾಡಿದೆ.

ನಾಯಕ ಅಜಿಂಕ್ಯ ರಹಾನೆ ಮತ್ತು ಕೋಚ್ ಅಭಿಷೇಕ್ ನಾಯರ್ ಅವರು ರೂಪಿಸುತ್ತಿರುವ ತಂತ್ರಗಾರಿಕೆಯ ಬಗ್ಗೆಯೂ ಈಗ ಚರ್ಚೆಗಳು ನಡೆಯುತ್ತಿವೆ.

ಕಳೆದ ಪಂದ್ಯದಲ್ಲಿ ವರುಣ್ ಚಕ್ರವರ್ತಿ ವಿಕೆಟ್ ಗಳಿಸಿದ್ದರು. ಕ್ಯಾಮರಾನ್ ಗ್ರೀನ್ ಅವರು ಅರ್ಧಶತಕ ಹೊಡೆದು ಲಯಕ್ಕೆ ಮರಳಿದ್ದರು. ಆದರೆ ರೋವ್ಮನ್ ಪೊವೆಲ್, ರಹಾನೆ, ರಿಂಕು ಸಿಂಗ್ ಮತ್ತು ಟಿಮ್ ಸೀಫರ್ಟ್ ಅವರು ಲಯಕ್ಕೆ ಮರಳಬೇಕಿದೆ. ಅಂಗಕ್ರಿಷ್ ರಘುವಂಶಿ ಅವರು ಉತ್ತಮ ಫಾರ್ಮ್ನಲ್ಲಿದ್ದಾರೆ.

ಆದರೆ ರಾಜಸ್ಥಾನ ತಂಡವನ್ನು ಸುಲಭವಾಗಿ ಮಣಿಸಲು ಸಾಧ್ಯವಿಲ್ಲ. ರಿಯಾನ್ ಪರಾಗ್ ಬಳಗವು ಸತತ ನಾಲ್ಕು ಪಂದ್ಯಗಳಲ್ಲಿ ಗೆದ್ದಿತ್ತು. ಆದರೆ ಐದನೇ ಪಂದ್ಯದಲ್ಲಿ ಸೋತಿದೆ. ಜಯದ ಹಾದಿಗೆ ಮರಳಲು ಪೂರ್ಣ ಪ್ರಯತ್ನ ಮಾಡುವುದು ಖಚಿತ.

ಆರಂಭಿಕ ಜೋಡಿ ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ಅವರು ಅಬ್ಬರಿಸದಂತೆ ತಡೆಯಲು ಕೋಲ್ಕತ್ತ ಬೌಲರ್ಗಳು ಯಶಸ್ವಿಯಾದರೆ ಮಾತ್ರ ರನ್ ಹೊಳೆ ನಿಯಂತ್ರಿಸಬಹುದು. ನಂತರದ ಕ್ರಮಾಂಕದಲ್ಲಿಯೂ ಧ್ರುವ ಜುರೇಲ್, ಶಿಮ್ರಾನ್ ಹೆಟ್ಮೆಯರ್, ರವೀಂದ್ರ ಜಡೇಜ ಅವರಿದ್ದಾರೆ. ಅವರೂ ತಂಡವನ್ನು ಗೆಲುವಿನತ್ತ ನಡೆಸಬಲ್ಲರು.

ಜೋಫ್ರಾ ಆರ್ಚರ್, ಜಡೇಜ, ರವಿ ಬಿಷ್ಣೋಯಿ ಅವರಿರುವ ಬೌಲಿಂಗ್ ವಿಭಾಗವೂ ಪರಿಣಾಮಕಾರಿಯಾಗಿದೆ.

ಪಂದ್ಯ ಆರಂಭ: ಮಧ್ಯಾಹ್ನ 3.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.