ಕೋಲ್ಕತ್ತ (ಪಿಟಿಐ): ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಸೋಮವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

ಮೂರು ಬಾರಿಯ ಚಾಂಪಿಯನ್ ಕೋಲ್ಕತ್ತ ತಂಡಕ್ಕೆ ಪ್ರಮುಖ ವೇಗಿಗಳಾದ ಹರ್ಷಿತ್ ರಾಣಾ, ಆಕಾಶ್ ದೀಪ್ ಮತ್ತು ಮಥೀಶ ಪಥಿರಾಣ ಅವರು ಅಲಭ್ಯರಾಗಿರುವುದುದೊಡ್ಡ ಹಿನ್ನಡೆಯಾಗಿದೆ. ಬಳಗದಲ್ಲಿ ಲಭ್ಯ ಇರುವ ಆಟಗಾರರನ್ನು ಸೂಕ್ತವಾಗಿ ನಿಯೋಜನೆ ಮಾಡುವಲ್ಲಿ ಎಡವಿದ್ದು ಕೂಡ ಸೋಲುಗಳಿಗೆ ಕಾರಣವಾಗಿದೆ. ಇದರಿಂದಾಗಿ ಮೂರನೇ ಪಂದ್ಯದಲ್ಲಿಯೂ ಅಜಿಂಕ್ಯ ರಹಾನೆ ನಾಯಕತ್ವದ ಬಳಗಕ್ಕೆ ಜಯದ ಹಾದಿ ಕಠಿಣವಾಗಿರುವುದನ್ನು ಅಲ್ಲಗಳೆಯಲಾಗದು.

ಕೋಲ್ಕತ್ತ ತಂಡವು 2024ರಲ್ಲಿ ಪ್ರಶಸ್ತಿ ಜಯಿಸಿದಾಗ ನಾಯಕರಾಗಿದ್ದ ಶ್ರೇಯಸ್ ಅಯ್ಯರ್ ಅವರನ್ನು ಹೋದ ವರ್ಷದ ಹರಾಜಿನಲ್ಲಿ ಉಳಿಸಿ ಕೊಳ್ಳಲಿಲ್ಲ. ಅದರಿಂದಾಗಿ ಅವರು ಪಂಜಾಬ್ ಕಿಂಗ್ಸ್ ತಂಡದಿಂದ ದೊಡ್ಡ ಮೌಲ್ಯ ಪಡೆದು ಸೇರ್ಪಡೆಗೊಂಡರು. ಅವರ ನಾಯಕತ್ವದಲ್ಲಿ ಪಂಜಾಬ್ ತಂಡವು ಹೋದ ಸಲ ಫೈನಲ್ ಪ್ರವೇಶಿಸಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋತಿತ್ತು. ಶ್ರೇಯಸ್ 2020ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನೂ ಫೈನಲ್ ಪ್ರವೇಶಿಸುವಂತೆ ಮಾಡಿದ್ದ ನಾಯಕ.

ಹೋದ ಸಲ ಕೋಲ್ಕತ್ತ ತಂಡವು ಎಂಟನೇ ಸ್ಥಾನ ಪಡೆದಿತ್ತು. ಈ ಸಲವೂ ಉತ್ತಮ ಆರಂಭ ಸಿಕ್ಕಿಲ್ಲ.ನ್ಯೂಜಿಲೆಂಡ್ನ ಅಗ್ರಕ್ರಮಾಂಕದ ಬ್ಯಾಟರ್ಗಳಾದ ಫಿನ್ ಅಲೆನ್, ಟಿಮ್ ಸೀಫರ್ಟ್ ಮತ್ತು ರಚಿನ್ ರವೀಂದ್ರ ಅವರು ಇದ್ದರೂ ಕೋಲ್ಕತ್ತ ತಂಡವು ಸೋಲಿನ ಕಹಿ ಅನುಭವಿಸುತ್ತಿದೆ.

ಅಲ್ಲದೇ ಅನುಭವಿ ಆಲ್ರೌಂಡರ್ ಸುನಿಲ್ ನಾರಾಯಣ್ ಮತ್ತು ಸ್ಪಿನ್ ಮೋಡಿಗಾರ ವರುಣ್ ಚಕ್ರವರ್ತಿ ಅವರ ಕೈಚಳಕವೂ ನಡೆಯುತ್ತಿಲ್ಲ. ಇದು ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ. ಟಿ20 ಪರಿಣತ ರೋವ್ಮನ್ ಪೊವೆಲ್ ಅವರಿಗೆ ಹನ್ನೊಂದರ ಬಳಗದಲ್ಲಿ ಕಣಕ್ಕಿಳಿಯುವ ಅವಕಾಶ ನೀಡಿಲ್ಲ. ಇದು ತಂಡದ ಆಯ್ಕೆ ಪ್ರಕ್ರಿಯೆಯು ಟೀಕೆಗೊಳಗಾಗಲು ಕಾರಣವಾಗಿದೆ.

ನೆರವು ಸಿಬ್ಬಂದಿಯಲ್ಲಿ ಶೇನ್ ವಾಟ್ಸನ್, ಡ್ವೇನ್ ಬ್ರಾವೊ ಮತ್ತು ಆ್ಯಂಡ್ರೆ ರಸೆಲ್ ಅವರಂತಹ ದಿಗ್ಗಜರು ಇದ್ದಾರೆ. ಆದರೂ 11 ಬಳಗದ ಆಯ್ಕೆಯಲ್ಲಿ ಸ್ಪಷ್ಟತೆ ಕಾಣುತ್ತಿಲ್ಲ. ನಾಯಕ ರಹಾನೆ ಅವರು ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿಯುತ್ತಿರುವುದು ಒಂದಿಷ್ಟು ಫಲ ನೀಡಿದೆ. ಆದರೆ ಐದನೇ ಕ್ರಮಾಂಕದ ನಂತರ ಬ್ಯಾಟಿಂಗ್ ದುರ್ಬಲ ವಾಗುತ್ತಿರುವುದು ಕೂಡ ಸುಳ್ಳಲ್ಲ. ರಮಣದೀಪ್ ಸಿಂಗ್ ಮತ್ತು ಅನುಕೂಲ್ ರಾಯ್ ಅವರು ಬೀಸಾಟವಾಡಿದಿರುವುದು ಚಿಂತೆಗೆ ಕಾರಣವಾಗಿದೆ.

ಆದರೆ ಪಂಜಾಬ್ ತಂಡವು ಸಮತೋಲನದಿಂದ ಕೂಡಿದೆ. ಆಡಿರುವ ಎರಡೂ ಪಂದ್ಯಗಳಲ್ಲಿ ಜಯಸಾಧಿಸಿದೆ. ಕೂಪರ್ ಕೊನೊಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಯಶಸ್ವಿಯಾಗಿದ್ದಾರೆ. ಎರಡೂ ಪಂದ್ಯಗಳಲ್ಲಿ ಸೇರಿ ಒಟ್ಟು 108 ರನ್ ಗಳಿಸಿದ್ಧಾರೆ. ಪ್ರಿಯಾಂಶ್ ಆರ್ಯ ಮತ್ತು ಪ್ರಭಸಿಮ್ರನ್ಸಿಂಗ್ ಅವರು ಮಿಂಚಿನ ಆರಂಭ ನೀಡುತ್ತಿದ್ದಾರೆ.

ಕಿಂಗ್ಸ್ ತಂಡದ ಬೌಲರ್ಗಳೂ ಅಮೋಘ ಲಯದಲ್ಲಿದ್ದಾರೆ. ಮಾರ್ಕೊ ಯಾನ್ಸೆನ್, ವೈಶಾಖ ವಿಜಯಕುಮಾರ್ ಮತ್ತು ಅರ್ಷದೀಪ್ ಸಿಂಗ್ ಬ್ಯಾಟರ್ಗಳಿಗೆ ಸವಾಲೊಡ್ಡು ತ್ತಿದ್ದಾರೆ. ಲೆಗ್ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರು ತಮ್ಮ ಅನುಭವಕ್ಕೆ ತಕ್ಕಂತೆ ಬೌಲಿಂಗ್ ಮಾಡುತ್ತಿದ್ದಾರೆ. ಅದರಿಂದಾಗಿ ಪಂಜಾಬ್ ತಂಡವು ಆತಿಥೇಯರಿಗೆ ಕಠಿಣ ಸವಾಲೊಡ್ಡುವ ಎಲ್ಲ ಸಾಧ್ಯತೆಗಳೂ ಇವೆ.

ಪಂದ್ಯ ಆರಂಭ: ರಾತ್ರಿ 7.30ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊಹಾಟ್ಸ್ಟಾರ್

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-51-1087747374

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.